ವಿಜಯದಾಸ

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಮಂಗಳ ಮೂರುತಿ ಮನುಕುಲೋತ್ತುಂಗ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಆತುಮ ಮೂರುತಿ ದಶರಥನಿಗೆ ಮಗನಾದ- ಲೀಲಾ ವಿನೋದ ಜ್ಯೋತಿ ಪ್ರಕಾಶನು ಸಾಕೇತಪುರದಲಿ ನಲಿದ- ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ ||1|| ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಜಲಜಾಯತದಳ ಪೊಕ್ಕಳಿಂದಲಿ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಪೊಳೆದ ಪ್ರಣವ ವಿಮಾನದೊಳಗಿಂದ ಬಂದ ಪರಮಾ-ನಂದ […]

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ Read More »

ರಂಗ ಮಾನವ ಸಿಂಗನಾದನು

ರಂಗ ಮಾನವ ಸಿಂಗನಾದನು ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ ||1|| ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಚಕ್ರವರ್ತಿಯಾಗಿ

ರಂಗ ಮಾನವ ಸಿಂಗನಾದನು Read More »

ಯೇನೆಲವೊ ದೈವಾ ವೈಕುಂಠನಾಥ

ಯೇನೆಲವೊ ದೈವಾ ವೈಕುಂಠನಾಥ ನೀ ನಾರಿವೇಷವನು ಧರಿಸಿದ ಬಗೆಯೇನೊ ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ | ಮಿತ್ರಭಾವದಲಿವರು ಕೂಡಲಿಟ್ಟು | ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು | ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ ||1|| ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ | ಕರವ ನೀಡುವೆನೆಂದು ಬರಲಾಗಲು || ಅವನೀಶ ಭವಹರ ಕೇಶವ ನೀನೆ ಗತಿಯೆನಲು | ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ ||2|| ಅಂದು ಮಾಡಿದ ಚರಿತೆ ಭಕ್ತಜನರು ಬಂದು | ಒಂದೊಂದನ

ಯೇನೆಲವೊ ದೈವಾ ವೈಕುಂಠನಾಥ Read More »

ಯೇನು ಕರುಣಾಳೋ ದೇವವರೇಣ್ಯ

ಯೇನು ಕರುಣಾಳೋ ದೇವವರೇಣ್ಯ ಯೇನು ಭಕುತರಧೀನನೋ ನಾನು ಎಂಬೋದು ಬಿಡಿಸಿ ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ ಸಂಪನ್ನವಾಗಿದ್ದ ಮತಿಯನಿತ್ತು ಪ್ರಸನ್ನನಾಗಿ ಒಡನೆ ತಿರುಗೂವ ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ ||1|| ಪಾವಮಾನಿಯ ಮಖವೆ ಪೊಂದಿಸಿ ಪಾವನವ ಮಾಡಿದನು ಬಲು ಕೃ ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ ಆವ ಪರಿಯಲಿ ನುಡಿದ ಕವನವ ಕವಿ ಮನ್ನಿಸಿ ತಪ್ಪನೆಣೆಸದೆ ದೇವ ಜಗತ್ರಯ

ಯೇನು ಕರುಣಾಳೋ ದೇವವರೇಣ್ಯ Read More »

ಯೆಲ್ಲಿ ಭಯಗಳು ಹರಿಯ ಭಕುತರಿಗೆ

ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1|| ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ ||2|| ಘಣಿ ಸರವೆ

ಯೆಲ್ಲಿ ಭಯಗಳು ಹರಿಯ ಭಕುತರಿಗೆ Read More »

ಯಾವದು ಸುಖವೇ ಮತ್ಯಾನಂದವೇ

ಯಾವದು ಸುಖವೇ ಮತ್ಯಾನಂದವೇ ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು ಮನುಗಳು ಭೂಮಿಯನಾಳೋತನಕ ಕನಕನ ಚಿತ್ತನಾಗಿ ಗೋಕುಲದಿಂದ ಸ ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ ||1|| ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ ಅಂದೆ ಸುರರೊಳು ಗಣನೆ ಎನ್ನೆ ಒಂದಕ್ಕೆ ನೂರಾರು ಯಾಗ ಮಾಡಿದ ಫಲ ತಂದು ಕೊಡುವ ಅಜನಾದಿಕಲ್ಪ ಪರಿಯಂತ||2|| ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ ಸಾಗರದಿ ಕೋಟಿ ಸ್ನಾನ ಮಾಡಲು ಊಧ್ವರೇತಸ್ಥನಾಗಿರ್ದ ಫಲವಕ್ಕೆ ಊಧ್ರ್ವಭೂಷಿತನಾದ ಬ್ರಹ್ಮಯುಗ ಪರಿಯಂತ ||3|| ಸನ್ನಿಧಿಗೆ

ಯಾವದು ಸುಖವೇ ಮತ್ಯಾನಂದವೇ Read More »

ಯಾಯಾ ವಾರವ ನೀಡಿ

ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಬಾಯಲ್ಲಿ ಹರಿಯ ಕೊಂಡಾಡುತ ಪತಿವ್ರತ ಸ್ತ್ರೀಯರು ಮುದದಿಂದ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ ||1|| ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ ||2|| ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ನಿರುತ ಮಾಡಿದ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ ||3|| ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ ||4||

ಯಾಯಾ ವಾರವ ನೀಡಿ Read More »

ಯಾಚಕರು ಪರರ ಸಂಕಟ ಬಲ್ಲರೆಣ

ಯಾಚಕರು ಪರರ ಸಂಕಟ ಬಲ್ಲರೆಣ ಭೂ ಚಕ್ರದಲಿ ಗಾಳಿಯಂತೆ ತಿರುಗಲು ಬಿಡರು ಕಾಪೀನವನು ಧರಿಸಿ ಮುಖವ ಡೊಂಕನೆ ಮಾಡಿ ಕೋಪದಿಂದಲಿ ಕರವನೆತ್ತಲ್ಯಾಕೆ ಪಾಪಿ ಕೂಪವ ಮೀರಿ ಸಮುದ್ರವನು ನೆರೆ ದಾಟಿ ರೂಪಾಂತರದಿ ಮನೆ ಮನೆಯ ಪೊಕ್ಕರು ಬಿಡರು ||1|| ವಿಷವ ಸವಿದುಂಡು ಮಹ ಮಡುವ ಪ್ರವೇಶಿಸಿ ವಸುಧೆಯೊಳು ಬೇಡಿ ಕಿರಿತಂದುಂಡರು ಬೆಸಬೆಸನೆ ವನವನವ ತಿರುಗಿ ಅe್ಞÁತದಲಿ ವಸಿಸಿ ಮಾನಸದಿ ಗೃಹಕರ್ಮ ಮಾಡಲಿ ಬಿಡರು ||2|| ಜುಟ್ಟು ಜನಿವಾರವನು ಕಿತ್ತುಕೊಂಡು ಯತಿಯಾಗಿ ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು

ಯಾಚಕರು ಪರರ ಸಂಕಟ ಬಲ್ಲರೆಣ Read More »

ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ

ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ | ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಒಡಲಿಗಾಗಿ ಒಬ್ಬನ ಸಂಗಡ ಹೋಗಲು | ಕೊಡುವವನು ಇಲ್ಲೆಂದು ಪರಿಹರಿಸುವ || ಸುಡು ಈ ಶರೀರವ ಬಳಲಲಾರೆನೊ ವಿಷದ, ಮಡುವನಾದರು ಧುಮುಕಿ ಮರಣವಾಗುವೆ ರಂಗಾ ||1|| ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ | ಹುತವಾಗುವನು ಎನ್ನ ನೋಡುತಲಿ || ಕ್ಷಿತಿಯೊಳಗೆ ಈ ಪರಿ ಬದುಕಿ ಇಹೋದಕಿಂತ | ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ ||2|| ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ | ಒಲ್ಲೆನೋ

ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ Read More »

ಯಾಕೆ ಜೀವನವೆ ನೀ ಶ್ರೀಕಾಂತನನು

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ ||1|| ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ

ಯಾಕೆ ಜೀವನವೆ ನೀ ಶ್ರೀಕಾಂತನನು Read More »

ಯಲ್ಲರಮ್ಮನಲ್ಲವೆ ಸಿರಿದೇವಿ

ಯಲ್ಲರಮ್ಮನಲ್ಲವೆ ಸಿರಿದೇವಿ ಎಲ್ಲರಮ್ಮನಲ್ಲವೆ ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಿರಲು || ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳು ತೀರುವಂತೆ ಮಾಡಿದ ||1|| ಆಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಾಮಾತಾ || ಸುಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||2|| ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು || ಪರಮ ಪುರುಷ ನಮ್ಮ ವಿಜಯವಿಠ್ಠಲನ್ನ

ಯಲ್ಲರಮ್ಮನಲ್ಲವೆ ಸಿರಿದೇವಿ Read More »

ಯಮುನೆ ದುರಿತ ಉಪಶಮನೆ

ಯಮುನೆ ದುರಿತ ಉಪಶಮನೆ | ಅಮಮ ಮಂದಗಮನೆ || ಅಗಣಿತ ಸುಮನೆ ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ | ಕಾಮಿತ ಸುಫಲದಾಯೆ ಕಾಲನಿಭ ಕಾಯೆ | ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ | ಸೋಮಕುಲಪಾವನೇ ಶರಣ ಸಂಜೀವನೆ ||1|| ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ | ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ | ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ | ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ ||2|| ವಾರಿನಿಧಿ ಪ್ರಥುಕುಗಾಮಿನಿ |

ಯಮುನೆ ದುರಿತ ಉಪಶಮನೆ Read More »

ಯಚ್ಚತ್ತು ನಡಿ ಕಂಡ್ಯ ಮನವೇ

ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ||1|| ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ, ಶ್ರೀ ಹರಿ ದಯಮಾಡಾ ||2|| ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ

ಯಚ್ಚತ್ತು ನಡಿ ಕಂಡ್ಯ ಮನವೇ Read More »

ಮುನಿಯ ನೋಡಿರೊ ವಂದನಿಯ ಮಾಡಿರೊ

ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು ||1|| ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ ||2|| ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ ||3|| ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ

ಮುನಿಯ ನೋಡಿರೊ ವಂದನಿಯ ಮಾಡಿರೊ Read More »

ಮುನಿಜನರ ನೆನೆಸಿ ಜನರೂ

ಮುನಿಜನರ ನೆನೆಸಿ ಜನರೂ | ಮುನಿ ಜನರ ನೆನೆಸಿ ಬಿಡ | ದನುದಿನದಲಿ ನಿಮ್ಮ | ಮನ ಮಲಿನ ಪೋಗಿ ಸ | ಜ್ಜನ ಸಂಗವಾಗುವುದು || ಅನುಮಾನವಿಲ್ಲ ಗುಣಗಣ | ವನಧಿ ಹರಿವೊಲಿದು | ಘನವಾಗಿ ಪಾಲಿಸುವನು ಮಿತ್ರಮಿತ್ರಾಯು ವಿ | ಚಿತ್ರ ಭಾರ್ಗವ ವಿಶ್ವ | ಮಿತ್ರ ಮೈತ್ರಾವಾರುಣಿ ಭೃಗು | ವೀತಿ ಹೋತ್ರ ಕಪಿ ಗಾಗ್ರ್ಯ ಗಾಲವ | ಗರ್ಗಗಾರ್ಚಮಾ || ಅತ್ರಿ ಅತಿ ಅಷ್ಟ ವಕ್ರ | ಪತ್ರ ಫಾಲಾಶವಟು |

ಮುನಿಜನರ ನೆನೆಸಿ ಜನರೂ Read More »

ಮುಖ್ಯಪ್ರಾಣನೀತಾ ನಮಗೆ

ಮುಖ್ಯಪ್ರಾಣನೀತಾ ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ಯುಗಳ ಪೂಜಿಪಾ ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ ||1|| ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ

ಮುಖ್ಯಪ್ರಾಣನೀತಾ ನಮಗೆ Read More »

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ ||1|| ನಾನು ನೀನು ಎಂದು e್ಞÁನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು ||2|| ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ

ಮುಕುತಿ ತಮಸು ಎರಡಿಲ್ಲೆ ಕಂಡ್ಯಾ Read More »

ಮುಂಜಾನೆ ಎದ್ದು ಸಂಜೀವನೆನ್ನಿ

ಮುಂಜಾನೆ ಎದ್ದು ಸಂಜೀವನೆನ್ನಿ | ಎಂದೆಂದಿನ ದುರಿತ ಪೋದವೆನ್ನಿ ವಾಯುನಂದನನನೆನ್ನಿ | ವರವಜ್ರಕಾಯನೆನ್ನಿ | ರಾಯ ರಾಘವನ ಕಿಂಕರನೆನ್ನಿರೈ | ಛಾಯಾಗ್ರಿಯನ ಕೊಂದು ವನ ಕಿತ್ತಿದನೆನ್ನಿ | ಮಾಯದ ಲಂಕೆಯ ದಹನನೆನ್ನಿರೈ ||1|| ಪಾಂಡು ಕುಮಾರನೆನ್ನಿ ಪಾಪ ಸಂಹಾರನೆನ್ನಿ | ಉಂಡು ವಿಷವ ತೇಗಿದಾನೆನ್ನಿರೈ | ಲೇಂಡ ಹಿಡಂಬಕನ ಕೊಂದನೆನ್ನಿ | ಚಂಡ ಕುರವಂಶಹತನೆನ್ನಿರೈ ||2|| ಆನಂದತೀರ್ಥರೆನ್ನಿ ಅಮಿತ ಜೀವಾತ್ಮನೆನ್ನಿ | ಜ್ಞಾನಕೆ ಮೊದಲು ದೇವತಿಯನ್ನಿರೈ | ಆನಂದಮಯನಾದ ವಿಜಯವಿಠ್ಠಲರಾಯನ ಧೇನಿಪ ಜನರಿಗೆ ಕೈವಲ್ಯ ಮಾರ್ಗವೆನ್ನಿ||3||

ಮುಂಜಾನೆ ಎದ್ದು ಸಂಜೀವನೆನ್ನಿ Read More »

ಮಾನಸ ಪೂಜೆಯನು ಮಾಡು

ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು e್ಞÁನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಶ್ರೀಮದಾನಂದತೀರ್ಥರ ಕೋಮಲಾಂಘ್ರಿಯಲ್ಲಿ ಈ ಮನಸ್ಸು ಇಟ್ಟು ||1|| ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದುಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು

ಮಾನಸ ಪೂಜೆಯನು ಮಾಡು Read More »

ಮಾನ ನಿನ್ನದು ಅಭಿಮಾನ ನಿನ್ನದು

ಮಾನ ನಿನ್ನದು ಅಭಿಮಾನ ನಿನ್ನದು | ದಾನವಾಂತಕ ರಂಗ ದಯಮಾಡಿ ಸಲಹೊಪ ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ | ಪಿಡಿದೆÀಳೆದೊಯ್ದು ಘಾಸಿಯನು ಮಾಡಿ || ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ | ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ||1|| ಸದನದೊಳು ಪುರುಷನು ಇರುತಿರಲು ಹೆಂಡತಿಯ | ಎದೆಯ ಮೇಲಿನ ಸೆರಗು ಸೆಳೆದುಕೊಂಡು|| ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ | ಅದು ಪುರುಷಗಲ್ಲದೆ ವಧುವಿಗೇನಯ್ಯಾ ||2|| ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ | ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ

ಮಾನ ನಿನ್ನದು ಅಭಿಮಾನ ನಿನ್ನದು Read More »

ಮಾಧವನ ನೋಡಿ ಸಂಪಾದಿಸಿದೆ

ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು | ಆದರಪೂರ್ವಕದಿಂದಲಿ ಮಾಧುರ್ಯವಾದ ಮನ | ಸಾಧುಗಳ ಸಂಗತಿ ಭೇದ ಪಂಚಕ ಪೂರ್ಣಬೋಧರ ಮತವಿಡಿದು ಮಡುವಿನೊಳು ಕರಿ ಮೊರೆ ಇಡಲು ಕೇಳುತ ನಕ್ರನ | ಕಡಿದು ಕರುಣದಿಂದಲಿ ತಡಿಯದಲೆ ಜಡುಮತಿಯ | ಬಿಡದೆ ಉದ್ಧರಿಸಿದ ಒಡೆಯ ಪುಣ್ಯನಿಧಿಗೆ ಕಡು ಮೆಚ್ಚಿ ಬಂದವನ ||1|| ಮರಣಕಾಲದಿ ಭಯಂಕರವಾದ ಯಮನ ದೂ | ತರನ ನೋಡಿ ಕರಿಯಲು | ಪರಮ ವೇಗದಿಂದ ಪುರಕೆ ಕರಿಸಿದ ಉಭಯ ಶರಧಿ ಮಧ್ಯದಲ್ಲಿ | ಮೆರೆವ ಮಧುಸೂದನನ ||2||

ಮಾಧವನ ನೋಡಿ ಸಂಪಾದಿಸಿದೆ Read More »

ಮಾತು ಮನ್ನಿಸೊ ಪರಮಾತಮಾ ಮುದದಿಂದ

ಮಾತು ಮನ್ನಿಸೊ ಪರಮಾತಮಾ ಮುದದಿಂದ ಮಾತು ವೈದವನಲವ ಮಾತುರದೊಳು ಗೆದ್ದು ಮಾತಿಯ ಸೆರೆ ಪ್ರೇಮಾತುರ ಭೇದಿಸಿದ ಮಾತುರಪತಿ ಚಿನ್ಮಾತುರ ತೋರೋ ಶುನಕ ಸೂಕರ ಘೂಕಾ ಮನಕಾಶಾ ಕಾಕಕಂಕಾ ದನ ಕತ್ತೆ ಮೊದಲಾದ ಜನ ಕಲಿಯುಗದೀ ತನಕೆ ಆದzಕಿನ್ನು ಮನಕಾನಂದವ ಕಾಣೆ ದಿನ ದಿನ ಕಾಂಚನಾಶಿಯಿಂದ ಘನಕಾಮ ಬದ್ಧನಾದೆ ಕನಕಾಂಬುಜ ಭವಜನಕ ಜಗತ್ಪತಿ ಜನ ಕಥೆಯಿಂದ ಭ ವನಕತಿ ಮೋಹಿಸಿ ಧನಕವಿಯೆನಿಸಿದೆ ವನಕವಿವರಗೆ ಮೋಹನ ಕಂಠ ಮಾಲಿಯೆ ಎನ್ನ ಕಡೆ ಮೊಗವಾಗು ||1|| ಸನಕಾದಿ ವಂದ್ಯ ತ್ರಿಭುವನಕಾದಿ ಮೂಲವೆನಿಸಿ

ಮಾತು ಮನ್ನಿಸೊ ಪರಮಾತಮಾ ಮುದದಿಂದ Read More »

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ ಊದುವ ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ ||1|| ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ ||2|| ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ-

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ Read More »

ಮನ್ನಿಸು ಮಾರಾರಿ ಮುದದಿಂದಲಿ

ಮನ್ನಿಸು ಮಾರಾರಿ ಮುದದಿಂದಲಿ ಎನ್ನ | ಬಿನ್ನಪವನೆ ಲಾಲಿಸಿ ಮುನ್ನೆ ಮಾಡಿದ ಯಿನ್ನು ದುರಿತಗಳನ್ನ ಹಾರಿಸಿ | ಎನ್ನನನುದಿನ ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ | ಹಮ್ಮಿನಿಂದಿತ್ತ ಸರ್ವವ ನೋಳ್ಪನೆ | ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ | ಉಮ್ಮೆಯರಸಾ ತಾಮಸ ಕಾರ್ಯದಧಿಪತಿ | ಒಮ್ಮೆ ಬಿಡದಲೆ ನರಹರಿಯ ನಾ | ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ | ಅಮ್ಮಹಾ ವೈರಾಗ್ಯ ಭಾಗ್ಯವ | ಕಮ್ಮರದಿ ಕೊಡು ಕರುಣದಿಂದಲಿ ||1|| ನಂದಿವಾಹನ ನಾಗತಲ್ಪ ಕಲ್ಪಾಂತರ |

ಮನ್ನಿಸು ಮಾರಾರಿ ಮುದದಿಂದಲಿ Read More »

ಮನ್ನಿ ಮನ್ನಿಗೆ ಉಣ್ಣ ಬಂದಾ

ಮನ್ನಿ ಮನ್ನಿಗೆ ಉಣ್ಣ ಬಂದಾ | ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಭಕುತರಗೋಸುಗ ಭಕುತಿಯ ಕೈಕೊಂಡು ಕರುಣಾಂಬುಧಿ ಇಂದು ||1|| ಭೂವದರೊಳಗಿದ್ದು ದೈತ್ಯರ ಗೆದ್ದಂತೆ | ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ ||2|| ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು | ಉಂಬೋದು ಬಿಡದಂದು ತದಾಕಾರ ರೂಪದಿ3 ಅವರವರ ಯೋಗ್ಯತೆ ಫಲ ಕೊಡುವೆನೆಂದು | ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ ||4|| ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ ||5||

ಮನ್ನಿ ಮನ್ನಿಗೆ ಉಣ್ಣ ಬಂದಾ Read More »