ವಿಜಯದಾಸ

ವಾತನ್ನ ಜಯಾಜಾತನ್ನ

ವಾತನ್ನ ಜಯಾಜಾತನ್ನ ಲೋಕ- ಪ್ರೀತನ್ನ ಸ್ತುತಿಸಿ ಖ್ಯಾತನ್ನ ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ ಸೂರ್ಯನ್ನ ಆರಾ ಧಿಸುವ ಭಕ್ತರ ಸುಕಾರ್ಯನ್ನ ||1|| ವಾನರ ಕುಲದೊಳು ಧೈರ್ಯನ್ನ ಮುದ್ದು ಆನನ ಗೀರ್ವಾಣವರ್ಯನ್ನ ಆನಂದ ವಿe್ಞÁನ ಚರ್ಯನ್ನ ದುಷ್ಟ – ದಾನವರಳಿದತಿ ವೀರ್ಯನ್ನ ||2|| ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ ದ್ವಿಜಕೇತ ನಂಘ್ರಿಗೆ ಪ್ರೇಮನ್ನ ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು ವ್ರಜವ ಸದೆದ ಸಾರ್ವಭೌಮನ್ನ||3|| ಅದ್ವೈತ ಮತ ಕೋಲಾಹ ಲನ್ನ ವೇದ ಸಿದ್ಧಾಂತ […]

ವಾತನ್ನ ಜಯಾಜಾತನ್ನ Read More »

ವಾಣೀ ಪರಮ ಕಲ್ಯಾಣಿ

ವಾಣೀ ಪರಮ ಕಲ್ಯಾಣಿ – ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ಸುರಮುನಿ ನಿಕರ ಸ್ತೋತ್ರಿ – ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ ||1|| ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ

ವಾಣೀ ಪರಮ ಕಲ್ಯಾಣಿ Read More »

ವಾಣೀ ನೀ ತೋರೆ ವಾರಿಜನಾಭನ,

ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ – ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ದೈತ್ಯರ ಮರ್ದಿಸಿ ಮುಕ್ತಿಯ ಕೊಡುತಿಹ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಬೀಳುವ ಭವಣೆಯ ಕಾಲ ಹಿಂಗಿಸಿ ವಿ- ಶಾಲ ಮತಿಯ

ವಾಣೀ ನೀ ತೋರೆ ವಾರಿಜನಾಭನ, Read More »

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಹರ ಸಿರಿ ದೇವಿಯ ಚರಣ ರಜವನ್ನು ಪರಮಾಣು ಪ್ರದೇಶ ವರ ಶಬ್ದ ಪಿಡಿದು ತರುವಾಯ ಬಹುವಿಧ ಪರಿ ಪರಿಯಿಂದಲಿ ಸ್ಮರಿಸಿಕೊಳ್ಳುತ ಮೈಮರೆವ ಶತಾನಂದ ||1|| ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ Read More »

ವರ್ಣಿಸಲರಿಯೆ ನಿನ್ನ

ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಪರ್ಣ ಗಮನ ರಂಗಾ ಮಣಿಮಯ ಮುಕುಟ ಕಾಂ | ಚನದ ಕುಂಡಲ ಕರ್ಣ | ಫಣಿಯ ಕಸ್ತೂರಿ ನಾಮ | ಮಿನುಗುವ ಹಸ್ತ ಕಂಕಣ ಬೆರಳುಂಗರ | ಎಣಿಗಾಣೆ ಕೊರಳ ಮುತ್ತಿನಹಾರ ಕೌಸ್ತುಭ | ಮಣಿರಿಪುಗಳದಲ್ಲಣ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ

ವರ್ಣಿಸಲರಿಯೆ ನಿನ್ನ Read More »

ವರದೆ ಸಮಸ್ತ ವರದೆ

ವರದೆ ಸಮಸ್ತ ವರದೆ | ಪರಮ ಭಕುತಿಯಿಂದ ತುತಿ | ಪರನ ಪೊರದೇ ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ | ಮಾಡಿದ ಪಾಪಗಳು ಪರಿದವಯ್ಯ | ಆಡಲೇನು ತೋಯ ಸ್ಪರ್ಶವಾಗಲು | ನಲಿ | ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ ||1|| ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ | ಪೊಂದಿದ ದಾಸವರು ಸುಮ್ಮನಹರೋ | ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ ನಂದದಲಿ ಇಪ್ಪನೆ ಅಭಿಮೊಗರಾಗಿ||2|| ವರನ ಕೊಡುವೆನೆಂದು ವೈಷ್ಣವ ಮಣಿಯಿಂದ | ಧರೆಯೊಳಗೆ ಜನಿಸದೆ ಜಗಜ್ಜನನಿ

ವರದೆ ಸಮಸ್ತ ವರದೆ Read More »

ವರಗಳನು ಕೊಡುವದು ವಾಸುಕಿಯ ಪ್ರಿಯಾ

ವರಗಳನು ಕೊಡುವದು ವಾಸುಕಿಯ ಪ್ರಿಯಾ | ಕರುಣದಿಂದಲಿ ಒಲಿದು ಕಂಡನಾತುರದಲಿ ಇಂದ್ರಸಮಾನ ದೇವತೆಯೆ ರತಿಪತಿಯೇ | ಇಂದಿರೇಶನ ನಿಜಕುಮಾರ ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ ||1|| ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ ||2|| ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ

ವರಗಳನು ಕೊಡುವದು ವಾಸುಕಿಯ ಪ್ರಿಯಾ Read More »

ವಂದೇ ಮುಕುಂದ ನಮೊ

ವಂದೇ ಮುಕುಂದ ನಮೊ | ವಂದೇ ಮುಕುಂದ ನಮೊ | ವೃಂದಾರ ಕೇಶ ನಮೊ | ನಂದ ಮೂರುತಿ ಪರಮಾನಂದ ನರಸಿಂಹಾ ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ | ವಸುಮತಿಗೆ ತಾನೆ ಸ್ವಾಮಿ ಎಂದು || ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ | ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ ||1|| ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ | ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ || ಲಾಸನಾದ್ಯರ ಪಾಲಿಸಿದ ನರಸಿಂಹಾ ||2|| ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ | ಗಜಪಗೀಯ

ವಂದೇ ಮುಕುಂದ ನಮೊ Read More »

ವಂದಿಸು ವಂದಿಸು ಗುಣವ

ವಂದಿಸು ವಂದಿಸು ಗುಣವ ಕೊಂಡಾಡಿ ಅರ ವಿಂದನಾಭನ ಮೂರ್ತಿ ನೋಡಿ | ಹಾಹಾ | ಆ ನಂದ ಸಿಂಧುವಿನೊಳು ಪೊಂದು ಒಂದೆ ಭಕ್ತಿಯಿಂದ ಇಂದುವಿನಂದದಿಪ್ಪನಾ ಓಂಕಾರ ಪ್ರತಿಪಾದ್ಯನೀತಾ ಅಕಳಂಕ ಅಪ್ರಾಕೃತನೀತಾ ಬಿರು ದಾಂಕ ಅಖಂಡವ್ಯಾಪುತ ತನ್ನ ಸಂಕಲ್ಪಕ್ಕೆ ಮೀರಾಜಾತಾ | ಹಾಹಾ| ಪಂಕಜಸÀಖ ಕೋಟಿ ಸಂಕಾಶ ಸುರಗಣ ಲಂಕಾರವಾಗಿಪ್ಪ ವೆಂಕಟರಮಣನ್ನ ವಂದಿಸು ||1|| ಪ್ರಳಯದಲ್ಲಿ ವಟಪತ್ರದಲ್ಲಿ ಮಲಗಿಪ್ಪ ಭುವನ ಪವಿತ್ರ ನಿತ್ಯ ಬಲು ಲೀಲಾಚಿತ್ರ ವೈಚಿತ್ರ ಕರ್ಮ ನೆಲೆಗೊಳಿಸುವ ಶ್ರೀ ಕಳತ್ರ || ಹಾಹಾ || ಪೊಳೆವ

ವಂದಿಸು ವಂದಿಸು ಗುಣವ Read More »

ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ

ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ ಕಂದ ಭೀಮಗೆ ಸರಿಯಿಲ್ಲ ಎಂದೆಂದಿಗೆ ಬಿಡದೆ ಬಂದಾ ಪ್ರತಿಬಂಧಕಗಳ ನಿಂದಿರಗೊಳದಲೆ ಕಳಿವ ನಿತ್ಯ ಸುಳಿವಾ ಅರಿತುಳಿವಾ ಸತ್ಕೀರ್ತಿ ಪೊಳವ ಪ್ರಳಯಾಂತದಲ್ಲಿ ತಾನು ತಿಳಿದು ಸತ್ವ ಜೀವರ ನೆಲೆ ಗೊಳಿಸುವೆನೆಂದು ಬಲುಹರುಷದಲಿ ಜಲಜನಾಭನ ಚರಣಾಬ್ಜಕರಿಗೆ ಹಸ್ತ ಮುಗಿದು ತಲೆಬಾಗಿ ಬಿನ್ನೈಸಿದಾತಾ ಗುಣಜಾತಾ ಶ್ರುತಿವಿನುತ ಇದೇ ಕಾಯವನಿತ್ತ ||1|| ಅಂಡಾಂತದೊಳು ತನ್ನ ಮಂಡೆ ಮೇಲೆ ಭಾರವ ಕೊಂಡಾ ಸಹಸ್ರ ಫಣ ಕುಂಡಲಿಯ ಪೊತ್ತಾ ಗಂಡುಗಲಿ ಕೂರ್ಮನಾ ಕೊಂಡಾಡಲು ನಮಗೆ ತಂಡತಂಡದ ಮಹಾ ಸೌಖ್ಯವನೀವ

ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ Read More »

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ರಜತಪರ್ವತವಾಸ ಸುಜನ ಮನವಿಲಾಸ ಅಜನಂದನ ರುದ್ರ ವೀರಭದ್ರಾ ಕುಜನಮತವನು ಬಿಡಿಸೊ ನಿಜಪಥವ ತೋರಿ ಭುಜಗಭೂಷಣ ಸಾಂಬ ಪ್ರಾಣ ಪ್ರತಿಬಿಂಬ ||1|| ನೀಲಕಂಧರ ವಿಶಾಲಗುಣ ಸುಂದರ ಫಾಲಲೋಚನ ಭಜಕ ಕಾಲಹರ ಪಾರ್ವತಿ ಲೋಲ ಭಕ್ತರ ಪಾಲ ಪಾಲಯ ಶ್ರೀ ಸಿರಿ ಲೊಲನಪ್ರಿಯ ||2|| ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ ಓರ್ವ ಮೂಕನ ಕೊಂದು ಮರಳೆ ಬಂದು ದೇವ ದೇವ ನಮ್ಮ ವಿಜಯವಿಠ್ಠಲರೇಯ ಸರ್ವೋತ್ತಮನೆಂಬ ನಾಮರಸ ಉಂಟಾ

ಲಿಂಗಾಭವ ಭಸಿತಾಂಗ ಅಂಗಜಮದ ಭಂಗ Read More »

ಲಿಂಗಾ ಎನ್ನಂತರಂಗ

ಲಿಂಗಾ ಎನ್ನಂತರಂಗ ಮಂಗಳಾಂಗ ಸರ್ವೋ-ತುಂಗನೆ ರಾಮ ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೆ ಇಂದು ರವಿನೇತ್ರಗೆ ಕರ್ಪೂರದಾರತಿಯೆ ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ರಾಮಾ ||1|| ಘನವಿದ್ಯಾತುರಗೆ ಮಂತ್ರಕಲಾಪವೆ ಧನವತಿಯ ಸಖಗೆ ಕೈಕಾಣಿಕೆಯೆ ಮನೆರಜತ ಪರ್ವತಗೆ ಫಣಿಯ ಆಭರಣವೆ ಮನೋ ನಿಯಾಮಕಗೆನ್ನ ಬಿನ್ನಹವೆ ರಾಮಾ||2|| ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೆ ಗೌರಿಯ ರಮಣಗೆ ಈ ಸ್ತೋತ್ರವೆ ವೀರ ರಾಘವ ವಿಜಯವಿಠ್ಠಲ ನಿಜಹಸ್ತ ವಾರಿಜದಳದಿಂದುದ್ಭವಿಸಿದ ಮಹಾ ||3||

ಲಿಂಗಾ ಎನ್ನಂತರಂಗ Read More »

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ವ್ಯೋಮಕೇಶ ಒಪ್ಪಿಕೊಳ್ಳಬೇಕು ಒಲಿದು ಈ ವಾಕು ||1|| ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ||2|| ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ Read More »

ರಾಮ ರಾಮ ಎಂಬೆರಡಕ್ಷರ

ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||1|| ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು ||2|| ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು||3||

ರಾಮ ರಾಮ ಎಂಬೆರಡಕ್ಷರ Read More »

ರಾಮ ರಘುಕುಲಾಬ್ಧಿ ಸೋಮಾ

ರಾಮ ರಘುಕುಲಾಬ್ಧಿ ಸೋಮಾ ಸಂತತ ಭಕ್ತ ಪ್ರೇಮಾ ಮಂಗಲಧಾಮಾ | ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ಏಸಪರಾಧಗಳೆಣಿಸದೆ ದಯವಿಟ್ಟು | ದೋಷದೂರನ ಮಾಡೊ ಕೇಶವ ಕಮಲಾಕ್ಷಾ ||1|| ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ | ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ||2|| ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-| ಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ||3||

ರಾಮ ರಘುಕುಲಾಬ್ಧಿ ಸೋಮಾ Read More »

ರಾಮ ಜಾನಕೀರಮಣ ರಾಜೀವದಳನಯನ

ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. ||1|| ವಾಣಿ ಭಾರತಿ ಖಗಪರಾಣಿ ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ ||2|| ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ

ರಾಮ ಜಾನಕೀರಮಣ ರಾಜೀವದಳನಯನ Read More »

ರಾಜವದನೆ ನೀ ಗುರು ರಾಜರಿರುವ

ರಾಜವದನೆ ನೀ ಗುರು- ರಾಜರಿರುವ ಸಂಭ್ರಮ ನೋಡೆ ರಾಜಿಸುವ ಮುಖನ ಪೂಜಿಸುವ ಯತಿವರನೆ ದೂಷಿತ ದುರ್ಜನರ ತಾಸು ಬಾಳದಂತೆ ವಿ- ಶೇಷದಿಂದ ಭಜಿಸುವರ ಪೋಷಿಸುವ ಯತಿವರನೆ ||1|| ಪಾದ ನಂಬಿದವರಿಗೆ ಮೋದವೀವ ದೇವನೆ ಬೀದಿಬಿಡುವ ನಂಬಿದವರ ವಾದಿರಾಜ ದೊರೆವರನೆ ||2|| ಅಜಪದಕೆ ಅರ್ಹನೆಂದು ಗಜವರದನ ದಾಸನೆಂದು ಭಜನೆ ಮಾಡುವ ನಿಜವ ಪೇಳುವ ವಿಜಯವಿಠಲನ ಸೇವಕರಿವರೇ ||3||

ರಾಜವದನೆ ನೀ ಗುರು ರಾಜರಿರುವ Read More »

ರಾಜಕುಲ ವನರಾಶಿ ರಾಜರಾಜೇಶ್ವರಾ

ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ ||1|| ಸುರಪ ಗರ್ವಿಸೆ ಸಪ್ತದಿನ ಮಳೆಗರಿಯೆ ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ ||2|| ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ

ರಾಜಕುಲ ವನರಾಶಿ ರಾಜರಾಜೇಶ್ವರಾ Read More »

ರಾಘವೇಂದ್ರಂ ಭಜೇಹಂ

ರಾಘವೇಂದ್ರಂ ಭಜೇಹಂ ||ಶ್ರೀ|| ಆಗಮಚಯ ವಿe್ಞÁನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ ||1|| ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ ||2|| ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ವೃಜಿನ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ||3||

ರಾಘವೇಂದ್ರಂ ಭಜೇಹಂ Read More »

ರಾಘವೇಂದ್ರ ಗುರುರಾಯ

ರಾಘವೇಂದ್ರ ಗುರುರಾಯ ರಮಣೀಯ ಕಾಯ ರಾಘವೇಂದ್ರ ಪಾದಾಂಬುಜ ಭೃಂಗ ಭವ ಭಯ ಭಂಗ ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ ಆಡಿ ಕೊಂಡಾಡಲು ಬಲು ಗೂಢವಾಗಿದೆ ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ ||1|| ನಾಮಾಭಿವಿಡಿದು ಉಮಾಪತಿ ಪರಿಯಂತ ಈ ಮನ ಎರಗಲಿ ಯಾಮ ಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು ||2|| ಚಿಂತಾಮಣಿ ಕಂಡ ಮೇಲೆ

ರಾಘವೇಂದ್ರ ಗುರುರಾಯ Read More »

ರಥವನೇರಿದ ರಥಗಾತ್ರ ಪಾಣಿ

ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಸುರಪಥ ಪಿತಾ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ತರ ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ ||1|| ಮಣಿಪ್ರಚುರ ಮುತ್ತಿನ

ರಥವನೇರಿದ ರಥಗಾತ್ರ ಪಾಣಿ Read More »

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ | ಪ್ರಜರಿಗೆ ದೊರಕುವದೆ | ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ | ಭಜನೆ ಮಾಡುವಂಥ ಸುಜನರಿಗಲ್ಲದೆ ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ | ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು | ಚಂದದಿ ಓದಿಕೊಂಡು | ಕುಂದದೆ ವ್ರತ ಯಾಗ ಯೋಗ ಮಾಡಲೇನು | ಬಿಂದು ಮಾತ್ರ ಫಲವಿಲ್ಲ | ವೃಂದಾರಕ ಸುರರು ಒಂದಾಗಿ ಒಂದಿನ | ಅಂದು ಪೀಯೂಷವ ಕರೆಯೆ ಉಂಡವರಾರು ||1||

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ Read More »

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ | ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು | ಸತತ ಚಂಚಲ ದೂರ ಸ್ಥಿತಿಗೆ ಎರಗಿದೆ ಸು | ಕೃತವೆಲ್ಲ ಪೋಗಾಡಿದೆ ಇದಕೆ ಪ್ರಾಯಶ್ಚಿತ್ತ ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ | ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ | ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ||1|| ನಾನಾ ಮಹಿಮ ಮಾನ ಪಾವನ ವಿದ್ಯಾ ಪ್ರ | ವೀಣಾರೋಚನಾ ವಿe್ಞÁನಾಭಿಮಾನಿ ನಿ | ದಾನ

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ Read More »

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ | ರಂಗನಾಡಿದ ಪೊಂಗೊಳವಿಯಲಿ ಶೃಂಗಾರದಿಂದ ಗೋಪಾಂಗನೆಯ ಕೂಡ | ತುಂಗ ವಿಲಾಸ ತಾ ರಂಗ ಕೇಳಿಯಲಿ | ಸಂಗೀತ ಪಾಡುತ ಸಾಂಗೋಪಾಂಗದಿಂದಾ ಹೊಳಿಯ ಜನಕೋಕುಳಿಯ ಕಲಿಸಿ | ಗೆಳೆಯರೊಂದಾಗೆ ಕಳೆಯೆವೇರುತ್ತ | ಅಳಿಯ ಗರುಳಬಲಿಯರರಸಿ | ಇಳಿಯಾಳಗೋಕುಳಿ ವಸಂತವಾ | ಉಳಿಯದಂತೆ ವೆಗ್ಗಳಿಯ ತರಿಸಿ ಹಳೆಯ ಬೊಮ್ಮನ ಬಳಿಯವಿಡಿದು | ಸುಳಿಯಲೊವಸನೆ ರುಳಿಯ ಕೈಸರ | ಪಳಿಯ ಚಲುವ ತಿಳಿಯಗೊಡದೆ ||1|| ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು | ನಕ್ಕು ಕೈಯ ಹೊಯಿದ |

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ Read More »

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ | ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ತನುಜನ ಜನಕನು ಕೊಲ್ಲಲು ಮೊರೆಯಿಡಾ ಬಂದ | ಕಂಭದೊಳಿಂದ | ಮನುಜಕೇಸರಿ ರೂಪಧರಿಸಿದ ನಿಜ ಲೋಕಸ್ವಾಮಿ | ಅಂತರ್ಯಾಮಿ || ದನುಜನ ಉದರ ಬಗೆದು ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ | ವನಜ ಭವಾದ್ಯರು ಜಯ ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ ||1|| ಮನದಲಿ ಬೇಡಿದ ಭಾಗ್ಯವ ಕೊಡುವನು ಚಲುವಾ | ಭಕುತರಿಗೊಲಿವ | ಅನುದಿನದಲಿ ಅನುಕಂಪನು ಹರಿ ನಮಗೆಲ್ಲಾ |

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ Read More »