ವಿಜಯದಾಸ

ಮನವೆ ಮಾಧವನೊಳು ಮಮತೆಯಿರಲಿ

ಮನವೆ ಮಾಧವನೊಳು ಮಮತೆಯಿರಲಿ ತನು ಮನ ಧನಗಳು ತನವಾ ನೀಡಿದ ಮ್ಯಾಲೆ ಮಾನಸಿಜ ಜನಕನು ಅನುದಿನ ಪೊರೆವ ಕಾಮ ಜನಕನು ಪ್ರೇಮದಿ ನೆನದರೆ ಮಾಮನೋಹರ ತನ್ನ ಧಾಮವ ಕೊಡುವ||1|| ಸಂತತ ನಿನ್ನನು ಚಿಂತಿಸುವಂ- ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ ||2|| ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ ನಿಜಪದವನೆ ಕೊಡುವಾ ವಿಜಯವಿಠ್ಠಲನಾ ||3||

ಮನವೆ ಮಾಧವನೊಳು ಮಮತೆಯಿರಲಿ Read More »

ಮಧ್ವರಾಯರ ಕರುಣ ಪಡೆಯದವ

ಮಧ್ವರಾಯರ ಕರುಣ ಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು | ಮಧ್ವರಾಯರ ಧ್ಯಾನ ಅಮೃತಪಾನ || ಮಧ್ವರಾಯರ ಲೀಲೆ ನವರತುನದಾ ಮಾಲೆ | ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ ||1|| ಮಧ್ವರಾಯರ ಕಥೆಯ ಕೇಳಲದು ದುರಿತ ಹತ | ಮಧ್ವರಾಯರ ಭಕುತಿ ಮಾಡೆ ಮುಕುತಿ || ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ | ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||2|| ಮಧ್ವರಾಯರ ದಾಸನಾದವನೆ ನಿರ್ದೋಷ | ಮಧ್ವರಾಯರ ಬಂಟ ಜಗಕೆ ನೆಂಟ

ಮಧ್ವರಾಯರ ಕರುಣ ಪಡೆಯದವ Read More »

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಅದ್ವೈತಮತಾರಣ್ಯ ದಹನ ಗುಣಸಾಂದ್ರ ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ||1|| ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ||2|| ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನ ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ||3||

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ Read More »

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ ||1|| ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ ||2|| ಇಪ್ಪತ್ತು ಒಂದು ದುರ್ಮತದ

ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ Read More »

ಮಧ್ವಮತವ ಪೊಂದದವನ ಭಕುತಿಯಾತಕೆ

ಮಧ್ವಮತವ ಪೊಂದದವನ ಭಕುತಿಯಾತಕೆ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ ||1|| ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ ||2|| ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ

ಮಧ್ವಮತವ ಪೊಂದದವನ ಭಕುತಿಯಾತಕೆ Read More »

ಮಧ್ವಮತ ಪೊಂದದೆ ಬದುಕಿದವನೂ

ಮಧ್ವಮತ ಪೊಂದದೆ ಬದುಕಿದವನೂ ಹದ್ದು ಕಾಗಿ ಬದುಕಿ ಕಾಲವನು ಕಳೆದಂತೆ ಸಕಲೇಂದ್ರಿಯಗಳು ಇದ್ದು ನಯನೇಂದ್ರಿಯ ಇಲ್ಲದಂ ಫಲಪುಷ್ಪಯಿಲ್ಲದಾ ಗಿಡಬಳ್ಳಿ ಇದ್ದಂತೆ ಮಳೆಯಿಲ್ಲದಾ ಬೆಳಸು ನೋಡಿದಂತೆ ಚಲುವನಾದಡೆ ಏನು ಗುಣಹೀನನಾದಂತೆ ಖಳರು ನಿತ್ಯಾಕರ್ಮ ಚರಿಸಿದಂತೆ ||1|| ಉತ್ತಮರ ಕೂಡದಾ ಯಾತ್ರೆ ಮಾಡಿದಂತೆ ಕತ್ತೆ ಪರಿಮಳ ಪೊತ್ತು ತಿರುಗಿದಂತೆ ಮೃತ್ತಿಕೆ ಶೌಚ ಇಲ್ಲದೆ ಆಚಾರ ಮಾಡಿದಂತೆ ಸತ್ತ ಹೆಣಕ್ಕೆ ವಸ್ತ್ರ ಶೃಂಗರಿಸಿದಂತೆ||2|| ನಿಶಿಕರ ಇಲ್ಲದಾ ತಾರೆಗಳು ಇದ್ದಂತೆ ವಸುಧಿಪತಿಯಿಲ್ಲದಾ ರಾಜ್ಯದಂತೆ ಹಸಿವೆ ಇಲ್ಲದವನು ಮಧುರನ್ನ ಉಂಡಂತೆ ಹಸುಗಳಿಲ್ಲದ ಮನೆ ವೊಪ್ಪಿದಂತೆ

ಮಧ್ವಮತ ಪೊಂದದೆ ಬದುಕಿದವನೂ Read More »

ಮಧ್ವ ಸರೋವರದ ಸ್ನಾನವ ಮಾಡಿರೊ

ಮಧ್ವ ಸರೋವರದ ಸ್ನಾನವ ಮಾಡಿರೊ ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಕೃತಯುಗದಲಿ ಇದೇ ಅನಂತ ಸರೋವರ ತ್ರೇತಾಯುಗದಲ್ಲಿ ವರುಣತೀರ್ಥ ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ- ನ್ನತ ಕಲಿಯುಗದಲ್ಲಿ ಮಹಾ ತೀರಿಥ ||1|| ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ- ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ ನಿರುತದಲ್ಲಿ ತೀವ್ರಗತಿ ಕೊಡುವಳೂ||2||| ಸಕಲ ವೇದಶಾಸ್ತ್ರ ಓದಿದವನಾದರೂ ಶಕುತಿವಂತನಾಗಿ ಇದ್ದನಾಗೆ ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು ಶಕಲ ಮತಿಯಲಿ ಮಹಾನರಕ ಭುಂಜಿಸುವಾ ||3||

ಮಧ್ವ ಸರೋವರದ ಸ್ನಾನವ ಮಾಡಿರೊ Read More »

ಮಗನೆಂದೆಂಬುವ ಇನ್ನು ಮತ್ತಾವನೊ

ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_ ಭುಕ್ತನಾಗಿದ್ದ ಸಂಸಾರದೊಳಗಾ ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ||1|| ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ ವಿಕೃತಿಯ ಮಾಡುವ ಮದದಿಂದಲೀ ಸುಕೃತವನು ಮರೆದು ದೂರಾಗಿ ಸಂಚರಿಸುವ- ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ ||2|| ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ- ನ್ಮತ್ತನಾಗಿ ಕೆಟ್ಟ ಗ್ರಾಸವನ್ನು ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು

ಮಗನೆಂದೆಂಬುವ ಇನ್ನು ಮತ್ತಾವನೊ Read More »

ಮಂದಮತಿ ನಾನಯ್ಯ ಮಂಗಳಾಂಗಾ

ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ ||1|| ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಸ್ತೋತ್ರ ಪಠಿಸಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ||2|| ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ ||3||

ಮಂದಮತಿ ನಾನಯ್ಯ ಮಂಗಳಾಂಗಾ Read More »

ಮಂತ್ರಾಲಯನಿವಾಸ ಉತ್ತಮ ಹಂಸ

ಮಂತ್ರಾಲಯನಿವಾಸ ಉತ್ತಮ ಹಂಸ | ಸಂತಾಪ ಪರಿಹರಿಸ ಕೊಡು ಎನಗೆ ಲೇಸ ಯತಿಗಳ ಶಿರೋರನ್ನ ಯೋಗಸಂಪನ್ನ | ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ || ನುತಿಸುವೆ ಭಕ್ತಿಯಲಿ ಬಿಡದೆ | ಮುಕುತಿಯಲಿ ಸತತಾನಂದದಲಿಪ್ಪ ||1|| ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ | ತÀಪವ ಮಾಡುವ ಜ್ಞಾನಿ ಸೌಮ್ಯಜ್ಞಾನಿ || ಜಪಶೀಲ ಗುಣ ಗಣಾಂಬುಧಿ ಪುಣ್ಯದ ಬುದ್ಧಿ ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತರುವೆ ||2|| ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ | ಶಮೆದಮೆಯಲ್ಲಿ ಉಳ್ಳ ಮಹಿಮೆಯಾ || ನಮಗೆ ಪೇಳುವೆ

ಮಂತ್ರಾಲಯನಿವಾಸ ಉತ್ತಮ ಹಂಸ Read More »

ಮಂಗಳಂ ಮಹಾಗಂಗೆ

ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ | ಮಂಗಳಂ ಬಲುದುರಿತ ಸಂಹಾರಿಗೆ | ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ ಮಂಗಳಂ ಕುಸುಮ ಚಿತ್ರಹಾರಿಗೆ ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ | ಪಾಣಿಗೆ ಗಂಭೀರ ಗುಣಶ್ರೇಣಿಗೆ | ತ್ರಾಣಿಗೆ ಕೋಕಿಲವಾಣಿಗೆ ಯಾದವನ | ರಾಣಿಗೆ ಮಣಿಹೇಮ ಭೂಷಣೆಗೆ ||1|| ಖ್ಯಾತಿಗೆ ತ್ರಿಲೋಕ ಮಾತೆಗೆ ಯ | ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ | ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ | ದೂತಿಗೆ ಅಮಿತ ಗುಣ ಪ್ರತಾಪಿಗೆ || ||2|| ಚನ್ನಿಗೆ ನಾರಿಕುಲರನ್ನಿಗೆ

ಮಂಗಳಂ ಮಹಾಗಂಗೆ Read More »

ಮಂಗಳಂ ಪ್ರಧಾನ ಮಾರುತಗೆ

ಮಂಗಳಂ ಪ್ರಧಾನ ಮಾರುತಗೆ ಮಂಗಳಂ ಪಾವನ ಮೂರುತಿಗೆ | ಮಂಗಳಂ ತ್ರಿವಿಧ ಸತ್ಕೀರ್ತಿಗೆ | ಮಂಗಳಂ ಸದ್ಗುಣ ಕೀರ್ತಿಗೆ ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ | ಚಿಕ್ಕವನಾಗಿ ಪುರಪೊಕ್ಕವಗೆ || ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ | ನಿಕ್ಕಿಸಿದರಣದ ವಿಷ ಭೋಕ್ತನಿಗೆ ||1|| ವೃಕೋದರ ಭೀಮಗೆ ವಿಶೋಕನೊಡೆಯಗೆ | ಬಕ ಜರಾಸಂಧ ಕೀಚಕ ವಧೆ ಮಾಡಿದಗೆ || ಸಕಲ ದಳದೊಳಗೆ ನಾಯಕನೇ | ನೀ | ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ ||2|| ಒಂದೆ

ಮಂಗಳಂ ಪ್ರಧಾನ ಮಾರುತಗೆ Read More »

ಭೇದ ಪೇಳುವೆನೆ ತಮೊ

ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಸತ್ಯ ನುಡಿವನೆ ಅಪಕಾರಿ ಪರರ ವಿತ್ತಪಹರಿಸುವನೆ ಬಲು ಉದಾರಿ ಹತ್ಯ ಮಾಡುವನೆ ಉಪಕಾರಿ ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ ||1|| ಪರನಾರಿ ಸಹೋದರ ಹೀನ ಕಂಡಾ ಉ ತ್ತರಗಳನಾಡುವನೆ ಆವಾಗ ಮೌನ ತರತಮ್ಮ ಪೇಳುವನೆ ಕೋಣ ತನ್ನ ಹರಣವೊಪ್ಪಿಸಿಕೊಂಬುವನೆ ಪ್ರವೀಣಾ ||2|| ಭ್ರಷ್ಟನೆನೆಸುವನೆ ಧನ್ಯ ಪರರ ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ ಕಷ್ಟ ಬೇಡುವನೆ ರಾಜನ್ಯ ವಿಜಯ ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ ||3||

ಭೇದ ಪೇಳುವೆನೆ ತಮೊ Read More »

ಭೂರಮಣನೆ ಕಾಯೋ ನಿತ್ಯ

ಭೂರಮಣನೆ ಕಾಯೋ ನಿತ್ಯ ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ | ನರನ ಉದ್ಧಾರ ಮಾಡುವುದು ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ ||1|| ಜಿಹ್ವೆಯನು ಪಿಡಿದು ನಿಲಿಸದೆ ವಿಹ್ವಲನಾಗಿ ಬಹುರಸ ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ ||2|| ನಾಸಿಕಕೊನೆಯಿಂದ ಅನರ್ಪಿತÀ ವಾಸನೆ ಕೈಕೊಂಡು ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ ||3|| ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ ||4|| ದುಷ್ಟರಾಡುವ ವಾಕ್ಯ

ಭೂರಮಣನೆ ಕಾಯೋ ನಿತ್ಯ Read More »

ಭೀಮ ಶಾಮ ಕಾಮಿನಿಯಾದನು

ಭೀಮ ಶಾಮ ಕಾಮಿನಿಯಾದನು ಭೀಮ ಶಾಮ ಕಾಮಿನಿಯಾಗಲು ಕಾಮನ ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು ||1|| ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು

ಭೀಮ ಶಾಮ ಕಾಮಿನಿಯಾದನು Read More »

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ ಸೋಮ ರಣರಂಗ ಭೀಮಾ ಆ ಮಹಾದುರಿತ ರಾಮರಾಸಿಗೆ ದೇವಾ ಮೊಗನೆನಿಸುವ ಭೂಮಿ ಭಾರ ಹರ ಧರ್ಮನಂದನನೊಡನೆ ಜನಿಸಿ ಬಂದು ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ ಮಾರ್ಮಲೆತ ಅಸುರನ ನಿರ್ನಾಮಗೈಸಿದ ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ||1|| ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದ ಮೌಳಿ ಅಕಟ ತೊಲಗಿಸಿ ಗೆಲಿದು ನೆರೆದ ಕಾ ಮುಕರ ಬಿಂಕವ ಹಳಿದು ಬಕ

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ Read More »

ಭಾರತೀಶ ಮದ್ಭಾರ ನಿನ್ನದಯ್ಯ

ಭಾರತೀಶ ಮದ್ಭಾರ ನಿನ್ನದಯ್ಯ ಕರುಣದಿ ಪಿಡಿ ಕೈಯ್ಯಾ ಪೂರೈಸೆನ್ನ ಮನೋಭಿಲಾಷೆ ಗುರುವೆ ಭಜಕರ ಸುರತರುವೆದ್ಭ ಹರಿಭಕ್ತಾಗ್ರೇಸರನೆ ಹನುಮಂತಾ ಹರನುತ ಬಲವಂತಾ ತರಣಿಕುಲಜ ಶ್ರೀರಾಮನ ಕೈಯಿಂದ ಬಲುಸಂಭ್ರಮದಿಂದಾ ಶರಧಿಯನು ದಾಂಟಿ ಸೀತಾಕೃತಿಯನ್ನ ನೋಡಿ ರಣದೊಳಗೋಲ್ಯಾಡಿ ದುರುಳ ರಕ್ಕಸರ ದುಷ್ಟ ದನುಜರ ತರಿದೆ ಲೋಕೈಕ ಸಮರ್ಥಾ ||1|| ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ ಕಂತು ಜನತನಿಚ್ಛಾನುಸಾರವಾಗಿ ರಣದೊಳಗೆ ಚೆನ್ನಾಗಿ ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು ಭ್ರಾಂತಿ ಮನ ಜರಿವರೇನು ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ ||2|| ನಡುಮನೆಯೆಂಬೊ ವಿಪ್ರನ

ಭಾರತೀಶ ಮದ್ಭಾರ ನಿನ್ನದಯ್ಯ Read More »

ಭಾರತೀ ಭವಹಾರಿಯೆ ಭಕ್ತರಪ್ರಿಯೆ

ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು ||1|| ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ ||2||

ಭಾರತೀ ಭವಹಾರಿಯೆ ಭಕ್ತರಪ್ರಿಯೆ Read More »

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ | ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ಭಕುತಿ ಇಲ್ಲದೇ ಅನುದಿನ | ಅಕಟನಿಲ್ಲದೆ | ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ | ಪಕೆ ಎರಗಿದೆ ಯಾತಕೆ ಬಾರದವನಾದೆ ||1|| ಆರನ್ನ ಕಾಣದೆ ನಿನ್ನನು ನಾ | ಸಾರಿದೆ ಮಾಣದೆ | ವಾರ ವಾರಕೆನ್ನ ಉದ್ಧಾರವ ಮಾಳ್ಪುದು | ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ ||2|| ನುತಿಸಿ ವಂದನೆ ಮಾಡುವೆ ನಿತ್ಯ | ಕೃತಿಯನಂದನೆ | ಸತತ

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ Read More »

ಭಳಿರೆ ಭಳಿರೆ ನರಸಿಂಹ ಮಹಾಸಿಂಹ |

ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ಮಲಮಲಾ ಮಲತವರ ವೈರಿ ಉರಿಮಾರಿ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ ||1|| ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು

ಭಳಿರೆ ಭಳಿರೆ ನರಸಿಂಹ ಮಹಾಸಿಂಹ | Read More »

ಭಳಿರೆ ತಿರುಪತಿ ತಿಮ್ಮಾ

ಭಳಿರೆ ತಿರುಪತಿ ತಿಮ್ಮಾ | ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ಇಳಿಯೊಳಗೆ ಬಿರಿದು ಸಲ್ಲುವದು ನಿಜ ಭಕ್ತವ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಲತೆವೊಲು ಬೆಳದು ಬಲು | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ

ಭಳಿರೆ ತಿರುಪತಿ ತಿಮ್ಮಾ Read More »

ಭಜಿಸಿರೊ ಬಿಡದೆ ವಿರಾಜಮಾನರಾಗಿ

ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ ಕುಜನರೊಳಾಡದಲೆ ನಿಜ ಭಕುತಿಯಿಂದ ಭುಜಬಲವುಳ್ಳ ಪರಜರಟ್ಟುವ ದಿ ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ ಕರಯುಗಳ ಮುಗಿದು ಶಿರವಾನಿಲ್ಲದೆ ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ ಪರಿಹರವೊ ಬಂದರಘಳಿಗೆಯಲಿ ಪರಿಪರಿ ಜನ್ಮದ ತರತÀರದಘಗಳು ಸರಿಯೆನ್ನಬಹುದಿವರ ದರ್ಶನ ಲಾಭ ದುರುಳರಿಗಾಯ್ತು ಮರಿಯದೆ ಚೆನ್ನಾಗಿ||1|| ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ನಾಂ ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು ತಿರಗುವರನುದಿನ

ಭಜಿಸಿರೊ ಬಿಡದೆ ವಿರಾಜಮಾನರಾಗಿ Read More »

ಭಜಿಸಿದ್ಯಾ ವೆಂಕಟನಾ ನೀ

ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಸುಜನರ ಹೃದಯ ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಮಣಿಮಯ ಖಚಿತ ಕಿರೀಟ ಚಂದ್ರ ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ||1|| ಭೃಂಗಕುಂತಳ ನೀಲಕೇಶ

ಭಜಿಸಿದ್ಯಾ ವೆಂಕಟನಾ ನೀ Read More »

ಭಜಿಸಿದ್ಯಾ ಈ ಭಾಗ್ಯನಿಧಿಯಾ

ಭಜಿಸಿದ್ಯಾ ಈ ಭಾಗ್ಯನಿಧಿಯಾ ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು ತ್ರಿಜಗವಂದಿತ ಗುಣಾಂಬುಧಿಯಾ ಹಾಹಾ ಸುಜನರ ಹೃದಯ ಪಂ ಕಜ ಕರ್ಣಿಕೆವಾಸಾ ಅಜಸುರಾರ್ಚಿತ ಪಾದಾ ರಜತಮೋ ದೂರನ್ನ ಮಣಿಮಯ ಖಚಿತ ಕಿರೀಟ ಚಂದ್ರ ಮನ ಸೋಲಿಸುವ ಲಲಾಟ ಸಣ್ಣ ಫಣಿ ಕಸ್ತೂರಿ ನಾಮಾ ಮಾಟಾ ನಮ್ಮನು ನೋಡುವ ವಾರೆ ನೋಟಾ ಹಾಹಾ ಕನಕ ಮಕರ ಮೋಹನ ಕುಂಡಲ ಕರ್ಣ ಮಿನುಗುವ ಕದಪು ಆವಿನ ಸೋಲಿಸೆ ನಿತ್ಯಾ ||1|| ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ

ಭಜಿಸಿದ್ಯಾ ಈ ಭಾಗ್ಯನಿಧಿಯಾ Read More »

ಭಕ್ತಿಯಲಿ ನಡೆವರಿವರೇ ಸುಗುಣರೊ

ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ ||1|| ಅಡಿಬಿಡದೆ ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ ||2|| ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು

ಭಕ್ತಿಯಲಿ ನಡೆವರಿವರೇ ಸುಗುಣರೊ Read More »