ಬಿನ್ನಹಕೆ ಬಾಯಿಲ್ಲವಯ್ಯ

ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನೊಳಗೆ ಇರಲಾಗಿ|| ಶಿಶುಮೋಹ ಸತಿಮೋಹ ಜನನಿ-ಜನಕರ ಮೋಹ ರಸಿಕ ಭ್ರಾತರ ಮೋಹ ರಾಜಮೋಹ| ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ|| ಅನ್ನಮದ ಅರ್ಥಮದ ಅಖಿಲ ವೈಭವದ ಮದ ಮುನ್ನ ಪ್ರಾಯದ ಮದವು ಪೂಪಮದವು| ತನ್ನ ಸತ್ತ್ವದ ಮದ ಧಾತ್ರಿವಶದ ಮದ ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ|| ಇಷ್ಟು ದೊರೆಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರೆ ಮತ್ತಿಷ್ಟರಾಸೆ| ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಪುರಂದರವಿಟ್ಠಲ||                                          —-ಪುರಂದರದಾಸ

ಬಿನ್ನಹಕೆ ಬಾಯಿಲ್ಲವಯ್ಯ Read More »

ಬಿಡು ಬಿಡು ಬಾಹ್ಯದೊಳು

ಬಿಡು ಬಿಡು ಬಾಹ್ಯದೊಳು ಡಂಭವ ಮಾನಸದೊಳು ಎಡೆಬಿಡದಿರು ಶಂಭುವ ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ ಪಡೆದರೆ ಶಿವ ನಿನಗೊಲಿಯನು ಮರುಳೆ|| ಜನಕಂಜಿ ನಡೆಕೊಂಡರೇನುಂಟು ಲೋಕದಿ ಮನಕಂಜಿ ನಡೆಕೊಂಬುದೇ ಚಂದ| ಜನರೇನ ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ|| ಮನದಲಿ ಶಿವ ತಾ ಮನೆಮಾಡಿಕೊಂಡಿಹ ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ| ಮನಕಂಜಿ ನಡೆಯದೆ ಜನಕಂಜಿ ನಡೆದರೆ ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ||                                              —-ಸರ್ಪಭೂಷಣ ಶಿವಯೋಗಿ

ಬಿಡು ಬಿಡು ಬಾಹ್ಯದೊಳು Read More »

ಬಾ ಶ್ರೀಗುರುದೇವನೆ ಬಾ

ಬಾ ಶ್ರೀಗುರುದೇವನೆ ಬಾ| ಶ್ಯಾಮಲ ಕಾನನ ಶೃಂಗ ತರಂಗಿತ ಸಹ್ಯಾದ್ರಿಯ ಸುಂದರ ಮಂದಿರಕೆ ಚನ್ಮಯ ಮಮ ಹೃನ್ಮಂದಿರಕೆ|| ವಂಗಮಾತೆಯಲಿ ಜನ್ಮವನೆತ್ತಿ ದಿವ್ಯಸಮನ್ವಯ ಧರ್ಮವ ಬಿತ್ತಿ ಮತಭೇದದ ವಿಷವನು ಹೋಗಾಡಿ ಲೋಕದ ದೃಷ್ಟಿಗೆ ಸಮತೆಯ ನೀಡಿ ಕಾಪಾಡಿದ ಪಾವನ ಮೂರುತಿಯೇ|| ಹೇ ನವಯುಗದವತಾರ ಪೂರ್ವದಿಗಂತದಿ ಕಾಂತಿಯು ಮೂಡಿ ನಾಡಿನ ಕತ್ತಲೆಯನು ಹೋಗಾಡಿ ಮೈದೋರುವ ತೆರದಲಿ ನೀನಿಂದು ನಮ್ಮೀ ವನಗೃಹಕೈತಂದು ನಮ್ಮೆದೆಗತ್ತಲ ಪರಿಹರಿಸಿ ಸುಖಶಾಂತಿಯ ಕಾಂತಿಯ ಬರಿಸಿ ಕೃಪೆಗೈ, ಓ ಮಮ ದೀನಬಂಧು||                                        —-ಕುವೆಂಪು

ಬಾ ಶ್ರೀಗುರುದೇವನೆ ಬಾ Read More »

ಬಾರಯ್ಯ ರಂಗ

ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ|| ಇಂದೆನ್ನ ಪೂರ್ವಪಾಪಂಗಳ ಕಳೆದು ಮುಂದೆನ್ನ ಜನ್ಮ ಸಫಲವ ಗೈದು| ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು ಎಂದೆಂದಿಗಾನಂದ ಸುಖವನು ಸುರಿದು||                                                 —-ಪುರಂದರದಾಸ

ಬಾರಯ್ಯ ರಂಗ Read More »

ಬಂದು ನಿಂದಿಹ ನೋಡಿ

ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ|| ವಂದಿಸುತ ಮನದೊಳಗೆ ಇವನಡಿ ದ್ವಂದ್ವ ಭಜಿಸಲು ಬಂದ ಭಯಹರ ಇಂದುಧರ ಸುರವೃಂದನುತ ಗೋ- ವಿಂದ ಕರುಣಾಸಿಂಧು ಶ್ರೀಹರಿ|| ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರ ನಿಧಿ ಕೊರಳಲ್ಲಿ ಮುತ್ತಿನಲ್ಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ|| ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲ ಧಾರ ಭುಜ ಕೇಯೂರಭೂಷಿತ ಮಾರಪಿತ ಗುಣ ಮೋಹನಾಂಗ|| ಚಾರು ಪೀತಾಂಬರ ಕಟೀ ಕರ-

ಬಂದು ನಿಂದಿಹ ನೋಡಿ Read More »

ಬಂದಿಹೆ ಜನನಿ ಮರಳಿ ನೀನು

ಬಂದಿಹೆ ಜನನಿ ಮರಳಿ ನೀನು ಧರೆಯ ಪಾಪದ ಭಾರವ ಕಳೆಯೆ| ದಗ್ಧ ಹೃದಯದ ಜ್ವಾಲೆಯನಾರಿಸೆ ದುಃಖಿತರೆಲ್ಲರ ಕಣ್ಣೀರೊರಸೆ|| ಯುಗಯುಗದಲೂ ನೀ ಬರುವೆ ಧರೆಗೆ ಯಾತನೆಗಳನು ಎನಿತೋ ಸಹಿಪೆ| ಕಲ್ಲಾಗಿಹುದು ಹೃದಯವೆಮ್ಮದು ಮರಳಿ ಮರಳಿ ಮರೆವೆವು ಧರ್ಮವ|| ಸಹನ-ಮೂರುತಿ ಸೀತೆಯ ರೂಪದಿ ಬೋಧಿಸಿ ಅರುಹಿದೆ ಅಚಲ ಭಕ್ತಿಯ| ರಾಧೆಯ ರೂಪದಿ ದರುಶನವಿತ್ತು ಪ್ರೇಮದ ಮಹಿಮೆಯ ಪ್ರಚಾರಗೈದೆ|| ರಾಮಕೃಷ್ಣಲೀಲೆ ಪೂರಣಗೈಯಲು ಎಲ್ಲರ ತಾಯಿಯು ಆಗಿ ನೀ ಬಂದಿಹೆ| ಪಾಪಿ ತಾಪಿಗಳ ಅಪಾರ ಶರಣು ಸರ್ವರ ಆಶ್ರಯ, ಅರ್ಹರೇ ಎಲ್ಲ! ||

ಬಂದಿಹೆ ಜನನಿ ಮರಳಿ ನೀನು Read More »

ಬಲು ಮಧುರವೊ

ಬಲು ಮಧುರವೊ ನಿನ್ನ ಹೆಸರು ಕಿವಿಗೆ ಸುಧೆಯ ಕರೆವುದು| ದೀನಶರಣ ಪ್ರಾಣರಮಣ ಅಮೃತ ಭವನ ಧನವಿದು|| ನಿನ್ನ ಹೆಸರು ಕೀರ್ತಿಸಿದರೆ ನಾವು ಅಮರರಪ್ಪೆವೋ| ಚಿಂತೆಗಡಲು ನಿಮಿಷದಲ್ಲಿ ಬತ್ತುತ ಬಯಲಪ್ಪುದೋ|| ಹೃದಯದಲ್ಲಿ ನಿನ್ನ ಮಧುರ ಗಾಯನವನೆ ಗೈವೆವು| ಹೃದಯನಾಥ ಚಿದಾನಂದ ನಿರುತ ನಿನ್ನ ನೆನೆವೆವು||                                —-ವಚನವೇದ

ಬಲು ಮಧುರವೊ Read More »

ಬಲಿಯ ಮನೆಗೆ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ ವಿಭೀಷಣನೆಡೆಗೆ ಶ್ರೀರಾಮ ಬಂದಂತೆ ನಿನ್ನ ನಾಮವು ನನ್ನ ನಾಲಿಗೆಗೆ ಬರಲಿ ಬರಲಿ ಬರಲಿ ಶ್ರೀಪುರಂದರವಿಟ್ಠಲ||                                      —-ಪುರಂದರದಾಸ

ಬಲಿಯ ಮನೆಗೆ Read More »

ಬರಿದೆ ಹೋಯಿತು

ಬರಿದೆ ಹೋಯಿತು ಹೋಯಿತು ಹೊತ್ತು| ನರಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ|| ಆಸೆ ಎಂಬುದು ಎನ್ನ ಕ್ಲೇಶಪಡಿಸುತಿದೆ ಗಾಸಿಯಾದೆನೊ ಹರಿ ನಾರಾಯಣ| ವಾಸುದೇವನೆ ನಿನ್ನ ಧ್ಯಾನವ ಮಾಡದೆ ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ|| ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ ಮರುಳುತನದಲಿ ಮತಿಹೀನನಾದೆ| ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ ಮರೆಯದೆ ಸಲಹಯ್ಯ ಪುರಂದರವಿಟ್ಠಲ||                                             —-ಪುರಂದರದಾಸ

ಬರಿದೆ ಹೋಯಿತು Read More »

ಬರಿದೆ ಕರೆಯೆ ನೀ ಬಾರದಿರುವೆ

ಬರಿದೆ ಕರೆಯೆ ನೀ ಬಾರದಿರುವೆ ಪರಮ ಪ್ರೇಮದಿಂ ಕರೆದರೆ ಬರುವೆ|| ತಿಳಿತಿಳಿದು ನಿನ್ನ ಕರೆಯದೆ ಉಳಿದೆ ಇಳೆಯ ಆಟದಲಿ ಮೈಮರೆತೆ| ಕಳೆಯೈ ಮೋಹದ ಆವರಣವ ನೀ ಬೆಳಕ ತೋರೊ ಹರಿ ಕರುಣಾಜಲಧೇ|| ಕನಕಹರಿಣವೀ ಭುವನ ವಿರಚನೆ ಕನಸು ಸಾಕೋ ಕೃಷ್ಣ ಕೈಮುಗಿವೆ| ದಿನಕರನುದಯಕೆ ವನಜವಿಕಸನ ಮನವರಳಿಸೊ ಹರಿ ಪರಮಗುಣನಿಧೇ||

ಬರಿದೆ ಕರೆಯೆ ನೀ ಬಾರದಿರುವೆ Read More »

ಬಡವರೊಳಗೆ ಎನಗಿಂತ

ಬಡವರೊಳಗೆ ಎನಗಿಂತ ಅನ್ಯರಿಲ್ಲ| ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ|| ದೃಢಭಕ್ತಿ ಎನಗೆ ನಿನ್ನಲಿ ನಿಲಿಸಿ| ಬಿಡದೆ ಸಲಹಯ್ಯ ಪುರಂದರವಿಟ್ಠಲ||                                        —-ಪುರಂದರದಾಸ

ಬಡವರೊಳಗೆ ಎನಗಿಂತ Read More »