ಗುರುವೇ ತೊಳೆಯೆನ್ನ ಮನಸಿನ ಕೊಳಕ
ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ
ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »
ಮಿಶ್ರ ಶಿವರಂಜಿನಿ – ಏಕತಾಲ ಗುರುವೇ ತೊಳೆಯೆನ್ನ ಮನಸಿನ ಕೊಳಕ ಕಳೆದುಕೊಂಡದ್ದನ್ನ ಪಡಕೊಳ್ಳೋತನಕ|| ಭಕ್ತಿಯ ಜಲದಲ್ಲಿ ಮಾಡುವೆ ಜಳಕ ನಾನದರಿಂದಲೆ ಹೊಂದುವೆ ಪುಳಕ|| – ಸ್ವಾಮಿ ಪುರುಷೋತ್ತಮಾನಂದ
ಗುರುವೇ ತೊಳೆಯೆನ್ನ ಮನಸಿನ ಕೊಳಕ Read More »
ದರಬಾರೀ ಕಾನಡ – ದಾದರಾ ಗುರುವೆ ತಾಯಿ ಗುರುವೆ ತಂದೆ ಗುರುವೆ ದೈವ ದಾತಾರ| ಗುರುವೆ ಬಂಧು ದಯಾಸಿಂಧು ಗುರುವೆ ಕೃಪೆಯ ಸಾಕಾರ|| ಗುರುವೆ ಬ್ರಹ್ಮ ಗುರುವೆ ವಿಷ್ಣು ಗುರುವೆ ವರ ಮಹೇಶ್ವರ| ಗುರು ಪರತರ ಪರಬ್ರಹ್ಮ ಗುರುವೆ ಸಕಲ ಆಧಾರ|| ತಮವ ಕಳೆದು ಬೆಳಕ ತಂದ ದೀನಬಂಧು ಗುರುವರ| ಕರ್ಮಬಂಧ ತರಿದ ಧೀರ ನಿನಗಿದೋ ನಮಸ್ಕಾರ|| – ಸ್ವಾಮಿ ಪುರುಷೋತ್ತಮಾನಂದ
ಗುರುವೆ ತಾಯಿ ಗುರುವೆ ತಂದೆ Read More »
ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುದೇವ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ || ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ || ಅಖ0ಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ | ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ || ಅನೇಕಜನ್ಮಸಂಪ್ರಾಪ್ತ -ಕರ್ಮ ಬಂಧವಿ.ಹಿನೇ | ಆತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ || ಮನ್ನಾತಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ | ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ || ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ ಕವಿತ್ವಾದಿಗದ್ಯಂ ಸುಪದ್ಯಾಂ ಕರೋತಿ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ || ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ || ನ ಭೋಗೇ ನ ಯೋಗೇ ನ ವಾ ವಾಜಿರಾಜೌ ನ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ Read More »
ಭವ-ಸಾಗರ-ತಾರಣ-ಕಾರಣ ಹೇ ರವಿ-ನಂದನ-ಬಂಧನ-ಖಂಡನ ಹೇ | ಶರಣಾಗತ-ಕಿಂಕರ-ಭೀತಮನೇ ಗುರುದೇವ ದಯಾಕರ ದೀನಜನೇ || ಹೃದಿಕಂದರ-ತಾಮಸ-ಭಾಸ್ಕರ ಹೇ ತುಮಿ ವಿಷ್ಣು ಪ್ರಜಾಪತಿ ಶಂಕರ ಹೇ | ಪರಬ್ರಹ್ಮ ಪರಾತ್ ಪರ ವೇದ ಭಣೇ ಗುರುದೇವ ದಯಾಕರ ದೀನಜನೇ || ಮನ-ವಾರಣ-ಶಾಸನ-ಅಂಕುಶ ಹೇ ನರತ್ರಾಣ ತರೇ ಹರಿ ಚಾಕ್ಷುಷ ಹೇ | ಗುಣಗಾನ-ಪರಾಯಣ ದೇವಗಣೇ ಗುರುದೇವ ದಯಾಕರ ದೀನಜನೇ || ಕುಲಕುಂಡಲಿನೀ-ಘುಮ-ಭಂಜಕ ಹೇ ಹೃದಿ-ಗ್ರಂಥಿ-ವಿದಾರಣ-ಕಾರಕ ಹೇ | ಮಮ ಮಾನಸ ಚಂಚಲ ರಾತ್ರದಿನೇ ಗುರುದೇವ ದಯಾಕರ ದೀನಜನೇ || ರಿಪು-ಸೂದನ
ಭವ-ಸಾಗರ-ತಾರಣ-ಕಾರಣ ಹೇ Read More »
ರಹನಾ ನಹಿ ದೇಸ ಬಿರಾನಾ ಹೈ|| ಯಹ ಸಂಸಾರ ಕಾಗದಕಿ ಪುಡಿಯಾ ಬೂಂದ ಪಡೇ ಘುಲ ಜಾನಾ ಹೈ|| ಯಹ ಸಂಸಾರ ಕಾಂಟಕೀ ಬಾಡೀ ಉಲಝ ಪುಲಝ ಮರಿ ಜಾನಾ ಹೈ| ಯಹ ಸಂಸಾರ ಝಾಡ ಔರ್ ಝಾಂಕರ ಆಗ ಲಗೇ ಬರಿ ಜಾನಾ ಹೈ| ಕಹತ ಕಬೀರ ಸುನೋ ಭಾಈ ಸಾಧೋ ಸತಗುರು ನಾಮ ಠಿಕಾನಾ ಹೈ|| —-ಕಬೀರದಾಸ
ನಮನ ಕರೂ ಮೈ ಗುರುಚರಣ|| ಭವಭಯಹರಣ ವಂದಿತಚರಣ| ತರಣ ಪ್ರಣತಜನಸುಶರಣ|| ಕಲಿಮಲಹರಣ ಸಬಸುಖಕಾರಣ| ಅಭಯವಿತರಣ ಜಗದುದ್ಧರಣ ಪಾತಕಹರಣ||
ಡುಬ್ ಡುಬ್ ಡುಬ್ ರೂಪ್ ಸಾಗೋರೇ ಆಮಾರ್ ಮನ್|| ತಲಾತಲ್ ಪಾತಾಲ ಖೂಂಜಲೇ ಪಾಬಿರೇ ಪ್ರೇಮ ರತ್ನಧನ್|| ಡುಬ್ ಡುಬ್ ಡುಬ್ ಡುಬಲೇ ಪಾಬಿ ಹೃದಯಮಾಝೇ ಬೃಂದಾವನ್ ದೀಪ್ ದೀಪ್ ದೀಪ್ ಜ್ಞಾನೇರ್ ಬಾತಿ ಹೃದೇ ಜ್ವೊಲ್ ಬೆ ಅನುಕ್ಷಣ್|| ಡ್ಯಾಂಗ್ ಡ್ಯಾಂಗ್ ಡ್ಯಾಂಗ್ ಡ್ಯಾಂಗಾಯ್ ಡಿಂಗೇ ಚಾಲಾಯ್ ಆಬಾರ್ ಶೇ ಕೋನ ಜನ್| ಕುಬೀರ್ ಬೋಲೆ ಶೋನ್ ಶೋನ್ ಶೋನ್ ಭಾವ್ ಗುರೂರ್ ಶ್ರೀಚರಣ್||
ಜಲ ಬೀಚ ಧೋಬಿಯಾ ಮರತ ಪಿಯಾಸಾ|| ಜಲಮೇ ಠಾಳ ಹೈ ಪಿಯೇ ನಹಿ ಮೂರಖ ಅಚ್ಛಾ ಜಲ ಹೈ ಖಾಸಾ|| ಛಿನಮೇ ಧೋಬಿಯಾ ರೋವೇ ಧೋವೇ ಛಿನಮೇ ರಹತ ಉದಾಸಾ| ಏಕ ರಾತಕೋ ಜೋರ್ ಲಗಾವೇ ಸೋವೇ ಬಾರಹ ಮಾಸಾ|| ಸಚ್ಚಾ ಸಾಬುನ್ ಲೇ ನ ಮೂರಖ ಹೈ ಸಂತನ ಕೇ ಪಾಸಾ| ದಾಗ ಪುರಾನಾ ಛೂಟತ ನಾಹೀ ಧೋವೇ ಬಾರಹ ಮಾಸಾ|| ಚಾಹತ್ ಛುಡಾವನ ನಿಶಿದಿನ ಧೋಬಿಯಾ ಗಲಮೇ ಭರಮ ಕೇ ಪಾಸಾ| ಕಹತ ಕಬೀರ
ಗುರು ಬಿನ ಕೌನ್ ಬತಾವೇ ಬಾಟ ಬಡಾ ವಿಕಟ ಯಮ ಘಾಟ|| ಭ್ರಾಂತಿಕೀ ಪಹಾಡೀ ನದಿಯಾ ಬೀಚಮೋ ಅಹಂಕಾರಕೀ ಲಾಟ|| ಕಾಮ ಕ್ರೋಧ ದೋ ಪರ್ವತ ಠಾಢೇ ಲೋಭ ಚೋರ ಸಂಘಾತ|| ಮದ ಮತ್ಸರಕಾ ಮೇಹ ಬರಸತ ಮಾಯಾ ಪವನ ಬಹೇ ದಾಟ|| ಕಹತ ಕಬೀರ ಸುನೋ ಭಾಯೀ ಸಾಧೋ ಕ್ಯೂ ತರನಾ ಯಹ ಘಾಟ|| —-ಕಬೀರದಾಸ
ಗುರು ಕೃಪಾಂಜನ ಪಾಯೋ ಮೇರೇ ಭಾಯೀ ರಾಮ ಬಿನಾ ಕಛು ಜಾನತ ನಾಹೀ|| ಅಂತರ ರಾಮ ಬಾಹಿರ ರಾಮ ಜಹಾ ದೇಖೌ ತಹ ರಾಮಹಿ ರಾಮ|| ಜಾಗತ ರಾಮ ಸೋವತ ರಾಮ ಸಪನೇಮೇ ದೇಖೌ ರಾಜಾ ರಾಮ|| ಏಕಾ ಜನಾರ್ದನೀ ಭಾವಹಿ ನೀಕಾ ಜೋ ದೇಖೌ ಸೋ ರಾಮ ಸರೀಖಾ|| —-ಏಕನಾಥ
ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ತ್ವ ಬೆಳೆಯನೆ ಬೆಳೆದುಣ್ಣಿರೋ|| ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೆ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ|| ಗುರುವರನುಪದೇಶವೆಂಬ ಬೀಜದ ಬಿತ್ತಿ ಮೆರೆವ ಸಂಸ್ಕಾರವೃಷ್ಟಿಯ ಬಲದಿ ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ ದುರಿತದುರ್ಗುಣವೆಂಬ ಕಳೆಯನು ಕಿತ್ತು|| ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ಧನಡಿಗಳಿಗೆರಗುತ್ತ ಭವವೆಂಬ ಬರವನು ತಮ್ಮ ಸೀಮೆಗೆ ಕಳುಹಿ|| —-ಸರ್ಪಭೂಷಣ ಶಿವಯೋಗಿ
ಶರೀರವೆಂತೆಂಬುವ ಹೊಲವ Read More »
ಶರಣಾಗು ಶರಣಾಗು ಶರಣಾಗು ಮನವೇ ಶ್ರೀಗುರುಚರಣ ಸರೋಜಕೆ ಮಣಿದು|| ರಾಮಕೃಷ್ಣ ಗುರುಕೃಪೆ ನಿನಗಾದರೆ ಹರಿವುದು ಭವಭಯ ಚಿಂತಾರುಜಿನ| ಶ್ರೀಗುರುನಾಮದ ನೌಕೆಯು ದೊರೆತರೆ ಭವಸಾಗರ ಯಾನವೆ ಮೋದಕರ|| ಎಲ್ಲ ಧರ್ಮಗಳ ತಿರುಳನು ಸಾರುವ ನೊಂದ ಜೀವರಿಗೆ ಭರವಸೆಯೀಯುವ| ರಾಮಕೃಷ್ಣ ಸಂದೇಶ ಗೀತೆಯ ಸಾಗರದಲೆಗಳು ಹಾಡುತಿವೆ|| ಭವ್ಯ ಹಿಮಾಲಯ ಪರ್ವತರಾಜಿಯು ಮುಳುಗಿರೆ ಧ್ಯಾನ ಸಮಾಧಿಯಲಿ| ರಾಮಕೃಷ್ಣ ಜಯ ರಾಮಕೃಷ್ಣ ಜಯ ಎಂಬೀ ನಿನದವು ಕೇಳುತಿದೆ|| —-ಪ್ರಭುಪ್ರಸಾದ
ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರು ಶರಣಂ ಭವವೈದ್ಯಂ|| ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ಜ್ವಲಭಕ್ತಿಪಟಾವೃತವೃತ್ತಂ| ಕರ್ಮಕಲೇವರಮದ್ಭುತಚೇಷ್ಟಂ ಯಾಮಿ ಗುರುಂ ಶರಣಂ ಭವವೈದ್ಯಂ|| —-ಸ್ವಾಮಿ ವಿವೇಕಾನಂದ
ಶಕ್ತಿಸಮುದ್ರಸಮುತ್ಥತರಂಗಂ Read More »
ವನಸುಮದೊಲೆನ್ನ ಜೀ- ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ|| ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ|| ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ| ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ- ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ|| ಉಪಕಾರಿ ನಾನು ಎ- ನ್ನುಪಕೃತಿಯು ಜಗಕೆಂಬ ವಿಪರೀತಮತಿಯನುಳಿದು| ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು|| —-ಡಿ.ವಿ.ಜಿ.
ಮಣಿವೆ ನಿನ್ನ ಕಮಲದಡಿಗೆ ದಯದಿ ಬಾರೊ ಎದೆಯ ಗುಡಿಗೆ|| ಭಕ್ತಹೃದಯಜಲಜ ಬಂಧು ನೀನಪಾರ ಕರುಣೆ ಸಿಂಧು| ಪ್ರೇಮಭಕ್ತಿಯೊಡನೆ ಕೂಡಿ ಬಾರೈ ತಂದೆ ಕರೆವೆ ಬೇಡಿ|| ತ್ಯಾಗಮೂರ್ತಿ ತಪೋಮೂರ್ತಿ ಜ್ಞಾನಮೂರ್ತಿ ಸೊಗದ ಮೂರ್ತಿ| ಹರಿದಿದೆಲ್ಲೆಡೆ ನಿನ್ನ ಕೀರ್ತಿ ತ್ಯಾಗಪಥದ ನಿತ್ಯಸ್ಪೂರ್ತಿ|| ವಿಶ್ವದೊಡೆಯ ಶುದ್ಧಹೃದಯ ಕೋಟಿಸೂರ್ಯ ಜ್ಯೋತಿರೂಪ| ನಿನ್ನೀ ಕಂದನ ಕರೆಯನಾಲಿಸಿ ಬಾರೋ ಬೇಗ ಶಕ್ತಿವೆರಸಿ|| —ಸ್ವಾಮಿ ತದ್ರೂಪಾನಂದ
ಮಣಿವೆ ನಿನ್ನ ಕಮಲದಡಿಗೆ Read More »
ಮಣಿಯಲೆನ್ನ ಶಿರವು ನಿನ್ನ ಚರಣಧೂಳಿ ತಲದಲಿ| ನನ್ನ ಅಹಂಕಾರವೆಲ್ಲ ಮುಳುಗಲಶ್ರುಜಲದಲಿ|| ನನಗೆ ನಾನೆ ಪೂಜೆಗೈಯೆ ಸೊಡರನೆತ್ತಲು ಬೆಳಕು ಬರುವ ಬದಲು ಅಯ್ಯೋ ಬರಿಯ ಕತ್ತಲು ಅಹಂಕಾರದಂಧಕಾರ ಮುತ್ತುತಿದೆ ಸುತ್ತಲು|| ನನ್ನ ನಾನೆ ಮೆರೆಯದಂತೆ ನಾನು ಗೈವ ಕರ್ಮದಿ ನಿನ್ನ ಇಚ್ಛೆ ಪೂರ್ಣವಾಗ- ಲೆನ್ನ ಜೀವಧರ್ಮದಿ| ತಳೆಯಲೆನ್ನ ಜ್ಞಾನ ನಿನ್ನ ಚರಮ ಶಾಂತಿಯ ಬೆಳಗಲೆನ್ನ ಪ್ರಾಣ ನಿನ್ನ ಪರಮ ಕಾಂತಿಯ ನನ್ನನಳಿಸು ನೀನೆ ನೆಲಸು ಹೃದಯಪದ್ಮದಲದಲಿ|| —-ಕುವೆಂಪು
ಬಾ ಶ್ರೀಗುರುದೇವನೆ ಬಾ| ಶ್ಯಾಮಲ ಕಾನನ ಶೃಂಗ ತರಂಗಿತ ಸಹ್ಯಾದ್ರಿಯ ಸುಂದರ ಮಂದಿರಕೆ ಚನ್ಮಯ ಮಮ ಹೃನ್ಮಂದಿರಕೆ|| ವಂಗಮಾತೆಯಲಿ ಜನ್ಮವನೆತ್ತಿ ದಿವ್ಯಸಮನ್ವಯ ಧರ್ಮವ ಬಿತ್ತಿ ಮತಭೇದದ ವಿಷವನು ಹೋಗಾಡಿ ಲೋಕದ ದೃಷ್ಟಿಗೆ ಸಮತೆಯ ನೀಡಿ ಕಾಪಾಡಿದ ಪಾವನ ಮೂರುತಿಯೇ|| ಹೇ ನವಯುಗದವತಾರ ಪೂರ್ವದಿಗಂತದಿ ಕಾಂತಿಯು ಮೂಡಿ ನಾಡಿನ ಕತ್ತಲೆಯನು ಹೋಗಾಡಿ ಮೈದೋರುವ ತೆರದಲಿ ನೀನಿಂದು ನಮ್ಮೀ ವನಗೃಹಕೈತಂದು ನಮ್ಮೆದೆಗತ್ತಲ ಪರಿಹರಿಸಿ ಸುಖಶಾಂತಿಯ ಕಾಂತಿಯ ಬರಿಸಿ ಕೃಪೆಗೈ, ಓ ಮಮ ದೀನಬಂಧು|| —-ಕುವೆಂಪು
ಬಾ ಶ್ರೀಗುರುದೇವನೆ ಬಾ Read More »
ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ ಭಯವೇನು ಭಯವೇನು ಭಯವೇನು ಗುರುವೆ| ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ ಸುಖವೇನು ಸುಖವೇನು ಸುಖವೇನು ಪ್ರಭುವೆ||
ಗುರುವೆ ತಾಯಿ ಗುರುವೆ ತಂದೆ ಗುರುವೆ ದೈವ ದಾತಾರ| ಗುರುವೆ ಬಂಧು ದಯಾಸಿಂಧು ಗುರುವೆ ಕೃಪೆಯ ಸಾಕಾರ|| ಗುರುವೆ ಬ್ರಹ್ಮ ಗುರುವೆ ವಿಷ್ಣು ಗುರುವೆ ವರ ಮಹೇಶ್ವರ| ಗುರುಪರತರ ಪರಬ್ರಹ್ಮ ಗುರುವೆ ಸಕಲ ಆಧಾರ|| ತಮವ ಕಳೆದು ಬೆಳಕ ತಂದ ದೀನಬಂಧು ಗುರುವರ| ಕರ್ಮ ಬಂಧ ತರಿದ ಧೀರ ನಿನಗಿದೋ ನಮಸ್ಕಾರ||
ಗುರುವೆ ತಾಯಿ ಗುರುವೆ ತಂದೆ Read More »
ಈ ಮರ್ತ್ಯ ಧೂಳಿಯಲಿ ಹುಟ್ಟಿಬೆಳೆದೆವು ನಾವು ಈ ಧೂಳಿಯಲಿ ದೃಷ್ಟಿ ಕುರುಡಾಯಿತು| ಈ ಮಣ್ಣಿನಲಿ ನಾವು ಮಕ್ಕಳಂತಾಡಿದೆವು ಅಭಯವನು ನೀಡಯ್ಯ ದಿವ್ಯಗುರುವೆ|| ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು ನಿನ್ನ ಮಡಿಲಿಂದಾಚೆ ನೂಕಲಿಹೆಯಾ| ನೀನೆ ನಮ್ಮನ್ಮು ತಳ್ಳಿ ಅನಾಥರಂದದಲಿ ತೊಳಲಿಸುವೆಯಾ ನಮ್ಮ ಬಳಲಿಸುವೆಯಾ|| ಹೇ ಪ್ರಭುವೆ ಹಾಗೆಂದಿಗೂ ಗೈಯಬೇಡ ನಮ್ಮನೆಂದಿಗು ಆಚೆ ನೂಕಬೇಡ| ನಾವು ಅಲ್ಪರು ಗುರುವೆ, ಸಿಟ್ಟಾಗದಿರು ಪ್ರಭುವೆ ಮೃದುನುಡಿಯೊಳೆಮ್ಮೊಡನೆ ಮಾತನಾಡು|| ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ ಹೆಜ್ಜೆಹೆಜ್ಜೆಗು ಎಡವಿ ಬೀಳುತಿಹೆವು| ಇದನರಿತರೂ ನೀನು
ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| ಜಟಿಲಕುಟಿಲತಮ ಅಂತರಂಗ ಬಹು ಭಾವವಿಪಿನ ಸಂಚಾರಿ| ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| ಜನುಮ ಜನುಮ ಶತಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿ| ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| ಪಾಪಪುಣ್ಯ ನಾನಾ ಲಲಿತ ರುದ್ರಲೀಲಾ ರೂಪಅರೂಪ ವಿಹಾರಿ| ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| —-ಕುವೆಂಪು
ಅಂಜಿಕಿನ್ಯಾತಕ್ಕಯ್ಯಾ ಸಜ್ಜನರಿಗೆ ಅಂಜಿಕಿನ್ಯಾತಕ್ಕಯ್ಯಾ|| ಸಂಜೀವರಾಯರ ಸ್ಮರಣೆಮಾಡಿದಮೇಲೆ|| ಕನಸಲಿ ಮನದಲಿ ಕಳವಳವಾದರೆ ಹನುಮನ ನೆನೆದರೆ ಹಾರಿಹೋಗದೆ ಪಾಪ|| ರೋಮರೋಮಕೆ ಕೋಟಿ ಲಿಂಗವುದುರಿಸಿದ ಭೀಮನ ನೆನೆದರೆ ಬಿಟ್ಟುಹೋಗದೆ ಪಾಪ|| ಪುರಂದರವಿಟ್ಠಲ ಪೂಜೆಯ ಮಾಡುವ ಗುರು ಮಧ್ವರಾಯರ ಸ್ಮರಣೆಮಾಡಿದಮೇಲೆ|| —-ಪುರಂದರದಾಸರು
ಅಂಜಿಕಿನ್ಯಾತಕ್ಕಯ್ಯಾ Read More »
ಅನ್ಯಚಿಂತೆಯ ಪಥದಿ ಮನವಲೆದು ಸಾಗಿರಲು ನಿನ್ನ ದರ್ಶನ ನನ್ನ ನಾಚಿಸಿಹುದು || ಜೀವನದ ಜಲಧಿಯಲಿ ಪಯಣಗೈಯುವ ನನಗೆ ನೀನೊಂದು ಧ್ರುವತಾರೆ ನನ್ನ ಗುರುವೆ| ಕಡೆಯಿಲ್ಲದೀ ಕಡಲ ಬಳಸುದಾರಿಯೊಳಾನು ದಿಕ್ಕು ತಪ್ಪದೆ ಇನ್ನು ಪಯಣಗೈವೆ|| ಇಲ್ಲಿ ನಾನಲೆವಾಗ ಎಂದಾದರೂ ನನ್ನ ಎದೆಯು ಮಿಡುಕಾಡುತಿರೆ ನೋವಿನಲ್ಲಿ| ಮೇಲೆ ನಿನ್ನಯ ಕರುಣಕಾಂತಿಯುಜ್ವಲ ತಾರೆ ಬೆಳಗಿ ಸಂತೈಸುವುದು ಹಾದಿಯಲ್ಲಿ|| ನನ್ನಂತರಂಗದಲಿ ನಿನ್ನ ಮುಖವೆಂದಿಗೂ ಚಿರಮಧುರ ಕಾಂತಿಯಲಿ ಶೋಭಿಸಿಹುದು| ಒಂದೆ ಚಣ ನಾ ನಿನ್ನ ಕಾಣದಿದ್ದರೆ ಎದೆಯು ಅತುಲ ವೇದನೆಯಲ್ಲಿ ತುಡಿಯುತಿಹುದು|| —–ವಚನವೇದ