ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||
ಜಟಿಲಕುಟಿಲತಮ ಅಂತರಂಗ ಬಹು
ಭಾವವಿಪಿನ ಸಂಚಾರಿ|
ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||
ಜನುಮ ಜನುಮ ಶತಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ|
ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||
ಪಾಪಪುಣ್ಯ ನಾನಾ ಲಲಿತ ರುದ್ರಲೀಲಾ
ರೂಪಅರೂಪ ವಿಹಾರಿ|
ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||
—-ಕುವೆಂಪು