ಬಿನ್ನಹಕೆ ಬಾಯಿಲ್ಲವಯ್ಯ
ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನೊಳಗೆ ಇರಲಾಗಿ|| ಶಿಶುಮೋಹ ಸತಿಮೋಹ ಜನನಿ-ಜನಕರ ಮೋಹ ರಸಿಕ ಭ್ರಾತರ ಮೋಹ ರಾಜಮೋಹ| ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ|| ಅನ್ನಮದ ಅರ್ಥಮದ ಅಖಿಲ ವೈಭವದ ಮದ ಮುನ್ನ ಪ್ರಾಯದ ಮದವು ಪೂಪಮದವು| ತನ್ನ ಸತ್ತ್ವದ ಮದ ಧಾತ್ರಿವಶದ ಮದ ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ|| ಇಷ್ಟು ದೊರೆಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರೆ ಮತ್ತಿಷ್ಟರಾಸೆ| ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಪುರಂದರವಿಟ್ಠಲ|| —-ಪುರಂದರದಾಸ
ಬಿನ್ನಹಕೆ ಬಾಯಿಲ್ಲವಯ್ಯ Read More »