ಬಾಗಿಲನು ತೆರೆದು

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ ||1|| ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ ||2|| ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ ||3||

ಬಾಗಿಲನು ತೆರೆದು Read More »

ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವ

ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಬಲ್ಲಿದವರ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ ||1|| ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು

ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವ Read More »

ಬಲ್ಲವರೆ ಬಲ್ಲರು ಎಲ್ಲವರು ಅರಿಯರು

ಬಲ್ಲವರೆ ಬಲ್ಲರು ಎಲ್ಲವರು ಅರಿಯರುಪುಲ್ಲಲೋಚನ ಪರಬ್ರಹ್ಮನೆಂಬುದನು ಅಜ್ಞಾನಾಧಿಕ ಬಲ್ಲ ಅನ್ನಲಸ್ನೇಹಿತ ಬಲ್ಲಗಜ ಚರ್ಮಾಂಬರ ಬಲ್ಲ ಗರುಡ ಬಲ್ಲಭುಜಗೇಶ್ವರ ಬಲ್ಲ ಭೂರಿಲೋಚನ ಬಲ್ಲತ್ರಿಜಗದಧಿಪತಿ ತ್ರಿವಿಕ್ರಮನೆಂಬುದನು||1|| ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲಮಕರಕುಂಡಲಧರ ಪರಾತ್ಪರನೆಂಬುದನು ||2|| ಅಂಬರೀಶನು ಬಲ್ಲ ಅತ್ರಿ ಋಷಿಯು ಬಲ್ಲಸಂಭ್ರಮದಿ ಮನು ಬಲ್ಲ ಸಹದೇವ ಬಲ್ಲಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲಕಂಬು ಚಕ್ರಧರ ಕರ್ಮಹರನೆಂಬುದನು ||3|| ವಶಿಷ್ಠಮುನಿ ಬಲ್ಲ ವರ ವಿಭೀಷಣ ಬಲ್ಲವಿಶಿಖಶಯನ ಬಲ್ಲ ವಿದುರ

ಬಲ್ಲವರೆ ಬಲ್ಲರು ಎಲ್ಲವರು ಅರಿಯರು Read More »

ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ

ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ವೇದ ವಾದಗಳಲ್ಲಿ | ಕಾಡುವ ಜನರಲ್ಲಿಓದುವ ವಿದ್ಯೆಗಳಲ್ಲಿ | ವಾದವ ಗೆಲಿಸಯ್ಯ ||1|| ಆರು ವೈರಿಗಳಲ್ಲಿ | ಅಷ್ಟ ಗಜಂಗಳಲ್ಲಿಮೂರು ಏಳರಲ್ಲಿ | ಮುಂದೆ ನೀ ಗೆಲಿಸಯ್ಯ||2|| ಪರಮ ಭಕ್ತಿಯೊಳ್ನಿನ್ನ | ಚರಣಕೆರಗುವೆ ಮುನ್ನಸಿರಿಯ ಪಾಲಿಪ ಚೆನ್ನ | ವರದ ಕೇಶವ ರನ್ನ||3||

ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ Read More »

ಬಯಗುತನಕ ಆಟ ಕೂಟ

ಬಯಗುತನಕ ಆಟ ಕೂಟ ಊಟದ ಕೆಲಸ ಉಂಡ ಮೇಲೆ ಶಯನ ಬಯಲಾಯಿತು ಈ ಒಗತನವೆಲ್ಲ ರಕ್ಷಿಸಯ್ಯ ರಘುಕುಲ ತಿಲಕ ಪುರಾಣವಿಲ್ಲ ಪುಣ್ಯಕತೆಯಿಲ್ಲ ಪಾರಾಯಣದಿ ಮನಸಿಲ್ಲತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ ||1|| ಕಣ್ಣಿಗೆ ಜೋಂಪು ಹತ್ತುವತನಕ ಅನ್ಯವಿಷಯ ಮಾತುಕತೆಯಾಟಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ||2|| ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರೂ ಸಲಹೊ ಸಿರಿಕಾಗಿನೆಲೆಯಾದಿಕೇಶವ ಶಿರಬಾಗಿ ಬೇಡಿಕೊಂಬೆ ||3||

ಬಯಗುತನಕ ಆಟ ಕೂಟ Read More »

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1|| ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ ||2|| ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತುತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು Read More »

ಬಂಧುಗಳದಾರಿಗಾರಿದ್ದರೇನು

ಬಂಧುಗಳದಾರಿಗಾರಿದ್ದರೇನು – ಇಷ್ಟಬಂಧು ತ್ರೈಜಗಕೆ ಶ್ರೀಹರಿಯಲ್ಲದೆ – ಮಿಕ್ಕಬಂದುಗಳದಾರಿಗಾರಿದ್ದರೇನು ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ – ಆನೆಗಳೇನ ಮಾಡುತಿರ್ದವಡವಿಯಲಿನಗಜೆಯಾಳ್ದನ ಬ್ರಹ್ಮೇತಿ ಬಂದು ಕಾಡಲಾಗಿ ರುದ್ರಾದಿಗಳೇನ ಮಾಡುತಿರ್ದರಾ ಶೈಲದೊಳಗೆ ||1|| ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲುಮಂಡಲ ಪತಿ ಏನ ಮಾಡುತಿರ್ದನುಮಿಂಡಿ ಪೆಣ್ಣನು ಸಭೆಯಲ್ಲಿ ಸೀರೆ ಸುಲಿಯಲುಗಂಡರೈವರು ನೋಡಿ ಏನ ಮಾಡುತಿರ್ದರಯ್ಯ ||2|| ಮೃಗಚಕ್ರವರ್ತಿ ಬಹುವರನಾಗಿ ಪೋಗುತ್ತಿರೆಮಿಗೆ ಸತಿಸುತರೇನ ಮಾಡುತಿರ್ದರುಮೃಗಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆಮಿಗು ಬಂಧುಗಳದಾರಿಗಾರಿದ್ದರೇನು ||3||

ಬಂಧುಗಳದಾರಿಗಾರಿದ್ದರೇನು Read More »

ಬಂದೆವಯ್ಯ ಗೋವಿಂದಶೆಟ್ಟಿ

ಬಂದೆವಯ್ಯ ಗೋವಿಂದಶೆಟ್ಟಿ – ನಿಮ್ಮಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ಅಪ್ಪವು ಅತಿರಸ ತುಪ್ಪವು ಚಿನಿಪಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ||1|| ಒಡೆದ ಮಡಕೆ ತಂದು ಇಡಿದು ನಾಮವ ಮಾಡಿಕೊಡುವೆ ನೀ ಕಾಸಿಗೆ ಒಂದೊಂದನುಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||2|| ಶೇಷಗಿರಿಯಲ್ಲಿ ವಾಸ ಮಾಡಿಕೊಂಡುದೇಶದೇಶಕ್ಕೆ ಹೆಸರಾದ ಶೆಟ್ಟಿಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿಕೇಶವ ನಾರಾಯಣ ತಿಮ್ಮಶೆಟ್ಟಿ ||3||

ಬಂದೆವಯ್ಯ ಗೋವಿಂದಶೆಟ್ಟಿ Read More »

ಬಂದಿದೆ ದೂರು ಬರಿದೆ ಪಾಂಡವರಿಗೆ

ಬಂದಿದೆ ದೂರು ಬರಿದೆ ಪಾಂಡವರಿಗೆ ಕೊಂದವರಿವರು ಕೌರವರನೆಂಬಪಕೀರ್ತಿ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ ||1|| ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ ||2|| ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ||3|| ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ

ಬಂದಿದೆ ದೂರು ಬರಿದೆ ಪಾಂಡವರಿಗೆ Read More »

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ವಿಕಟ ಪೂತನಿಯ ಕೊಂದುಶಕಟಾಸುರನ ಪಾದದಿ ತುಳಿದುಧಿಕಿಟ ಧಿಕಿಟ ಎನ್ನುತಲಿಕುಕಿಲಿರಿದು ಕುಣಿಯುತ ಮನೆಗೆ ||1|| ಗೋವರ್ಧನ ಪರ್ವತವನೆತ್ತಿಗೋವುಗಳ ಕಾಯ್ದು ತನ್ನಮಾವ ಕಂಸನ ಕೊಂದುಕಾವನ ಜನಕ ಪಾಡುತ ಮನೆಗೆ ||2|| ಫಾಲನೇತ್ರ ಚಂದ್ರಶೇಖರನಸುಲಭದಿಂದ ಬಾಧೆಯ ಬಿಡಿಸಿಪಾಲಿಸುವ ಕರುಣದಿಂದಬೇಲಾಪುರದ ಚೆನ್ನಕೇಶವ||3||

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ Read More »

ಬಂಟನಾಗಿ ಬಾಗಿಲ ಕಾಯ್ವೆ ಹರಿಯ

ಬಂಟನಾಗಿ ಬಾಗಿಲ ಕಾಯ್ವೆ ಹರಿಯ ವೈಕುಂಠದ ಸೊಂಪಿನ ದಾಸರ ಮನೆಯ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ ||1|| ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು ||2|| ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು ||3|| ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ

ಬಂಟನಾಗಿ ಬಾಗಿಲ ಕಾಯ್ವೆ ಹರಿಯ Read More »

ಬ್ರಹ್ಮರೂಪಮಾದಿಮಧ್ಯ

ಬ್ರಹ್ಮ-ರೂಪಮಾದಿ-ಮಧ್ಯ-ಶೇಷ-ಸರ್ವ-ಭಾಸಕಂ ಭಾವ-ಷಟ್ಕ-ಹೀನ-ರೂಪ-ನಿತ್ಯ-ಸತ್ಯಮದ್ವಯಮ್ | ವಾಜ್ಮನೋತಿ-ಗೋಚರಂ ಚ ನೇತಿ-ನೇತಿ-ಭಾವಿತಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ಸರ್ವ-ಭೂತ-ಸರ್ಗ-ಕರ್ಮ-ಸೂತ್ರ-ಬಂಧ-ಕಾರಣಂ ಜ್ಞಾನ-ಕರ್ಮ-ಪಾಪ-ಪುಣ್ಯ-ತಾರತಮ್ಯ-ಸಾಧನಮ್ | ಬುದ್ಧಿ-ವಾಸ-ಸಾಕ್ಷಿ-ರೂಪ-ಸರ್ವಕರ್ಮ-ಭಾಸನಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ತುಲ್ಯ-ಲೋಷ್ಟ-ಕಾಂಚನಂ ಚ ಹೇಯ-ನೇಯ-ಧೀಗತಂ ಸ್ತ್ರೀಷು ನಿತ್ಯ-ಮಾತೃರೂಪ-ಶಕ್ತಿ-ಭಾವ-ಭಾವುಕಮ್ | ಜ್ಞಾನ-ಭಕ್ತಿ-ಭುಕ್ತಿ-ಮುಕ್ತಿ-ಶುದ್ಧ-ಬುದ್ಧಿ-ದಾಯಕಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ಸರ್ವ-ಧರ್ಮ-ಗಮ್ಯ-ಮೂಲ-ಸತ್ಯ-ತತ್ತ್ವ-ದೇಶಕಂ ಸಿದ್ಧ-ಸರ್ವ-ಸಂಪ್ರದಾಯ-ಸಾಂಪ್ರದಾಯ-ವರ್ಜಿತಮ್ | ಸರ್ವ-ಶಾಸ್ತ್ರ-ಮರ್ಮ-ದರ್ಶಿ-ಸರ್ವವಿನ್ನಿರಕ್ಷರಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || ಧರ್ಮ-ಹಾನ-ಹಾರಕಂ ತ್ವಧರ್ಮ-ಕರ್ಮ-ವಾರಕಂ ಲೋಕ-ಧರ್ಮ-ಚಾರಣಂ ಚ ಸರ್ವ-ಧರ್ಮ-ಕೋವಿದಮ್ | ತ್ಯಾಗಿ-ಗೇಹಿ-ಸೇವ್ಯ-ನಿತ್ಯ-ಪಾವನಾಂಘ್ರಿ-ಪಂಕಜಂ ತಂ ನಮಾಮಿ ದೇವ-ದೇವ-ರಾಮಕೃಷ್ಣಮೀಶ್ವರಮ್ || –ಸ್ವಾಮಿ ವಿರಜಾನಂದ

ಬ್ರಹ್ಮರೂಪಮಾದಿಮಧ್ಯ Read More »

ಲಿಂಗಾಷ್ಟಕಮ್

ಬ್ರಹ್ಮಮುರಾರಿಸುರಾರ್ಚಿತಲಿಂಗಮ್ ನಿರ್ಮಲಭಾಸಿತಶೋಭಿತಲಿಂಗಮ್ । ಜನ್ಮಜದುಃಖವಿನಾಶಕಲಿಂಗಮ್ ತತ್ ಪ್ರಣಮಾಮಿ ಸದಾಶಿವಲಿಂಗಮ್ ॥ 1॥ ದೇವಮುನಿಪ್ರವರಾರ್ಚಿತಲಿಂಗಮ್ ಕಾಮದಹಮ್ ಕರುಣಾಕರ ಲಿಂಗಮ್ । ರಾವಣದರ್ಪವಿನಾಶನಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 2॥ ಸರ್ವಸುಗಂಧಿಸುಲೇಪಿತಲಿಂಗಮ್ ಬುದ್ಧಿವಿವರ್ಧನಕಾರಣಲಿಂಗಮ್ । ಸಿದ್ಧಸುರಾಸುರವಂದಿತಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 3॥ ಕನಕಮಹಾಮಣಿಭೂಷಿತಲಿಂಗಮ್ ಫನಿಪತಿವೇಷ್ಟಿತ ಶೋಭಿತ ಲಿಂಗಮ್ । ದಕ್ಷಸುಯಜ್ಞ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 4॥ ಕುಂಕುಮಚಂದನಲೇಪಿತಲಿಂಗಮ್ ಪಂಕಜಹಾರಸುಶೋಭಿತಲಿಂಗಮ್ । ಸಂಚಿತಪಾಪವಿನಾಶನಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ॥ 5॥

ಲಿಂಗಾಷ್ಟಕಮ್ Read More »

ಬಿಲ್ವಾಷ್ಟಕಮ್

ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ । ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ॥ 1॥ ತ್ರಿಶಾಖೈಃ ಬಿಲ್ವಪತ್ರೈಶ್ಚ ಹ್ಯಚ್ಛಿದ್ರೈಃ ಕೋಮಲೈಃ ಶುಭೈಃ । ಶಿವಪೂಜಾಂ ಕರಿಷ್ಯಾಮಿ ಹ್ಯೇಕಬಿಲ್ವಂ ಶಿವಾರ್ಪಣಮ್ ॥ 2॥ ಅಖಂಡ ಬಿಲ್ವ ಪತ್ರೇಣ ಪೂಜಿತೇ ನಂದಿಕೇಶ್ವರೇ । ಶುದ್ಧ್ಯಂತಿ ಸರ್ವಪಾಪೇಭ್ಯೋ ಹ್ಯೇಕಬಿಲ್ವಂ ಶಿವಾರ್ಪಣಮ್ ॥ 3॥ ಶಾಲಿಗ್ರಾಮ ಶಿಲಾಮೇಕಾಂ ವಿಪ್ರಾಣಾಂ ಜಾತು ಚಾರ್ಪಯೇತ್ । ಸೋಮಯಜ್ಞ ಮಹಾಪುಣ್ಯಂ ಏಕಬಿಲ್ವಂ ಶಿವಾರ್ಪಣಮ್ ॥ 4॥ ದಂತಿಕೋಟಿ ಸಹಸ್ರಾಣಿ ವಾಜಪೇಯ ಶತಾನಿ ಚ । ಕೋಟಿಕನ್ಯಾ ಮಹಾದಾನಂ

ಬಿಲ್ವಾಷ್ಟಕಮ್ Read More »

ಬೀತ ಗಯೇ ದಿನ

ಬೀತ ಗಯೇ ದಿನ ಭಜನ ಬಿನಾ ರೇ|| ಬಾಲ ಅವಸ್ಥಾ ಖೇಲ ಗವಾಯೋ ಜಬ್ ಜೋಬನ ತಬ್ ಮಾನ ಧನಾ ರೇ|| ಲಾಹೇ ಕಾರನ ಮೂಲ್ ಗವಾಯೋ ಅಜಹು ನ ಗಯೀ ಮನ ಕೀ ತೃಸನಾ ರೇ|| ಕಹತ ಕಬೀರ ಸುನೋ ಭಾಯಿ ಸಾಧೋ ಪಾರ್ ಉತರ ಗಯೇ ಸಂತ ಜನಾ ರೇ||                                                    —-ಕಬೀರದಾಸ

ಬೀತ ಗಯೇ ದಿನ Read More »

ಬಾಜೇ ಮೃದಂಗ ವೀಣಾ

ಬಾಜೇ ಮೃದಂಗ ವೀಣಾ ಬಾಜೇ ಮುರಲೀ ನಂದದುಲಾಲಾ ಬಾಮೇ ಬರಜ ದುಲಾಲೀ|| ನಾಚೇ ಕಾಲಿಂದೀ ಅವಿರಲ ಆನಂದೇ ಛಂದೇ ಛಂದೇ ಉಛಲೀ ಉಛಲೀ|| ಶಿಹರೇ ಕದಂಬತಲೇ ಕಾನನೇ ಕುಸುಮದಲ ಚಂದ್ರ ಆತಂಕ ನಭೇ ತಾರಾಕುಲ ಝಲಮಲ ನೇಹಾರೀ ಭಕತಕುಲ ಶ್ರೀರಾಧಾ ಗೋವಿಂದೇ ನವಜಲಧಾರೀ ಚಲೇ ಚೀರ ಬಿಜಲೀ||                             —-ಕಾಜಿ ಸಜರುಲ್ ಇಸ್ಲಾಂ

ಬಾಜೇ ಮೃದಂಗ ವೀಣಾ Read More »

ಬಂ ಬಂ ಬಂ ಹರ ಹರ

ಬಂ ಬಂ ಬಂ ಹರ ಹರ|| ವೃಷಭವಾಹನ ವಿಶಾಲವದನ ತ್ರಿಪುರನಾಶನ ಈಶ್ವರ|| ಪಾದಕಮಲೇ ಶೋಭೇ ಶತದಲ ತ್ರಿನಯನ ಆಛೇ ಶೋಭಿತ ಭಾಲ| ಗಲೇ ವಿಲಂಬಿತ ಹಾಡಮಾಲ ಜಯ ಜಯ ಶಿವ ಶಂಕರ||                          —-ಗಿರೀಶಚಂದ್ರ ಘೋಷ್

ಬಂ ಬಂ ಬಂ ಹರ ಹರ Read More »

ಬಲ್ ರೇ ಜಬಾ ಬಲ್

ಬಲ್ ರೇ ಜಬಾ ಬಲ್ ಕೋನ್ ಸಾಧನಾಯ ಪೇಲಿ ಶ್ಯಾಮಾ ಮಾಯೇರ ಚರಣ ತಲ| ಮಾಯಾ ತರುರ ಬಾಧನ ಟುಟೇ ಮಾಯೇರ ಪಾಯೇ ಪಡಲಿ ಲುಟೇ ಮುಕ್ತಿ ಪೇಲಿ ಉಠಲಿ ಫುಟೇ ಆನಂದವಿಹ್ವಲ ತೋರ ಸಾಧನಾ ಆಮಾಯ ಶೇಖಾ ಜೀವನ ಹೋಕ ಸಫಲ|| ಕೋಟಿ ಗಂಧ ಕುಸುಮ ಫುಟೇ ವನೇ ಮನೋಲೋಭಾ ಕೇಮನೇ ಮಾರ ಚರಣ ಪೇಲಿ ತುಇ ತಾಮಸಿಕ ಜಬಾ| ತೋರ ಮತ ಮಾರ ಪಾಯೇ ರಾತುಲ ಹಬ ಕಬ್ ಪ್ರಸಾದೀ ಫೂಲ ಕಬೇ ಉಠಬೇ

ಬಲ್ ರೇ ಜಬಾ ಬಲ್ Read More »

ಬ್ರೂಹಿ ಮುಕುಂದೇತಿ

ಬ್ರೂಹಿ ಮುಕುಂದೇತಿ ರಸನೇ|| ಕೇಶವ ಮಾಧವ ಗೋವಿಂದೇತಿ ಕೃಷ್ಣಾನಂದ ಸದಾನಂದೇತಿ|| ರಾಧರಮಣ ಹರೇ ರಾಮೇತಿ ರಾಜೀವಾಕ್ಷ ಘನಶ್ಯಾಮೇತಿ|| ಅಕ್ರೂರಪ್ರಿಯ ಚಕ್ರಧರೇತಿ ಹಂಸ ನಿರಂಜನ ಕಂಸಹರೇತಿ||                               —-ಸದಾಶಿವ ಬ್ರಹ್ಮೇಂದ್ರ

ಬ್ರೂಹಿ ಮುಕುಂದೇತಿ Read More »

ಬೋಧಿವೃಕ್ಷದಡಿ ಧ್ಯಾನದಿ

ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ ಯೋಗಿವರ್ಯನೆ ನೀನಾರು | ತಪದ ತಾಪದಿಂ ದೇಹವು ಸೊರಗಿದೆ ಜ್ಯೋತಿಯು ಹಣೆಯಲಿ ಬೆಳಗುತಿದೆ|| ಹೊರಗಡೆ ಕಾಂಬುದು ಜೋಗಿಯ ವೇಷ ಮುಖದಲಿ ರಾಜಕುಮಾರನ ತೇಜ| ಯಾರ ಭವನವನು ಅಂಧಕಾರದಲಿ ಮುಳುಗಿಸಿ ಬಂದಿಹೆ ಪೇಳೆಲೆ ಜವದಿ|| ಜ್ಞಾನಲಾಭವೋ ದೇಹಪಾತವೋ ಆಗಲಿ ಒಂದು ಎರಡರಲಿಂದು| ಪಣವ ತೊಟ್ಟು ನೀ ಬಸವಳಿದಿರಲು ಕಲ್ಲೂ ಕರಗುತ ನೀರಾಗುವುದು|| ತಾಪತ್ರಯದಲಿ ಬೆಂದಿಹ ಜನರನು ಉದ್ಧರಿಸಲು ನೀ ಬಂದಿಹೆಯೇನು| ವಿಶ್ವಪ್ರೇಮವ ಪ್ರಚಾರಗೈಯಲು ನಿಜಸುಖವನು ನೀ ತ್ಯಜಿಸಿಹೆಯೇನು||                                         —-ಸ್ವಾಮಿ ಹರ್ಷಾನಂದ

ಬೋಧಿವೃಕ್ಷದಡಿ ಧ್ಯಾನದಿ Read More »

ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದೇನು ಫಲ|| ಕುಟಿಲವ ಬಿಡದಿಹ ಮನುಜರು ಮಂತ್ರವ ಪಠನೆಯ ಮಾಡಿದರೇನು ಫಲ| ಸಟೆಯನ್ನಾಡುವ ಮನುಜರು ಸಂತತ ನಟನೆಯ ಮಾಡಿದರೇನು ಫಲ|| ಕಪಟತನದಲಿ ಕಾಡುತ ಜನರನು ಜಪವನು ಮಾಡಿದರೇನು ಫಲ| ಕುಪಿತತನವನು ಬಿಡದೆ ನಿರಂತರ ಉಪವಾಸ ಮಾಡಿದರೇನು ಫಲ|| ಮಾತಾಪಿತರನು ಬಳಲಿಸಿದಾತನು ಯಾತ್ರೆಯ ಮಾಡಿದರೇನು ಫಲ| ಘಾತಕತನವನು ಬಿಡದೆ ನಿರಂತರ ಗೀತೆಯನೋದಿದರೇನು ಫಲ|| ಹೀನಗುಣಂಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ| ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ ಮೌನವ ಮಾಡಿದರೇನು ಫಲ||                                 —-ಪುರಂದರದಾಸ

ಬೇವು ಬೆಲ್ಲದೊಳಿಡಲೇನು ಫಲ Read More »

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯಾ|| ಏನು ನೋಡಿದರೇನು ಏನು ಕೇಳಿದರೇನು| ಮನದೊಳಗಿನ ತಾಮಸ ಮಾಣದನ್ನಕ|| ಕೊಳಲು ದನಿಗೆ ಸರ್ಪ ತಲೆದೂಗುವಂದದಿ ಇದಕೇನು ಮದ್ದು ಶ್ರೀ ಪುರಂದರ ವಿಟ್ಠಲಾ||                   —–ಪುರಂದರದಾಸ

ಬೆಲ್ಲದ ಕಟ್ಟೆಯ ಕಟ್ಟಿ Read More »

ಬೆಟ್ಟದಂಥ ದುರಿತವು

ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟಿರೆ ಕೃಷ್ಣನಾಮದ ಕಿಡಿಬಿದ್ದು ಬೆಂದುಹೋದುದ ಕಂಡೆನಯ್ಯ|| ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಕೃಷ್ಣ ಶಿಕ್ಷಿಸದೆ ಬಿಡನು ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು ಪುಂಡರೀಕಾಕ್ಷ ನಮ್ಮ ಪುರಂದರವಿಟ್ಠಲ||                                               —-ಪುರಂದರದಾಸ

ಬೆಟ್ಟದಂಥ ದುರಿತವು Read More »

ಬುದ್ಧ ಚಂದ್ರೋದಯದಿ

ಬುದ್ಧಚಂದ್ರೋದಯದಿ ಹಿಗ್ಗಿ ನಮ್ಮೆದೆ ಕಡಲು ಶಾಂತಿ ಶೀಕರವನಿದೋ ಚಿಲ್ಲುತಿಹುದು ಜಗವ ಗೆಲ್ಲುತಿಹುದು|| ನೂರು ಸಾಸಿರ ದಳದ ಬುದ್ಧಪದ್ಮವು ಅರಳೆ ಭಕುತಭೃಂಗವು ಬಂದು ಮುತ್ತುತಿಹುದು ಸುತ್ತ ಸುತ್ತುತಿಹುದು|| ಜ್ವಾಲೆ ಮೇಲುದ ಹೊದೆದು ಅಗ್ನಿದೇವನೆ ನಡೆದು ಕರ್ಮಕಾನನವನ್ನು ದಹಿಸಲೆಂದು ನಡೆದು ಬರುವನಿಂದು||                             —-ಪ್ರಭುಶಂಕರ

ಬುದ್ಧ ಚಂದ್ರೋದಯದಿ Read More »