ಎಷ್ಟು ಪ್ರೀತಿಯೊ ಮನಕೆ

ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ ||1|| ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು||2|| ಅಸ್ಥಿ ಚರ್ಮ ರಕ್ತ ಮಾಂಸ […]

ಎಷ್ಟು ಪ್ರೀತಿಯೊ ಮನಕೆ Read More »

ಎಷ್ಟು ಪೊಗಳಲಿ ನಾನು ಎನ್ನೊಡೆಯ

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿ- ಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರಕಾಮಧೇನು ವಿಷ್ಣುವೆ ಪರಮದೈವವೆಂದು ದುಷ್ಟ ರಾಕ್ಷಸರ ಕೊಂದೆ ಸೃಷ್ಟಿಸಿ ಪಾಲಿಪ ಶ್ರೀರಾಮರ ಇಷ್ಟ ಭಕ್ತರೊಳು ಶ್ರೇಷ್ಠನೆಂದೆನಿಸಿದೆ ತಾಯಿಯಪ್ಪಣೆಗೊಂಡು ಸೇವೆಗೆ ರಘುಪತಿ ರಾಯನಲ್ಲಿ ನಿಂದು ತನ್ನಾತ್ಮ ಸುಖ ಬಯಸೆನೆಂದು ಶ್ರೀ ಹರಿಗೆ ನುಡಿದುಕಾಯಬೇಕು ಸುಗ್ರೀವನನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯನು ಪಾಯದಿಂದಲಿ ಕೊಲ್ಲಿಸಿ ರವಿಜಗೆ ಸ- ಹಾಯ ಮಾಡಿದೆ ವಾಯುತನಯ||1|| ಕಡಲ ಬೇಗನೆ ಹಾರಿ ಶ್ರೀರಾಮರ ಮಡದಿಗುಂಗುರವ ಕೊಟ್ಟು ಅಲ್ಲಿದ್ದ ದನುಜರ ಹೊಡೆದು

ಎಷ್ಟು ಪೊಗಳಲಿ ನಾನು ಎನ್ನೊಡೆಯ Read More »

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಬರೆದೋದಲವನ ಪಿತ ಕೋಪದಿಂದಸ್ಥಿರವಾದಡೀ ಕಂಬದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ||1|| ಪಾಪ ಕರ್ಮವ ಮಾಡಿದಜಮಿಳನ ಯಮಭಟರುಕೋಪದಿಂದೆಳೆಯುತಿರೆ ಭೀತಿಯಿಂದತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸನಿಹದಲ್ಲಿಹುದೆ ||2|| ಕರಿರಾಜನನು ನೆಗಳು ನುಂಗುತಿರೆ ಭಯದಿಂದಮೊರೆಯಿಡಲು ಕೇಳಿ ತ್ವರಿತದಲಿ ಬಂದುಕರುಣದಲಿ ಬಂಧನವ ಪರಿಹರಿಸೆ ಗಜರಾಜನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ||3|| ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆತರುಣಿ ಹಾ ಕೃಷ್ಣ ಎಂದೊದರೆ ಕೇಳ್ದುಭರದಿಂದ

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ Read More »

ಎಲ್ಲಿಂದ ಬಂದೆ ಮುಂದೆತ್ತ ಪಯಣ

ಎಲ್ಲಿಂದ ಬಂದೆ ಮುಂದೆತ್ತ ಪಯಣಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ಮಾತೆಯುದರದೊಳು ನವಮಾಸ ಮಲಮೂತ್ರದೊಳುಯಾತನೆಯ ಯೋನಿ ಮುಖ ಮಾರ್ಗವಿಡಿದುಭೂತಳಕೆ ಬಂದ ಹದನೇನ ತೀರಿಸಿಕೊಂಡೆಜಾತಿ ಯಾವುದು ನಿನ್ನ ಹೆಸರೇನು ಮರುಳೆ||1|| ಮುಂದಾವ ಪಥವ ಸೇರುವೆ ಮರುಳೆ, ಸಾಕಿನ್ನುಹಿಂದೆ ನೆರವಾಗಿ ನಿಂತಾಪ್ತರುಂಟೆಒಂದುಗೂಡಿದ ಪತ್ನಿ ಸುತರೆಲ್ಲ ವರ್ಜಿಪರುನಿಂದು ಮಾತಾಡು ಬರಿದೆ ಬಳಲಿದೆ ಮರುಳೆ|| 2|| ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಗೊಂಡುಇರುವ ಮಂದಿರವಾವುದದನೆನಗೆ ಪೇಳೊಧರೆಯೊಳಗೆ ವರಕಾಗಿನೆಲೆಯಾದಿಕೇಶವನಸಿರಿ ಚರಣಕಮಲವನು ನೆರೆನಂಬಿ ಸುಖಿಸೊ||3||

ಎಲ್ಲಿಂದ ಬಂದೆ ಮುಂದೆತ್ತ ಪಯಣ Read More »

ಎಲ್ಲಿ ನೋಡಿದರಲ್ಲಿ ರಾಮ

ಎಲ್ಲಿ ನೋಡಿದರಲ್ಲಿ ರಾಮ – ಇದ ಬಲ್ಲ ಜಾಣರ ದೇಹದೊಳಗೆ ನೋಡಣ್ಣ ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ||1|| ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ||2|| ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ||3|| ಬೊಮ್ಮ ಮಾಡಿದ ತನುಬಿಟ್ಟು

ಎಲ್ಲಿ ನೋಡಿದರಲ್ಲಿ ರಾಮ Read More »

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||1|| ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||2|| ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||3|| ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ|| 4|| ಬೆಲ್ಲದಂತೆ ಮಾತಾನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದು

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ Read More »

ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ 

ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂದು ಹುಟ್ಟು ಬಣ್ಣ ಒಂದರೊಳಗೆ ಕಟ್ಟು ಬಣ್ಣ ಒಂದು ಮಾಡಿಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವುಸೃಷ್ಟಿಯಾರೇಳು ಬಣ್ಣ ಎಂಟು ಒಂಬತ್ತರೊಳಗೆ ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓಂ ಎಂದು ||1|| ಭದ್ರಕಂಬ ಒಂದರೊಳಗೆ ಉದ್ದವಾದ ಕೊನೆಯ ಮೇಲೆಸಿದ್ಧಿಯಾದ ಚಿಗುರು ಹೂವು

ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ  Read More »

ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು

ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನುನೀನೆ ವಿಚಾರಿಸು ಇಬ್ಬರ ನ್ಯಾಯವ ಮಗಳಿಗೆ ಮಗಳಾದ ಮಗಳಿಗಳಿಯನಾದಮಗಳ ಗಂಡಗೆ ಭಾವ ಮಾವನಾದುದ ಕೇಳಿನಾ ನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ ||1|| ವೈರಿಗೆ ವೈರಿಯಾದೆ ವೈರಿಗೆ ಸುತನಾದೆವೈರಿ ಗಂಡಗೆ ತನ್ನ ಮಗಳ ಕೊಟ್ಟುದ ಕೇಳಿನಾ ನಿನ್ನ ಪಾದಕೆ ಬಂದೆ ಶ್ರೀಹರಿಯೆ ||2|| ಆನಿ ಬಿದ್ದರ ತನ್ನ ಗ್ಯಾನದಿಂದೇಳುವುದುಏನು ಮಾಡಿದರು ಅದರ ಭಾವ ಹಿಂಗದುe್ಞÁನವಂತ ಕಾಗಿನೆಲೆಯಾದಿಕೇಶವರಾಯ ಮುನಿದು ಪೋದನೆ|| 3||

ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು Read More »

ಎನ್ನ ನುಡಿ ಪುಸಿಯಲ್ಲ ಈ ಜಗದೊಳು 

ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ ||1|| ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ||2|| ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ ||3||

ಎನ್ನ ನುಡಿ ಪುಸಿಯಲ್ಲ ಈ ಜಗದೊಳು  Read More »

ಎನ್ನ ಕಂದ ಹಳ್ಳಿಯ ಹನುಮ 

ಎನ್ನ ಕಂದ ಹಳ್ಳಿಯ ಹನುಮ ಚೆನ್ನಾಗೈದಾರ ಲಕ್ಷ್ಮಣ ದೇವರು ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲೈದಾರೆ||1|| ನವ ವಸ್ತ್ರಗಳು ಅಂದು ನಾರಸೀರೆಗಳಿಂದುಹೂವಿನ ಗಂಟು ಅಂದು ಜಡೆಗಳಿಂದುಜವ್ವಾಜಿ ಕತ್ತುರಿಯಂದು ಭಸಿತ ಧೂಳಿಂದುಶ್ರೀವರ ರಾಘವ ಕ್ಷೇಮದಲೈದಾರೆ||2|| ಕನಕ ರಥಗಳಂದು ಕಾಲುನಡಿಗೆಯಿಂದುಘನ ಛತ್ರ ಚಾಮರವಂದು ಬಿಸಿಲು ಇಂದುಸನಕಾದಿಗಳೋಲೈಪ ಆದಿಕೇಶವ ನಮ್ಮಹನುಮೇಶ ರಾಘವ ಕ್ಷೇಮದಲೈದಾರೆ ||3||

ಎನ್ನ ಕಂದ ಹಳ್ಳಿಯ ಹನುಮ  Read More »

ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೊ 

ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೊ ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತುಲಂಘಿಸುವ ಹುಲಿಯ ಕಂಡು ನರಿಯು ನುಂಗಿತು ||1|| ಹುತ್ತದೊಳಾಡುವ ಸರ್ಪ ಮತ್ತ ಗಜವ ನುಂಗಿತುಉತ್ತರ ದಿಶೆಯೊಳು ಬೆಳುದಿಂಗಳಾಯಿತಮ್ಮ ||2|| ಯೋಗ ಮಾರ್ಗಿ ಕಾಗಿನೆಲೆಯಾದಿಕೇಶವರಾಯಭಾಗವತರ ಬೆಡಗಿದು ಬೆಳುದಿಂಗಳಾಯಿತಮ್ಮ ||3||

ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೊ  Read More »

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ 

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಮುಂದರಿತು ಶ್ರೀಹರಿಯ ಭಜಿಸುವುದು ಲೇಸು ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ ||1|| ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ||2|| ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ ||3||

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ  Read More »

ಎಂಥ ಟವಳಿಗಾರನಮ್ಮ

ಎಂಥ ಟವಳಿಗಾರನಮ್ಮ ನಂದ ಗೋಪ್ಯಮ್ಮ ಕೇಳೆ – ನಿನ್ನ ಮಗ ಎಂಥ ಟವಳಿಗಾರನಮ್ಮ ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ – ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? – ಹೋಗೆನುತಾನೆ ||1|| ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ – ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? – ಹೋಗೆನುತಾನೆ||2|| ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ – ಬಳೆಯೆ ?ಊರ ಮುಂದಿನ ಗಳೆಯೆ

ಎಂಥ ಟವಳಿಗಾರನಮ್ಮ Read More »

ಎಂಥ ಕೀರುತಿ ಪೊತ್ತುವೆರಡು ಪಾದ

ಎಂಥ ಕೀರುತಿ ಪೊತ್ತುವೆರಡು ಪಾದ – ಶ್ರೀ-ಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ ಕುಬ್ಜ ಬ್ರಾಹ್ಮಣನಾಗಿ ಕುಂಭಿನಿ ಈರಡಿ ಮಾಡಿಹೆಜ್ಜೆಯೊಳಡಗಿಟ್ಟ ಹೆಚ್ಚಿನ ಪಾದಅರ್ಜುನನ ಶಿರವ ಕಾಯಲು ಬಾಣದಿಂದ ರಥವಗುಜ್ಜೆಯಲೂರಿ ನೆಲಕೊತ್ತಿದ ಪಾದ ||1|| ಶಾಪದಿ ಬಹುಕಾಲ ಅಹಲ್ಯೆಯು ಶಿಲೆಯಾಗೆಆ ಪ್ರಾಣ ನಿರ್ಮಿಸಿದ ಅಧಿಕ ಪಾದಗೋಪಿ ಕಟ್ಟಿದ ಒರಳ ಗೊಲ್ಲಗೇರಿಗೆಳೆಯುತಆ ಫಣಿಯ ತಲೆಯ ಮೇಲಾಡಿದ ಪಾದ ||2|| ಕುರುರಾಯನೇಳದೆಯೆ ಕುಳಿತ ಸಿಂಹಾಸನದಿಉರುಳಿಸಿಬಿಟ್ಟಂತ ಉನ್ನತ ಪಾದಮರಕತ ನಗರಿಯ ಬಾಡ ಬಂಕಾಪುರದರಸು ಸಿರಿಯಾದಿಕೇಶವನ ಶ್ರೀಪಾದ||3||

ಎಂಥ ಕೀರುತಿ ಪೊತ್ತುವೆರಡು ಪಾದ Read More »

ಎಂತಹುದೊ ನಿನ್ನಯ ಭಕುತಿ

ಎಂತಹುದೊ ನಿನ್ನಯ ಭಕುತಿ ಎನಗೆ – ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಹಿಂದೆ ಮಾಡಿದ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು ||1|| ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ ||2|| ಹುಟ್ಟಿದ ಮೊದಲುಗೊಂಡು ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ ||3|| ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ

ಎಂತಹುದೊ ನಿನ್ನಯ ಭಕುತಿ Read More »

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ ಇಂದಿರೇಶ ಶ್ರೀ ಗೋವಿಂದ ಮುಕುಂದ|| ತಂದೆ ತಾಯಿ ನೀನೇ ಬಂಧು ಬಳಗ ನೀನೇ ಎಂದು ಭಜಿಸುವಾ ಆನಂದ ಗೋವಿಂದ| ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ ನ್ಮರಿಸುವಾ ಸುಖ ಎಂದಿಗಾಹುದೋ|| ಅಜಭವಾದಿಗಳು ಆನಂದದಿಂದಲಿ ಭಜಿಸಿ ಪಾಡುವಾ ನಿನ್ನ ಸುಖವು| ದೀನವತ್ಸಲ ಶ್ರೀನಿಕೇತನಾ ಮಾನದಿಂದ ನಿನ್ನ ಧ್ಯಾನವೇ ಸುಖವು|| ಭಯನಿವಾರಣ ಭಕ್ತವತ್ಸಲ ವಿಜಯಸಾರಥಿ ವಿಜಯವಿಟ್ಠಲನೆ||                                       —-ವಿಜಯದಾಸ

ಎಂದಿಗಾಹುದೋ ನಿನ್ನ ದರುಶನ Read More »

ಎಲ್ಲಿ ಅರಸುವೆ ನೀನು

ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ ನಿನ್ನ ಬಳಿಯೇ ನಾನು ವಾಸಿಸಿರುವೆ| ನಾನು ನಿನ್ನೊಂದಿಗೇ ಇದ್ದರೂ ನನಗಾಗಿ ಎಲ್ಲೊ ದೂರದಿ ಹುಡುಕಿ ಬಳಲುತಿರುವೆ|| ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ| ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ|| ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ ಯೋಗಾದಿ ಸಿದ್ಧಿಗೂ ದೂರ ನಾನು| ಶ್ರದ್ಧೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು ನನಗಾಗಿ ಹುಡುಕಿದರೆ ದೊರೆವೆ ನಾನು||                                                  —ವಚನವೇದ

ಎಲ್ಲಿ ಅರಸುವೆ ನೀನು Read More »

ಎಂತಾದರೂ ಚಿಂತೆ ಬಿಡದು

ಎಂತಾದರೂ ಚಿಂತೆ ಬಿಡದು| ನಿಶ್ಚಿಂತರಾದವರ ನಾನೊಬ್ಬರನು ಕಾಣೆ|| ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ| ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ|| ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ| ತಮ್ಮ ಅರ್ಜುನಗೆ ವೈರಿಯ ಕೊಲ್ಲುವ ಚಿಂತೆ ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ|| ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ| ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ ಶಕ್ತ ಪುರಂದರವಿಟ್ಠಲಗೆಮ್ಮ

ಎಂತಾದರೂ ಚಿಂತೆ ಬಿಡದು Read More »

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು ನೀನೆ ಭವಸಾಗರವ ದಾಟಿಸುವ ಹಡಗು| ನಿನ್ನ ಇಚ್ಛೆಯ ನೀನು ಪೂರೈಸುತಿರಲು ತಮ್ಮ ಗೈಮೆಯಿದೆಂದು ತಿಳಿವರೀ ಜನರು || ಕೆಸರಿನಲಿ ಸಲಗವನು ಹಿಡಿಯುವಳು ನೀನು ಹೆಳವನನು ಗಿರಿಯ ತುದಿಗೊಯ್ಯುವಳು ನೀನು| ಹಲವರಿಗೆ ಬ್ರಹ್ಮಪದವಿತ್ತು ಹಲವರನು ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು|| ನೀನು ಚಾಲಕಶಕ್ತಿ ನಾನೊಂದು ಯಂತ್ರ ನಾನೊಂದು ಬರಿಯ ಮನೆ ನೀನದರ ಮಂತ್ರ| ನಾನೊಂದು ರಥವಾಗೆ ನೀನದರ ರಥಿಕ ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ||                                               ——ವಚನವೇದ

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು Read More »

ಎನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ| ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಿಗೂ ನಿನ್ನ ಭಕ್ತರಾಣೆ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ| ರಂಗ ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ|| ತನುಮನಧನದಲಿ ವಂಚಕನಾದರೆ ಎನಗೆ ಆಣೆ |ರಂಗ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ || ಕಾಕು ಮನುಜರ ಸಂಗ ಮಾಡಿದರೆನಗೆ ಆಣೆ| ರಂಗ ಲೌಕಿಕವ ಬಿದಿಸದಿದ್ದರೆ ನಿನಗೆ ಆಣೆ|| ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ| ರಂಗ ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ

ಎನಗೂ ಆಣೆ Read More »

ಎನಗಿಂತ ಕಿರಿಯರಿಲ್ಲಯ್ಯಾ

ಎನಗಿಂತ ಕಿರಿಯರಿಲ್ಲಯ್ಯಾ ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯಾ ನಿಮ್ಮ ಪಾದಸಾಕ್ಷಿ ಎನಗೆ ಎನ್ನ ಮನದ ಸಾಕ್ಷಿಯಯ್ಯಾ ಕೂಡಲಸಂಗಮದೇವಾ ಎನಗಿದೇ ದಿವ್ಯ||                                                             —-ಬಸವಣ್ಣ

ಎನಗಿಂತ ಕಿರಿಯರಿಲ್ಲಯ್ಯಾ Read More »

ಎತ್ತ ಹೋದರು ಸುತ್ತಲೆಲ್ಲೂ

ಎತ್ತ ಹೋದರು ಸುತ್ತಲೆಲ್ಲೂ ಆರಿಗಾರೂ ಇಲ್ಲ ಜಗದೊಳು ಎಂಬುದನು ನೀ ನೆನಪಿಡು| ಮಾಯೆಯೊಡ್ಡಿದ ಬಲೆಯೊಳಿದ್ದರು ತಾಯ ಪಾದದಿ ಮನವಿಡು|| ಒಂದು ದಿನವೊ ಎರಡು ದಿನವೊ “ಸ್ವಾಮಿ, ಬುದ್ಧೀ” ಎಂದು ಜನಗಳು ಗೌರವದಿ ಬಳಿ ಸುಳಿವರು| ಮೃತ್ಯು ಬಂದೆಳೆವಾಗ ನಿನ್ನನು ಎಲ್ಲರೂ ಹಿಂದುಳಿವರು|| ಯಾವ ಪ್ರಿಯತಮೆಯೊಲವಿಗಾಗಿಯೆ ಹಗಲು ಇರುಳೂ ಜೀವ ತೇದೆಯೊ ಬಾರಳವಳೂ ಜೀವ ತೇದೆಯೊ ಬಾರಳನಳೂ ಜೊತೆಯೊಳು| ನೀನು ಸಾಯಲು ನಿನ್ನ ಶವವನು ಅಶುಭವೆಂದೇ ತಿಳಿವಳು||                                —-ವಚನವೇದ

ಎತ್ತ ಹೋದರು ಸುತ್ತಲೆಲ್ಲೂ Read More »