ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು

ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನುನೀನೆ ವಿಚಾರಿಸು ಇಬ್ಬರ ನ್ಯಾಯವ

ಮಗಳಿಗೆ ಮಗಳಾದ ಮಗಳಿಗಳಿಯನಾದಮಗಳ ಗಂಡಗೆ ಭಾವ ಮಾವನಾದುದ ಕೇಳಿನಾ ನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ ||1||

ವೈರಿಗೆ ವೈರಿಯಾದೆ ವೈರಿಗೆ ಸುತನಾದೆವೈರಿ ಗಂಡಗೆ ತನ್ನ ಮಗಳ ಕೊಟ್ಟುದ ಕೇಳಿನಾ ನಿನ್ನ ಪಾದಕೆ ಬಂದೆ ಶ್ರೀಹರಿಯೆ ||2||

ಆನಿ ಬಿದ್ದರ ತನ್ನ ಗ್ಯಾನದಿಂದೇಳುವುದುಏನು ಮಾಡಿದರು ಅದರ ಭಾವ ಹಿಂಗದುe್ಞÁನವಂತ ಕಾಗಿನೆಲೆಯಾದಿಕೇಶವರಾಯ ಮುನಿದು ಪೋದನೆ|| 3||

Leave a Comment

Your email address will not be published. Required fields are marked *