ಐದು ಪರಿಯ ಬಣ್ಣವ ತಂದು ಕೊಟ್ಟಡೆ

ಐದು ಪರಿಯ ಬಣ್ಣವ ತಂದು ಕೊಟ್ಟಡೆ ನಾಲ್ಕು ಮೊಲೆಯ ಹಸುವಾಯಿತ್ತು. ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು. ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡಡೆ ಕರ ರುಚಿಯಾಯಿತ್ತು. ಮಧುರ ತಲೆಗೇರಿ ಅರ್ಥವ ನೀಗಾಡಿ ಆ ಕರುವಿನ ಬೆಂಬಳಿವಿಡಿದು ಭವಹರಿಯಿತ್ತು ಚೆನ್ನಮಲ್ಲಿಕಾರ್ಜುನಾ.

ಐದು ಪರಿಯ ಬಣ್ಣವ ತಂದು ಕೊಟ್ಟಡೆ Read More »

ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು,

ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು, ಗುರುಹಸ್ತದಲ್ಲಿ ಅಂಕುರವಾಯಿತ್ತು, ಏಳೆಲೆ ಹೋಯಿತ್ತು ಬಳಗದ ನಡುವೆ. ಕೇಳೆಲೆಯವ್ವಾ, ನೀನು ಕೇಳು ತಾಯೆ. ಒಂಬತ್ತೆಲೆ ಎಂದಿಂಗೆ ಪರಿಪೂರ್ಣವಾಯಿತ್ತು ನೋಡವ್ವಾ. ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದವರ ಸಂಬಂಧವಿಲ್ಲೆಂದು ಬಿಟ್ಟು ತೊಲಗಿದೆನು ಕಾಣಾ ಎಲೆಯವ್ವಾ.

ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು, Read More »

ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ,

ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ, ಹಂದೆಗೆ ಸುಖವಿಲ್ಲ ಕಾಣಿರಣ್ಣಾ. ಈವಂಗವಗುಣವಿಲ್ಲ, ಕರುಣವುಳ್ಳವಂಗೆ ಪಾಪವಿಲ್ಲ. ನಿಮ್ಮ ಮುಟ್ಟಿ ಪರಧನ ಪರಸ್ತ್ರೀಯ ತೊರೆದಾತಂಗೆ ಮುಂದೆ ಭವವಿಲ್ಲ ಚೆನ್ನಮಲ್ಲಿಕಾರ್ಜುನಾ.

ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ, Read More »

ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ

ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು, ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ. ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.

ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ Read More »

ಎಲೆ ತಾಯಿ ನೀನಂತಿರು,

ಎಲೆ ತಾಯಿ ನೀನಂತಿರು, ಎಲೆ ತಂದೆ ನೀನಂತಿರು, ಎಲೆ ಬಂಧುವೆ ನೀನಂತಿರು, ಎಲೆ ಕುಲವೆ ನೀನಂತಿರು, ಎಲೆ ಬಲವೆ ನೀನಂತಿರು. ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ಹೋಗುತ್ತಿದ್ದೇನೆ. ನಿಮಗೆ ಶರಣಾರ್ಥಿ ಶರಣಾರ್ಥಿ

ಎಲೆ ತಾಯಿ ನೀನಂತಿರು, Read More »

ಎಲೆ ಕಾಲಂಗೆ ಸೂರೆಯಾದ ಕರ್ಮಿ,

ಎಲೆ ಕಾಲಂಗೆ ಸೂರೆಯಾದ ಕರ್ಮಿ, ಎಲೆ ಕಾಮಂಗೆ ಗುರಿಯಾದ ಮರುಳೆ, ಬಿಡು ಬಿಡು ಕೈಯ ನರಕವೆಂದರಿಯದೆ ತಡೆವರೆ ಮನುಜಾ ? ಚೆನ್ನಮಲ್ಲಿಕಾರ್ಜುನನ ಪೂಜೆಯ ವೇಳೆ ತಪ್ಪಿದರೆ ನಾಯಕ ನರಕ ಕಾಣಾ ನಿನಗೆ.

ಎಲೆ ಕಾಲಂಗೆ ಸೂರೆಯಾದ ಕರ್ಮಿ, Read More »

ಎಲೆ ಅಣ್ಣಾ ಅಣ್ಣಾ, ನೀವು ಮರುಳಲ್ಲಾ ಅಣ್ಣಾ,

ಎಲೆ ಅಣ್ಣಾ ಅಣ್ಣಾ, ನೀವು ಮರುಳಲ್ಲಾ ಅಣ್ಣಾ, ಎನ್ನ ನಿನ್ನಳವೆ ? ಹದಿನಾಲ್ಕು ಲೋಕವ ನುಂಗಿದ ಕಾಮನ ಬಾಣದ ಗುಣ ಎನ್ನ ನಿನ್ನಳವೆ ? ವಾರುವ ಮುಗ್ಗಿದಡೆ, ಮಿಡಿಹಯ ಹೊಯ್ವರೆ ? ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು. ನಿನ್ನ ನೀ ಸಂವರಿಸಿ ಕೈದುವ ಕೊಳ್ಳಿರಣ್ಣಾ, ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣಾ.

ಎಲೆ ಅಣ್ಣಾ ಅಣ್ಣಾ, ನೀವು ಮರುಳಲ್ಲಾ ಅಣ್ಣಾ, Read More »

ಎಲ್ಲರ ಪ್ರಾಣವಂಗೈಯಲದೆ

ಎಲ್ಲರ ಪ್ರಾಣವಂಗೈಯಲದೆ ಎನ್ನ ಪ್ರಾಣ ಜಂಗಮದಲದೆ. ಎಲ್ಲರ ಆಯುಷ್ಯ ಶಿರದಲ್ಲಿ ಬರೆದಿದೆ ಎನ್ನ ಆಯುಷ್ಯ ನಿಮ್ಮಲ್ಲಿ ಸಂದಿದೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಶರಣರೆನ್ನ ಪ್ರಾಣಲಿಂಗವೆಂದು ಧರಿಸಿದೆನು.

ಎಲ್ಲರ ಪ್ರಾಣವಂಗೈಯಲದೆ Read More »

ಎಲ್ಲರ ಗಂಡರ ಶೃಂಗಾರದ ಪರಿಯಲ್ಲ,

ಎಲ್ಲರ ಗಂಡರ ಶೃಂಗಾರದ ಪರಿಯಲ್ಲ, ಎನ್ನ ನಲ್ಲನ ಶೃಂಗಾರದ ಪರಿ ಬೇರೆ. ಶಿರದಲ್ಲಿ ಕಂಕಣ, ಉರದಮೇಲಂದುಗೆ, ಕಿವಿಯಲ್ಲಿ ಹಾವುಗೆ, ಉಭಯ ಸಿರಿವಂತನ ಮೊಳಕಾಲಲ್ಲಿ ಜಳವಟ್ಟಿಗೆ. ಉಂಗುಟದಲ್ಲಿ ಮೂಕುತಿ – ಇದು ಜಾಣರಿಗೆ ಜಗುಳಿಕೆ. ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ.

ಎಲ್ಲರ ಗಂಡರ ಶೃಂಗಾರದ ಪರಿಯಲ್ಲ, Read More »

ಎಲ್ಲ ಎಲ್ಲವನರಿದು ಫಲವೇನಯ್ಯಾ,

ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ ? ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.

ಎಲ್ಲ ಎಲ್ಲವನರಿದು ಫಲವೇನಯ್ಯಾ, Read More »

ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು,

ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು, ಎಲೆ ಕಾಲಂಗೆ ಗುರಿಯಾದ ಕರ್ಮಿ. ಉಲಿಯದಿರು, ಉಲಿಯದಿರು ಭವಭಾರಿ ನೀನು. ಹಲವು ಕಾಲದ ಹುಲುಮನುಜಂಗೆ ಹುಲುಮನುಜ ಹೆಂಡತಿ ಇವರಿದ್ದರೆ ಅದಕ್ಕದು ಸರಿ. ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದೊಳಗ್ಹೆಂಡಿರುಂಟಾದರೆ ಮಾಡಿಕೊ, ಎನ್ನ ಬಿಡು ಮರುಳೆ.

ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು, Read More »

ಎಮ್ಮೆಗೊಂದು ಚಿಂತೆ ಸಮ್ಮಗಾರಗೊಂದು ಚಿಂತೆ.

ಎಮ್ಮೆಗೊಂದು ಚಿಂತೆ ಸಮ್ಮಗಾರಗೊಂದು ಚಿಂತೆ. ಧರ್ಮಿಗೊಂದು ಚಿಂತೆ ಕರ್ಮಿಗೊಂದು ಚಿಂತೆ. ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ. ಒಲ್ಲೆ ಹೋಗು, ಸೆರಗ ಬಿಡು ಮರುಳೆ. ಎನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವರೊ ಒಲಿಯರೊ ಎಂಬ ಚಿಂತೆ ?

ಎಮ್ಮೆಗೊಂದು ಚಿಂತೆ ಸಮ್ಮಗಾರಗೊಂದು ಚಿಂತೆ. Read More »

ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ,

ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ, ಎನ್ನ ಕಡಿದು ಹರಹಿದಡೆ ಮನಕ್ಕೆ ತಾರೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರನೊಡನೆನ್ನ ಕಣ್ಣ ಮುಂದೆ ಕಂಡು ಮೊಗೆದುಂಡಮೃತದಂತೆ ಆದೆನಯ್ಯಾ.

ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ, Read More »

ಎನ್ನಂತೆ ಪುಣ್ಯಗೈದವರುಂಟೆ ,

ಎನ್ನಂತೆ ಪುಣ್ಯಗೈದವರುಂಟೆ , ಎನ್ನಂತೆ ಭಾಗ್ಯಂಗೈದವರುಂಟೆ , ಕಿನ್ನರನಂತಪ್ಪ ಸೋದರರೆನಗೆ, ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ. ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.

ಎನ್ನಂತೆ ಪುಣ್ಯಗೈದವರುಂಟೆ , Read More »

ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ.

ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ. ಎನ್ನ ಮೀಸಲ ಬೀಸಾಡಿ ಕಳೆದೆಯಲ್ಲಯ್ಯ. ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ. ಎನ್ನ ಭಾಷೆಗೆ ದೋಷವ ತೋರಿಸಿದೆಯಲ್ಲಯ್ಯ. ಎನ್ನ ಮೀಸಲ ಕಾಯವ ನಿಮಗೆಂದಿರಿಸಿಕೊಂಡಿದ್ದಡೆ, ಬೀಸಾಡಿ ಕಳೆವರೆ ಹೇಳಾ ತಂದೆ ? ಏಸು ಕಾಲ ನಿಮಗೆ ನಾನು ಮಾಡಿದ ತಪ್ಪ ಈ ಸಮಯದಲ್ಲಿ ಹೊರಿಸಿ ಕೊಂದೆಯಲ್ಲಾ ಚೆನ್ಮಮಲ್ಲಿಕಾರ್ಜುನಾ.

ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ. Read More »

ಎನ್ನ ಮನವ ಮಾರುಗೊಂಡನವ್ವಾ,

ಎನ್ನ ಮನವ ಮಾರುಗೊಂಡನವ್ವಾ, ಎನ್ನ ತನುವ ಸೂರೆಗೊಂಡನವ್ವಾ, ಎನ್ನ ಸುಖವನೊಪ್ಪುಗೊಂಡನವ್ವಾ. ಎನ್ನ ಇರವನಿಂಬುಗೊಂಡನವ್ವಾ. ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು.

ಎನ್ನ ಮನವ ಮಾರುಗೊಂಡನವ್ವಾ, Read More »

ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ

ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ ಕಾಯದ ಸುಖವ ನಾನೇನೆಂದರಿಯೆನು. ಆರು ಸೋಂಕಿದರೆಂದರಿಯೆನು. ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ ಹೊರಗೇನಾಯಿತ್ತೆಂದರಿಯೆನು.

ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ Read More »

ಎನ್ನ ಮಾಯದ ಮದವ ಮುರಿಯಯ್ಯಾ.

ಎನ್ನ ಮಾಯದ ಮದವ ಮುರಿಯಯ್ಯಾ. ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ. ಎನ್ನ ಜೀವದ ಜಂಜಡವ ಮಾಣಿಸಯ್ಯಾ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಸುತ್ತಿದ ಪ್ರಪಂಚವ ಬಿಡಿಸಾ ನಿಮ್ಮ ಧರ್ಮ

ಎನ್ನ ಮಾಯದ ಮದವ ಮುರಿಯಯ್ಯಾ. Read More »

ಎನ್ನ ಪ್ರಾಣ ಜಂಗಮ,

ಎನ್ನ ಪ್ರಾಣ ಜಂಗಮ, ಎನ್ನ ಜೀವ ಜಂಗಮ, ಎನ್ನ ಪುಣ್ಯದ ಫಲವು ಜಂಗಮ ಎನ್ನ ಹ[ರು]ರುಷದ ಮೇರೆ [ಜಂಗಮ] ಚೆನ್ನಮಲ್ಲಿಕಾರ್ಜುನಾ, ಜಂಗಮ ತಿಂಥಿಣಿಯಲೋಲಾಡುವೆ.

ಎನ್ನ ಪ್ರಾಣ ಜಂಗಮ, Read More »

ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ.

ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ. ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ. ಎನ್ನ ಕಾಯಕ್ಕೆ ಬಪ್ಪ ಸುಖ ನಿಮಗರ್ಪಿತ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗರ್ಪಿಸದ ಮುನ್ನ ಮುಟ್ಟಲಮ್ಮೆನಯ್ಯಾ.

ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ. Read More »

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ. ಅಯ್ಯಾ ಎನ್ನೊಳಗೆ ಇನಿತಿರ್ದು ಮೈದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ.

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ Read More »

ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ,

ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ, ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ. ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಲ್ಲಯ್ಯ. ನಿನ್ನ ಮುಂದಿರಟ್ಟಲನ್ಯರು ಕೊಂಡೊಯಿವಾಗಲೆಂತು ಸೈರಿಸಿದೆ ಹೇಳಾ ಚೆನ್ನಮಲ್ಲಿಕಾರ್ಜುನಾ ?

ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ, Read More »

ಎನ್ನ ಕಾಯ ಮಣ್ಣು, ಜೀವ ಬಯಲು,

ಎನ್ನ ಕಾಯ ಮಣ್ಣು, ಜೀವ ಬಯಲು, ಆವುದ ಹಿಡಿವೆನಯ್ಯಾ. ದೇವಾ, ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ? ಎನ್ನ ಮಾಯೆಯನು ಮಾಣಿಸಯ್ಯಾ ಚೆನ್ನಮಲ್ಲಿಕಾರ್ಜುನಾ.

ಎನ್ನ ಕಾಯ ಮಣ್ಣು, ಜೀವ ಬಯಲು, Read More »

ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು.

ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು. ಆ ಆಚಾರವನೆ ಲಿಂಗವೆಂದರುಹಿದನಯ್ಯಾ ಬಸವಣ್ಣನು. ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯಾ ಬಸವಣ್ಣನು. ಆ ಅರಿವೆ ಜಂಗಮವೆಂದರುಹಿದನಯ್ಯಾ ಬಸವಣ್ಣನು. ಚೆನ್ನಮಲ್ಲಕಾರ್ಜುನಯ್ಯಾ, ಎನ್ನ ಹೆತ್ತತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯಾ ಪ್ರಭುವೆ.

ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು. Read More »

ಎನಗೇಕಯ್ಯಾ ನಾ ಪ್ರಪಂಚಿನ ಪುತ್ಥಳಿ.

ಎನಗೇಕಯ್ಯಾ ನಾ ಪ್ರಪಂಚಿನ ಪುತ್ಥಳಿ. ಮಾಯಿಕದ ಮಲಭಾಂಡ, ಆತುರದ ಭವನಿಳಯ. ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ ? ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ ? ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ. ಎನ್ನ ತಪ್ಪನೊಪ್ಪಗೊಳ್ಳಿ, ಚೆನ್ನಮಲ್ಲಿಕಾರ್ಜುನದೇವರದೇವ ನೀವೆ ಅಣ್ಣಗಳಿರಾ.

ಎನಗೇಕಯ್ಯಾ ನಾ ಪ್ರಪಂಚಿನ ಪುತ್ಥಳಿ. Read More »