admin

ಆವ ರೋಗವು ಎನಗೆ

ಆವ ರೋಗವು ಎನಗೆ ದೇವ ಧನ್ವಂತ್ರಿ| ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ|| ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು ಹರಿಯ ಕೀರ್ತನೆಯು ಕೇಳಿಸದು ಕಿವಿಗೆ| ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಹರಿಪ್ರಸಾದವ ಜಿಹ್ವೆ ಸವಿಯದಯ್ಯ|| ಹರಿಪಾದ ಸೇವೆಗೆ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು| ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ|| ಅನಾಥಬಂಧು ಗೋಪಾಲವಿಟ್ಠಲರೇಯ ಎನ್ನ ಭಾಗದ ವೈದ್ಯ ನೀನೆ ನೀನೇ| ಅನಾದಿಕಾಲದ ಭವರೋಗ ಕಳೆಯಯ್ಯ ನಾನೆಂದಿಗೂ ಮರೆಯೆ ನಿನ್ನ ಉಪಕಾರ||                                           ——-ಗೋಪಾಲದಾಸ

ಆವ ರೋಗವು ಎನಗೆ Read More »

ಆಲೋಲತುಲಸೀ

ಆಲೋಲತುಲಸೀವನಮಾಲಭೂಷಣ ಶ್ರೀರಾಮ ರಾಮ ಹರೇ –ಶ್ರೀಮನ್ ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ|| ನಂದನಂದನ ಸುಂದರವದನ–ಶ್ರೀರಾಮ…|| ದಶರಥಬಾಲ ದಶಮುಖಕಾಲ–ಶ್ರೀರಾಮ…|| ಕ್ಷೀರಾಬ್ಧಿಶಯನ ಕ್ಷಾರಾಬ್ಧಿಬಂಧನ–ಶ್ರೀರಾಮ…|| ಧನ್ಯಚರಿತ್ರ ಗಣ್ಯಪವಿತ್ರ –ಶ್ರೀರಾಮ…|| ಪಾಲಿತಾಮರ ವಾಲಿನಾಶಕ –ಶ್ರೀರಾಮ…|| ಸಾಮಗಾನನುತ ಭೀಮಾನುಜಮಿತ್ರ–ಶ್ರೀರಾಮ…|| ತಾಟಕಾಂತಕ ಪಾಟಿತಾಸುರ–ಶ್ರೀರಾಮ…|| ಭಕ್ತಪಾಲಕ ಮುಕ್ತಿದಾಯಕ–ಶ್ರೀರಾಮ…|| ಕಂಕಣಭೂಷಣ ಪಂಕಜನಯನ– ಶ್ರೀರಾಮ…|| ವರಹೇಮಾಂಬರ ಕರಧೃತಶೈಲ– ಶ್ರೀರಾಮ…|| ಭರತಾನಂದ ಭದ್ರಾದ್ರಿವಾಸ –ಶ್ರೀರಾಮ…||                                                     —-ಭದ್ರಾಚಲ ರಾಮದಾಸ

ಆಲೋಲತುಲಸೀ Read More »

ಆತುರದಿ ಹಾತೊರೆದು

ಆತುರದಿ ಹಾತೊರೆದು ಬಂದೆ ಅವ್ವಾ ಎಂದು | ಯಾತರದು ಕಾತರವು ನಿನ್ನ ಬಳಿಗಿಂದು || ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು ನರತನದ ಹುದುರೊಳಗೆ ಜೀವ ಸಿಕ್ಕಿಹುದು| ಹೊರೆತನದ ಬಲೆಯೊಳಗೆ ಬುದ್ಧಿ ಬಳಲಾಡುವುದು ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ|| ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ ಅತ್ತ ನೀನೇ ಮತ್ತು ಇತ್ತ ನೀನು| ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳೆದೊಗೆದು ಬತ್ತಲಾದೆನು ಅವ್ವ ಬಾಲನಂತೆ ನಾನು|| ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ| ನೆಚ್ಚು ಮೆಚ್ಚುಗಳನ್ನು ಬಿಚ್ಚು

ಆತುರದಿ ಹಾತೊರೆದು Read More »

ಆಚಾರವಿಲ್ಲದ ನಾಲಿಗೆ

ಆಚಾರವಿಲ್ಲದ ನಾಲಿಗೆ| ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ| ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ|| ಪ್ರಾತಃಕಾಲದೊಳೆದ್ದು ನಾಲಿಗೆ| ಸಿರಿ- ಪತಿಯೆನ್ನಬಾರದೆ ನಾಲಿಗೆ| ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ|| ಚಾಡಿ ಹೇಳಲಿಬೇಡ ನಾಲಿಗೆ| ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ| ರೂಢಿಗೊಡೆಯ ಶ್ರೀರಾಮನ ಪಾದವ ಪಾಡುತಲಿರು ಕಂಡ್ಯ ನಾಲಿಗೆ|| ಹರಿಯನ್ನೆ ಸ್ಮರಿಸಯ್ಯ ನಾಲಿಗೆ| ನರ- ಹರಿಯನ್ನೆ ಭಜಿಸಯ್ಯ ನಾಲಿಗೆ| ವರದ ಪುರಂದರವಿಟ್ಠಲರಾಯನ ಚರಣವ ನುತಿಸಯ್ಯ ನಾಲಿಗೆ||                                           —-ಪುರಂದರದಾಸ

ಆಚಾರವಿಲ್ಲದ ನಾಲಿಗೆ Read More »

ಅಳಿಸಂಕುಲವೇ ಮಾಮರವೇ

ಅಳಿಸಂಕುಲವೇ ಮಾಮರವೇ ಬೆಳುದಿಂಗಳೇ ಕೋಗಿಲೆಯೇ ನಿಮ್ಮ ನಿಮ್ಮನ್ನೆಲ್ಲರನು ಒಂದ ಬೇಡುವೆನು ಚನ್ನ ಮಲ್ಲಿಕಾರ್ಜುನದೇವರ ಕಂಡರೆ ಕರೆದು ತೋರಿರೆ ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ ನೀವು ಕಾಣಿರೇ ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೇ ನೀವು ಕಾಣಿರೇ ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೇ ನೀವು ಕಾಣಿರೇ ಕೊಳತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೇ ನೀವು ಕಾಣಿರೇ ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೇ ನೀವು ಕಾಣಿರೇ ಚನ್ನಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ನೀವು ಹೇಳಿರೇ ನೀವು ಹೇಳಿರೇ                                        ——ಅಕ್ಕಮಹಾದೇವಿ

ಅಳಿಸಂಕುಲವೇ ಮಾಮರವೇ Read More »

ಅಂತರತಮ ನೀ ಗುರು

ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| ಜಟಿಲಕುಟಿಲತಮ ಅಂತರಂಗ ಬಹು ಭಾವವಿಪಿನ ಸಂಚಾರಿ| ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| ಜನುಮ ಜನುಮ ಶತಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿ| ಅಂತರತಮ ನೀ ಗುರು ಹೇ ಆತ್ಮತಮೋಹಾರಿ|| ಪಾಪಪುಣ್ಯ ನಾನಾ ಲಲಿತ ರುದ್ರಲೀಲಾ ರೂಪಅರೂಪ ವಿಹಾರಿ| ಅಂತರತಮ ನೀ ಗುರು ಹೇ ಆತ್ಮತಮೋಹಾರಿ||                           —-ಕುವೆಂಪು

ಅಂತರತಮ ನೀ ಗುರು Read More »

ಅಂತರಂಗದಲಿ ಶ್ರೀಘನಶ್ಯಾಮೆಯ

ಅಂತರಂಗದಲಿ ಶ್ರೀಘನಶ್ಯಾಮೆಯ ಆದರಿಸೆಲೆ ಮನವೇ| ನಮ್ಮಿಬ್ಬರ ಹೊರತಾರೂ ಅರಿಯದ ರೀತಿಯೊಳವಳೆಡೆ ಸಾಗುವವೇ || ಅಂತರಂಗ….. ಓ ಮನವೇ ನಿನ್ನ ಆಸೆ ಸಾಸಿರವ ಆಚೆ ನಿಲಿಸಿ ಬಾರೋ | ಬಾಗಿಲಾಚೆ ನಿಲಿಸಿ ಬಾರೋ| ಏಕಾಂತದಿ ನೀನಾಕೆಯ ಕಾಣಲು “ಓ ತಾಯಿ” ಎಂದೆನ್ನುವ ರಸನೆಯ ಮಾತ್ರ ಕರೆದು ತಾರೋ || ಅಂತರಂಗ…. ಕುಟಿಲ ಕುಮಂತ್ರವ ದೂರ ತಳ್ಳಿ ನೀ ಬಾ ನಮ್ಮನು ನೋಡು | ಜ್ಞಾನನಯನವನು ಪಹರೆ ನಿಲಿಸಿ ನೀ ಒಳಗೆ ಬಂದು ಕೂಡೋ||                                ——-ವಚನವೇದ

ಅಂತರಂಗದಲಿ ಶ್ರೀಘನಶ್ಯಾಮೆಯ Read More »

ಅಂಜಿಕಿನ್ಯಾತಕ್ಕಯ್ಯಾ

ಅಂಜಿಕಿನ್ಯಾತಕ್ಕಯ್ಯಾ ಸಜ್ಜನರಿಗೆ ಅಂಜಿಕಿನ್ಯಾತಕ್ಕಯ್ಯಾ|| ಸಂಜೀವರಾಯರ ಸ್ಮರಣೆಮಾಡಿದಮೇಲೆ|| ಕನಸಲಿ ಮನದಲಿ ಕಳವಳವಾದರೆ ಹನುಮನ ನೆನೆದರೆ ಹಾರಿಹೋಗದೆ ಪಾಪ|| ರೋಮರೋಮಕೆ ಕೋಟಿ ಲಿಂಗವುದುರಿಸಿದ ಭೀಮನ ನೆನೆದರೆ ಬಿಟ್ಟುಹೋಗದೆ ಪಾಪ|| ಪುರಂದರವಿಟ್ಠಲ ಪೂಜೆಯ ಮಾಡುವ ಗುರು ಮಧ್ವರಾಯರ ಸ್ಮರಣೆಮಾಡಿದಮೇಲೆ||                                                          —-ಪುರಂದರದಾಸರು

ಅಂಜಿಕಿನ್ಯಾತಕ್ಕಯ್ಯಾ Read More »

ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮಚಂದ್ರ|| ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು| ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ಶ್ರೀರಾಮಚಂದ್ರ ಜಗವೆಲ್ಲ ತಾನಾದ|| ಇವನಿಗೆ ಅವ ರಾಮ ಅವನಿಗೆ ಇವ ರಾಮ ಅವನಿಯೊಳೀ ಪರಿ ರೂಪವುಂಟೇ| ಲವಮಾತ್ರದಿ ಅಸುರರ್ ದುರುಳತನದಿ ಕೂಡಿ ಅವರವರ್ಹೊಡೆದಾಡಿ ಹತರಾಗಿ ಪೋದರು || ಹನುಮದಾದಿಗಳು ಇವನನಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ | ಕ್ಷಣದಲಿ ಪರಂದರವಿಟ್ಠಲರಾಯನು ಕೊನೆಗೊಬ್ಬನಾಗಿಯೇ ರಣದಲಿ ನಿಂದ||                                             ——ಪುರಂದರದಾಸ

ಅಲ್ಲಿ ನೋಡಲು ರಾಮ Read More »

ಅಲ್ಲಿದೆ ನಮ್ಮನೆ

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ || ಕದ ಬಾಗಿಲಿರಿಸಿದ ಕಳ್ಳಮನೆ —ಇದು ಮುದದಿಂದ ಲೋಲಾಡೊ ಸುಳ್ಳುಮನೆ| ಇದಿರಾಗಿ ವೈಕುಂಠವಾಸ ಮಾಡುವಂಥ ಪದುಮನಾಭನ ದಿವ್ಯ ಬದುಕು ಮನೆ|| ಮಾಳಿಗೆ ಮನೆಯೆಂದು ನೆಚ್ಚಿ ಕೆಡಲಿಬೇಡ ಕೇಳಯ್ಯ ಹರಿಕಥೆ ಶ್ರವಣಂಗಳ| ನಾಳೆ ಯಮದೂತರು ಬಂದೆಳೆದೊಯ್ವಾಗ ಮಾಳಿಗೆ ಮನೆಯು ಸಂಗಡ ಬಾರದಯ್ಯ|| ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ ಕಡುಗೊಬ್ಬುತನದಲಿ ನಡೆಯದಿರು| ಒಡೆಯ ಶ್ರೀ ಪುರಂದರವಿಟ್ಠಲನ ಚರಣವ ದೃಢಭಕ್ತಿಯಲಿ ನೀ ಭಜಿಸೆಲೊ ಮನುಜನೆ||                                                  —–ಪುರಂದರದಾಸ  

ಅಲ್ಲಿದೆ ನಮ್ಮನೆ Read More »

ಅಲೆದಲೆದು ಅತಿದಣಿದು

ಅಲೆದಲೆದು ಅತಿದಣಿದು ನೆಲೆಗಾಣ್ದೆ ನಿನ್ನಡಿಗೆ ಎಲೆ ತಾಯೆ ಕಡೆಗಿಂದು ಬಂದೆಮ್ಮಸಲಹು|| ಕೊನೆಯಿಲ್ಲ ಕೊರೆಯಿಲ್ಲ ಈ ನಮ್ಮ ದುಃಖಕ್ಕೆ ಮನದಲ್ಲಿ ಬನದಲ್ಲಿ ನೆಮ್ಮದಿಯು ಇನಿತಿಲ್ಲ| ಜನುಮಗಳು ಕಳೆಕಳೆದು ದುಃಖ ಮಿತಿಮೀರುತಿದೆ ಜನನಿ ಮಂಗಳಮೂರ್ತಿ ಕಳೆಯೆಮ್ಮ ಕಲುಷಾರ್ತಿ|| ಪರಮಹಂಸರ ಕರುಣೆರೂಪಿಣಿಯೆ ನೀ ತಾಯೆ ಪರತನವನರಿಯದಿಹ ಪ್ರೇಮದಂಬುಧಿ ಜಲವ| ಎರೆದೆಮ್ಮನುದ್ಧರಿಸು ಪತಿತಪಾವನೆ ಮಾತೆ ಸಾರದಾಯಿನಿ ಪರಮೆ ಅಕಳಂಕಚರಿತೆ||                                                ——ಸ್ವಾಮಿ ತದ್ರೂಪಾನಂದ

ಅಲೆದಲೆದು ಅತಿದಣಿದು Read More »

ಅರಿತೆ ನಾನು ಅರಿತೆ ನಾನು

ಅರಿತೆ ನಾನು ಅರಿತೆ ನಾನು ನಿಜದ ನೆಲೆಯನರಿತೆನು| ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು|| ಎಂದೆಂದೂ ಇರುಳಿಲ್ಲದ ಬೆಳಕಿನೂರಿನಿಂದ ಅವನು ನಮ್ಮಲ್ಲಿಗೆ ಬಂದನು| ಅವನ ಸಂಗದಿಂದ ನಾನು ಹಗಲಾವುದು ಇರುಳಾವುದು ಎಂಬುದನೂ ತಿಳಿಯೆನು|| ಜಪತಪಾದಿ ಕರ್ಮಗಳೂ ನೀರಸವೆಂದರಿತೆ ನಾನು ಹಳೆಯ ನಿದ್ರೆ ಹರಿಯಿತು| ತೂಕಡಿಸುವುದೆಲ್ಲಿ ಬಂತು ನಿರಂತರವು ಯೋಗದಲ್ಲಿ ಎಚ್ಚರಿರುವುದಾಯಿತು||                                       —ವಚನವೇದ

ಅರಿತೆ ನಾನು ಅರಿತೆ ನಾನು Read More »

ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಾಣಿರೇನೆ|| ಕಾಶಿ ಪೀತಾಂಬರ ಕೈಯಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮ| ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ|| ಕರದಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಧರಿಸಿದ ಹುಲಿಯುಗುರಮ್ಮ| ಅರಳೆಲೆ ಕನಕಕುಂಡಲ ಕಾಲಲಂದುಗೆ ಉರಗಶಯನ ಬಂದ ಕಾಣಿರೇನೆ|| ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣನು ನಾಟ್ಯವಾಡುತಲಿ| ಮೇಲಾಗಿ ಬಾಯಲಿ ಜಗವನು ತೋರಿದ ಮೂಲೋಕದೊಡೆಯನ ಕಾಣಿರೇನೆ|| ಕುಂಕುಮ ಕಸ್ತೂರಿ ಕುಡಿಕುಡಿ ನಾಮವು ಶಂಖಚಕ್ರಗಳ ಧರಿಸಿಹನಮ್ಮ| ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷ

ಅಮ್ಮ ನಿಮ್ಮ ಮನೆಗಳಲ್ಲಿ Read More »

ಅನ್ಯಚಿಂತೆಯ ಪಥದಿ

ಅನ್ಯಚಿಂತೆಯ ಪಥದಿ ಮನವಲೆದು ಸಾಗಿರಲು ನಿನ್ನ ದರ್ಶನ ನನ್ನ ನಾಚಿಸಿಹುದು || ಜೀವನದ ಜಲಧಿಯಲಿ ಪಯಣಗೈಯುವ ನನಗೆ ನೀನೊಂದು ಧ್ರುವತಾರೆ ನನ್ನ ಗುರುವೆ| ಕಡೆಯಿಲ್ಲದೀ ಕಡಲ ಬಳಸುದಾರಿಯೊಳಾನು ದಿಕ್ಕು ತಪ್ಪದೆ ಇನ್ನು ಪಯಣಗೈವೆ|| ಇಲ್ಲಿ ನಾನಲೆವಾಗ ಎಂದಾದರೂ ನನ್ನ ಎದೆಯು ಮಿಡುಕಾಡುತಿರೆ ನೋವಿನಲ್ಲಿ| ಮೇಲೆ ನಿನ್ನಯ ಕರುಣಕಾಂತಿಯುಜ್ವಲ ತಾರೆ ಬೆಳಗಿ ಸಂತೈಸುವುದು ಹಾದಿಯಲ್ಲಿ|| ನನ್ನಂತರಂಗದಲಿ ನಿನ್ನ ಮುಖವೆಂದಿಗೂ ಚಿರಮಧುರ ಕಾಂತಿಯಲಿ ಶೋಭಿಸಿಹುದು| ಒಂದೆ ಚಣ ನಾ ನಿನ್ನ ಕಾಣದಿದ್ದರೆ ಎದೆಯು ಅತುಲ ವೇದನೆಯಲ್ಲಿ ತುಡಿಯುತಿಹುದು||                                                              —–ವಚನವೇದ

ಅನ್ಯಚಿಂತೆಯ ಪಥದಿ Read More »

ಅನಂತರೂಪಿಣಿ (ಶ್ರೀ ದೇವೀ ಸಂಕೀರ್ತನೆ)

ಪೂರಿಯಾಧನಾಶ್ರೀ—–ತೇವರಾ ಅನಂತ ರೂಪಿಣಿ ಅನಂತ ಗುಣವತಿ ಅನಂತನಾಮ್ನಿ ಗಿರಿಜೇ ಮಾ| ಶಿವಹೃನ್ಮೋಹಿನಿ ವಿಶ್ವವಿಲಾಸಿನಿ ರಾಮಕೃಷ್ಣಜಯದಾಯಿನಿ ಮಾ|| ಜಗಜ್ಜನನಿ ತ್ರಿಲೋಕಪಾಲಿನಿ ವಿಶ್ವಸುವಾಸಿನಿ ಶುಭದೇ ಮಾ| ದುರ್ಗತಿನಾಶಿನಿ ಸನ್ಮತಿದಾಯಿನಿ ಭೋಗಮೋಕ್ಷ ಸುಖಕಾರಿಣಿ ಮಾ|| ಪರಮೇ ಪಾರ್ವತಿ ಸುಂದರಿ ಭಗವತಿ ದುರ್ಗೇ ಭಾಮತಿ ತ್ವಂ ಮೇ ಮಾ| ಪ್ರಸೀದ ಮಾತರ್ ನಗೇಂದ್ರ ನಂದಿನಿ ಚಿರಸುಖದಾಯಿನಿ ಜಯದೇ ಮಾ||

ಅನಂತರೂಪಿಣಿ (ಶ್ರೀ ದೇವೀ ಸಂಕೀರ್ತನೆ) Read More »

ಅಗ್ನಿಮಂತ್ರ ದೀಕ್ಷೆಯ

ಅಗ್ನಿಮಂತ್ರ ದೀಕ್ಷೆಯ ಕೊಡು ನಿನ್ನ ಸಂತಾನಕಿಂದು| ಆಶೀರ್ವಾದ ಕವಚ ತೊಡಿಸು ದೈನ್ಯವಸನದಿಂ ಬಿಡಿಸು|| ಕುದಿಸು ಎಮ್ಮ ಹೃದಯ ರುಧಿರ ಒರಸು ಭಯದ ಅಶ್ರು ಜಲವ ನಿಲಿಸು ಎಮ್ಮ ಜಗದ ಸಭೆಯೊಳ್ ನ್ನಿನ ಸುತ್ತ ತಾಯಿ || ನರರು ನಾವು ಕುರಿಗಳಲ್ತು ನಿನ್ನ ಸುತರು ದೀನರೆಂತು ವ್ಯರ್ಥ ಭೀತಿ ಏಕೆ ಇನ್ನು ಮಿಥ್ಯವಲ್ತೆ ಈ ಲಜ್ಜೆ|| ಬಾರಮ್ಮ ಬಾರಮ್ಮ ಬಾರೆಮ್ಮ ತಾಯಿ ದಶಪ್ರಹರಣ ಧಾರಿಣೀ ನಗುತ ಅಟ್ಟ ಅಟ್ಟಹಾಸದಿ ದಿವಿಯ ಭುವಿಯ ತುಂಬಿ ನೀ ಸಾಧಿಸಿ ನಿನ್ನ ಕಾರ್ಯವನ್ನು

ಅಗ್ನಿಮಂತ್ರ ದೀಕ್ಷೆಯ Read More »