admin

ಜಯ ಜಗದಂಬ ಮಾ

ಜಯ ಜಗದಂಬ ಮಾ ಜನನೀ ಶ್ಯಾಮಾ ಜವದಿ ಬಂದು ಪಾಲಿಸೆನ್ನ ಪಾರ್ವತಿ ಉಮಾ|| ಮಮ ಹೃದಯಕಮಲದಿ ವಾಸಿಸು ಮುದದಿ ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ| ನಿನ್ನ ಕಂದ ನಾನು ಕರೆಯುತಿಹೆ ಲಾಲಿಸೆನ್ನ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ|| ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ ಪರಾಭಕ್ತಿಗಮ್ಯೆ ನೀನು ಭವತಾರಿಣೀ| ನಿನ್ನ ನಂಬಿ ಕರೆವೆ ನಮನಗೈವೆ ನಲಿದು ಬಾರೆ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||

ಜಯ ಜಗದಂಬ ಮಾ Read More »

ಜಗವ ಸುತ್ತಿರುವುದು ನಿನ್ನ ಮಾಯೆ

ಜಗವ ಸುತ್ತಿರುವುದು ನಿನ್ನ ಮಾಯೆ ನಿನ್ನ ಸುತ್ತಿರುವುದೆನ್ನ ಮನ ನೋಡಾ|| ಕರಿಯು ಕನ್ನಡಿಯೊಳಗಡಗಿದಂತಯಿಯ ನೀನೆನ್ನೊಳಡಗಿಹೆ ಕೂಡಲಸಂಗಯ್ಯ||                                                      —ಬಸವಣ್ಣ

ಜಗವ ಸುತ್ತಿರುವುದು ನಿನ್ನ ಮಾಯೆ Read More »

ಚಿಂತಾ ನಾಸ್ತಿ ಕಿಲ

ಚಿಂತಾ ನಾಸ್ತಿ ಕಿಲ ತೇಷಾಂ|| ಶಮದಮಕರುಣಾಸಂಪೂರ್ಣಾನಾಂ ಸಾಧುಸಮಾಗಮಸಂಕೀರ್ಣಾನಾಂ|| ಕಾಲತ್ರಯಜಿತಕಂದರ್ಪಾಣಾಂ ಖಂಡಿತಸರ್ವೇಂದ್ರಿಯದರ್ಪಾಣಾಂ|| ಪರಮಹಂಸಗುರುಪದಚಿತ್ತಾನಾಂ ಬ್ರಹ್ಮಾನಂದಾಮೃತಮತ್ತಾನಾಂ||                                           –ಸದಾಶಿವ ಬ್ರಹ್ಮೇಂದ್ರ

ಚಿಂತಾ ನಾಸ್ತಿ ಕಿಲ Read More »

ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ ಪಾರ್ವತಿ| ರಮಣ ನಿನಗೆ ನಮೋ ನಮೋ ನಮೋ|| ಸುಂದರ ಮೃಗಧರ ಪಿನಾಕ ಧನುಕರ| ಗಂಗಾಶಿರ ಗಜಚರ್ಮಾಂಬರಧರ|| ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ| ಧರಿಸಿದ ಪರಮ ವೈಷ್ಣವ ನೀನೇ|| ಗರುಡಗಮನ ಶ್ರೀ ಪುರಂದರ ವಿಟ್ಠಲನ| ಪ್ರಾಣಪ್ರಿಯನೇ ನಮೋ ನಮೋ||                                             —ಪುರಂದರದಾಸ

ಚಂದ್ರಚೂಡ ಶಿವಶಂಕರ Read More »

ಚಕೋರಂಗೆ ಚಂದ್ರಮನ

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಅಂಬುಜಕೆ ಭಾನುವಿನ ಉದಯದ ಚಿಂತೆ|| ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಎಮಗೆ ನಮ್ಮ ಕೂಡಲಸಂಗಮದೇವರ ಚಿಂತೆ||                                                                       —ಬಸವಣ್ಣ

ಚಕೋರಂಗೆ ಚಂದ್ರಮನ Read More »

ಗೋವಿಂದ ಮಾಧವ

ಗೋವಿಂದ ಮಾಧವ ಗೋಪಾಲ ಕೇಶವ| ನರಸಿಂಹಾಚ್ಯುತ ನಾರಾಯಣ|| ದಶರಥನಂದನ ಸೀತಾಮನೋಹರ| ದಾನವಮರ್ದನ ದಯಾನಿಧೇ|| ರಾಮ ರಾಘವ ರಾಜೀವಲೋಚನ| ಕಾಮಿತ ಫಲದ ಕರಿವರದ || ಕೃಷ್ಣ ಕೇಶವ ಅಂಬುಜಲೋಚನ| ಕಾಮಿತ ಫಲದ ಕರಿವರದ|| ರಾಮ ರಾಮ ಗೋವಿಂದ ರಾಮ| ಕಲ್ಯಾಣ ರಾಮ ಪಾಹಿ|| (ಶ್ರೀ)ರಾಮ ರಾಮ ಪಟ್ಟಾಭಿರಾಮ| ಕೋದಂಡರಾಮ ಪಾಹಿ || ರಾಮ ರಾಮ ನಯನಾಭಿರಾಮ| ಲೋಕಾಭಿರಾಮ ಪಾಹಿ|| ಜಲಧಿಶಯನ ರವಿಚಂದ್ರವಿಲೋಚನ| ಜಲಜಭವಸ್ತುತ ಶ್ರೀರಾಮ|| ಕೌಸಲ್ಯಾತ್ಮಜ ಕಾಮಿತ ಫಲದ| ಮಾರುತಿಸೇವಿತ ಪಾಹಿ|| ರಾಮ ರಾಮ ಪಾಹಿ ಹರೇ| ರಾಮ

ಗೋವಿಂದ ಮಾಧವ Read More »

ಗೋವಿಂದ ಜೈ ಜೈ

ಗೋವಿಂದ ಜೈ ಜೈ ಗೋಪಾಲ ಜೈ ಜೈ ರಾಧಾ ಮಾಧವ ಹರಿ ಗೋವಿಂದ ಜೈ ಜೈ|| ಮುಕುಂದ ಜೈ ಜೈ ಮುರಾರಿ ಜೈ ಜೈ ಮಧುಸೂದನ ಮುರಲೀ ಮೋಹನ ಜೈ ಜೈ|| ಕೇಶವ ಜೈ ಜೈ ಯಾದವ ಜೈ ಜೈ ನಾರಾಯಣ ಹರಿ ಶ್ರೀಕೃಷ್ಣ ಜೈ ಜೈ||

ಗೋವಿಂದ ಜೈ ಜೈ Read More »

ಗೋವಿಂದ ಗೋವಿಂದ

ಗೋವಿಂದ ಗೋವಿಂದ ಅತಿ ಆನಂದ ಸಕಲ ಸಾಧನ ನಿನ್ನಾನಂದ|| ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ| ನಿರ್ಮಲಾತ್ಮಕನಾಗಿ ಇರುವುದೇ ಆನಂದ|| ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ| ಈ ಪರಿ ಮಹಿಮೆಯ ತಿಳಿಯೋದೆ ಆನಂದ|| ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ| ಹಿಂಗದೆ ದಾಸರ ಸಲಹೋದೆ ಆನಂದ||                                              —ಪುರಂದರದಾಸ

ಗೋವಿಂದ ಗೋವಿಂದ Read More »

ಗೋವರ್ಧನ ಗಿರಿಧರ ಗೋವಿಂದ

ಗೋವರ್ಧನ ಗಿರಿಧರ ಗೋವಿಂದ ಗೋಕುಲಪಾಲಕ ಪರಮಾನಂದ| ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ ಭಾವಕ ಭಯಹರ ಪಾಹಿ ಮುಕುಂದ|| ಆನಂದಾಮೃತವಾರಿಧಿ ಖೇಲ ಅಲಘು ಪರಾಕ್ರಮ ಅನುಪಮಶೀಲ| ಶ್ರೀನಂದಾತ್ಮಜ ಶ್ರಿತಜನಪಾಲ ಶ್ರೀಕರಕಿಸಲಯ ಲಾಲನಲೋಲ|| ಪಾಟಿತ ಸುರರಿಪು ಪಾದಪವೃಂದ ಪಾವನಚರಿತಪರಾಮೃತಕಂದ| ನಾಟ್ಯರಸೋತ್ಕಟ ನಾನಾಭರಣ ನಾರಾಯಣತೀರ್ಥ ವಂದಿತಚರಣ||                                         –ನಾರಾಯಣತೀರ್ಥ

ಗೋವರ್ಧನ ಗಿರಿಧರ ಗೋವಿಂದ Read More »

ಗುರುವೆ ತಾಯಿ ಗುರುವೆ ತಂದೆ

ಗುರುವೆ ತಾಯಿ ಗುರುವೆ ತಂದೆ ಗುರುವೆ ದೈವ ದಾತಾರ| ಗುರುವೆ ಬಂಧು ದಯಾಸಿಂಧು ಗುರುವೆ ಕೃಪೆಯ ಸಾಕಾರ|| ಗುರುವೆ ಬ್ರಹ್ಮ ಗುರುವೆ ವಿಷ್ಣು ಗುರುವೆ ವರ ಮಹೇಶ್ವರ| ಗುರುಪರತರ ಪರಬ್ರಹ್ಮ ಗುರುವೆ ಸಕಲ ಆಧಾರ|| ತಮವ ಕಳೆದು ಬೆಳಕ ತಂದ ದೀನಬಂಧು ಗುರುವರ| ಕರ್ಮ ಬಂಧ ತರಿದ ಧೀರ ನಿನಗಿದೋ ನಮಸ್ಕಾರ||

ಗುರುವೆ ತಾಯಿ ಗುರುವೆ ತಂದೆ Read More »

ಗಾಯತಿ ವನಮಾಲೀ

ಗಾಯತಿ ವನಮಾಲೀ ಮಧುರಂ|| ಪುಷ್ಪಸುಗಂಧಿ ಸುಮಲಯ ಸಮೀರೇ| ಮುನಿಜನದರ್ಶಿತ ಯುಮುನಾತೀರೇ|| ಕೂಜಿತಶುಕಪಿಕ ಮುಖ ಖಗಕುಂಜೇ| ಕುಟಿಲಾಳಕ ಬಹು ನೀರದ ಪುಂಜೇ|| ತುಲಸೀದಾಮ ವಿಭೂಷಣ ಹಾರೀ| ಜಲಜಭವಸ್ತುತಸದ್ಗುಣ ಶೌರೀ|| ಪರಮಹಂಸಹೃದಯೋತ್ಸವಕಾರೀ| ಪರಿಪೂರಿತ ಮುರಳೀರವಕಾರೀ||                                  —–ಸದಾಶಿವ ಬ್ರಹ್ಮೇಂದ್ರ

ಗಾಯತಿ ವನಮಾಲೀ Read More »

ಗಜವದನ ಬೇಡುವೆ

ಗಜವದನ ಬೇಡುವೆ ಗೌರೀತನಯ| ತ್ರಿಜಗವಂದಿತನೆ ಸುಜನರ ಪೊರೆವನೆ|| ಪಾಶಾಂಕುಶ ಮುಸಲಾದ್ಯಾಯುಧಧರ| ಮೂಷಕವಾಹನ ಮುನಿಜನ ಪ್ರೇಮ| ಮೋದದಿಂದಲಿ ನಿನ್ನ ಪಾದವ ನಂಬಿದೆ| ಸಾಧುವಂದಿತನೆ ಅನಾದರ ಮಾಡದೆ|| ಸರಸಿಜನಾಭ ಶ್ರೀ ಪುರಂದರವಿಟ್ಠಲನ| ನಿರುತ ನೆನೆಯುವಂತೆ ವರ ದಯಮಾಡೋ||                                                           —ಪುರಂದರದಾಸ

ಗಜವದನ ಬೇಡುವೆ Read More »

ಖೇಲತಿ ಮಮ ಹೃದಯೇ

ಖೇಲತಿ ಮಮ ಹೃದಯೇ ರಾಮಃ|| ಮೋಹಮಹಾರ್ಣವತಾರಕಕಾರೀ ರಾಗದ್ವೇಷಮುಖಾಸುರಮಾರೀ|| ಶಾಂತಿವಿದೇಹಸುತಾಸಹಚಾರೀ ದಹರಾಯೋಧ್ಯಾನಗರವಿಬಾರೀ|| ಪರಮಹಂಸಸಾಮ್ರಾಜ್ಯೋದ್ಧಾರೀ ಸತ್ಯಜ್ಞಾನಾನಂದಶರೀರೀ||                           —ಸದಾಶಿವ ಬ್ರಹ್ಮೇಂದ್ರ

ಖೇಲತಿ ಮಮ ಹೃದಯೇ Read More »

ಖೇಲತಿ ಬ್ರಹ್ಮಾಂಡೇ

ಖೇಲತಿ ಬ್ರಹ್ಮಾಂಡೇ ಭಗವಾನ್|| ಹಂಸಸೋಹಂ ಹಂಸಸೋಹಂ ಹಂಸಸೋಹಂ ಸೋಹಮಿತಿ|| ಪರಮಾತ್ಮಾಹಂ ಪರಿಪೂರ್ಣೋಹಂ ಬ್ರಹ್ಮೈವಾಹಮಹಂ ಬ್ರಹ್ಮೇತಿ|| ತ್ವಕ್ – ಚಕ್ಷುಃ- ಶ್ರುತಿ- ಜಿಹ್ವಾಘ್ರಾಣೇ ಪಂಚವಿಧಪ್ರಾಣೋಪಸ್ಥಾನೇ|| ಶಬ್ದಸ್ಪರ್ಶರಸಾದಿಕಮಾತ್ರೇ ಸಾತ್ತ್ವಿಕರಾಜಸತಾಮಸಮಿತ್ರೇ|| ಬುದ್ಧಿಮನಶ್ಚಿತ್ತಾಹಂಕಾರೇ ಭೂಜಲತೇಜೋಗಗನಸಮೀರೇ|| ಪರಮಹಂಸರೂಪೇಣ ವಿಹರ್ತಾ ಬ್ರಹ್ಮಾವಿಷ್ಣುರುದ್ರಾದಿಕ – ಕರ್ತಾ||                                      –ಸದಾಶಿವ ಬ್ರಹ್ಮೇಂದ್ರ

ಖೇಲತಿ ಬ್ರಹ್ಮಾಂಡೇ Read More »

ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ ದೀನ ಭಾರತೀಯ ಜನಕೆ| ಪ್ರಾಣ ಮಾನ ದಾನಗೈದ ಮಾನವೇಂದ್ರ ಸ್ವಾಮಿಯೇ|| ಸ್ವರಿಸಿ ನಿಮ್ಮ ಹಿರಿಯ ಪದವ ಧರಿಸಿ ಹೆಮ್ಮೆ ಧೈರ್ಯ ಬಲವ| ಸಿರಿಯ ಆತ್ಮ ನೀವು ಎನುತ ಮೊರೆದ ಅಭಯವಾಣಿಯೇ|| ತ್ಯಾಗ ಸೇವೆ ನಿಮ್ಮ ನಾಡ ಭಾಗ್ಯವೆಂದು ನಂಬಿ ನಡೆಯೆ| ಭೋಗ ಯೋಗ ಸಿದ್ಧವೆಂದ ಯೋಗಿವರನೆ ವಂದಿಪೆ||                           —-ಸ್ವಾಮಿ ಶಾಸ್ತ್ರಾನಂದ

ಕ್ಷೀಣಪ್ರಾಣ ಹೀನತ್ರಾಣ Read More »

ಕ್ಷಾಂತಿ ಸಹನೆಯ

ಕ್ಷಾಂತಿ ಸಹನೆಯ ಶಾಂತ ಶೀತಲ ಕಾಂತಿಯಿಂದಲಿ ಬೆಳಗುವಾ ಶಶಿ| ಅಂತರಂಗದ ಭಕುತಿ ಭೂಷಣ ಸಂತರಾಜ್ಯದ ಚಕ್ರವರ್ತಿ|| ಗುರುವೆ ನಿನ್ನಯ ಪರಮ ದೈವವು ಗುರುವಿನಾಣತಿ ಹಿರಿಯ ವೇದವು| ಗುರುವಿಗಾಳ್ತನ ಚರಮ ಸಾಧನ ಗುರುವಿಗೋಸುಗ ಧರಿತಪ್ರಾಣವು|| ಕಾಮಕಾಂಚನ-ತ್ಯಾಗಿ ತಾಪಸಿ ಪ್ರೇಮಪೂರಿತ ಕರ್ಮಯೋಗಿ| ರಾಮಕೃಷ್ಣರ ದಿವ್ಯದಾಸ ರಾಮಕೃಷ್ಣಾನಂದ ನಮಿಪೆವು||                                    –ಸ್ವಾಮಿ ಶಾಸ್ತ್ರಾನಂದ

ಕ್ಷಾಂತಿ ಸಹನೆಯ Read More »

ಕೊಟ್ಟವರು ಸರಿಯೆ

ಕೊಟ್ಟವರು ಸರಿಯೆ| ಕೊಡದೆ ಬಿಟ್ಟವರು ಸರಿಯೆ|| ಇಕ್ಕಿದವರಿಗುಂಟು| ಮದದಲಿ ಸೊಕ್ಕಿದರೇನುಂಟು| ರಕ್ಕಸಾಂತಕ ಲಕುಮಿಪತಿಯ ಮರೆ- ಪೊಕ್ಕವರಾದ ಶಿಷ್ಟಭಕುತರಿಗೆ|| ದೊರೆಯಾದರು ಸರಿಯೆ| ನಮಗೆ ತಿರುಕನಾದರು ಸರಿಯೆ| ಸರಸವಿರಸದಿಂ ನುಡಿದರೇನು ನರ- ಹರಿಪದಕಮಲವ ನಿರುತ ಭಜಿಪರಿಗೆ|| ಪುಟ್ಟಿಸಿದ ಪ್ರಭುವು| ನಮಗೆ ಹೊಟ್ಟೆಗೆ ಕೊಡದಿಹನೆ| ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ ಗಟ್ಟಿಯಾಗಿ ನಂಬಿದ ಭಕುತರಿಗೆ||                                           —-ಪುರಂದರದಾಸ

ಕೊಟ್ಟವರು ಸರಿಯೆ Read More »

ಕೆಳಗಿಳಿದು ಹರಿಯುವುದೆ

ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ ತಳೆಯುವುದು ಮಲಿನತೆಯ ಕೊಳೆನೆಲದಿ ಹರಿಯುತ್ತ| ಜಲನಿಧಿಯ ಸೇರಿ ತಾ ಬಲು ಕ್ಷಾರವಾಗುತಲಿ ಸಲಿಲಾರ್ಥಿ ಜನರಿಂಗೆ ಅನಲಸಮವಾಗುವುದು|| ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ ಸಗರಜಲವನು ಕೂಡ ನಗುತ ಕರದಿಂದೆತ್ತಿ| ವಿಗತದೋಷವ ಗೈದು ಮುಗಿಲರೂಪವ ಕೊಡುತ ಜಗಕೆಲ್ಲ ಸವಿತರುವ ಮಿಗೆ ಸೊಗದ ಮಳೆಕರೆವ|| ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು ನಲಿನಲಿದು ಹರಿಯುವುದು ಮಲಿನಮಯ ವಿಷಯದೆಡೆ| ಜಲಜಾಕ್ಷ ಕೃಪೆಯಿಂದ ಒಲಿದೆಮ್ಮ ಬಾಳ್ಗಳನು ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ||                                                   —ಸ್ವಾಮಿ ಶಾಸ್ತ್ರಾನಂದ

ಕೆಳಗಿಳಿದು ಹರಿಯುವುದೆ Read More »

ಕೃಷ್ಣನ ನೆನೆದರೆ

ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ| ಕೃಷ್ಣ ಎನಬಾರದೆ|| ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣ ಎನಬಾರದೆ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ| ಕೃಷ್ಣ ಎನಬಾರದೆ|| ಸುಳಿದಾಡುತ ಮನೆಯೊಳಗಾದರು ಒಮ್ಮೆ| ಕೃಷ್ಣ ಎನಬಾರದೆ|| ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ| ಕೃಷ್ಣ ಎನಬಾರದೆ|| ದಾರಿಯ ನಡೆವಾಗ ಭಾರವ ಹೊರುವಾಗ| ಕೃಷ್ಣ ಎನಬಾರದೆ|| ನೀಗದಾಲೋಚನೆ ರೋಗೋಪದ್ರದಲೊಮ್ಮೆ| ಕೃಷ್ಣ ಎನಬಾರದೆ|| ಪರಿಪರಿ ಕೆಲಸದೊಳೊಂದು ಕೆಲಸವೆಂದು| ಕೃಷ್ಣ ಎನಬಾರದೆ|| ದುರಿತ ರಾಶಿಗಳನು ತರಿದು ಬಿಸಾಡಲು| ಕೃಷ್ಣ ಎನಬಾರದೆ|| ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ| ಕೃಷ್ಣ ಎನಬಾರದೆ||

ಕೃಷ್ಣನ ನೆನೆದರೆ Read More »

ಕಾಲಭಯವಾರಿಣೀ

(ಏ ಮಾ) ಕಾಲಭಯವಾರಿಣೀ ಕಪಾಲಿನೀ ಕಾಲರೂಪಿಣೀ| ಶಂಭುಭಾಮಿನೀ ನಿಶುಂಭಘಾತನೀ ಸಮರವಾಸಿನೀ ಸುರವಂದಿನೀ|| ಪುರಹರಮನೋಮೋಹಕಾರಿಣೀ ಸತ್ಯವಾದಿನೀ| ತತ್ತ್ವದಾಯಿನೀ ತ್ರಾಸನಾಶಿನೀ ತ್ರಾಣಕಾರಿಣೀ ತಿಮಿರವರಣೀ|| ತ್ರಿಗುಣಧಾರಿಣೀ ತ್ರಿದೇವಜನನೀ ತ್ರಿಲೋಕೇಶೀ ತೇಜರೂಪಿಣೀ ಅನ್ನದಾಯಿನೀ ಅಮರಪಾಲಿನೀ ಅಸುರದಲನೀ ಆದಿಕಾರಿಣೀ| ಆಶುತೋಷ ಹೃದಿವಿಲಾಸಿನೀ ಆತ್ಮರೂಪಿಣೀ||

ಕಾಲಭಯವಾರಿಣೀ Read More »

ಕಂದಾ ಬೇಡವೋ

ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೊ|| ಕಂದಾ ಬೇಡವೊ ಮಣ್ಣು ತಿನ್ನಲಿಬೇಡ| ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ|| ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು| ಜೋಗಿ ಬರುತಾನಲ್ಲಿ ಅಂಜಿಸುವುದಕೀಗ|| ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ| ಬಾಯಲಿ ಇಟ್ಟನು ಬಾಲಕೃಷ್ಣಯ್ಯನು|| ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ| ಮುಟ್ಟಬೇಡೊ ಮಣ್ಣು ಬೆಣ್ಣೆ ತರುವೆನಯ್ಯ|| ಅಮ್ಮಯ್ಯ ಕೇಳೆಲೆ ಬಾಯಲಿ ಮಣ್ಣೆಲ್ಲ| ಗುಮ್ಮನು ಬರಬೇಡ ಸುಮ್ಮನೆ ಇರುತೇನೆ|| ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು| ಮಗುವಿನ ಬಾಯ

ಕಂದಾ ಬೇಡವೋ Read More »

ಕಂಡು ಕಂಡು ನೀ ಎನ್ನ

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ|| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ| ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ|| ಕ್ಷಣವೊಂದು ಯುಗವಾಗಿ ತೃಣಕಿತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು| ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ|| ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ| ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ||                                                           —ಪುರಂದರದಾಸ

ಕಂಡು ಕಂಡು ನೀ ಎನ್ನ Read More »

ಕಂಗಳಿವ್ಯಾತಕೋ

ಕಂಗಳಿವ್ಯಾತಕೋ ಕಾವೇರಿರಂಗನ ನೋಡದ|| ಜಗಂಗಳೊಳಗೆ ಮಂಗಳಮೂರುತಿ ರಂಗನ ಶ್ರೀಪಾದಂಗಳ ನೋಡದ|| ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು| ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆನಂದದಿಂದಲಿ ರಂಗನ ಕಾಣದ|| ಹರಿಪಾದೋದಕಸಮ ಕಾವೇರಿ ವಿರಜಾ ನದಿಲಿ ಸ್ನಾನವ ಮಾಡಿ| ಪರಮ ವೈಕುಂಠ ರಂಗ ಮಂದಿರ ಪರವಾಸುದೇವನ ನೋಡದ|| ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ| ತೇರನೇರಿ ಬೀದಿಲಿ ಬರುವ ರಂಗವಿಟ್ಠಲರಾಯನ ನೋಡದ||                                 —ಶ್ರೀಪಾದರಾಜಸ್ವಾಮಿ

ಕಂಗಳಿವ್ಯಾತಕೋ Read More »

ಕಳೆಯಬೇಕೆ ದಿನಗಳೆಲ್ಲ

ಕಳೆಯಬೇಕೆ ದಿನಗಳೆಲ್ಲ ವಿಫಲವಾಗಿ ಹೋಗಿಯೇ| ಹಗಲು ಇರುಳು ಆಶಾಪಥವ ಕಾಯುತಿಹೆನು ಸ್ವಾಮಿಯೇ|| ತ್ರಿಭುವನಗಳ ನಾಥ ನೀನು ಭಿಕಾರಿ ಅನಾಥ ನಾನು| ಕರೆಯಲೆಂತು ಮಮ ಹೃದಯದಿ ನೆಲೆಸು ಎಂದು ಹೀಗೆಯೇ|| ಹೃದಯ ಕುಟಿಯ ದ್ವಾರಗಳನು ಅನವರತವು ತೆರೆದಿರುವೆನು| ಕೃಪೆಯ ತೋರಿ ಬಂದು ನೀಡು ಶಾಂತಿಯನ್ನು ಸ್ವಾಮಿಯೇ||

ಕಳೆಯಬೇಕೆ ದಿನಗಳೆಲ್ಲ Read More »