ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ
ದೀನ ಭಾರತೀಯ ಜನಕೆ|
ಪ್ರಾಣ ಮಾನ ದಾನಗೈದ
ಮಾನವೇಂದ್ರ ಸ್ವಾಮಿಯೇ||

ಸ್ವರಿಸಿ ನಿಮ್ಮ ಹಿರಿಯ ಪದವ
ಧರಿಸಿ ಹೆಮ್ಮೆ ಧೈರ್ಯ ಬಲವ|
ಸಿರಿಯ ಆತ್ಮ ನೀವು ಎನುತ
ಮೊರೆದ ಅಭಯವಾಣಿಯೇ||

ತ್ಯಾಗ ಸೇವೆ ನಿಮ್ಮ ನಾಡ
ಭಾಗ್ಯವೆಂದು ನಂಬಿ ನಡೆಯೆ|
ಭೋಗ ಯೋಗ ಸಿದ್ಧವೆಂದ
ಯೋಗಿವರನೆ ವಂದಿಪೆ||

                          —-ಸ್ವಾಮಿ ಶಾಸ್ತ್ರಾನಂದ

Leave a Comment

Your email address will not be published. Required fields are marked *