admin

ಬೆಟ್ಟದಂಥ ದುರಿತವು

ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟಿರೆ ಕೃಷ್ಣನಾಮದ ಕಿಡಿಬಿದ್ದು ಬೆಂದುಹೋದುದ ಕಂಡೆನಯ್ಯ|| ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಕೃಷ್ಣ ಶಿಕ್ಷಿಸದೆ ಬಿಡನು ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು ಪುಂಡರೀಕಾಕ್ಷ ನಮ್ಮ ಪುರಂದರವಿಟ್ಠಲ||                                               —-ಪುರಂದರದಾಸ

ಬೆಟ್ಟದಂಥ ದುರಿತವು Read More »

ಬುದ್ಧ ಚಂದ್ರೋದಯದಿ

ಬುದ್ಧಚಂದ್ರೋದಯದಿ ಹಿಗ್ಗಿ ನಮ್ಮೆದೆ ಕಡಲು ಶಾಂತಿ ಶೀಕರವನಿದೋ ಚಿಲ್ಲುತಿಹುದು ಜಗವ ಗೆಲ್ಲುತಿಹುದು|| ನೂರು ಸಾಸಿರ ದಳದ ಬುದ್ಧಪದ್ಮವು ಅರಳೆ ಭಕುತಭೃಂಗವು ಬಂದು ಮುತ್ತುತಿಹುದು ಸುತ್ತ ಸುತ್ತುತಿಹುದು|| ಜ್ವಾಲೆ ಮೇಲುದ ಹೊದೆದು ಅಗ್ನಿದೇವನೆ ನಡೆದು ಕರ್ಮಕಾನನವನ್ನು ದಹಿಸಲೆಂದು ನಡೆದು ಬರುವನಿಂದು||                             —-ಪ್ರಭುಶಂಕರ

ಬುದ್ಧ ಚಂದ್ರೋದಯದಿ Read More »

ಬಿನ್ನಹಕೆ ಬಾಯಿಲ್ಲವಯ್ಯ

ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನೊಳಗೆ ಇರಲಾಗಿ|| ಶಿಶುಮೋಹ ಸತಿಮೋಹ ಜನನಿ-ಜನಕರ ಮೋಹ ರಸಿಕ ಭ್ರಾತರ ಮೋಹ ರಾಜಮೋಹ| ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ|| ಅನ್ನಮದ ಅರ್ಥಮದ ಅಖಿಲ ವೈಭವದ ಮದ ಮುನ್ನ ಪ್ರಾಯದ ಮದವು ಪೂಪಮದವು| ತನ್ನ ಸತ್ತ್ವದ ಮದ ಧಾತ್ರಿವಶದ ಮದ ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ|| ಇಷ್ಟು ದೊರೆಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರೆ ಮತ್ತಿಷ್ಟರಾಸೆ| ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಪುರಂದರವಿಟ್ಠಲ||                                          —-ಪುರಂದರದಾಸ

ಬಿನ್ನಹಕೆ ಬಾಯಿಲ್ಲವಯ್ಯ Read More »

ಬಿಡು ಬಿಡು ಬಾಹ್ಯದೊಳು

ಬಿಡು ಬಿಡು ಬಾಹ್ಯದೊಳು ಡಂಭವ ಮಾನಸದೊಳು ಎಡೆಬಿಡದಿರು ಶಂಭುವ ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ ಪಡೆದರೆ ಶಿವ ನಿನಗೊಲಿಯನು ಮರುಳೆ|| ಜನಕಂಜಿ ನಡೆಕೊಂಡರೇನುಂಟು ಲೋಕದಿ ಮನಕಂಜಿ ನಡೆಕೊಂಬುದೇ ಚಂದ| ಜನರೇನ ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ|| ಮನದಲಿ ಶಿವ ತಾ ಮನೆಮಾಡಿಕೊಂಡಿಹ ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ| ಮನಕಂಜಿ ನಡೆಯದೆ ಜನಕಂಜಿ ನಡೆದರೆ ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ||                                              —-ಸರ್ಪಭೂಷಣ ಶಿವಯೋಗಿ

ಬಿಡು ಬಿಡು ಬಾಹ್ಯದೊಳು Read More »

ಬಾ ಶ್ರೀಗುರುದೇವನೆ ಬಾ

ಬಾ ಶ್ರೀಗುರುದೇವನೆ ಬಾ| ಶ್ಯಾಮಲ ಕಾನನ ಶೃಂಗ ತರಂಗಿತ ಸಹ್ಯಾದ್ರಿಯ ಸುಂದರ ಮಂದಿರಕೆ ಚನ್ಮಯ ಮಮ ಹೃನ್ಮಂದಿರಕೆ|| ವಂಗಮಾತೆಯಲಿ ಜನ್ಮವನೆತ್ತಿ ದಿವ್ಯಸಮನ್ವಯ ಧರ್ಮವ ಬಿತ್ತಿ ಮತಭೇದದ ವಿಷವನು ಹೋಗಾಡಿ ಲೋಕದ ದೃಷ್ಟಿಗೆ ಸಮತೆಯ ನೀಡಿ ಕಾಪಾಡಿದ ಪಾವನ ಮೂರುತಿಯೇ|| ಹೇ ನವಯುಗದವತಾರ ಪೂರ್ವದಿಗಂತದಿ ಕಾಂತಿಯು ಮೂಡಿ ನಾಡಿನ ಕತ್ತಲೆಯನು ಹೋಗಾಡಿ ಮೈದೋರುವ ತೆರದಲಿ ನೀನಿಂದು ನಮ್ಮೀ ವನಗೃಹಕೈತಂದು ನಮ್ಮೆದೆಗತ್ತಲ ಪರಿಹರಿಸಿ ಸುಖಶಾಂತಿಯ ಕಾಂತಿಯ ಬರಿಸಿ ಕೃಪೆಗೈ, ಓ ಮಮ ದೀನಬಂಧು||                                        —-ಕುವೆಂಪು

ಬಾ ಶ್ರೀಗುರುದೇವನೆ ಬಾ Read More »

ಬಾರಯ್ಯ ರಂಗ

ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ|| ಇಂದೆನ್ನ ಪೂರ್ವಪಾಪಂಗಳ ಕಳೆದು ಮುಂದೆನ್ನ ಜನ್ಮ ಸಫಲವ ಗೈದು| ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು ಎಂದೆಂದಿಗಾನಂದ ಸುಖವನು ಸುರಿದು||                                                 —-ಪುರಂದರದಾಸ

ಬಾರಯ್ಯ ರಂಗ Read More »

ಬಂದು ನಿಂದಿಹ ನೋಡಿ

ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ|| ವಂದಿಸುತ ಮನದೊಳಗೆ ಇವನಡಿ ದ್ವಂದ್ವ ಭಜಿಸಲು ಬಂದ ಭಯಹರ ಇಂದುಧರ ಸುರವೃಂದನುತ ಗೋ- ವಿಂದ ಕರುಣಾಸಿಂಧು ಶ್ರೀಹರಿ|| ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರ ನಿಧಿ ಕೊರಳಲ್ಲಿ ಮುತ್ತಿನಲ್ಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ|| ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲ ಧಾರ ಭುಜ ಕೇಯೂರಭೂಷಿತ ಮಾರಪಿತ ಗುಣ ಮೋಹನಾಂಗ|| ಚಾರು ಪೀತಾಂಬರ ಕಟೀ ಕರ-

ಬಂದು ನಿಂದಿಹ ನೋಡಿ Read More »

ಬಂದಿಹೆ ಜನನಿ ಮರಳಿ ನೀನು

ಬಂದಿಹೆ ಜನನಿ ಮರಳಿ ನೀನು ಧರೆಯ ಪಾಪದ ಭಾರವ ಕಳೆಯೆ| ದಗ್ಧ ಹೃದಯದ ಜ್ವಾಲೆಯನಾರಿಸೆ ದುಃಖಿತರೆಲ್ಲರ ಕಣ್ಣೀರೊರಸೆ|| ಯುಗಯುಗದಲೂ ನೀ ಬರುವೆ ಧರೆಗೆ ಯಾತನೆಗಳನು ಎನಿತೋ ಸಹಿಪೆ| ಕಲ್ಲಾಗಿಹುದು ಹೃದಯವೆಮ್ಮದು ಮರಳಿ ಮರಳಿ ಮರೆವೆವು ಧರ್ಮವ|| ಸಹನ-ಮೂರುತಿ ಸೀತೆಯ ರೂಪದಿ ಬೋಧಿಸಿ ಅರುಹಿದೆ ಅಚಲ ಭಕ್ತಿಯ| ರಾಧೆಯ ರೂಪದಿ ದರುಶನವಿತ್ತು ಪ್ರೇಮದ ಮಹಿಮೆಯ ಪ್ರಚಾರಗೈದೆ|| ರಾಮಕೃಷ್ಣಲೀಲೆ ಪೂರಣಗೈಯಲು ಎಲ್ಲರ ತಾಯಿಯು ಆಗಿ ನೀ ಬಂದಿಹೆ| ಪಾಪಿ ತಾಪಿಗಳ ಅಪಾರ ಶರಣು ಸರ್ವರ ಆಶ್ರಯ, ಅರ್ಹರೇ ಎಲ್ಲ! ||

ಬಂದಿಹೆ ಜನನಿ ಮರಳಿ ನೀನು Read More »

ಬಲು ಮಧುರವೊ

ಬಲು ಮಧುರವೊ ನಿನ್ನ ಹೆಸರು ಕಿವಿಗೆ ಸುಧೆಯ ಕರೆವುದು| ದೀನಶರಣ ಪ್ರಾಣರಮಣ ಅಮೃತ ಭವನ ಧನವಿದು|| ನಿನ್ನ ಹೆಸರು ಕೀರ್ತಿಸಿದರೆ ನಾವು ಅಮರರಪ್ಪೆವೋ| ಚಿಂತೆಗಡಲು ನಿಮಿಷದಲ್ಲಿ ಬತ್ತುತ ಬಯಲಪ್ಪುದೋ|| ಹೃದಯದಲ್ಲಿ ನಿನ್ನ ಮಧುರ ಗಾಯನವನೆ ಗೈವೆವು| ಹೃದಯನಾಥ ಚಿದಾನಂದ ನಿರುತ ನಿನ್ನ ನೆನೆವೆವು||                                —-ವಚನವೇದ

ಬಲು ಮಧುರವೊ Read More »

ಬಲಿಯ ಮನೆಗೆ

ಬಲಿಯ ಮನೆಗೆ ವಾಮನ ಬಂದಂತೆ ಭಗೀರಥಗೆ ಶ್ರೀಗಂಗೆ ಬಂದಂತೆ ಮುಚುಕುಂದಗೆ ಮುಕುಂದ ಬಂದಂತೆ ಗೋಪಿಯರಿಗೆ ಗೋವಿಂದ ಬಂದಂತೆ ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ ವಿಭೀಷಣನೆಡೆಗೆ ಶ್ರೀರಾಮ ಬಂದಂತೆ ನಿನ್ನ ನಾಮವು ನನ್ನ ನಾಲಿಗೆಗೆ ಬರಲಿ ಬರಲಿ ಬರಲಿ ಶ್ರೀಪುರಂದರವಿಟ್ಠಲ||                                      —-ಪುರಂದರದಾಸ

ಬಲಿಯ ಮನೆಗೆ Read More »

ಬರಿದೆ ಹೋಯಿತು

ಬರಿದೆ ಹೋಯಿತು ಹೋಯಿತು ಹೊತ್ತು| ನರಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ|| ಆಸೆ ಎಂಬುದು ಎನ್ನ ಕ್ಲೇಶಪಡಿಸುತಿದೆ ಗಾಸಿಯಾದೆನೊ ಹರಿ ನಾರಾಯಣ| ವಾಸುದೇವನೆ ನಿನ್ನ ಧ್ಯಾನವ ಮಾಡದೆ ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ|| ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ ಮರುಳುತನದಲಿ ಮತಿಹೀನನಾದೆ| ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ ಮರೆಯದೆ ಸಲಹಯ್ಯ ಪುರಂದರವಿಟ್ಠಲ||                                             —-ಪುರಂದರದಾಸ

ಬರಿದೆ ಹೋಯಿತು Read More »

ಬರಿದೆ ಕರೆಯೆ ನೀ ಬಾರದಿರುವೆ

ಬರಿದೆ ಕರೆಯೆ ನೀ ಬಾರದಿರುವೆ ಪರಮ ಪ್ರೇಮದಿಂ ಕರೆದರೆ ಬರುವೆ|| ತಿಳಿತಿಳಿದು ನಿನ್ನ ಕರೆಯದೆ ಉಳಿದೆ ಇಳೆಯ ಆಟದಲಿ ಮೈಮರೆತೆ| ಕಳೆಯೈ ಮೋಹದ ಆವರಣವ ನೀ ಬೆಳಕ ತೋರೊ ಹರಿ ಕರುಣಾಜಲಧೇ|| ಕನಕಹರಿಣವೀ ಭುವನ ವಿರಚನೆ ಕನಸು ಸಾಕೋ ಕೃಷ್ಣ ಕೈಮುಗಿವೆ| ದಿನಕರನುದಯಕೆ ವನಜವಿಕಸನ ಮನವರಳಿಸೊ ಹರಿ ಪರಮಗುಣನಿಧೇ||

ಬರಿದೆ ಕರೆಯೆ ನೀ ಬಾರದಿರುವೆ Read More »

ಬಡವರೊಳಗೆ ಎನಗಿಂತ

ಬಡವರೊಳಗೆ ಎನಗಿಂತ ಅನ್ಯರಿಲ್ಲ| ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ|| ದೃಢಭಕ್ತಿ ಎನಗೆ ನಿನ್ನಲಿ ನಿಲಿಸಿ| ಬಿಡದೆ ಸಲಹಯ್ಯ ಪುರಂದರವಿಟ್ಠಲ||                                        —-ಪುರಂದರದಾಸ

ಬಡವರೊಳಗೆ ಎನಗಿಂತ Read More »

ಪ್ರಭುವೆನ್ನ ಅವಗುಣ ಮನದಿ

ಪ್ರಭುವೆನ್ನ ಅವಗುಣ ಮನದಿ ಧರಿಸದಿರು| ವಿಭುವೇ ಸಮದರುಶನ ತವ ಸುಗುಣವು| ಅಭಯವ ನೀಡುತ ಕೃಪೆಯಿಂ ಪಾಲಿಸು|| ಲೋಹದ ವಿಗ್ರಹ ಪೂಜೆಯಲಿರ್ಪುದು ಲೋಹವದಲ್ತೆ ವ್ಯಾಧನ ಖಡ್ಗವು| ಪರುಸಮಣಿಯದೋ ಭೇದವ ಕಾಣದು ಎರಡನೂ ಸೋಂಕಲು ಕಾಂಚನವಾದುವು|| ನದಿಯೆಂದೆಂಬರು ನೀರೊಂದ ಬದಿಯೆಂದೆಂಬಂರು ಮತ್ತೊಂದ| ಗಂಗೆಯ ಸೇರಲು ಭರದಿಂದ ಮಂಗಳವಾಗವೆ ಅದರಿಂದ|| ಬೇರೆಯೆ ಜೀವನು, ಬೇರೆಯೆ ಬ್ರಹ್ಮವು ಸೂರದಾಸನದ ಒಪ್ಪುವುದಿಲ್ಲವು| ಭೇದಕೆ ಮೂಲವು ಅಜ್ಞಾನವದು ಭೇದವ ಕಾಣನು ಜ್ಞಾನಿಯು ಎಂದೂ||                                     —–ಸ್ವಾಮಿ ಹರ್ಷಾನಂದ

ಪ್ರಭುವೆನ್ನ ಅವಗುಣ ಮನದಿ Read More »

ಪಿಬ ರೇ ರಾಮರಸಂ

ಪಿಬ ರೇ ರಾಮರಸಂ ರಸನೇ| ಪಿಬ ರೇ ರಾಮರಸಂ|| ದೂರೀಕೃತ ಪಾತಕ ಸಂಸರ್ಗಂ| ಪೂರಿತ ನಾನಾ ವಿಧ ಫಲವರ್ಗಂ|| ಜನನ ಮರಣ ಭಯ ಶೋಕವಿದೂರಂ| ಸಕಲಶಾಸ್ತ್ರ ನಿಗಮಾಗಮ ಸಾರಂ|| ಪರಿಪಾಲಿತ ಸರಸಿಜ ಗರ್ಭಾಂಡಂ| ಪರಮ ಪವಿತ್ರೀಕೃತ ಪಾಷಂಡಂ|| ಶುದ್ಧ ಪರಮಹಂಸಾಶ್ರಮ ಗೀತಂ| ಶುಕ ಶೌನಕ ಕೌಶಿಕ ಮುಖ ಪೀತಂ||                                      —-ಸದಾಶಿವ ಬ್ರಹ್ಮೇಂದ್ರ

ಪಿಬ ರೇ ರಾಮರಸಂ Read More »

ಪಾಹಿ ಮದನಗೋಪಾಲ

ಪಾಹಿ ಮದನಗೋಪಾಲ| ಮುಕುಂದ ಪಾಲಿತ ಮುಚುಕುಂದ|| ನಂದನಂದನ ನಂದಿತ ಮುನಿಜನ| ಮಂದಹಾಸವದನ— ಹರೇ ಕೃಷ್ಣ|| ದಂಡಿತರಿಪುಜನ ಅಂಡಜವಾಹನ| ಪುಂಡರೀಕನಯನ—ಹರೇ ಕೃಷ್ಣ|| ಪತಿತಪಾವನ ನತಜನಾವನ| ಸತತಾನಂದಘನ—ಹರೇ ಕೃಷ್ಣ|| ಇಂದಿರಾರಮಣ ಮಂದರಭರಣ| ವಂದಿತದೇವಗಣ—ಹರೇ ಕೃಷ್ಣ|| ರತಿಪತಿಜನಕ ಶ್ರಿತಸಂರಕ್ಷಕ| ನುತಯದುಕುಲತಿಲಕ—ಹರೇ ಕೃಷ್ಣ|| ವಿಧಿನುತಶೀಲ ವಿಜಯಗೋಪಾಲ| ವೇದನಿಕರಪಾಲ—ಹರೇ ಕೃಷ್ಣ||                                        —-ವಿಜಯದಾಸ

ಪಾಹಿ ಮದನಗೋಪಾಲ Read More »

ಪಶೂನಾಂ ಪತಿಂ

ಪಶೂನಾಂ ಪತಿಂ ಪಾಪನಾಶಂ ಪರೇಶಂ ಗಜೇಂದ್ರಸ್ಯ ಕೃತ್ತಿ ವಸಾನಂ ವರೇಣ್ಯಮ್| ಜಟಾಜೂಟಮಧ್ಯೇ ಸ್ಪುರದ್ಗಾಂಗವಾರಿಂ ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್|| ಮಹೇಶಂ ಸುರೇಶಂ ಸುರಾರಾತಿನಾಶಂ ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಮ್| ವಿರೂಪಾಕ್ಷಮಿಂದ್ವರ್ಕ-ವಹ್ನಿ-ತ್ರಿನೇತ್ರಂ ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್|| ಗಿರೀಶಂ ಗಣೇಶಂ ಗಲೇ ನೀಲವರ್ಣಂ ಗವೇಂದ್ರಾದಿರೂಢಂ ಗುಣಾತೀತರೂಪಮ್| ಭವಂ ಭಾಸ್ವರಂ ಭಸ್ಮನಾ ಭೂಷಿತಾಂಗಂ ಭವಾನೀಕಲತ್ರಂ ಭಜೇ ಪಂಚವಕ್ತ್ರಮ್|| ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ ಮಹೇಶಾನ ಶೂಲಿನ್ ಜಟಾಜೂಟಧಾರಿನ್| ತ್ವಮೇಕೋ ಜಗದ್ವ್ಯಾಪಕೋ ವಿಶ್ವರೂಪಃ ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ|| ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ||

ಪಶೂನಾಂ ಪತಿಂ Read More »

ಪರಮ ಸತ್ಯನೆ ಪುರುಷ ಗುಣಮಣಿ

ಪರಮ ಸತ್ಯನೆ ಪುರುಷ ಗುಣಮಣಿ ಕಲಿಯ ಕಳೆಯುವ ಚರಣ ನಿನ್ನಯ ನಿರುತ ಭಜಿಸದ ಕೃಪಣ ಎನಗೂ ದೀನಬಂಧುವೆ ನೀನೆ ಶರಣು|| ಭಕುತಿ ಭಜನೆ ತಪಗಳಿಂದಲೆ ಮುಕುತಿ ಗಳಿಸುವೆ ಎಂದು ಅರಿತಿಹೆ| ಯುಕುತಿ ನುಡಿದರು ನಂಬಿ ನಡೆಯದ ಶಕುತಿಹೀನಗೆ ನೀನೆ ಶರಣು|| ರಾಮಕೃಷ್ಣ! ನಿನ್ನ ಚರಣ ರಾಗತೃಷ್ಣಾ-ಶಮನಕರಣ| ಸತ್ಯಪಥನೇ ಮೃತ್ಯುಹರನೇ ದೀನಬಂಧುವೆ ನೀನೆ ಶರಣು|| ನಿನ್ನ ಪಾವನನಾಮ ಶುಭಕರ ದುರಿತವಾದಕ ಸುಕೃತಿಕಾರಕ| ಸ್ಥಾನವಿಲ್ಲದ ದೀನ ಎನಗೆ ಮಾನವಾಶ್ರಯ ನೀನೆ ಶರಣು|| (ಶ್ರೀರಾಮಕೃಷ್ಣ ಸ್ತೋತ್ರದ ಭಾವಾನುವಾದ)                                                 —ಸ್ವಾಮಿ ಶಾಸ್ತ್ರಾನಂದ

ಪರಮ ಸತ್ಯನೆ ಪುರುಷ ಗುಣಮಣಿ Read More »

ಪರಚಿಂತೆ ಎಮಗೆ ಏಕೆ

ಪರಚಿಂತೆ ಎಮಗೆ ಏಕೆ ಅಯ್ಯಾ ಎಮ್ಮಯ ಚಂತೆ ಎಮಗೆ ಸಾಲದೇ|| ಕೂಡಲಸಂಗನು ಒಲಿವನೊ ಒಲೆಯನೊ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು||                                                                       —-ಬಸವಣ್ಣ

ಪರಚಿಂತೆ ಎಮಗೆ ಏಕೆ Read More »

ನೋಡಿರಣ್ಣ ನೀವೆಲ್ಲ ಬಂದು

ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ| ತ್ಯಾಗ-ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ|| ಗಂಗೆಯ ದಡದಲಿ ಹೊರಳುತ ‘ತಾಯೀ’ ಎನ್ನುತ ಕೂಗುವನು| ‘ಕಾಣದೆ ನಿನ್ನನು ದಿನಗಳುರುಳುತಿವೆ’ ಎನ್ನುತ ಮರುಗುವನು|| ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ| ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ|| ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು| ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ನನುಸಿರು|| ಪಂಡಿತ-ಪಾಮರ-ಬಡವನು-ಬಲ್ಲಿದ ಭೇದ ತೋರಲಿಲ್ಲ| ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ|| ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು| ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು|| ಜಗದ ಜನಗಳಿಗೆ ಕೃಪೆಯನು

ನೋಡಿರಣ್ಣ ನೀವೆಲ್ಲ ಬಂದು Read More »

ನುಡಿ ಎಲೆ ಮನವೇ

ನುಡಿ ಎಲೆ ಮನವೇ, ನಿಜವನರಿತು ನುಡಿ|| ಧನದಿಂ ಸುಖವೋ ಧಾನ್ಯದಿ ಸುಖವೋ ಜಾನಕೀನಾಥನ ನಾಮದಿ ಸುಖವೋ|| ಷಡ್ರಸಭೋಜನ ಸುರುಚಿಯು ಸುಖವೋ ಷಡ್ರಿಪುನಾಶದ ಶಾಂತಿಯು ಸುಖವೋ|| ಭ್ರಮೆಯಿಂ ವಿಷಯದಿ ಮಜ್ಜನ ಸುಖವೋ ರಾಮತೀರ್ಥದಲಿ ಸ್ನಾನವು ಸುಖವೋ|| ಮಮತಾಬಂಧಿತ ನರಸ್ತುತಿ ಸುಖವೋ ಸುಮತಿ ಭಕುತನ ಶಿವನುತಿ ಸುಖವೋ||                                         —-ಸ್ವಾಮಿ ಹರ್ಷಾನಂದ

ನುಡಿ ಎಲೆ ಮನವೇ Read More »

ನೀ ಮಾಯೆಯೊಳಗೋ

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ|| ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಬಯಲು ಆಲಯವೆರಡೂ ನಯನದೊಳಗೋ| ನಯನ ಬುದ್ಧಿಯ ಒಳಗೋ ಬುದ್ಧಿ ನಯನದ ಒಳಗೋ ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ|| ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ ಸವಿಯು ಸಕ್ಕರೆಯೆರಡೂ ಜಿಹ್ವೆಯೊಳಗೋ| ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ ಜಿಹ್ವೆ ಮನಸುಗಳೆರಡೂ ನಿನ್ನೊಳಗೋ ಹರಿಯೆ|| ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ ಕುಸುಮಗಂಧಗಳೆರಡೂ ಘ್ರಾಣದೊಳಗೋ| ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ||                                                     —-ಕನಕದಾಸ

ನೀ ಮಾಯೆಯೊಳಗೋ Read More »

ನೀನ್ಯಾಕೋ ನಿನ್ನ

ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ ನಿನ್ನ ನಾಮದ ಬಲವೊಂದಿದ್ದರೆ ಸಾಕೋ|| ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೋ ನಾಮವೆ ಕಾಯ್ತೋ|| ಯಮನ ದೂತರು ಬಂದು ಅಜಮಿಳನೆಳೆವಾಗ ನಾರಾಯಣ ಎಂಬೋ ನಾಮವೆ ಕಾಯ್ತೋ|| ಕರಿ ಮಕರಗೆ ಸಿಲುಕಿ ಮೊರೆಯಿಡುತಿರುವಾಗ ಆದಿಮೂಲ ಎಂಬೋ ನಾಮವೆ ಕಾಯ್ತೋ|| ಪ್ರಹ್ಲಾದನ ಪಿತ ಬಾಧಿಸುತಿರುವಾಗ ನಾರಸಿಂಹ ಎಂಬೋ ನಾಮವೆ ಕಾಯ್ತೋ|| ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೋ|| ನಿನ್ನ ನಾಮಕೆ ಸರಿ ಕಾಣೆನೋ ಜಗದಲಿ

ನೀನ್ಯಾಕೋ ನಿನ್ನ Read More »