ನೀನ್ಯಾಕೋ ನಿನ್ನ

ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ||

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬೋ ನಾಮವೆ ಕಾಯ್ತೋ||

ಯಮನ ದೂತರು ಬಂದು ಅಜಮಿಳನೆಳೆವಾಗ
ನಾರಾಯಣ ಎಂಬೋ ನಾಮವೆ ಕಾಯ್ತೋ||

ಕರಿ ಮಕರಗೆ ಸಿಲುಕಿ ಮೊರೆಯಿಡುತಿರುವಾಗ
ಆದಿಮೂಲ ಎಂಬೋ ನಾಮವೆ ಕಾಯ್ತೋ||

ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹ ಎಂಬೋ ನಾಮವೆ ಕಾಯ್ತೋ||

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೋ||

ನಿನ್ನ ನಾಮಕೆ ಸರಿ ಕಾಣೆನೋ ಜಗದಲಿ
ಘನ್ನ ಮಹಿಮ ಶ್ರೀ ಪುರಂದರ ವಿಟ್ಠಲ||

                                              —-ಪುರಂದರದಾಸ

Leave a Comment

Your email address will not be published. Required fields are marked *