ಕ್ಷಾಂತಿ ಸಹನೆಯ ಶಾಂತ ಶೀತಲ
ಕಾಂತಿಯಿಂದಲಿ ಬೆಳಗುವಾ ಶಶಿ|
ಅಂತರಂಗದ ಭಕುತಿ ಭೂಷಣ
ಸಂತರಾಜ್ಯದ ಚಕ್ರವರ್ತಿ||
ಗುರುವೆ ನಿನ್ನಯ ಪರಮ ದೈವವು
ಗುರುವಿನಾಣತಿ ಹಿರಿಯ ವೇದವು|
ಗುರುವಿಗಾಳ್ತನ ಚರಮ ಸಾಧನ
ಗುರುವಿಗೋಸುಗ ಧರಿತಪ್ರಾಣವು||
ಕಾಮಕಾಂಚನ-ತ್ಯಾಗಿ ತಾಪಸಿ
ಪ್ರೇಮಪೂರಿತ ಕರ್ಮಯೋಗಿ|
ರಾಮಕೃಷ್ಣರ ದಿವ್ಯದಾಸ
ರಾಮಕೃಷ್ಣಾನಂದ ನಮಿಪೆವು||
–ಸ್ವಾಮಿ ಶಾಸ್ತ್ರಾನಂದ