ಅಂತರಂಗದಲಿ ಶ್ರೀಘನಶ್ಯಾಮೆಯ
ಆದರಿಸೆಲೆ ಮನವೇ|
ನಮ್ಮಿಬ್ಬರ ಹೊರತಾರೂ ಅರಿಯದ
ರೀತಿಯೊಳವಳೆಡೆ ಸಾಗುವವೇ || ಅಂತರಂಗ…..
ಓ ಮನವೇ ನಿನ್ನ ಆಸೆ ಸಾಸಿರವ
ಆಚೆ ನಿಲಿಸಿ ಬಾರೋ | ಬಾಗಿಲಾಚೆ ನಿಲಿಸಿ ಬಾರೋ|
ಏಕಾಂತದಿ ನೀನಾಕೆಯ ಕಾಣಲು
“ಓ ತಾಯಿ” ಎಂದೆನ್ನುವ ರಸನೆಯ
ಮಾತ್ರ ಕರೆದು ತಾರೋ || ಅಂತರಂಗ….
ಕುಟಿಲ ಕುಮಂತ್ರವ ದೂರ ತಳ್ಳಿ ನೀ
ಬಾ ನಮ್ಮನು ನೋಡು |
ಜ್ಞಾನನಯನವನು ಪಹರೆ ನಿಲಿಸಿ ನೀ
ಒಳಗೆ ಬಂದು ಕೂಡೋ||
——-ವಚನವೇದ