ತುಂಬಿದುದು ತುಳುಕದು ನೋಡಾ.

ತುಂಬಿದುದು ತುಳುಕದು ನೋಡಾ.
ನಂಬಿದುದು ಸಂದೇಹಿಸದು ನೋಡಾ.
ಒಲಿದುದು ಓಸರಿಸದು ನೋಡಾ.
ನೆರೆಯರಿದುದು ಮರೆಯದು ನೋಡಾ.
ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದ
ಶರಣಂಗೆ ನಿಸ್ಸೀಮಸುಖವಯ್ಯಾ.

Leave a Comment

Your email address will not be published. Required fields are marked *