ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ
ಇದ್ದೀಯಾ ಶ್ರೀಹರಿ ನೀನು – ವೃದ್ಧಿಸಿದ್ಧಿಯ ನಡುವೆ ಪದುಮನಾಭನು – ಅಭಿ-ವೃದ್ಧಿಯಾಗಲು ತಡವೇನು – ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ – ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ ||1||
ನಂಬಿದ್ದ ಸುಜನರು ಹರಿಯೆ – ಕೆಟ್ಟದೆಂಬ ಸುದ್ದಿಯ ನಾನರಿಯೆ – ಸತ್ಕು-ಟುಂಬ ಎಂಬುದು ಹೊಸಪರಿಯೆ – ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ||2||
ಶೇಷಗಿರೀಶ ಮದ್ಬಂಧು – ಆದಿಕೇಶವ ಗುರುವೆ ನೀನೆಂದು – ಕೃಷ್ಣಕ್ಲೇಶ ಬಿನ್ನೈಸುವೆ ಇಂದು – ಅಹಆಸೆ ಬಿಟ್ಟು ಪೂಜಿಸುವ ಭಕ್ತರದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ||3||