ವಿಜಯದಾಸ

ಶಂಭೋ ಸ್ವಯಂಭು ಸಂಭವ

ಶಂಭೋ ಸ್ವಯಂಭು ಸಂಭವ-ನಂಬಿದೆ ಕಾಯೊ ಜಂಭಾರಿಸುತ ಅಭವ ಅಂಬರ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ ||1|| ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ […]

ಶಂಭೋ ಸ್ವಯಂಭು ಸಂಭವ Read More »

ವ್ಯಾಸಾ ಬದರಿ ನಿವಾಸಾ

ವ್ಯಾಸಾ ಬದರಿ ನಿವಾಸಾ | ಎನ್ನಯ | ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ | ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು | ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ ||1|| ಲೋಕ ವಿಲಕ್ಷಣ

ವ್ಯಾಸಾ ಬದರಿ ನಿವಾಸಾ Read More »

ವ್ಯಾಸರಾಯರ ಸ್ಮರಿಸಿರೋ

ವ್ಯಾಸರಾಯರ ಸ್ಮರಿಸಿರೋ ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಅತಿವೇಗದಿಂದ ಪಾರಂಗತನಾಗಿ ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ ಅಚ್ಯುತನ ವರದಿಂದ ಬಂದು ||1|| ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ

ವ್ಯಾಸರಾಯರ ಸ್ಮರಿಸಿರೋ Read More »

ವ್ಯಾಸರಾಯರ ಸೇವೆ ಲೇಸಾಗಿ ಮಾಡಲು

ವ್ಯಾಸರಾಯರ ಸೇವೆ ಲೇಸಾಗಿ ಮಾಡಲು ದಾಸನೆಂದೆನಿಸಿಕೊಂಬ ಸಾಸಿರನಾಮದ ವಾಸುದೇವನ ಭಕ್ತ ಕಾಷಾಯ ವಸ್ತ್ರಧರ ತಾ ಸಹಗಮನದಿ ಪತಿಸಹ ಪೋಗುವ ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ ಮೋಸ ಬರುವುದೆಂದಾಲೋಚನೆ ಇಲ್ಲದೆ ಆ ಸತಿ ವಂದಿಸೆ ಸುಮಂಗಲ್ಯವನಿತ್ತು ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ ಯಾ ಸತಿಪತಿಯ ಪ್ರಾಣವನುಳಿಹಿ ರನ್ನ ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು ಆ

ವ್ಯಾಸರಾಯರ ಸೇವೆ ಲೇಸಾಗಿ ಮಾಡಲು Read More »

ವ್ಯಾಪಾರ ಉದ್ಯೋಗವನು ಮಾಡುವೆ

ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ ||1|| ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ ||2|| ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ

ವ್ಯಾಪಾರ ಉದ್ಯೋಗವನು ಮಾಡುವೆ Read More »

ವ್ಯರ್ಥ ಕೆಟ್ಟರು ಯಿಂದು ನರಮನುಜರು

ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ನಿದ್ರೆಯೊಳಗಿದ್ದು ಪ್ರಪಂಚ ಮರುಳಾಟ ಪರ ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ ಮದ್ದು ತಿಂದಂತೆ ಇದ್ದಾದರು ಉದಯದಲಿ ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ ||1|| ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು ಬರಿದೆ ಬಾರದೆ ಬಿಂದು ಜಲ ತಂದು ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ ಯರದು ಯಮಬಾಧೆ ಕಳೆಯಲರಿಯದ ಮಂಕು ||2|| ಅಡವಿಯಿಂದಲಿ ಒಂದು ತುಳಸಿದಳವನೆ ತಂದು ತಡಿಯದಲೆ ತಾವರೆದಳನಯನನ ಅಡಿಗಡಿಗೆ ಏರಿಸಿ ಕರವ ಮುಗಿದು ಮುಕುತಿ

ವ್ಯರ್ಥ ಕೆಟ್ಟರು ಯಿಂದು ನರಮನುಜರು Read More »

ವೇಣು ಗೋಪಾಲವಿಠ್ಠಲರೇಯ

ವೇಣು ಗೋಪಾಲವಿಠ್ಠಲರೇಯ ನಿನ್ನ ಪದ ರೇಣು ನಂಬಿದ ಮಾನವ ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ e್ಞÁನ ಭಕುತಿಯ ಕೊಡುವುದು ಸ್ವಾಮಿ ಪರದೈವ ನೀನೆಂದು ಮೂಢಮತಿಯಾದವನು | ಪರಿಪೂರ್ಣವಾಗಿ ನಿರುತ | ನೆರೆ ನಂಬಿದೆನು ನಾನಾ ಪ್ರಕಾರದಲಿ ಸ್ಮರಣೆ ಮಾಡುತ ಮನದಲಿ | ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ ಸ್ತರ ಮಾಡು ಇವನ ಕೀರ್ತಿ ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ ಕರಪಿಡಿದು ಪಾಲಿಸುವುದು ಸ್ವಾಮಿ||1|| ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ ಸಾಕುವುದು ಸಾಕಾರನೆ ನೂಕು ದುರಳದಿಂದ ಬಂದ ವಿಪತ್ತುಗಳ ತಾಕಗೊಡದಂತೆ

ವೇಣು ಗೋಪಾಲವಿಠ್ಠಲರೇಯ Read More »

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ಕಾಣುತ ಭಕುತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1|| ಶರಣಾಗತರನು ಪೊರೆವುದು ಇದು ನಿನ್ನ ಬಿರುದು ಕರುಣವಿಂದೆನ್ನ ಕರೆವುದು ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ ಸ್ಮರನಪಿತನ ಮುರಹರನ ಕರುಣದಿ ||2|| ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ ಕುಜನರ ಸಂಗದೂರಳೆ

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ Read More »

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಂಕಜಾತ್ಮಕ ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಶೌರ್ಯದಲಿ ತತ್ಸರ್ವ ಜನ್ಮದಲಿ ನಾನಾಶ (ಕ) ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ ||1|| ಕ್ಷಿತಿಯೊಳಗೆ

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ Read More »

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ | ಕಿನ್ನೇಶ ಮುನಿದು ಬಂದೇನು ಮಾಡುವನು ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು | ಅತ್ತವಿತ್ತ ಊರು ಸುತ್ತುತಿರಲು | ಸುತ್ತಯಿದ್ದ ಬಂಧು ಬಳಗದವರು ಕೂಡಿ | ಮುತ್ತಿಕೊಂಡು ಅವಳನೇನು ಮಾಡುವರು ||1|| ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ ತಿದ್ದುವಾ ಸರಿಪಾಲು ಲಂಚಕೊಟ್ಟು | ಇದ್ದವನು ಹಗಲಿರಳು ಕದ್ದರೆ ಆ ಊರು | ಎದ್ದು ಹಿಡಿದವರೆಲ್ಲ ಏನು ಮಾಡುವರು||2|| ತೊತ್ತಿನ ಮೇಲೆ ಒಡೆಯನ ದಯವಿರೆ | ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ | ಕರ್ತು

ವೆಂಕಟೇಶನೆ ಬಲ್ಲ ಪರಮ ಪಾತಕೀಯಾ Read More »

ವೆಂಕಟೇಶನ ನಂಬಿರೊ ನೀವೆಲ್ಲರೂ

ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ || ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ | ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಗುಣ ಒಂದು ನೋಡಿದಿಯಾ ಅಜಮಿಳ | ಗುಣವೇನು ಮಾಡಿದನು | ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ | ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ ||1|| ಕುಲ ಒಂದು ನೋಡಿದಿಯಾ | ವಿದುರ ತಾನು ಕುಲದಲ್ಯಾತರವನು | ಕುಲಶಿಖಾಮಣಿ | ನಿಳಗೆ ಪೋಗಿ

ವೆಂಕಟೇಶನ ನಂಬಿರೊ ನೀವೆಲ್ಲರೂ Read More »

ವೆಂಕಟೇಶ ಮಂತ್ರ ಒಂದೇ

ವೆಂಕಟೇಶ ಮಂತ್ರ ಒಂದೇ ಸಂಕಟ ಪರಿಹರಿಸಿ ಸಂಪದವಿಯ ಕೊಡುವ ಬಲನ ಭೂಸುರಹತ ಪೋಗಾಡಿದ ಮಂತ್ರ | ಬಲಿಯ ಕನಕ ಸ್ತೇಯ ಕಳದ ಮಂತ್ರಾ || ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ ||1|| ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ | ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ | ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ||2|| ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ |

ವೆಂಕಟೇಶ ಮಂತ್ರ ಒಂದೇ Read More »

ವೆಂಕಟೇಶ ಜಗದೀಶ ವೆಂಕಟೇಶ

ವೆಂಕಟೇಶ ಜಗದೀಶ | ವೆಂಕಟೇಶ || ವೆಂಕಟೇಶ ಜಗದೀಶ ಸದರುಶನ | ಶಂಖಪಾಣಿ ಅಕಳಂಕ ಚರಿತಾ ನಭಾಸ್ಥಾನನರಸಿಜನಾಭ ಭಜಕರ ಸು | ಲಭಾ ವಸುಧಾ ಶ್ರೀ ದುರ್ಗಾವ | ಲ್ಲಭಾ ಭಸುಮಾಸುರನ ಕೊಂದು ಭಸ್ಮ ಭೂಷಣನ ಪಾಲಿಸಿದ ಪಾವನಕಾಯ | ವಿಷವಕ್ಷಜದ ಅಸುರೆಯ ಮಡುಹಿ ದಾಸರುಗಳ ಕಾಹುವ ಶೇಷಭೂಷಾ ||1|| ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ | ಸತ್ಯಪತಿ ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ | ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ |

ವೆಂಕಟೇಶ ಜಗದೀಶ ವೆಂಕಟೇಶ Read More »

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ ಕಿಂಕರರಿಗೊಲಿದ ನಿಃಶಂಕ ಬಾರೊ ಪೊಂದೇರಿನೊಳಗೆ ಭೂಮಿ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ ಮಂದರೋದ್ಧಾರನೆ ಮಹನಂದ ಮೂರುತಿ ವೃಂದಾರಕ ವಂದ್ಯಪಾಲ ವಂದಿಪೆ ನಿಂದು ||1|| ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ ||2|| ಆಗಮ ಮಣಿ ಕಣಿಯೆ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ Read More »

ವೆಂಕಟಾಚಲ ಪಂಕಜ ಪತಿ

ವೆಂಕಟಾಚಲ ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಸಂದೇ ನಾರದೆ ಮುಂದೆ ಬಾರದೆ ಎಂದೆಗೆಂದಿಗೆ ಮುಂದೆ ಜನನಗಳು ||1|| ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು ನೀಡು ಕರುಣವ

ವೆಂಕಟಾಚಲ ಪಂಕಜ ಪತಿ Read More »

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪಂಕಜಭವ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ಕ್ರತುಭುಜ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ ||1|| ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ Read More »

ವೆಂಕಟ ಬಾರೋ ರಿಪುಸಂಕಟ ಬಾರೊ

ವೆಂಕಟ ಬಾರೋ ರಿಪುಸಂಕಟ ಬಾರೊ ಕಿಂಕರಿಗೊಲಿದ ನಿಶ್ಶಂಕ ಬಾರೋ ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ ಚೆಂದದಿಂದಲೊಪ್ಪುತಿಹ ಇಂದುವದÀನ ಮಂದರೋದ್ಧಾರನೆ ಮಹಾನಂದ ಮೂರುತಿ ವೃಂದಾರಕ ವಂದ್ಯ ಪಾದ ವಂದಿಪನೆಂದು ||1|| ಲೌಕೀಕ ವಿಲಕ್ಷಣ ಅನೇಕ ಏಕ ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ಪ್ರಾಕೃತ ರಹಿತಗಾತ್ರ ಲೋಕಪಾವನ ಶೋಕ ಮೂಲ ನಾಶನ ವಿಶೋಕ ಜನಕ ||2|| ಅಂಗ ಅಂಗೀ ಭಾವದಿಂದ ಅಂಗದೊಳಿದ್ದು ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ ಡಿಂಗರಿಗ ಹೃತ್ಕಮಲ ಭೃಂಗ ಜಗದಂತೆ- ರಂಗ ರಂಗರಾಜ ಸುಖಸಂಗ ಅನಂಗ ||3|| ಆಪ್ತಕಾಮ

ವೆಂಕಟ ಬಾರೋ ರಿಪುಸಂಕಟ ಬಾರೊ Read More »

ವಿರಹ ನಿಲ್ಲದು ಕಾಣೊ

ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ | ಗುರುತ ಮಾಡಿದ ಸೊಗಸು ಮರಿಯದೊ ಗೋಪಾಲ ಕಣ್ಣುನೋಟ ತಿರುಹಿ ನೀ ಕೈಯ ಮುದರಿ ವರಹ | ಹೊನ್ನು ಕಂಭದಲಿ ನಿಂದು ತೋರಿ | ಭ್ರಮಿಸಿ ಕುನ್ನಿಗೆ ಕಣಿಯನಿಕ್ಕಿ ಹೊಡೆಯೊನಾಗಿ | ಹೆಣ್ಣು ಭಾವನ ಕರೆದು ಸೂಚನೆ ಮಾಡಿದನು ||1|| ಪುಟ್ಟ ಹೆಜ್ಜೆಲೆ ಸಾಗಿ ಮುದ್ದು ಕೊಡಲು ಬಯಸಿ | ದೃಷ್ಟಿಯಿಂದ ನೋಡಲು ಭ್ರಾಂತಳಾಗಿ | ಅಟ್ಟ ಅಡಿವೆಯೊಳು ನಡಿವೆ ನಾ ಪೋಗಲು | ದುಷ್ಟ ನಾದಿನಿ ಕಂಡು ಮಾವಗೆ

ವಿರಹ ನಿಲ್ಲದು ಕಾಣೊ Read More »

ವಿಠ್ಠಲನ ಮಂತ್ರ ಜಪಿಸೋ

ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ ಕುಟಿಲವನು ಕಳೆದು ಬಲು ಕುಶಲತನವೀವದು ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ ಯೋಗಿಗಳು ನೆನೆದರೆ ಸವಿಯಾದ ಮಂತ್ರ ||1|| ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ ಕದನದೊಳು ಫಲ್ಗುಣನ ಕಾಯಿದ ಮಂತ್ರ ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ ಯದುಕುಲಾಗ್ರಣಿಯಾದ ವಿಶ್ವಮಂತ್ರ ||2|| ಹಾರೈಸಿದವರಿಗೆ ವರವನೀವ ಮಂತ್ರ ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ ಸೇರಿದವರನ್ನ ಬಿಡದೆ ಪೊರೆವ ಮಂತ್ರ ||3||

ವಿಠ್ಠಲನ ಮಂತ್ರ ಜಪಿಸೋ Read More »

ವಿಠ್ಠಲನ ಪದವನಜ ತುಂಬೆ

ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ e್ಞÁನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ ||1|| ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಭೂತಳದೊಳು ಗುರು ಪುರಂದರ ರಾಯಾ ||2|| ಪಾವನ ಶರೀರ ಎನಗೆ ವಜ್ರ ಪಂಜರಾ ಕೂವಾದಿ ಮತಹರ

ವಿಠ್ಠಲನ ಪದವನಜ ತುಂಬೆ Read More »

ವಿಠ್ಠಲ ವಿಮಲಶೀಲ ಬಾಲಗೋಪಾಲ

ವಿಠ್ಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ಶ್ರೀಲೋಲ ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಯದುವಂಶೋದ್ಭವ ಕೇಶವ ಹೇ ಏಕಮೇವ ಮಧುವೈರಿ ಮಹಾವೈಭವ ಸದಮರಾನಂದ ಸ್ವಭಾವ ಮತ್ಕುಲ ದೈವ ಹೃದಯಾಬ್ಜ ಇನ ಬಾಂಧವ ವಿಧಿನದಿಪಿತ ನಾರದ ಮುನಿ ಸನ್ನುತ ಕದನ ಕರ್ಕಶ ವೈರಿ ಸದಮಲಗಾತುರ ಪದೆ ಪದೆಗೆ ಸಂಪದವಿಯ ಬಯಸುವ ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ||1|| ತುತಿಪರ ದೇವ ಪ್ರಾರ್ಥಿಪ ನಿತ್ಯ ಪ್ರಭಾವ ಪತಿತಪಾವನ ಸುರ ಜೀವ ಅತಿಶಯ ಲೀಲಾಮಾನವ

ವಿಠ್ಠಲ ವಿಮಲಶೀಲ ಬಾಲಗೋಪಾಲ Read More »

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ | ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು | ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು || ಹಲವು ಮಾತೇನು ಎನಗೆ ಬಿಡದು | ಸಲಹಬೇಕಯ್ಯಾ ಸಮುದ್ರ ಶಯ್ಯಾ ||1|| ಕರ ಪಿಡಿದು ಎತ್ತುವ ಬಿರುದು ಪರಾಕ್ರಮ | ಮರಳಿ ಮಿಗಿಲೊಂದು ದೇವರಿಗೆ ಉಂಟೆ || ಮರೆವು ಮಾಡದೆ ಮಹಾದುರಿತವ ಪರಿ_ | ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ||2|| ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ | ಚೆನ್ನಾಗಿಡು

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ Read More »

ವಿಜಯವಿಠ್ಠಲ ವಿಜಯವಿಠ್ಠಲ

ವಿಜಯವಿಠ್ಠಲ ವಿಜಯವಿಠ್ಠಲ ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ವನಚರ ನಗಧರ ಅವನಿಯ ಉದ್ಧಾರ ಹನನ ಮಾಡಿದಿಯೊ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ – ವಣದಿ ಪಡದೋ ಶ್ರೀ ವಿಜಯವಿಠ್ಠಲಾ ||1|| ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ||2|| ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ

ವಿಜಯವಿಠ್ಠಲ ವಿಜಯವಿಠ್ಠಲ Read More »

ವಿಜಯವಿಠ್ಠಲ ನಾಮ

ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ ||1|| ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು||2|| ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಏಣಿಸಿ ಪೊಗಳಿದರೆ ಕಾಲ ಕಡೆಗಾಣನು ||3|| ದೇವಾದಿ

ವಿಜಯವಿಠ್ಠಲ ನಾಮ Read More »

ವಿಗ್ರಹವನು ನಿಲಿಸೊ ವೆಂಕಟ

ವಿಗ್ರಹವನು ನಿಲಿಸೊ ವೆಂಕಟ ಗಗ- ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ರನ್ನದ ಮಕುಟ ಸುವರ್ಣ ಕುಂಡಲ ತೇಜ ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ||1|| ಕೊರಳ ತ್ರಿರೇಖೆಯು ಉರು ಕೌಸ್ತುಭಹಾರ ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ ||2|| ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ- ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ||3|| ನಖದೊಳನಂತ ಬ್ರಹ್ಮಾಂಡವನಡಗಿಸಿ ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ||4|| ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ- ಗತ್ಪತಿ ವಿಜಯವಿಠ್ಠಲ ವೆಂಕಟ ||5||

ವಿಗ್ರಹವನು ನಿಲಿಸೊ ವೆಂಕಟ Read More »