ಬೆಳಗಿನ ಝಾವದಿ ಬಾರೊ ಹರಿಯೆ

ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಚರಣ ತೊಳೆದು ಜಲಪಾನ ಮಾಡುವೆನೊ ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ ||1|| ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ ||2|| ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ|| 3||

ಬೆಳಗಿನ ಝಾವದಿ ಬಾರೊ ಹರಿಯೆ Read More »

ಬಿನ್ನಪವ ಕೇಳು ಜೀಯಾ

ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ ||1|| ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ ||2|| ಶ್ವಾನ ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ

ಬಿನ್ನಪವ ಕೇಳು ಜೀಯಾ Read More »

ಬಿಡು ಬಿಡು ಮಾಯವನು ಕೆಡದಿರು

ಬಿಡು ಬಿಡು ಮಾಯವನು ಕೆಡದಿರು ಕಪಟದಲಿ | ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ನಾನು ನನ್ನದು ಎಂಬೊ ಹೀನ ವಚನ ಸಲ್ಲ ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ ||1|| ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ | ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ ||2|| ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ | ಸ್ಥಿರವಾಗಿ ಇರಿಸೋದು ಅನಂತ ಜನ್ಮಾಂತರ ಪಾಪ ಪೋಗುವುದು ||3|| e್ಞÁನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ

ಬಿಡು ಬಿಡು ಮಾಯವನು ಕೆಡದಿರು Read More »

ಬಿಡು ಬಿಡು ಇನ್ನು ಸೋಗಾಚಾರ

ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ ||1|| ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ||2|| ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ

ಬಿಡು ಬಿಡು ಇನ್ನು ಸೋಗಾಚಾರ Read More »

ಬಾರೋ ಮನೆಗೆ ಬಾರೋ ವೆಂಕಟರಮಣಾ

ಬಾರೋ ಮನೆಗೆ ಬಾರೋ ವೆಂಕಟರಮಣಾ ಕಂಸಾಸುರಮರ್ದನನೆ ಬಾರೊ | ಕೌಶಿಕಯಜ್ಞಪ ಬಾರೊ | ಹಂಸಡಿಬಿಕನಂತಕ ಬಾರೊ | ಹಂಸವಾಹನನ ಪಿತನೆ ಬಾರೊ ||1|| ಸಾಸಿರ ಮುಖನ ಪೆತ್ತವನೆ ಬಾರೊ | ಸಾಸಿರ ಗಣ್ಣಿನ ಅನುಜ ಬಾರೊ | ಸಾಸಿರ ವದನ ಶಯನ ಬಾರೊ | ಭೂಸುರರಿಗೆ ಪ್ರಿಯನೆ ಬಾರೊ ||2|| ವಾರಿಧಿಯೊಳು ಪೊಕ್ಕವನೆ ಬಾರೊ | ವಾರಿಧಿಯ ಮಾನಭಂಗನೆ ಬಾರೊ | ವಾರಿಧಿಸುತೆಯ ಪಡೆದ ಕರುಣಾ – | ವಾರಿಧಿ ಸಿರಿ ವಿಜಯವಿಠ್ಠಲ ಬಾರೊ ||3||

ಬಾರೋ ಮನೆಗೆ ಬಾರೋ ವೆಂಕಟರಮಣಾ Read More »

ಬಾರೊ ಭಕ್ತರ ಮನಮಂದಿರಕೆ

ಬಾರೊ ಭಕ್ತರ ಮನಮಂದಿರಕೆ | ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ ಅಂಬುಧಿ ಚರನೆ ಬಾರೊ | ಅಂಬುಧಿ ಮಥನ ಬಾರೊ | ಅಂಬುಜಾಕ್ಷಿಯ ತಂದ ರ | ಕ್ತಾಂಬು ಪಾನನೆ ಬಾರೊ | ||1|| ಅಂಬುಪೆತ್ತವನೆ ಬಾರೊ | ಅಂಬುಧಿ ತೊಲೆಗಿನ | ಅಂಬುಧಿ ಬಂಧನ ಬಾರೊ | ಅಂಬೆ ಕಾಯ್ದವನೆ ಬಾರೊ ||2|| ಅಂಬಾರ ಪುರಾಲಯ ನ | ರಾಂಬು ಹಯಗಮನ ಪೀ ತಾಂಬರ ವಿಜಯವಿಠ್ಠಲ | ಎಂಬ ವೆಂಕಟರಾಯ ಬಾರೊ ||3||

ಬಾರೊ ಭಕ್ತರ ಮನಮಂದಿರಕೆ Read More »

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ತೋರಯ್ಯ ನಿನ್ನ ದಯ ತೋಯಜಾಂಬಕನೆ ದುರುಳರ ತರಿವಂಥ ವರಚಕ್ರಧಾರಿ ಪರಮಾತ್ಮ ಪರಬೊಮ್ಮ ಪರರಿಗುಪಕಾರಿ||1|| ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ ತರಳ ಪ್ರಹ್ಲಾದನ್ನ ವೈರಿಯ ಮುರದಿ ||2|| ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ||3|| ಅನಂತನಾಮನೆ ನಿನ್ನ ಅನಂತ ಸದ್ಗುಣವ ನೆನೆವರಿಗೊಲಿವಂಥ ಪವಮಾನನೀಶಾ ||4|| ಅಜಭವಾಧಿಪ ನೀನು ವಿಜಯಸಾರಥಿಯೇ ತ್ರಿಜಗವಂದಿತ ಈಶ ವಿಜಯವಿಠ್ಠಲನೇ ||5||

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ Read More »

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ ||1|| ನೀರೊಳು ಈಸುವ ನಾರಿಯೆರ ಶೀರೇ ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ ||2|| ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ |

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು Read More »

ಬಾ ಬಾ ಭಕುತರ ಹೃದಯ ಮಂದಿರ

ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ ||1|| ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ

ಬಾ ಬಾ ಭಕುತರ ಹೃದಯ ಮಂದಿರ Read More »

ಬಲ್ಲವಾಗಿಲ್ಲೆ ಪರಮಾತ್ಮಾ

ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು ಆಡಿÀದವೆಲ್ಲ ಹರಿಯ ರೂಪವೆಂದು ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು ಕೂಡಿದದ್ದೆಲ್ಲ ಹರಿ ಭಕ್ತರೆಂದು ||1|| ತಾಪತ್ರಯಗಳೆಲ್ಲ ಮಹಾ ತಪಸು ಎಂದು ರೂಪಗಳೆÀಲ್ಲ ಹರಿಕಾಂತಿ ಎಂದು ಪೋಪದು ಬರುವುದೆಲ್ಲ ವ್ಯಾಪಾರ ಹರಿ ಅಧೀನವೆಂದು ||2|| ತಾರತಮ್ಯಕಿದು ಪರಲೋಕದಿ ಸರಿಯಿಲ್ಲ ಸಿರಿ ಹರಿಯದೊರೆ ತನಗೆ ಎಂದೆನುತಾ ಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆ ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ ||3|| ಒಲಿಸಿ ಒಲಿಸಿ ಒಲಿದು ಒಲಿದು

ಬಲ್ಲವಾಗಿಲ್ಲೆ ಪರಮಾತ್ಮಾ Read More »

ಬಣ್ಣಿಸಲಾರೆ ನಿಂದು ಈ ಮೂರುತಿಯ

ಬಣ್ಣಿಸಲಾರೆ ನಿಂದು ಈ ಮೂರುತಿಯ ಬಣ್ಣಿಸಲಾರೆ ನಿಂದು ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ ||1|| ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ ||2|| ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ ||3||

ಬಣ್ಣಿಸಲಾರೆ ನಿಂದು ಈ ಮೂರುತಿಯ Read More »

ಬಡನಡುವು ಬಾಲೆಯರ ಕೂಡಿ

ಬಡನಡುವು ಬಾಲೆಯರ ಕೂಡಿ ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ಪಾಲ್ಗೊನಿಗೆ ಬಂದಿರಲು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ ||1|| ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ

ಬಡನಡುವು ಬಾಲೆಯರ ಕೂಡಿ Read More »

ಬಂದೆ ನಾ ನಿಂದೆ ಇಂದೇ

ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ | ಬಿಂದು ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪುರುಹೂತ ಜಾತ ಸೂತ | ಸರಸಿಜ ತಾತಾ | ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ ಚರಣವ ನಿರುತರ ನೆರೆನಂಬಿದೆ | ದು ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ ||1|| ಕರಿ ಪಾಶ ನಾಶ ಈಶಾ | ವರ ಮೂರ್ತಿ ವರದೇಶಾ ಶರಣರ ಪರಿತೋಷಾ | ತರತಮ್ಯ e್ಞÁನ ಕೋಶ

ಬಂದೆ ನಾ ನಿಂದೆ ಇಂದೇ Read More »

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ ಬಂದು ನಿಲ್ಲೋ ನಿನಗೊಂದಿಸುವೆನು ಗೋ ವಿಂದ ಗೋವಳರಾಯ ಸಂದೇಹಗೊಳಿಸದೆ ಸದೋಷಕ ನಾನು ಸದಾ ನಿರ್ಮಲ ನೀನು ಪದೆಪದೆಗೆ ಪೇಳುವುದುಚಿತವಲ್ಲ ||1|| ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ ಘನಮಹಿಮನೆ ಮಧ್ವಮುನಿ ಮನ ಮಂದಿರ ||2|| ಕಡೆಗೋಲು ನೇಣಪಿಡಿದ ಪರಮಾನಂದ ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ||3||

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ Read More »

ಬಂದು ನಿಂದಾ ಕಣ್ಣ ಮುಂದೆ

ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ ಬಂದು ನಿಂದಾ ಭಾಗವತರ ಪ್ರಿಯಾ | ಕಂದರ್ಪಜನಕ ಶ್ರೀ ಕರುಣಾಸಾಗರ ಮೂರ್ತಿ ಕುಟಿಲ ಕುಂತಲ ದೇವ | ವಟು ವೇಷದಿಂದಲಿ || ನಟನೆ ಮಾಡುತ ದಿವ್ಯ | ಪಟುತರದಲಿ ತಾನು ||1|| ಮುರಳಿನೂದುತ್ತ | ಮರುಳುಗೊಳಿಸಿ ಜನರ || ಕೊರಳ ಪದಕಹಾರ | ಧರಿಸಿ ತಾ ನಲಿಯುತ ||2|| ಸುಜನರ ಪೊರೆಯುವ | ಕುಜನರ ತರಿಯುವ | ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ||3||

ಬಂದು ನಿಂದಾ ಕಣ್ಣ ಮುಂದೆ Read More »

ಬಂದು ಕಂಡೆನೊ ಇಂದು

ಬಂದು ಕಂಡೆನೊ ಇಂದು | ಇಂದುಧರನ ಪಾದದ್ವಂದ್ವಗಳನು ದಿನವು | ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು | ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಸತಿಗೆ ಅಧರ್Àಕಾಯ ಹಿತದಿಂದಲಿ ಇತ್ತು | ಚತುರತನದಲಿಳೆಯೊಳು ಪತಿತ ಮಾನವರಿಗೆ | ಮತಿಬಾಹದೊ ಮಾನಸ ಸತತ ದೃಢವನೀವ | ಪ್ರತಿದಿನದಲಿ ಕಾಯ್ವಾ ||1|| ವಿಷವ ಧರಿಸಿ ಸುಮನಸರ ನಡುವೆ ಮೆರೆದೆ | ಪಶುವಾಹನ ಪರಮೇಶ ಅಸುರಾರಿಗಲ್ಲದ | ಅಸುರರ ಕೊಲ್ಲುವ ರಂಜಿಸುವಾ | ಶಶಿ ಜಟಾ ಕಮನೀಯ ಮಣಿಮಕುಟಾ ||2||

ಬಂದು ಕಂಡೆನೊ ಇಂದು Read More »

ಬಂದರು ಹರಿಯ ವಾಲಗಕೆ ಭಕ್ತ

ಬಂದರು ಹರಿಯ ವಾಲಗಕೆ ಭಕ್ತ | ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು ನಾಗಜ ನಾಗಾರಿ ಸುತ ಬಂದ | ನಾಗ ಚರ್ಮಾಂಬರ ನಾಗಾರಿ ಬಂದಾ | ನಾಗಾನ ಧನು ಬಂದ ನಾಗಪುಂಗವ ಬಂದ | ನಾಗಾರಿ ಗಮನ ಬಂದ | ನಾಗ ಬಂದಾ || ||1|| ನಾಗಶಯ ಮುಖವಾದ ನಾಗವಾಹನ ಮಿತ್ರ | ನಾಗ ಚರ್ಮಾಂಬರ ಸಖನು ಬಂದಾ | ನಾಗಾರಿ ಸುತೆಯಳನಾಳಿದವನು ಬಂದಾ | ನಾಗ ಭಕ್ಷಕನು ನಾಗಾರಿ ಬಾಂಧವ ಬಂದಾ ||2|| ನಾಗದ್ವೇಷಿಕನು

ಬಂದರು ಹರಿಯ ವಾಲಗಕೆ ಭಕ್ತ Read More »

ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟು

ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟುನಿರ್ಮಳದಿ ವೈಷ್ಣವರ ಮನಮುಟ್ಟಿ ಭಜಿಸಿ ಪಾಪಕೆ ಹೇಸದ ಶಬರ ಬಟ್ಟೆಯನು ಕಾದಿರಲುಆ ಪಥದಿ ಸಲೆ ವೈಷ್ಣವನು ಬಂದುಪಾಪವನು ತಪ್ಪಿಸಿ ರಾಮನಾಮವ ಕೊಡಲುಕಾಪಥಕ ವಾಲ್ಮೀಕಿ ಮುನಿಯಾಗಲಿಲ್ಲವೆ ? ||1|| ಪಂಚಮಹಾಪಾತಕವ ಮಾಡಿದ ಅಜಾಮಿಳನವಂಚಿಸಿ ಯಮದೂತರೆಳೆದೊಯ್ಯುತಿರಲುಕಿಂಚಿತ್ತು ಹರಿನಾಮವನಾಕಸ್ಮಿಕದಿ ನೆನೆಯೆಅಂಚಿಗೆಳೆದೊಯ್ದವರು ವಿಷ್ಣುದೂತರಲ್ಲವೆ ?||2|| ಬಾಲಕ ತನ್ನ ತಾಯ್ತಂದೆಯೊಳ್ ಮುನಿದು ಹಲವುಕಾಲ ವನದೊಳು ತಪವ ಮಾಡಲುನೀಲಮೇಘಶ್ಯಾಮ ಮೆಚ್ಚಿ ಬಾಲಕನಿಗೆಮೇಲಾದ ಪದವಿಯನು ಕೊಡಲಿಲ್ಲವೆ ? ||3|| ದಶಕಂಠನನುಜನು ಜಾನಕಿಯ ಬಿಡ ಹೇಳೆಅಸುರ ಕೋಪವ ತಾಳಿ ಹೊರಗಟ್ಟಿದಾಗಪೆಸರಗೊಳುತ ಬಂದು ಮೊರೆಹೊಕ್ಕ ವಿಭೀಷಣಗೆಶಶಿರವಿ

ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟು Read More »

ಬೊಂಬೆಯಾಟವನಾಡಿಸಿದೆ ಮಹಾಭಾರತದ

ಬೊಂಬೆಯಾಟವನಾಡಿಸಿದೆ ಮಹಾಭಾರತದ ಅಂಬುಜಭವಾದಿ ಅಮರರು ನೋಡುತಿರಲು ಕುರುಭೂಮಿಯೆಂಬ ಪುರವೀಧಿಯನು ರಚಿಸಿಮರೆಯ ಮಾಯದ ಐದು ತೆರೆಯ ಹಾಕಿಧರಣೀಶರೆಂಬ ನರಪ್ರತಿಮೆಗಳನಳವಡಿಸಿನರನ ರಥವಾಜಿಯ ಸೂತ್ರವನು ಪಿಡಿದು ||1|| ಓದುವನು ನಾರದನು ವಾದ್ಯಕಾರನೆ ಶಂಭುಬಾದರಾಯಣದೇವ ಕಥಾಪ್ರಸಂಗಿಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸವೇದನಿಕರಗಳು ಕೈವಾರಿಸುತಿರಲು ||2|| ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿಹದಿನೆಂಟು ದಿನ ಕದನಕೇಳಿಕೆ ನಡೆಸಿಅದರೊಳೈವರನುಳುಹಿ ಅವನಿಭಾರವನಿಳುಹಿಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ ||3|| ಲೋಕದೊಳಗೈದನೆಯ ವೇದವಿದೆಂದೆನಿಸಿಪಾಕಶಾಸನ ಸಭೆಯನು ಮೆಚ್ಚಿಸಿಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿತಾ ಕಪಟನಾಟಕದ ಸೂತ್ರಧರನೆನಿಸಿ ||4|| ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ-ಕಾಂತರಂಗಳ ಸಂಚರಿಸುತಸಂತಸದಿ ಭರತ

ಬೊಂಬೆಯಾಟವನಾಡಿಸಿದೆ ಮಹಾಭಾರತದ Read More »

ಬೇಡ ಬೇಡ ಎಲೆಲೆ ದುರಿತಗಳಿರಾ

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮಬಾಡದಾಧಿಪನ ಕಿಂಕರನ ಕೂಡ ತೊಡರು ವಾರಿಕಲ್ಲಾನೆ ವಜ್ರದ ಮೃಗೇಂದ್ರನ ಕೂಡೆಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ ?ಭೂರಿ ಭೂತಗಳೆ ಭೂಸತಿಯ ಕಾಂತನ ನಾಮಧಾರಿಗಳ ತೊಡರು ನಿಮಗಳವಡದು ನಾನರಿವೆ ||1|| ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡಪ್ರಾಣದಿಂ ಕಾದಿ ಜಯಿಸುವುದೆ ಹೇಳಾಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳುದಾನವಾರಿಯ ದಾಸಗಳವಡವು ನಾನರಿವೆ ||2|| ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳುನಲಿದು ಉಯ್ಯಾಲೆಯನಾಡುವವೆ ಹೇಳಾಕಲಿ ಬಾಡದಾದಿಕೇಶವರಾಯ ಚಕ್ರದಲಿತಲೆಗಳನು ಚೆಂಡಾಡಿಸುವ ಕಾಣೊ ಬೇಡ ||3||

ಬೇಡ ಬೇಡ ಎಲೆಲೆ ದುರಿತಗಳಿರಾ Read More »

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ||1|| ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ ||2|| ಜನನವಾದರೆ ಹಾಡಿ ಹರಸಲೇತಕೆಅನುಗತಿಯನು

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು Read More »

ಬೀದಿಯೊಳು ಯಾತರಾ ನಂಟು ಬೇಡ

ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯಕಂಡಿಯೊಳು ಕೈಸನ್ನೆ ಮಾಡದಿರಯ್ಯಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯಕೊಂಡೆಗಾತಿಯರುಂಟು ದುಡುಕದಿರಯ್ಯ ||1|| ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯಆಳುವ ಅರಸಾಗಿ ನಿನಗಾವ ಬರವಯ್ಯಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ ||2|| ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿಂಹಯ್ಯಕೂಡಿದ ಕನಕನಾದಿಕೇಶವ ನೀನಹುದಯ್ಯ ||3||

ಬೀದಿಯೊಳು ಯಾತರಾ ನಂಟು ಬೇಡ Read More »

ಬಾಲಕನೆಂದೆತ್ತಿಕೊಂಡೆನೆ – ಗೋಪಾಲಕೃಷ್ಣನ

ಬಾಲಕನೆಂದೆತ್ತಿಕೊಂಡೆನೆ – ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಬಾಲಕನೆಂದೆತ್ತಿಕೊಂಡರೆ – ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ – ಮಾರನಾಟವಾಡಿ ಪೋದನೆ ಹೊತ್ತರೆದ್ದು ಮನೆಗೆ ಬಂದನೆ – ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ||1|| ಗಂಡನಂತೆ ಮನೆಗೆ ಬಂದನೆ – ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ ||2|| ಏಸು ಮೋಸ ಕಲಿತ ಜಾಣನೆ – ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ

ಬಾಲಕನೆಂದೆತ್ತಿಕೊಂಡೆನೆ – ಗೋಪಾಲಕೃಷ್ಣನ Read More »

ಬಾರೊ ಭಾಗ್ಯದ ನಿಧಿಯೆ

ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ ಸಾರಿದವರ್ಗಿತ್ತೆ ಸುಧೆವಾರಿಜಾರಿ ಕೌಮುದಿವಾರಿಜಧರ ಮುದದಿಸಾರಸ ಹೃದಯದಿಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ ವಿಜಯ ನಿಮ್ಮಯ ಪಾದ ಭಜಕರಿಗೆ ಕೊಡಲಿವಿಜಯ ದಶಮಿಯಲ್ಲಿ ವಿಜಯರಥದಲ್ಲಿ ಕೂತುವಿಜಯಳ ಸಹಿತದಿ ವಿಜಯ ಮಾಡುತ ಬಾರೊವಿಜಯ ಸಾರಥಿ ಆದಿವಿಜಯ ರಥದಿ ಪರ ರವಿಜನ ನೀ ಸೋಲಿಸಿತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆವಿಜಯ ಮೂರುತಿಯೆ ||1|| ದಶದಶನಂದ ಏಕಾದಶ ಚಂದ್ರಶೇಖರ ದ್ವಾ-ದಶಾದಿತ್ಯ ಮಾರುತರು ದಶ ವಿಶ್ವದೇವ ಯಾತ್ರಾದಶನಾ ಏಕಾ ಸರ್ವದಾದಶಋಷಿ ಮುನಿ ನೃಪ ದಶದಿಕ್ಕಿನ ಜನರುದಶಮ ಉತ್ಸವ ನೋಡಿ

ಬಾರೊ ಭಾಗ್ಯದ ನಿಧಿಯೆ Read More »

ಬಾಯಿ ನಾರಿದ ಮೇಲೆ ಏಕಾಂತವೆ

ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತೌರಾಸೆಯೆ ಕಣ್ಣು ಕೆಟ್ಟ ಮೇಲೆ ಕಡುರೂಪು ಚೆಲ್ವಿಕೆಯೆಬಣ್ಣಗುಂದಿದ ಮೇಲೆ ಬಹುಮಾನವೆಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ||1|| ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆಚಳಿಜ್ವರಕೆ ಚಂದನದ ಲೇಪ ಹಿತವೆಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆಬೆಲೆಬಿದ್ದ ಸರಕಿನೊಳು ಲಾಭ ಉಂಟೆ ||2|| ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆಸತ್ತ್ವ ತಗ್ಗಿದ ಮೇಲೆ ಸಾಮಥ್ರ್ಯವೆಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ ||3||

ಬಾಯಿ ನಾರಿದ ಮೇಲೆ ಏಕಾಂತವೆ Read More »