ದಾಸರೆ ಪುರಂದರದಾಸರು

ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು||1|| ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||2|| ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ರಿಂದಲಿ ಬಲು ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು||3|| ಉಪದೇಶವಿತ್ತರು […]

ದಾಸರೆ ಪುರಂದರದಾಸರು Read More »

ದಾಸರ ಭಾಗ್ಯವಿದು ಪುರಂದರ

ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಸರ್ವ-ದೇಶದೊಳು ತುಂಬಿ ಸೂಸುತಲಿದೆ ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿಜ್ಞಾನದ ವಿ- ಶೇಷವಾಗಿ ನಾ ಬಾಳುವದೆಲ್ಲ ||1|| ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ ||2|| ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ ||3||

ದಾಸರ ಭಾಗ್ಯವಿದು ಪುರಂದರ Read More »

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ದಾಸನು ನಾನಲ್ಲ ನಾನಾ ಸುಬುದ್ಧಿಯ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ ||1|| ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು Read More »

ದಾಸ ದಾಸ ದಾಸರ ದಾಸ್ಯವ

ದಾಸ ದಾಸ ದಾಸರ ದಾಸ್ಯವ ಕೊಡೊ- ದೋಷ ರಾಸಿಯಳಿದು ಶ್ರೀಶ ಧೀಶ ಸರ್ವೇಶ ಸುರೇಶ್ವರ – ಭಾಸುರ ಗುಣಗಣ ಭವ್ಯ ಶರೀರ ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ ಸಂತತ ನಿನ್ನ ಪದ ಪಂಕಜ ಭಕ್ತರ – ಪಂಥವ ಪಾಲಿಸೊ ಪರಮ ಪುರುಷ ಹರಿ ||1|| ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು ದುರುಳರ ಸಂಗವ ದೂರ ಮಾಡಿಸು- ದುರ್ಮತಿಯನೆ ಬಿಡಿಸು ಸರಸ ಸಂಭ್ರಮ ಸನ್ನುತ ಭಕುತರೋಳ್- ನಿರುತವು ನಿಲ್ಲಿಸೋ ನೀರಜಾಕ್ಷ ಹರಿ||2|| ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ

ದಾಸ ದಾಸ ದಾಸರ ದಾಸ್ಯವ Read More »

ದಾಶರಥ ಪಾದಸರಸಿಜ ಮಧುಕರ

ದಾಶರಥ ಪಾದಸರಸಿಜ ಮಧುಕರ ಸಮೀರಜ ಹನುಮ ಎನ್ನ ಪ್ರಾಣಾಪದಕಾ ಶಿರಸನಾ ಮಗಗೊಲಿದು ರಾಮಚಂದ್ರನ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ||1|| ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ ||2|| ಸಭೆಯೊಳಗೆ ರಾವಣನ ರಕ್ತವನೆ ಕಾರಿಸಿದೆ ನಭಚರರು ಕೊಂಡಾಡೆ

ದಾಶರಥ ಪಾದಸರಸಿಜ ಮಧುಕರ Read More »

ದಯವಿರಲಿ ಎನ್ನಲ್ಲಿ ಧರಣಿಧರನೆ

ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ ||1|| ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ||2|| ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಮೃಡನೊಡಿಯಾ

ದಯವಿರಲಿ ಎನ್ನಲ್ಲಿ ಧರಣಿಧರನೆ Read More »

ದಯಮಾಡು ದಯಮಾಡು ಎನ್ನ ಮೇಲೆ

ದಯಮಾಡು ದಯಮಾಡು ಎನ್ನ ಮೇಲೆ | ಅಂತರಂಗದೊಳಿಪ್ಪ ಅಚ್ಚುತಮೂರ್ತಿ ಗಂಧ ಪರಿಮಳ ಕುಸುಮ ಜಾಜಿ ಮಲ್ಲಿಗೆ ಮಾಲೆ | ಮಂದಾರ ಹಾರ ಕೊರಳೊಳಿಡಲೂ || ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ | ಹಂದಿಯಂದದಿ ಇಲ್ಲಿ ಇಪ್ಪ ನರಗೆ ||1|| ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ | ಹೆತ್ತತಾಯಿ ತಂದು ಉಣ್ಣ ಬಡಿಸಲು || ಅತ್ತ ಮೊಗವಗಬೆ ತೊತ್ತು ಉಣಬಡಿಸಿದ | ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ||2|| ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು | ಅಂಬಿಗ ತಡೆಯದೆ

ದಯಮಾಡು ದಯಮಾಡು ಎನ್ನ ಮೇಲೆ Read More »

ದಯ ಬಾರದ್ಯಾಕೊ ರಾಘವಾ

ದಯ ಬಾರದ್ಯಾಕೊ ರಾಘವಾ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ ||1|| ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ ||2|| ಸರ್ಪಶಯನನೆ ಸಾರ್ವಭೌಮನೆ ಶೂರ್ಪನಖಿ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ ||3||

ದಯ ಬಾರದ್ಯಾಕೊ ರಾಘವಾ Read More »

ನಂಬಬೇಡಿ ಸಿರಿಯ ತನ್ನದೆ

ನಂಬಬೇಡಿ ಸಿರಿಯ ತನ್ನದೆ ? ನಂಬಬೇಡಿ ಸಿರಿಯು ತನ್ನದೆಂಬ ನಿಮಿಷದೊಳಗೇನಹುದೊಡಂಬತನವಿದೇಕೆ ಹರಿಯ ಪಾ-ದಾಂಬುಜವನು ಭಜಿಸಿ ನರರು ಜಲಧಿಯನ್ನು ಪೀರ್ದ ಮುನಿಯಜನನಿ ಪೆಸರ್ಗೆ ಕಿವಿಯನಾಂತಖಳನ ಬಲವ ನಂಬಲಾತುತಲೆಯ ತವಿಸಿದವನ ಸಿರಿಯುಗಳಿಗೆಯೊಳಗೆ ಕೀಲು ಸಡಿಲದೆ – ಎಣಿಕೆ ಇಲ್ಲದದಳವು ಯಮನನಗರಿಗೈದದೆ – ದೈವಕೃಪೆಯುತೊಲಗಲೊಡನೆ ದಾಳಿವರಿಯದೆ – ಕೇಳಿ ಜನರೆ ||1|| ಅಂಧರಾಯನಾತ್ಮಜರು ಮ-ದಾಂಧರಾಗಿ ಮಲೆತು ಗೋತ್ರಬಂಧುಗಳನು ಲೆಕ್ಕಿಸದೆ ಇಭ ಪುರಿಯನಾಳಿದ ನೃಪತಿ ಕೌರವೇಂದ್ರನರಸುತನವು ತೊಡೆಯದೆ – ಸಕಲ ಸೈನ್ಯಬಂಧು ಬಳಗ ರಣದಿ ಮಡಿಯದೆ – ಶೌರಿ ಮುನಿಯಲಂದು ಅವನ ಪದವು

ನಂಬಬೇಡಿ ಸಿರಿಯ ತನ್ನದೆ Read More »

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ ದುಷ್ಕರ್ಮೇಂದ್ರಿಯಕ್ಕೆ ಕಾಲ್ಗೆರಗುತ್ತಲಿಹೆ ಮರುಳೆ ಪುಸ್ತಕವ ಬಿಚ್ಚಿ ಪೌರಾಣ ಶಾಸ್ತ್ರಂಗಳಿಂವಿಸ್ತರಿಸಿ ಹರಿಯ ಕಲ್ಯಾಣಗುಣ ಕಥೆಯನ್ನುಸ್ವಸ್ಥದಿಂ ಕುಳ್ಳಿರ್ದು ಕೇಳೆಂಬ ಠಾವಿನಲಿಮಸ್ತಕಕೆ ವ್ಯಥೆಯೆಂದು ಮನೆಯತ್ತ ನೀ ನಡೆವೆಹಸ್ತದಿಂ ಹಣ ಭತ್ತ ಹಚ್ಚಡಂಗಳ ಕೊಟ್ಟುಕುಸ್ತರಿಸಿ ಬಿನಗು ಚಾರಿತ್ರ್ಯವಂ ಲಾಲಿಸುತದುಸ್ತರದ ಲೆತ್ತ ಚದುರಂಗ ಪಗಡೆಯನು ಉದಯಾಸ್ತದವರೆಗಾಡುತ ಮೇಲೇಳದಿಹೆ ಮರುಳೆ ||1|| ಸುರಭಿ ಸೇವಂತಿ ಮಲ್ಲಿಗೆ ಮೊಲ್ಲೆ ಬಕುಳ ಪಾದರಿ ಚಂಪಕಾ ಕಂಜ ಕಣಿಗಲು ಶ್ರೀ ತುಳಸಿಪರಿಮಳದ ಪಚ್ಚೆತೆನೆ ಹರಿಪಾದಕರ್ಪಿಸುತೆನಿರುಮಾಲ್ಯ ಪರಿಮಳವನಾಘ್ರಾಣಿಸೆನೆ ಒಲ್ಲೆಬಿರಿದ ಕೆಂಜಾಜಿ ಪುಷ್ಪಂಗಳಂ ವನಿತೆಯರಸಿರಿ ಮುಡಿಗೆ ಮುಡಿಸಿ ಕುಂತಳ ಸೌರಭವ

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ Read More »

ಧರ್ಮವೆಂದೆನಿಪ ಮಾರ್ಗವನು ಬಿಟ್ಟು

ಧರ್ಮವೆಂದೆನಿಪ ಮಾರ್ಗವನು ಬಿಟ್ಟುಕರ್ಮವೆಂದೆನಿಪ ಕಾನನವ ಪೊಕ್ಕುದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿಕರ್ಮಪಾಕದಲಿ ಸಾರುತಿದೆ ಜಗದಿ ಹರಿಹರ ವಿಭೇದಗೈದವಂಗೆ ದಂತಚ್ಯುತವುಗುರುದೈವಗಳ ನಿಂದೆಗೈದವಗೆ ಉನ್ಮದವುಪರಸತಿಯ ಕಾಮಿಸಿದವಗೆ ಪಾಂಡು ರೋಗವುಕೆರೆಗಳನು ಒಡೆಸಿದಾತಗೆ ಶೀತಜ್ವರವುಹಿರಿಯರನು ಜರಿದವಗೆ ಪೀನಾಶಿ ರೋಗವುಧರೆಯನಳಿಸಿದವಗೆ ಸರ್ವಾಂಗ ಪರಿಶ್ವೇತವುಪುರ ಅಗ್ರಹಾರ ಕೆಡಿಸಿದವಗೆ ರಾಜರೋಗವೆಂದುಅರಿವುದು ಸಕಲ ಜನರು ||1|| ಕಥೆ ಪುರಾಣಗಳ ಹಳಿದವಗೆ ಕಾಸಶ್ವಾಸಮತಭೇದವನು ಮಾಡಿದವಗೆ ಮೂಲವ್ಯಾಧಿಪಿತಮಾತೆಯರ ಸಲಹದವಗೆ ಗಂಡಾಮಾಲೆಯತಿಗಳನು ನಿಂದಿಸಿದವಗೆ ಸನ್ನಿಪಾತ – ಪರಸತಿಯರಿಗೆ ಅಳುಪಿದಾತಗೆ ಮೂತ್ರ ಕೃಚ್ರಪತಿವ್ರತೆಯರ ಪೀಡಿಸಿದವಗೆ ಅತಿಸಾರಮತಿಗೇಡಿ ಮೂರ್ಖನಿಗೆ ಕ್ಷಯರೋಗ – ಇದುಕ್ಷಿತಿಯೊಳಗೆ ಸಿದ್ಧಾಂತ ||2|| ಶಿಶು ಹತ್ಯೆ

ಧರ್ಮವೆಂದೆನಿಪ ಮಾರ್ಗವನು ಬಿಟ್ಟು Read More »

ಧರೆಯ ಭೋಗವನ್ನು ನಂಬಿ

ಧರೆಯ ಭೋಗವನ್ನು ನಂಬಿಹರಿಯ ಮರೆದು ಕೆಡಲು ಬೇಡಧರೆಯ ಭೋಗ ಕನಸಿನಂತೆ ಕೇಳು ಮಾನವ ತಿರುಕನೋರ್ವನೂರ ಮುಂದೆಮುರುಕು ಧರ್ಮಶಾಲೆಯಲ್ಲಿಒರಗಿರುತ್ತಲೊಂದು ಕನಸು ಕಂಡನೆಂತೆನೆಪುರದ ಅರಸು ಸತ್ತನವಗೆವರ ಕುಮಾರರಿಲ್ಲದಿರಲುಕರಿಯ ಕೈಲಿ ಕುಸುಮ ಮಾಲೆಯಿತ್ತು ಪುರದೊಳು ||1|| ಬಿಡಲದಾರ ಕೊರಳಿನಲ್ಲಿತೊಡರಿಸಲ್ಕೆ ಅವರ ಪಟ್ಟದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆಒಡನೆ ತನ್ನ ಕೊರಳಿನಲ್ಲಿತೊಡರಿಸುವುದ ಕಂಡು ತಿರುಕಪೊಡವಿಯಾಣ್ಮನಾದೆನೆಂದು ಹಿಗ್ಗುತಿದ್ದನು ||2|| ಪಟ್ಟಗಟ್ಟಲಾಗ ನೃಪರುಕೊಟ್ಟರವಗೆ ಕಪ್ಪಗಳನುನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆಪಟ್ಟದರಸಿಯೊಳಗೆ ಸುಖವಪಟ್ಟು ಮನದಿ ಹರುಷಗೊಳಲುಪುಟ್ಟಿದವು ಹೆಣ್ಣು ಗಂಡು ಮಕ್ಕಳಾಗಲೆ ||3|| ಓಲಗದೊಳಗಿರುತ ತೊಡೆಯಮೇಲೆ ಮಕ್ಕಳಾಡುತಿರಲುಲೀಲೆಯಿಂದ ಚಾತುರಂಗ ಬಲವ ನೋಡುತಲೋಲನಾಗಿ ನೆನೆದು ಮನದಿಪೇಳೆ

ಧರೆಯ ಭೋಗವನ್ನು ನಂಬಿ Read More »

ದ್ಯಾವಿ ನಮ್ಮ ದ್ಯಾವರು ಬಂದರು

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ||1|| ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ ||2|| ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ ||3|| ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ||4|| ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ

ದ್ಯಾವಿ ನಮ್ಮ ದ್ಯಾವರು ಬಂದರು Read More »

ದೇಶಾಧಿಪತಿ ನರಹರಿಯೆ ನಿನ್ನಯ ಪಾದ

ದೇಶಾಧಿಪತಿ ನರಹರಿಯೆ ನಿನ್ನಯ ಪಾದದಾಸರ ದಾಸನೆಂದೆನಿಸಬೇಕೆನ್ನ ರಜತಮೋಗುಣ ಪ್ರವರ್ತಕ ಮೂಲಾಂತರದಿಂಯಜಮಾನತನದಹಂಕಾರವನು ಒಲ್ಲೆಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜರಜ ಭಜಕರ ಭಜಕನೆಂದೆನಿಸೆನ್ನ||1|| ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-ಸ್ತೂರಿ ತಿಲಕವನಿಡುವುದ ನಾನೊಲ್ಲೆಸಿರಿ ಊಧ್ರ್ವಪುಂಡ್ರ ದ್ವಾದಶನಾಮವಿಡುವವರಪರಿಚಾರಕರ ಪರಿಚಾರಕನೆನಿಸೆನ್ನ ||2|| ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನುಆದರದ ಅಮೃತಾನ್ನ ಉಣುವುದನೊಲ್ಲೆಬೋಧೆಯನು ಹೇಳುವ ಕೇಳುವ ಹರಿದಾಸರಪಾದತೀರ್ಥ ಪ್ರಸಾದವನುಣಿಸೆನ್ನ||3|| ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿಶೀಲರಹಿತ ಬ್ರಾಹ್ಮಣನಾಗಲೊಲ್ಲೆಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-ಡಾಲನ ಮನೆ ಬಾಗಿಲ ಕಾಯಿಸೆನ್ನ|| 4|| ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದುಘೋರ ನರಕದಿ ಬೀಳುವುದನು ನಾನೊಲ್ಲೆವಾರಿಜಾಕ್ಷ

ದೇಶಾಧಿಪತಿ ನರಹರಿಯೆ ನಿನ್ನಯ ಪಾದ Read More »

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ,ಸಜ್ಜನರ ಸಂಗದೊಳಗಿರಿಸೆನ್ನ ರಂಗ ಉಂಡಮನೆಗೆರಡನು ಎಣಿಸುವಾತನ ಸಂಗಕೊಂಡೆಯವ ಪೇಳಿ ಕಾದಿಸುವನ ಸಂಗತಂದೆ ತಾಯನು ಬೈದು ಬಾಧಿಸುವವನ ಸಂಗನಿಂದಕರ ಸಂಗ ಬಹು ಭಂಗ ರಂಗ ||1|| ನಂಬಿದ ಠಾವಿನಲಿ ಕೇಡನೆಣಿಪನ ಸಂಗಸಂಭ್ರಮದಿ ಜಗಳ ಕಾಯುವನ ಸಂಗಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗರಂಭೆಯರ ನೋಡಿ ಮೋಹಿಪನ ಸಂಗ||2|| ಕುಳಿತ ಸಭೆಯೊಳು ಕುಹಕ ಮಾಡುವಾತನ ಸಂಗಬಲು ಬೇಡೆ ಕೊಡದಿರುವ ಲೋಭಿ ಸಂಗಕುಲಹೀನರ ಕೂಡೆ ಸ್ನೇಹ ಬೆಳೆಪನ ಸಂಗಹಲವು ಮಾತಾಡಿ ಆಚರಿಸದನ ಸಂಗ||3|| ಗುರುಸತಿಗೆ ಪರಸತಿಗೆ ಎರಡು

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ Read More »

ದಾಸಾರ್ಯರ ದಾಸರ ದಾಸ ನಾನು

ದಾಸಾರ್ಯರ ದಾಸರ ದಾಸ ನಾನು – ಬಾಡದೀಶ ಕಾಯ್ದುಕೊಳ್ಳೊ ಗುಟ್ಟುಮಾಡಿಕೊಂಡಿರದೆ ಕಂಡವರಿಗೆ ಕಾರ್ಪಣ್ಯಪಟ್ಟು ಬಡವನಾದೆನಲ್ಲ – ಅಯ್ಯ ಕೈಗೊಟ್ಟು ರಕ್ಷಿಸುವರಿಲ್ಲ ಜನ್ಮ ಜನ್ಮಂಗಳಲಿಪುಟ್ಟುವಂತೆ ಮಾಡಬೇಡ ಮಾಧವ ಮನ್ನಿಸೊ ಎನ್ನ ||1|| ಮಡದಿ ಮಕ್ಕಳೆಂಬ ಪಾಶ ಮಮತೆ ಎನ್ನ ಕೊರಳಬಿಡದೆ ಸುತ್ತಿಕೊಂಡಿತಲ್ಲಯ್ಯಪಡೆದ ದ್ರವ್ಯವೆಲ್ಲ ವಸ್ತು ಕ್ಷೇತ್ರಂಗಳ ಕಾಣದೆ ನಿತ್ಯನಡೆದುದ ವಿಸ್ತರಿಸಲಾರೆ ನೀಲಮೇಘಶ್ಯಾಮ ನಿನ್ನ||2|| ಘೋರ ಸಂಸಾರವೆಂಬ ವಾರಿಧಿಯೊಳಗೆ ಬಿದ್ದುಪಾರಗಾಣದವನಾದೆನಲ್ಲಯ್ಯಧೀರಕರ್ತನಾದ ಬಾಡದಾದಿಕೇಶವೇಶ ಸರ್ವಸಾರಿದೆ ಸಲಹೊ ಎನ್ನುದ್ಧಾರಿ ಮುದ್ದುಕೃಷ್ಣ ನಿನ್ನ ||3||

ದಾಸಾರ್ಯರ ದಾಸರ ದಾಸ ನಾನು Read More »

ದಾಸನಾಗೋ ಭವಪಾಶನೀಗೋ

ದಾಸನಾಗೋ ಭವಪಾಶನೀಗೋ – ವಿಶೇಷನಾಗೋ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ – ಸಂತೋಷಿಯಾಗೊ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ – ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ – ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ – ಇದು

ದಾಸನಾಗೋ ಭವಪಾಶನೀಗೋ Read More »

ದಾಸನಾಗಬೇಕು ಸದಾಶಿವನ ದಾಸನಾಗಬೇಕು

ದಾಸನಾಗಬೇಕು ಸದಾಶಿವನ ದಾಸನಾಗಬೇಕು ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ಮನದ ಕಲ್ಮಷ ಕಳೆದು – ಮಹಾದೇ-ವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ ಗಡಿಯನು ದಾಟುತ ||1|| ತನುವು ಅಸ್ಥಿರವೆನುತ – ತಿಳಿದು ಶಂಕರನ ಹೃದಯವ ಕಾಣುತಘನವಾದ ಇಂದ್ರಜಾಲವ ಮಾಯೆಯೆನುತಬಿನುಗು ಸಂಸಾರದ ಮಮತೆಯ ಬಿಡುತ ||2|| ಆರು ಚಕ್ರದಿ ಮೆರೆವ – ಅಖಂಡನಮೂರು ಗುಣವ ತಿಳಿದುಆರು ಮೂರು ಹದಿನಾರು ತತ್ತ್ವವ ಮೀರಿತೋರುವ ಕಾಗಿನೆಲೆಯಾದಿಕೇಶವನಡಿ ||3||

ದಾಸನಾಗಬೇಕು ಸದಾಶಿವನ ದಾಸನಾಗಬೇಕು Read More »

ದಾಸ ಪಟ್ಟವೋ ಸನ್ಯಾಸ ಪಟ್ಟವೋ

ದಾಸ ಪಟ್ಟವೋ ಸನ್ಯಾಸ ಪಟ್ಟವೋ ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆ ಮಂಡೆ ಬೋಳು ಮಾಡಿ ನಾಮದುಂಡೆಯನ್ನು ಬರೆದು ಕೆಡಿಸಿಕಂಡಕಂಡವರನು ಕೂಡಿಭಂಡ ಜನ್ಮ ಹೊರೆಯುವವಗೆ ||1|| ಅವರಿವರ ಕೈಯ ನೋಡಿ ಹ-ಲವು ಕೆಲವು ಮಾತನಾಡಿ ಹ-ಲವ ಹಂಬಲಿಸಿ ದಿ-ನವ ಕಳೆದು ಉಳಿದು ಬಾಳುವಗೆ ||2|| ಬೆಂದ ಸಂಸಾರವೆಂಬಬಂಧನದೊಳಗೆ ಸಿಲುಕಿಕೊಂಡುಚೆಂದಾದಿಕೇಶವನ್ನಒಂದು ಬಾರಿ ನೆನೆಯದವಗೆ ||3||

ದಾಸ ಪಟ್ಟವೋ ಸನ್ಯಾಸ ಪಟ್ಟವೋ Read More »

ದಾಸ ದಾಸರ ಮನೆಯ ದಾಸಿಯರ ಮಗ ನಾನು

ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ ||1|| ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ ||2|| ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ

ದಾಸ ದಾಸರ ಮನೆಯ ದಾಸಿಯರ ಮಗ ನಾನು Read More »

ದಾನಧರ್ಮವ ಮಾಡಿ ಸುಖಯಾಗು ಮನವೆ

ದಾನಧರ್ಮವ ಮಾಡಿ ಸುಖಯಾಗು ಮನವೆ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ ||1|| ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ||2|| ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ ||3|| ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊe್ಞÁನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ

ದಾನಧರ್ಮವ ಮಾಡಿ ಸುಖಯಾಗು ಮನವೆ Read More »

ಶ್ರೀರಾಮಕೃಷ್ಣ-ಸುಪ್ರಭಾತಮ್

ಧರ್ಮಸ್ಯ  ಹಾನಿಮಭಿತಃ  ಪರಿದೃಶ್ಯ ಶೀಘ್ರಂ ಕಾಮಾರಪುಷ್ಕರ ಇತಿ ಪ್ರಥಿತೇ ಸಮೃದ್ಧೇ | ಗ್ರಾಮೇ ಸುವಿಪ್ರಸದನೇ ಹ್ಯಭಿಜಾತ ದೇವ ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||   ಬಾಲ್ಯೇ ಸಮಾಧ್ಯನುಭವಃ ಸಿತಪಕ್ಷಿಪಂಕ್ತಿಂ ಸಂದೃಶ್ಯ ಮೇಘಪಟಲೇ  ಸಮವಾಪಿ ಯೇನ | ಈಶೈಕ್ಯವೇದನಸುಖಂ ಶಿವರಾತ್ರಿಕಾಲೇ ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||   ನಾನಾವಿಧಾನಯಿ ಸನಾತನಧರ್ಮಮಾರ್ಗಾನ್ ಕ್ರೈಸ್ತಾದಿ ಚಿತ್ರನಿಯಮಾನ್ ಪರದೇಶಧರ್ಮಾನ್ | ಆಸ್ಥಾಯ ಚೈಕ್ಯಮನಯೋರನುಭೂತವಾಂಸ್ತ್ವಂ ಶ್ರೀರಾಮಕೃಷ್ಣಭಗವನ್ ತವ ಸುಪ್ರಭಾತಮ್ ||   ಹೇ ಕಾಲಿಕಾ-ಪದ-ಸರೋರುಹ-ಕೃಷ್ಣ-ಭೃಂಗ ಮಾತುಸ್ಸಮಸ್ತ-ಜಗತಾಮಪಿ ಶಾರದಾಯಾಃ | ಐಕ್ಯ0 ಹ್ಯದರ್ಶಿ ತರಸಾ ಪರಮಂ

ಶ್ರೀರಾಮಕೃಷ್ಣ-ಸುಪ್ರಭಾತಮ್ Read More »

ಗಂಗಾ ಸ್ತೋತ್ರಂ

ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ | ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 || ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ | ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 || ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ | ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 || ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ | ಮಾತರ್ಗಂಗೇ

ಗಂಗಾ ಸ್ತೋತ್ರಂ Read More »

ದ್ವಾದಶಜ್ಯೋತಿರ್ಲಿಂಗಸ್ತೋತ್ರಮ್

ಸೌರಾಷ್ಟ್ರದೇಶೇ ವಿಶದೇಽತಿರಮ್ಯೇ ಜ್ಯೋತಿರ್ಮಯಂ ಚಂದ್ರಕಲಾವತಂಸಮ್ । ಭಕ್ತಿಪ್ರದಾನಾಯ ಕೃಪಾವತೀರ್ಣಂ ತಂ ಸೋಮನಾಥಂ ಶರಣಂ ಪ್ರಪದ್ಯೇ ॥ 1॥ ಶ್ರೀಶೈಲಶೃಂಗೇ ವಿಬುಧಾತಿಸಂಗೇ ತುಲಾದ್ರಿತುಂಗೇಽಪಿ ಮುದಾ ವಸಂತಮ್ । ತಮರ್ಜುನಂ ಮಲ್ಲಿಕಪೂರ್ವಮೇಕಂ ನಮಾಮಿ ಸಂಸಾರಸಮುದ್ರಸೇತುಮ್ ॥ 2॥ ಅವಂತಿಕಾಯಾಂ ವಿಹಿತಾವತಾರಂ ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ । ಅಕಾಲಮೃತ್ಯೋಃ ಪರಿರಕ್ಷಣಾರ್ಥಂ ವಂದೇ ಮಹಾಕಾಲಮಹಾಸುರೇಶಮ್ ॥ 3॥ ಕಾವೇರಿಕಾನರ್ಮದಯೋಃ ಪವಿತ್ರೇ ಸಮಾಗಮೇ ಸಜ್ಜನತಾರಣಾಯ । ಸದೈವಮಾಂಧಾತೃಪುರೇ ವಸಂತಮೋಂಕಾರಮೀಶಂ ಶಿವಮೇಕಮೀಡೇ ॥ 4॥ ಪೂರ್ವೋತ್ತರೇ ಪ್ರಜ್ವಲಿಕಾನಿಧಾನೇ ಸದಾ ವಸಂತಂ ಗಿರಿಜಾಸಮೇತಮ್ । ಸುರಾಸುರಾರಾಧಿತಪಾದಪದ್ಮಂ ಶ್ರೀವೈದ್ಯನಾಥಂ

ದ್ವಾದಶಜ್ಯೋತಿರ್ಲಿಂಗಸ್ತೋತ್ರಮ್ Read More »

ಶ್ರೀಕಾಲಭೈರವಾಷ್ಟಕಂ

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಮ್ । ನಾರದಾದಿಯೋಗಿವೃಂದವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 1॥ ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ । ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 2॥ ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ । ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 3॥ ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ । ವಿನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 4॥ ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶನಂ ಕರ್ಮಪಾಶಮೋಚಕಂ ಸುಶರ್ಮಧಾಯಕಂ ವಿಭುಮ್ । ಸ್ವರ್ಣವರ್ಣಶೇಷಪಾಶಶೋಭಿತಾಂಗಮಂಡಲಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 5॥ ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ

ಶ್ರೀಕಾಲಭೈರವಾಷ್ಟಕಂ Read More »