ಧನ್ಯ ಧನ್ಯವಿದೇ ಸುದಿನ

ಧನ್ಯ ಧನ್ಯವಿದೇ ಸುದಿನ ನಾವೆಲ್ಲರು ಸೇರುವ, ಪುಣ್ಯಭೂಮಿ ಭಾರತಿಯಲಿ ನಿನ್ನ ಸತ್ಯಧರ್ಮಗಳನು ಈ ದಿನವೇ ಸಾರುವ!! ಎದೆ ಎದೆಯೂ ನಿನ್ನ ಧಾಮ ನಿನ್ನ ಪುಣ್ಯ ಮಧುರ ನಾಮ ದಿಗ್ದಿಸೆಗಳ ತುಂಬಿದೆ! ಭಕ್ತವೃಂದ ನಿನ್ನಪಾರ ಮಹಿಮೆಯನ್ನು ಸಾರಿದೆ! ನಾವೆಂದಿಗು ಬಯಸೆವಯ್ಯ ಜನಧನಾದಿ ಗೌರವ, ನಮಗಿಲ್ಲವೋ ಅನ್ಯ ಕಾಮ ಆರ್ತರಾಗಿ ಬಂದೆವಿಲ್ಲಿ ನಂಬಿ ನಿನ್ನ ಪಾದವll ನಿನ್ನ ಪಾದ ಅಮೃತನಿಲಯ ನಮಗಿಲ್ಲವೊ ಮರಣಭಯ! ಜಯತು ಜಯತು-ನಿರ್ಭಯll – ವಚನವೇದ

ಧನ್ಯ ಧನ್ಯವಿದೇ ಸುದಿನ Read More »

ದಯಾಸಾಗರ ನೀನು ದಾತಾರನೈ ನೀನು

ರಾಗಮಾಲಿಕೆ – ಝಪತಾಲ ದಯಾಸಾಗರ ನೀನು ದಾತಾರನೈ ನೀನು ನಾನೇಕೆ ದೀನನಾಗುಳಿಯಲಿನ್ನು || ಹೇ ದೇವ ನೀನೆನಗೆ ನೀಡಿರುವೆ ಕಣ್ಣೆರಡ ಆದರವು ಕಾಣಲಾರವು ನಿನ್ನನು | ನೀನಾದರೂ ನಿನ್ನ ಸಾಸಿರದ ನಯನದಿಂ ನನ್ನ ದುರವಸ್ಥೆಯನು ಕಾಣೆಯೇನು || ನನಗೊಂದು ಹೃದಯವಿದೆ ಅದ ಕೊಟ್ಟವನು ನೀನೆ ಆದರದು ಬತ್ತಿರುವ ಕೆರೆಯಂತಿದೆ ನಿನ್ನ ಹೃದಯಸರೋವರದ ಸುಧೆಯನೊಂದಿಷ್ಟು ನನ್ನೆದೆಗೆ ನೀನೇ ಹರಿಸಬಾರದೆ|| ಆನಂದಘನ ನೀನು ನಿನ್ನ ಪುತ್ರನು ನಾನು ಬರಲಿ ಆ ಆನಂದ ಎನ್ನ ಎದೆಗೂ| ನೀನು ನನ್ನವನಯ್ಯ ನಾನಂತು ನಿನ್ನವನೇ

ದಯಾಸಾಗರ ನೀನು ದಾತಾರನೈ ನೀನು Read More »

ದರುಶನ ನೀಡು ಹೇ ಪ್ರಭು

ಬೇಹಾಗ್ – ಏಕತಾಲ ದರುಶನ ನೀಡು ಹೇ ಪ್ರಭು || ನನ್ನ ಹೃದಯಪದುಮ ನಿನ್ನ ಚರಣಪದುಮಕರ್ಪಿತ||. ನೀನೆ ನನ್ನ ಪರಮಬಂಧು ಚರಮಗತಿಯು ನೀ ಪ್ರಭು|| – ಸ್ವಾಮಿ ಪುರುಷೋತ್ತಮಾನಂದ

ದರುಶನ ನೀಡು ಹೇ ಪ್ರಭು Read More »

ಧೀರ ಮಾರುತಿ

ಧೀರ ಮಾರುತಿ ಗಂಭೀರ ಮಾರುತಿ ವೀರ ಮಾರುತಿ ಸಮರಶೂರ ಮಾರುತಿ || ಶಕ್ತ ಮಾರುತಿ ರಾಮಭಕ್ತ ಮಾರುತಿ ಗೀತ ಮಾರುತಿ ಸಂಗೀತ ಮಾರುತಿ || ಯೋಗಿ ಮಾರುತಿ ಪರಮ ತ್ಯಾಗಿ ಮಾರುತಿ ತ್ಯಾಗಿ ಮಾರುತಿ ವಿರಾಗಿ ಮಾರುತಿ || ಪವನ ಮಾರುತಿ ಲಂಕಾದಹನ ಮಾರುತಿ ಮೌನಿ ಮಾರುತಿ ಮಹಾಜ್ಞಾನಿ ಮಾರುತಿ || ದಕ್ಷ ಮಾರುತಿ ಲಕ್ಷ್ಮಣರಕ್ಷ ಮಾರುತಿ ಸದಯ ಮಾರುತಿ ರಾಮಹೃದಯ ಮಾರುತಿ ||

ಧೀರ ಮಾರುತಿ Read More »

ದಾಸನ ಮಾಡಿಕೊ

ದಾಸನ ಮಾಡಿಕೊ ಎನ್ನ-ಸ್ವಾಮಿ ಸಾಸಿರನಾಮದ ವೆಂಕಟರಮಣ || ದುರುಬುದ್ಧಿಗಳನ್ನೆಲ್ಲ ಬಿಡಿಸೋ- ನಿನ್ನಕರುಣಕವಚವೆನ್ನ ಹರಣಕೆ ತೊಡಿಸೋ | ಚರಣಸೇವೆ ಎನಗೆ ಕೊಡಿಸೋ-ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ || ದೃಢಭಕ್ತಿ ನಿನ್ನಲಿ ಬೇಡಿ-ನಾ- ನಡಿಗೆರಗುವೆನಯ್ಯ ಅನುದಿನ ಪಾಡಿ | ಕಡೆಗಣ್ಣಲೇಕೆನ್ನ ನೋಡಿ-ಬಿಡುವೆ ಕೊಡು ನಿನ್ನ ಧ್ಯಾನವ ಮನಶುಚಿಮಾಡಿ || ಮರೆಹೊಕ್ಕವರ ಕಾವ ಬಿರುದು-ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು | ದುರಿತಗಳೆಲ್ಲವ ತರಿದು-ಸಿರಿ ಪುರಂದರವಿಠಲ ಎನ್ನನು ಪೊರೆದು || -ಪುರಂದರದಾಸ

ದಾಸನ ಮಾಡಿಕೊ Read More »

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು.

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು. ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು, ನೆನಹಿನ ವ್ಯಾಪ್ತಿ ಬಿಡದು. ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು. ಸಂಸಾರವುಳ್ಳಲ್ಲಿ ಭವ ಬೆನ್ನ ಬಿಡದು. ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು. ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ.

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು. Read More »

ದೇವಲೋಕದವರಿಗೂ ಬಸವಣ್ಣನೆ ದೇವರು.

ದೇವಲೋಕದವರಿಗೂ ಬಸವಣ್ಣನೆ ದೇವರು. ಮತ್ರ್ಯಲೋಕದವರಿಗೂ ಬಸವಣ್ಣನೆ ದೇವರು. ನಾಗಲೋಕದವರಿಗೂ ಬಸವಣ್ಣನೆ ದೇವರು. ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು.

ದೇವಲೋಕದವರಿಗೂ ಬಸವಣ್ಣನೆ ದೇವರು. Read More »

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ?

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ? ಆವನೆಂದರಿಯೆ ಭಾವನಟ್ಟುದವ್ವಾ. ಕಳೆವರಿದು ಅಂಗ ಗಸಣೆಯಾದುದವ್ವಾ. ಇನ್ನಾರೇನೆಂದಡೆ ಬಿಡೆನು ಚೆನ್ನಮಲ್ಲಿಕಾರ್ಜುನಲಿಂಗವ.

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ? Read More »

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, ವಾಯುವಿನ ಚಲನೆ, ತರುಗುಲ್ಮ ಲತಾದಿಗಳಲ್ಲಿಯ ತಳಿರು ಪುಷ್ಪ ಷಡುವರ್ಣಂಗಳೆಲ್ಲ ಹಗಲಿನ ಪೂಜೆ. ಚಂದ್ರಪ್ರಕಾಶ ನಕ್ಷತ್ರ ಅಗ್ನಿ ವಿದ್ಯುತ್ತಾದಿಗಳು ದೀಪ್ತಮಯವೆನಿಸಿಪ್ಪವೆಲ್ಲ ಇರುಳಿನ ಪೂಜೆ. ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, Read More »

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ.

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ. ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ ಎನ್ನ ಆರತವೆಲ್ಲವೂ ಲಿಂಗಾ ನಿಮ್ಮಲ್ಲಿ ನಟ್ಟಿತು ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನು ಕರಸ್ಥಲದಲ್ಲಿ ನೋಡಿ ಕಂಗಳೆ ಪ್ರಾಣವಾಗಿರ್ದೆನಯ್ಯಾ.

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ. Read More »

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗುಮಾಡಬಂದವರಲ್ಲ. ಮನದ ಮೇಲೆ ಬಂದು ನಿಂದು ಜರೆದು ನುಡಿದು ಪಥವ ತೋರಬಲ್ಲಡಾತನೆ ಸಂಬಂಧಿ. ಹಾಗಲ್ಲದೆ ಅವರಿಚ್ಚೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮಚ್ಚುವನೆ ಚೆನ್ನಮಲ್ಲಿಕಾರ್ಜುನ ?

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ Read More »

ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ,

ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೋಟವ ಮಾಡಿದಡೆ, ತುಂಬಿದ ತೊರೆಯ ನಡುವೆ ಮಾಮರ ಕಾತಂತೆ. ಚೆನ್ನಮಲ್ಲಿಕಾರ್ಜುನದೇವಾ, ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ.

ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, Read More »

ಧ್ಯಾನಿಸು ಶ್ರೀಹರಿಯ ಧ್ಯಾನಿಸು

ಧ್ಯಾನಿಸು ಶ್ರೀಹರಿಯ ಧ್ಯಾನಿಸು ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ಪರಿಮಿತಲ್ಲದ ಬೀಜದಿರವನರಿತು ನಿತ್ಯ ||1|| ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು

ಧ್ಯಾನಿಸು ಶ್ರೀಹರಿಯ ಧ್ಯಾನಿಸು Read More »

ಧ್ಯಾನವನು ಮಾಡು ಬಿಂಬ ಮೂರುತಿಯ

ಧ್ಯಾನವನು ಮಾಡು ಬಿಂಬ ಮೂರುತಿಯ ಆನಂದದಲಿ ಕುಳಿತು ಅಂತರಂಗದಲಿ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ||1|| ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ ||2|| ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು||3|| ತಿರುಗಿ ಮೆಟ್ಟಿಕೆ

ಧ್ಯಾನವನು ಮಾಡು ಬಿಂಬ ಮೂರುತಿಯ Read More »

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ | ಜ್ಞಾನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ | ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ | ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ | ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ | ವರದೇಶ ವೈಕುಂಠದಲ್ಲಿಟ್ಟನು ಸಪ್ತ | ಪಿರಿಸಹಿತ ತೀರ್ಥರಾಜಾ || ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ | ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ | ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ | ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ Read More »

ಧನ್ಯನೋ ಶೇಷಗಿರಿದಾಸ ನೀನೂ

ಧನ್ಯನೋ ಶೇಷಗಿರಿದಾಸ ನೀನೂ ಪುಣ್ಯವಂತನು ಅಹುದೊ ಮನೊ ವಾಚದಲಿ ನಿತ್ಯ ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ ರಂಗ ಮಧ್ವನ ಸ್ಮರಣೆ ಮಾಡಿಕೊಳುತ ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ ||1|| ಸತ್‍ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ ನೋತ್ಸಾಹ ಮಾತ್ರ ಬಂದಾಗಲಿಲ್ಲಾ ವತ್ಸ ಕೇಳು ಉಪಸರ್ಗ ಕೂಡಿದ ನಾಭಿ ತತ್ಸಮಾನಾಯಿತೊ ಇಂದಿನಾರಭ್ಯವೂ||2|| ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ ಯಿಂದ ಹಿಂದಕೆ ಒಬ್ಬನಿಂದಂತೇವೆ ಇಂದು ಎನಗಾಯಿತೊ ಭೂಮಿಯೊಳಗೆ ಋಣಾನು- ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ||3|| ಪರಿಣಾಮಕೆ ನಿನಗೆ

ಧನ್ಯನೋ ಶೇಷಗಿರಿದಾಸ ನೀನೂ Read More »

ದೋಷವರ್ಜಿತ ಬಾರೈ ವೆಂಕಟೇಶಾ

ದೋಷವರ್ಜಿತ ಬಾರೈ ವೆಂಕಟೇಶಾ ಶ್ರೀನಿವಾಸ ವಾಸವಿಸೂನು ಚರಣರಹಿತ ಪತಿ ತ್ಯಜನೆ ತಥ ಚರಣಪಾಣಿ ಪರಮಾನಂದಾ ಚರಣಾಯುಧನಾದವಗೆ ಸೋಕಿದಳ ಚರಣದಿ ಪಾವನಗೈಸಿದೆ ದೇವಾ||1|| ಪತಿ ಗುರು ಪಿತೃ ಪಿತಾಮಹಾ ದೈ ವತ ಗುರೋರ್ಗುರು ಸ್ವಶುರ ಜಾರಾ ಅತಿಶಯ ಭೂತಿರಭೂತಿ ಎಂದು ಸಂ ತತ ಉಪಾಸ್ಯತನಾಗಿ ಮೆರೆವನೆ ||2|| ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ ಪಂಚ ರೂಪದಿ ಕೊಂಬನಾಡಿಸ್ಥ ಪಂಚಜನ ಪಂಚಮೊಗವೇಶ ತಾಳಿದ ಪಂಚ ಕುಸುಮಸಾರ ಮಧು ವಿದ್ಯಮೂರ್ತಿ ||3|| ಹೃದಯಾಖ್ಯಪುರ ಪಂಚದ್ವಾರದಲಿ ನೀ ವಿಧಿ ಭವರಿಂದಾರ್ಚನೆ ಗೊಂಬೆ ಪದುಮಾಷ್ಟ ದಳದಲಿ ಪ್ರಹರೇಯ

ದೋಷವರ್ಜಿತ ಬಾರೈ ವೆಂಕಟೇಶಾ Read More »

ದೋಷ ದೂರ ಜನಾರ್ದನ ದೋಷ ದೂರಾ

ದೋಷ ದೂರ ಜನಾರ್ದನ ದೋಷ ದೂರಾ ದೋಷ ದೂರ ಎನ್ನ ಸಾಕುವುದು ಪರಾಶರವರದಾ ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ ||1|| ಕಂಡೆ ನಾ ನಿನ್ನಯ ಪುಂಡರೀಕ ಪಾದ ಚಂಡಾಘ ತಿಮಿರ ಮಾರ್ತಾಂಡ ಮುರವೈರಿ ||2|| ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ ||3||

ದೋಷ ದೂರ ಜನಾರ್ದನ ದೋಷ ದೂರಾ Read More »

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ ವರನ ಶಾಪದಲಿ ಪಾವಕನು ಬಂದು ಪರಮತಪ ಮಾಡಿದನು ವರವಿತ್ತ ಹರನೊಲಿದು ಧರೆಯೊಳಗೆ ಈ ದೇವನಿ ಪುಷ್ಕರಣಿ ಎನಿಸುವುದು||1|| ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ ಶಿವನೊಲಿಸೆ ಅಮೃತವ ಮಾಳ್ಪೆನೆಂದು ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ ಸವನ ಕೈಕೊಳಲು ಶ್ರೀರಾಮನಿಂದಲಿಗತಿ ||2|| ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ ಗಾಯತ್ರಿ ಒಲಿಸಿದನು ಈ ಸಿಲೆಯಲೀ ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ Read More »

ದೇವಿ ಕಾರುಣ್ಯದಿಂದ ಬಂದು ಎಂದೆಂದು

ದೇವಿ ಕಾರುಣ್ಯದಿಂದ ಬಂದು ಎಂದೆಂದು ಬಿಡದೆಂದು ದಯದಿಂದ ಪಾಲಿಸಿ ನಿಂದು ಕಮಲಲೋಚನೆ ಸಾಮಜಯಾನೆ ಶಶಾಂಕ ವದನೆ ವಿಮಲಾಬ್ಜ ಸದನೆ ಕೋಕಿಲ ಗಾನೆ ಆನಂದಪೂರ್ಣೆ ನಮೋ ನಮೋ ರಮೆ ಉತ್ತಮೆ ಅನುಪಮೆ ಶಮೆಕ್ಷಮೆ ಹರಿಗಸಮೆ ಸತತಾಗಮೆ ಗಗನಿಜಿತ ಯಮೆ ಪರಮೇಶ್ವರಿ ಅ ಉಮೆ ಈ ಪರಾಕ್ರಮೆ||1|| ಲೋಕ ತರುವಾತ ತನಯವಾಕು ಇವು ಮೂರು ಬೇಕು ಬೇಕೆಂದು ತುತಿಸಿದೆ ಪರಾಕು ಸಂತಾಪ ನೂಕು ಲೋಕ ಜನನಿಯೆ ವೈದೀಕ ಪ್ರಾರ್ಥನೆ ಇದು ನೀ ಕೇಳು ಕರುಣದಿ ಸಾಕು ಸಕಲ ತನುಪ್ರಾಕು ಕುರ್ಮದಿ

ದೇವಿ ಕಾರುಣ್ಯದಿಂದ ಬಂದು ಎಂದೆಂದು Read More »

ದೇವರ ದೇವ ನಿನ್ನ ಬಲವಲ್ಲದೆ

ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ ಉಂಟು ಎನಗೆ ಇಂದು ನಿನ್ನ ನೆನಹು ಇಂದು ಬಲವೊ ಅರ ವಿಂದ ಪದ ನೋಡುವದು ಅರ್ಕ ಬಲವು ವಂದನ ಗೈದು ಮಂತ್ರಿ ಬಲವೋ ಎನಗೆ ನಿಂದು ಕೊಂಡಾಡುವದು ಕಾವ್ಯ ಬಲವೊ ||1|| ಆರಾಧನೆ ಮಾಡುವುದು ಅಂಗಾರಕನ ಬಲವೊ ಸಾರಿ ಪೇಳುವದೆನಗೆ ಸೌಮ್ಯ ಬಲವೊ ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ ಹಾರೈಸಿ ಹಿಗ್ಗುವದು ರಾಹು ಬಲವೊ ||2|| ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ ವಾಲಗ ಮಾಡುವದು ತಾರಾಬಲವೊ

ದೇವರ ದೇವ ನಿನ್ನ ಬಲವಲ್ಲದೆ Read More »

ದೂರ ನೋಡುವರೆ ರಂಗಯ್ಯ ಎನ್ನ

ದೂರ ನೋಡುವರೆ ರಂಗಯ್ಯ ಎನ್ನ ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ ಲೇಶಮಾತ್ರ ಭಕುತಿಯಿಲ್ಲ, ಆಸೆ ಬದ್ಧನಾಗಿ ಬಹಳ ಘಾಸಿಪಟ್ಟೆನೊ-ದಾಶರಥಿ ||1|| ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ ಯುಕುತಿಯಿಂದಲಿ ವಲಿವನಲ್ಲವೊ- ಮುಕುತಿದಾಯಕ ನಿನ್ನ ಕಾಣದೆ ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ- ಶಕುತಿಯೆಲ್ಲ ನಷ್ಟವಾಯಿತು ||2|| ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ ಹರಿಯೆ ಯೆನ್ನ ಮರೆತು ಬಿಡುವರೆ- ಕರಿಯು ಹರಿಯೇ

ದೂರ ನೋಡುವರೆ ರಂಗಯ್ಯ ಎನ್ನ Read More »

ದುರ್ಲಭ ಇದು ಕಲಿಯುಗದೊಳಗೆ ಕಾಣಾ

ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಸುರನರ ಉರಗರು ಕಿಂನರಕಿಂಪುರುಷರು ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಹರಿ ಸರಸಿಜ ಸಂಭವ ಪುರಹರ ಮೂವನ ಬಲ್ಲಿದರೀ ದರಿಯೊಳು ಇದರಲಿ ಹರಿ ಭಕುತಿಗೆ ಸರಿ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ ||1|| ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ

ದುರ್ಲಭ ಇದು ಕಲಿಯುಗದೊಳಗೆ ಕಾಣಾ Read More »

ದುರಿತ ದುರ್ಗತಿಗೆ ಆವಾನಂಜನೊ

ದುರಿತ ದುರ್ಗತಿಗೆ ಆವಾನಂಜನೊ ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ ಬಲುದೂರ ತಿರುಗಾಡಿ ಬಪ್ಪನೇಕೆ ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ ಜಲಜನಾಭನ ಪಾದ ನೆಳಲು ಸೇರಿದವ ||1|| ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ ಕಾನÀನದಲಿ ಬಂದು ಸೇರನೇಕೆ ದಾನ ಧರ್ಮಂಗಳ ಮಾಡದೆ ಇರನೇಕೆ ದಾನವಾರಿಯ ಕಾಣುತಲಿಪ್ಪವ ||2|| ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ ಅಡಿಗಡಿಗೆ ಜಪಮಣಿ ಎಣಿಸನೇಕೆ ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ

ದುರಿತ ದುರ್ಗತಿಗೆ ಆವಾನಂಜನೊ Read More »

ದುರಿತ ಜೀಮೂತವಾತ

ದುರಿತ ಜೀಮೂತವಾತ ಪೊರಿಯಯ್ಯ ನಿನಗೆ ನಿರುತ ಧರಣಿಯೊಳಗೆ ವಿಸ್ತರಿಸಿ ಬಲ್ಲವರಾರು ಗುರುವೆ ನಿಜ ನಮಿತರ ಸುರತರುವೆ ನಂಬಿದೆ ನಿನ್ನ ಪಾದವಂಬುಜವನು ಗಾಲ ಬೆಂಬಿಡದಲೆ ನಾನೆಂಬೋದು ಬಿಡಿಸಿಂದು ಬೆಂಬಲವಾಗು ಆರೆಂಬ ಖಳರ ನೀಗು ಇಂಬಾಗಿ ನೋಡು ದಿವ್ಯಾಂಬಕದಿಂದ ವೇಗ ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ ಸಂಭ್ರಮದಲಿ ಹರಿದೊಂಬಲ ಬಯಸುವ ಹಂಬಲಿಗರ ಕೂಡ ಇಂತು ತೋರು ಬಲು ಗಂಭೀರ ಕರುಣಿ ||1|| ಎಣೆಗಾಣೆÉ ನಿಮಗೆ ಕುಂಭಿಣಿಯೊಳಗೆಲ್ಲ ಯತಿ ಮಣಿಯೆ ರಾಮವ್ಯಾಸರ ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ ಮನಸಿಜ ಶರಭೀಮ ಮನದಣೆ ಗುಣಿಸಿ

ದುರಿತ ಜೀಮೂತವಾತ Read More »