ಕಡೆ ಹಾಯಿಸೊ ಕಮಲ ಲೋಚನನೆ

ಕಡೆ ಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ|| 1|| ಕೊಮಲೆವ ದುಷ್ಕøತವೆಂಬ ಗಜಕೆ ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ ||2|| ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು||3||

ಕಡೆ ಹಾಯಿಸೊ ಕಮಲ ಲೋಚನನೆ Read More »

ಕಂಡೆ ಶ್ರೀಹರಿ ದಿವ್ಯಪಾದ

ಕಂಡೆ ಶ್ರೀಹರಿ ದಿವ್ಯಪಾದ – ಬ್ರ-ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ ಸಿರಿಯು ಸೇವಿಪ ವರ ಪಾದ – ನಮ್ಮಗರುಡನಿಂದ ಹೊತ್ತು ತಿರುಗುವ ಪಾದತರಳ ಧ್ರುವನ ಕಾಯ್ದ ಪಾದ – ಮುನಿಸುರರು ನಮಿಸುವ ಲಲಿತ ಪಾದ 1 ಸರಸಿಜೋದ್ಭವ ವಂದ್ಯ ಪಾದಪುರಹರ ನಮಿತ ಪರಿಪೂರ್ಣ ಪಾದನರಗೆ ಸಾರಥಿಯಾದ ಪಾದಕೌರವ ಮೂಲ ಮುರಿದಿಟ್ಟ ಪಾದ2 ದಿವಿಜರಾಜನಿಗೊಲಿದ ಪಾದಅವಿವೇಕಿ ದಾನವರ ಕೊಂದ ಪಾದಬುವಿ ಗಯಾಪುರ ಶ್ರೇಷ್ಠ ಪಾದಭವ ಹಿಂಗಿಪಾದಿಕೇಶವ ಪಾದ3

ಕಂಡೆ ಶ್ರೀಹರಿ ದಿವ್ಯಪಾದ Read More »

ಕಂಡೆ ನಾ ತಂಡ ತಂಡದ ಹಿಂಡು

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ – ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ||1|| ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ||2|| ಪುರಜನರು ಹಾಯೆನಲು ಸುರರು ಹೂಮಳೆಗರೆಯೆತರತರದ ವಾದ್ಯ ಸಂಭ್ರಮಗಳಿಂದಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವಕರುಣಾಳು ಕಾಗಿನೆಲೆಯಾದಿಕೇಶವನ||3||

ಕಂಡೆ ನಾ ತಂಡ ತಂಡದ ಹಿಂಡು Read More »

ಶ್ರೀ ವೆಂಕಟೇಶ್ವರ ಸುಪ್ರಭಾತ

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ || 1 || ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ | ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು || 2 || ಮಾತಸ್ಸಮಸ್ತ ಜಗತಾಂ ಮಧುಕೈಟಭಾರೇಃ ವಕ್ಷೋವಿಹಾರಿಣಿ ಮನೋಹರ ದಿವ್ಯಮೂರ್ತೇ | ಶ್ರೀಸ್ವಾಮಿನಿ ಶ್ರಿತಜನಪ್ರಿಯ ದಾನಶೀಲೇ ಶ್ರೀ ವೇಂಕಟೇಶ ದಯಿತೇ ತವ ಸುಪ್ರಭಾತಮ್ || 3 || ತವ ಸುಪ್ರಭಾತಮರವಿಂದ ಲೋಚನೇ ಭವತು ಪ್ರಸನ್ನಮುಖ ಚಂದ್ರಮಂಡಲೇ | ವಿಧಿ ಶಂಕರೇಂದ್ರ ವನಿತಾಭಿರರ್ಚಿತೇ ವೃಶ

ಶ್ರೀ ವೆಂಕಟೇಶ್ವರ ಸುಪ್ರಭಾತ Read More »

ಶ್ರೀಕಾಲಭೈರವಾಷ್ಟಕಂ

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಮ್ । ನಾರದಾದಿಯೋಗಿವೃಂದವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 1॥ ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ । ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 2॥ ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ । ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 3॥ ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ । ವಿನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 4॥ ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶನಂ ಕರ್ಮಪಾಶಮೋಚಕಂ ಸುಶರ್ಮಧಾಯಕಂ ವಿಭುಮ್ । ಸ್ವರ್ಣವರ್ಣಶೇಷಪಾಶಶೋಭಿತಾಂಗಮಂಡಲಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 5॥ ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ

ಶ್ರೀಕಾಲಭೈರವಾಷ್ಟಕಂ Read More »

ಕೋಈ ಕಹಿಯೋ ರೇ

ಕೋಈ ಕಹಿಯೋ ರೇ ಪ್ರಭು ಆವನಕೀ| ಆವನಕೀ ಮನ ಭಾವನಕೀ|| ಆಪ ನ ಆವೈ ಲಿಖ ನಹಿ ಭೇಜೈ| ಬಾಣ ಪಡೀ ಲಲಚಾವನಕೀ|| ಏ ದೋವು ನೈನ ಕಹ್ಯೋ ನಹಿ ಮಾನೈ| ನದಿಯಾ ಬಹೈ ಜೈಸೇ ಸಾವನ ಕೀ|| ಕಹಾಂ ಕರೂ ಕಛು ನಹಿ ಬಸ ಮೇರೋ| ಪಾಖ್ ನಹಿ ಉಡ ಜಾವನಕೀ|| ಮೀರಾ ಕಹೈ ಪ್ರಭು ಕಬ ರೇ ಮಿಲೋಗೇ| ಚೇರಿ ಭಇ ಹೂಂ ತೇರೇ ದಾವನಕೀ||                                                    —-ಮೀರಾ

ಕೋಈ ಕಹಿಯೋ ರೇ Read More »

ಕೇಶವ ಕುರು ಕರುಣಾ

ಕೇಶವ ಕುರು ಕರುಣಾ ದೀನೇ ಕುಂಜಕಾನನಚಾರೀ ಮಾಧವ ಮನೋಮೋಹನ ಮೋಹನ ಮುರಲೀಧಾರೀ ಹರಿಬೋಲ್ ಹರಿಬೋಲ್ ಹರಿಬೋಲ್ ಮನ ಆಮಾರ್|| ವ್ರಜಕಿಶೋರ ಕಾಲೀಯಹರ ಕಾತರ ಭಯಭಂಜನ ನಯನ ಬಾಕಾ ಬಾಕಾ ಶಿಖಿಪಾಖಾ ರಾಧಿಕಾಹೃದಿರಂಜನ ಗೋವರ್ಧನಧಾರಣ ವನಕುಸುಮಭೂಷಣ ದಾಮೋದರ ಕಂಸದರ್ಪಹಾರೀ ಶ್ಯಾಮ ರಾಸರಸವಿಹಾರೀ||                                —-ಗಿರೀಶಚಂದ್ರ ಘೋಷ್

ಕೇಶವ ಕುರು ಕರುಣಾ Read More »

ಕೇ ತೋಮಾರೇ

ಕೇ ತೋಮಾರೇ ಜಾನ್ ತೇ ಪಾರೇ ತುಮಿ ನಾ ಜಾನಾಲೇ ಪೊರೇ ವೇದ ವೇದಾಂತ ಪಾಯ್ ನಾ ಅಂತ ಖುಜೇ ಬೇಡಾಯ್ ಅಂಧಕಾರೇ|| ಯಾಗ ಯಜ್ಞ ತಪೋಯೋಗ ಸಕಲಿ ಹೊಯ್ ಕರ್ಮಭೋಗ ಕರ್ಮ ತೋಮಾರ್ ಮರ್ಮ ಕಿ ಪಾಯ್ ತುಮಿ ಸರ್ವಕರ್ಮಪಾರೇ|| ಸೃಷ್ಟಿ ಜೋಡಾ ತೋಮಾರ್ ಮಾಯಾ ಕಾಯಾ ನಾಇ ಕೇಬೊಲಿ ಛಾಯಾ ಮಾಠೇರ್ ಮಾಝೇ ಆಕಾಶ ಧರಾ ಘುರೇ ಸಾರಾ ಚಾರಿ ಧಾರೇ|| ತುಮಿ ಪ್ರಭು ಇಚ್ಛಾಮಯ್ ಜದಿ ತೋಮಾರ್ ಇಚ್ಛಾ ಹೋಯ್ ಅಸಾಧ್ಯ ಸುಸಾಧ್ಯ

ಕೇ ತೋಮಾರೇ Read More »

ಕೇ ತುಮಿ ಬಾಜಾಲೇ

ಕೇ ತುಮಿ ಬಾಜಾಲೇ ನವೀನ ರಾಗೇತೇ ಭಾರತೇರ ಪ್ರಾಣವೀಣಾ| ಮಧುರ ಝಂಕಾರೇ ಮುಗ್ಧ ಜಗತ ಚಕಿತೇ ಗಾಹೇ ವಂದನಾ|| ಲಲಿತ ಛಂದೇ ಗಭೀರ ಮಂದ್ರೇ ಪೊಶಿಲೊ ಶೇ ತಾನ ರಂಧ್ರೇ ರಂಧ್ರೇ| ಜಾಗಿಲೊ ಸುಪ್ತ ಲುಪ್ತ ಗೌರವ ಭಾರತವರ್ಷ ದೀನಾ|| ಹಿಮಾದ್ರಿಶಿಖರೇ ಜಲನಿಧಿತೀರೇ ಪ್ರಾಚ್ಯೇ ಪ್ರತೀಚ್ಯೇ ದಿಗ್ದಿಗಂತರೇ| ವೇದಾಂತ ಮಹಿಮಾ ಕೇವಲ ಪ್ರಚಾರೇ ವರ್ಣಿತೇ ನಾರಿ ಸೀಮಾ|| ಗುರುಪದೇ ಮನ ಪ್ರಾಣಸಮರ್ಪಣ ಮಹಾಯೋಗಿ ವೇಷ ಕೊರಿಲೇ ಧಾರಣ| ಜ್ಞಾನಭಕ್ತಿಯೋಗ ಜೀವಸೇವಾವ್ರತ ಕೊರಿಲೇ ಉದ್ದೀಪನಾ||                       —-ನೀರದರಂಜನ ಮಜಮದಾರ

ಕೇ ತುಮಿ ಬಾಜಾಲೇ Read More »

ಕೇ ಜಾನೇರೇ ಕಾಲೀ

ಕೇ ಜಾನೇರೇ ಕಾಲೀ ಕೇಮೊನ್ ಷಡ್ಡರ್ಶನೇ ನಾ ಪಾಯ್ ದರಶನ್|| ಮೂಲಾಧಾರೇ ಸಹಸ್ರಾರೇ ಸದಾ ಯೋಗೀ ಕೊರೇ ಮನನ್| ಕಾಲೀ ಪದ್ಮವನೇ ಹಂಸಾಸನೇ ಹಂಸೀರೂಪೇ ಕೊರೇ ರಮಣ್|| ಆತ್ಮಾರಾಮೇರ್ ಆತ್ಮಾ ಕಾಲೀ ಪ್ರಮಾಣ್ ಪ್ರಣವೇರ್ ಮತನ್| ತಾರಾ ಘಟೇ ಘಟೇ ವಿರಾಜಕರೇ ಇಚ್ಛಾಮಯೀರ್ ಇಚ್ಛಾ ಜೇಮೊನ್|| ಕಾಲೀರ್ ಉದರೇ ಬ್ರಹ್ಮಾಂಡ ಭಾಂಡ ಪ್ರಕಾಂಡ ತಾ ಜಾನೋ ಕೇಮೊನ್| ಮಹಾಕಾಲ್ ಜೇನೇಛೇನ್ ಕಾಲೀರ ಮರ್ಮ ಅನ್ಯ ಕೇ ವಾ ಜಾನೇ ತೇಮೊನ್|| ಪ್ರಸಾದ್ ಭಾಷೇ ಲೋಕೇ ಹಾಸೇ ಸಂತರಣೇ

ಕೇ ಜಾನೇರೇ ಕಾಲೀ Read More »

ಕಾಲೀ ಕಾಲೀ ಬೋಲೋ

ಕಾಲೀ ಕಾಲೀ ಬೋಲೋ ರಸನಾ|| ಕೊರ್ ಪದಧ್ಯಾನ್ ನಾಮಾಮೃತಪಾನ್ ಯದಿ ಪೇತೇ ಪ್ರಾಣ್ ಥಾಕೇ ವಾಸನಾ|| ಭಾಯೀ ಬಂಧು ಸುತ ದಾರಾ ಪರಿಜನ್ ಸಂಗೇರ ದೋಸರ್ ನಾಹೇ ಕೋನ ಜನ್| ದುರಂತ ಶಮನ್ ಬಾಧಿಬೇ ಜೊಖೊನ್ ಬಿನೇ ಏ ಚರಣ್ ಕೇಹೊ ಕಾರೋ ನಾ|| ದುರ್ಗಾನಾಮ್ ಮುಖೇ ಬೋಲೋ ಏಕಬಾರ್ ಸಂಗೇರ ಸಂಬಲ್ ದುರ್ಗಾನಾಮ್ ಆಮಾರ್| ಅನಿತ್ಯ ಸಂಸಾರ್ ನಾಹಿ ಪಾರಾವಾರ್ ಸಕಲಿ ಅಸಾರ್ ಭೇಬೇ ದೇಖೋ ನಾ|| ಗ್ಯಾಲೋ ಗ್ಯಾಲೋ ಕಾಲ್ ವಿಫಲೇ ಗ್ಯಾಲೋ ದೇಖೋ

ಕಾಲೀ ಕಾಲೀ ಬೋಲೋ Read More »

ಕರುಣಚೆಯ್ಕಂಬಿಕೇ

ಕರುಣಚೆಯ್ಕಂಬಿಕೇ ದೇವಿ ಮೂಕಾಂಬಿಕೇ ದೇವಿ ಮೂಕಾಂಬಿಕೇ ಸರ್ವಾರ್ಥಸಾಧಿಕೇ|| ಗಿರಿವರತನಯೇ ಕರಿಮುಖನ್ ತಾಯೇ ಸುರಮುನಿಜನಂ ತೋಝಂ ಶಂಕರನ್ ಜಾಯೇ|| ಇಹಪರಮೋದಿನಿ ಮಹಿಷವಿನಾಶಿನಿ ವಿಹಿತ ನಿಖಿಲ ವಸ್ತ್ರಾಲಂಕೃತಭೂಷಿಣಿ|| ವಿಕಸಿತವದನೇ ಸರಸಿಜನಯನೇ ಮೂಕಮಾಂ ವನಮಧ್ಯೇ ಶೋಭಿತಸದನೇ|| ಆಧಿವಿನಾಶಿನಿ ಆನಂದದಾಯಿನಿ ಸಾಧು ಗೀತಾನಂದಂ ಪಾಲನಂ ಚೆಯ್ಕುನೀ||

ಕರುಣಚೆಯ್ಕಂಬಿಕೇ Read More »

ಕರಿ ಗೋಪಾಲ

ಕರಿ ಗೋಪಾಲ ಕೀ ಸಬ ಹೋಈ| ಜೋ ಅಪನೋ ಪುರುಷಾರಥ ಮಾನತ್ ಅತಿಝೂಠೋ ಹೈ ಸೋಈ|| ಸಾಧನ ಮಂತ್ರ ಜಂತ್ರ ಉದ್ಯಮ ಬಲ ಯಹ ಸಬ ಡಾರಹು ಧೋಈ| ಜೋ ಕಛು ಲಿಖಿ ರಾಖಿ ನಂದನಂದನ ಮೇಟಿ ಸಕೈ ನಹಿ ಕೋಈ|| ಸುಖ ದುಃಖ ಲಾಭ ಅಲಾಭ ಸಮಝಿ ತುಮ ಕತಹಿ ಮರತ ಹೌ ರೋಈ| ಸೂರದಾಸ ಸ್ವಾಮೀ ಕರುಣಾಮಯ ಸ್ಯಾಮ ಚರಣ ಮನ ಪೋಈ||                                          —-ಸೂರದಾಸ

ಕರಿ ಗೋಪಾಲ Read More »

ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ ದೀನ ಭಾರತೀಯ ಜನಕೆ| ಪ್ರಾಣ ಮಾನ ದಾನಗೈದ ಮಾನವೇಂದ್ರ ಸ್ವಾಮಿಯೇ|| ಸ್ವರಿಸಿ ನಿಮ್ಮ ಹಿರಿಯ ಪದವ ಧರಿಸಿ ಹೆಮ್ಮೆ ಧೈರ್ಯ ಬಲವ| ಸಿರಿಯ ಆತ್ಮ ನೀವು ಎನುತ ಮೊರೆದ ಅಭಯವಾಣಿಯೇ|| ತ್ಯಾಗ ಸೇವೆ ನಿಮ್ಮ ನಾಡ ಭಾಗ್ಯವೆಂದು ನಂಬಿ ನಡೆಯೆ| ಭೋಗ ಯೋಗ ಸಿದ್ಧವೆಂದ ಯೋಗಿವರನೆ ವಂದಿಪೆ||                           —-ಸ್ವಾಮಿ ಶಾಸ್ತ್ರಾನಂದ

ಕ್ಷೀಣಪ್ರಾಣ ಹೀನತ್ರಾಣ Read More »

ಕ್ಷಾಂತಿ ಸಹನೆಯ

ಕ್ಷಾಂತಿ ಸಹನೆಯ ಶಾಂತ ಶೀತಲ ಕಾಂತಿಯಿಂದಲಿ ಬೆಳಗುವಾ ಶಶಿ| ಅಂತರಂಗದ ಭಕುತಿ ಭೂಷಣ ಸಂತರಾಜ್ಯದ ಚಕ್ರವರ್ತಿ|| ಗುರುವೆ ನಿನ್ನಯ ಪರಮ ದೈವವು ಗುರುವಿನಾಣತಿ ಹಿರಿಯ ವೇದವು| ಗುರುವಿಗಾಳ್ತನ ಚರಮ ಸಾಧನ ಗುರುವಿಗೋಸುಗ ಧರಿತಪ್ರಾಣವು|| ಕಾಮಕಾಂಚನ-ತ್ಯಾಗಿ ತಾಪಸಿ ಪ್ರೇಮಪೂರಿತ ಕರ್ಮಯೋಗಿ| ರಾಮಕೃಷ್ಣರ ದಿವ್ಯದಾಸ ರಾಮಕೃಷ್ಣಾನಂದ ನಮಿಪೆವು||                                    –ಸ್ವಾಮಿ ಶಾಸ್ತ್ರಾನಂದ

ಕ್ಷಾಂತಿ ಸಹನೆಯ Read More »

ಕೊಟ್ಟವರು ಸರಿಯೆ

ಕೊಟ್ಟವರು ಸರಿಯೆ| ಕೊಡದೆ ಬಿಟ್ಟವರು ಸರಿಯೆ|| ಇಕ್ಕಿದವರಿಗುಂಟು| ಮದದಲಿ ಸೊಕ್ಕಿದರೇನುಂಟು| ರಕ್ಕಸಾಂತಕ ಲಕುಮಿಪತಿಯ ಮರೆ- ಪೊಕ್ಕವರಾದ ಶಿಷ್ಟಭಕುತರಿಗೆ|| ದೊರೆಯಾದರು ಸರಿಯೆ| ನಮಗೆ ತಿರುಕನಾದರು ಸರಿಯೆ| ಸರಸವಿರಸದಿಂ ನುಡಿದರೇನು ನರ- ಹರಿಪದಕಮಲವ ನಿರುತ ಭಜಿಪರಿಗೆ|| ಪುಟ್ಟಿಸಿದ ಪ್ರಭುವು| ನಮಗೆ ಹೊಟ್ಟೆಗೆ ಕೊಡದಿಹನೆ| ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ ಗಟ್ಟಿಯಾಗಿ ನಂಬಿದ ಭಕುತರಿಗೆ||                                           —-ಪುರಂದರದಾಸ

ಕೊಟ್ಟವರು ಸರಿಯೆ Read More »

ಕೆಳಗಿಳಿದು ಹರಿಯುವುದೆ

ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ ತಳೆಯುವುದು ಮಲಿನತೆಯ ಕೊಳೆನೆಲದಿ ಹರಿಯುತ್ತ| ಜಲನಿಧಿಯ ಸೇರಿ ತಾ ಬಲು ಕ್ಷಾರವಾಗುತಲಿ ಸಲಿಲಾರ್ಥಿ ಜನರಿಂಗೆ ಅನಲಸಮವಾಗುವುದು|| ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ ಸಗರಜಲವನು ಕೂಡ ನಗುತ ಕರದಿಂದೆತ್ತಿ| ವಿಗತದೋಷವ ಗೈದು ಮುಗಿಲರೂಪವ ಕೊಡುತ ಜಗಕೆಲ್ಲ ಸವಿತರುವ ಮಿಗೆ ಸೊಗದ ಮಳೆಕರೆವ|| ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು ನಲಿನಲಿದು ಹರಿಯುವುದು ಮಲಿನಮಯ ವಿಷಯದೆಡೆ| ಜಲಜಾಕ್ಷ ಕೃಪೆಯಿಂದ ಒಲಿದೆಮ್ಮ ಬಾಳ್ಗಳನು ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ||                                                   —ಸ್ವಾಮಿ ಶಾಸ್ತ್ರಾನಂದ

ಕೆಳಗಿಳಿದು ಹರಿಯುವುದೆ Read More »

ಕೃಷ್ಣನ ನೆನೆದರೆ

ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ| ಕೃಷ್ಣ ಎನಬಾರದೆ|| ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣ ಎನಬಾರದೆ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ| ಕೃಷ್ಣ ಎನಬಾರದೆ|| ಸುಳಿದಾಡುತ ಮನೆಯೊಳಗಾದರು ಒಮ್ಮೆ| ಕೃಷ್ಣ ಎನಬಾರದೆ|| ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ| ಕೃಷ್ಣ ಎನಬಾರದೆ|| ದಾರಿಯ ನಡೆವಾಗ ಭಾರವ ಹೊರುವಾಗ| ಕೃಷ್ಣ ಎನಬಾರದೆ|| ನೀಗದಾಲೋಚನೆ ರೋಗೋಪದ್ರದಲೊಮ್ಮೆ| ಕೃಷ್ಣ ಎನಬಾರದೆ|| ಪರಿಪರಿ ಕೆಲಸದೊಳೊಂದು ಕೆಲಸವೆಂದು| ಕೃಷ್ಣ ಎನಬಾರದೆ|| ದುರಿತ ರಾಶಿಗಳನು ತರಿದು ಬಿಸಾಡಲು| ಕೃಷ್ಣ ಎನಬಾರದೆ|| ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ| ಕೃಷ್ಣ ಎನಬಾರದೆ||

ಕೃಷ್ಣನ ನೆನೆದರೆ Read More »

ಕಾಲಭಯವಾರಿಣೀ

(ಏ ಮಾ) ಕಾಲಭಯವಾರಿಣೀ ಕಪಾಲಿನೀ ಕಾಲರೂಪಿಣೀ| ಶಂಭುಭಾಮಿನೀ ನಿಶುಂಭಘಾತನೀ ಸಮರವಾಸಿನೀ ಸುರವಂದಿನೀ|| ಪುರಹರಮನೋಮೋಹಕಾರಿಣೀ ಸತ್ಯವಾದಿನೀ| ತತ್ತ್ವದಾಯಿನೀ ತ್ರಾಸನಾಶಿನೀ ತ್ರಾಣಕಾರಿಣೀ ತಿಮಿರವರಣೀ|| ತ್ರಿಗುಣಧಾರಿಣೀ ತ್ರಿದೇವಜನನೀ ತ್ರಿಲೋಕೇಶೀ ತೇಜರೂಪಿಣೀ ಅನ್ನದಾಯಿನೀ ಅಮರಪಾಲಿನೀ ಅಸುರದಲನೀ ಆದಿಕಾರಿಣೀ| ಆಶುತೋಷ ಹೃದಿವಿಲಾಸಿನೀ ಆತ್ಮರೂಪಿಣೀ||

ಕಾಲಭಯವಾರಿಣೀ Read More »

ಕಂದಾ ಬೇಡವೋ

ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೊ|| ಕಂದಾ ಬೇಡವೊ ಮಣ್ಣು ತಿನ್ನಲಿಬೇಡ| ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ|| ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು| ಜೋಗಿ ಬರುತಾನಲ್ಲಿ ಅಂಜಿಸುವುದಕೀಗ|| ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ| ಬಾಯಲಿ ಇಟ್ಟನು ಬಾಲಕೃಷ್ಣಯ್ಯನು|| ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ| ಮುಟ್ಟಬೇಡೊ ಮಣ್ಣು ಬೆಣ್ಣೆ ತರುವೆನಯ್ಯ|| ಅಮ್ಮಯ್ಯ ಕೇಳೆಲೆ ಬಾಯಲಿ ಮಣ್ಣೆಲ್ಲ| ಗುಮ್ಮನು ಬರಬೇಡ ಸುಮ್ಮನೆ ಇರುತೇನೆ|| ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು| ಮಗುವಿನ ಬಾಯ

ಕಂದಾ ಬೇಡವೋ Read More »

ಕಂಡು ಕಂಡು ನೀ ಎನ್ನ

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ|| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ| ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ|| ಕ್ಷಣವೊಂದು ಯುಗವಾಗಿ ತೃಣಕಿತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು| ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ|| ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ| ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ||                                                           —ಪುರಂದರದಾಸ

ಕಂಡು ಕಂಡು ನೀ ಎನ್ನ Read More »

ಕಂಗಳಿವ್ಯಾತಕೋ

ಕಂಗಳಿವ್ಯಾತಕೋ ಕಾವೇರಿರಂಗನ ನೋಡದ|| ಜಗಂಗಳೊಳಗೆ ಮಂಗಳಮೂರುತಿ ರಂಗನ ಶ್ರೀಪಾದಂಗಳ ನೋಡದ|| ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು| ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆನಂದದಿಂದಲಿ ರಂಗನ ಕಾಣದ|| ಹರಿಪಾದೋದಕಸಮ ಕಾವೇರಿ ವಿರಜಾ ನದಿಲಿ ಸ್ನಾನವ ಮಾಡಿ| ಪರಮ ವೈಕುಂಠ ರಂಗ ಮಂದಿರ ಪರವಾಸುದೇವನ ನೋಡದ|| ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ| ತೇರನೇರಿ ಬೀದಿಲಿ ಬರುವ ರಂಗವಿಟ್ಠಲರಾಯನ ನೋಡದ||                                 —ಶ್ರೀಪಾದರಾಜಸ್ವಾಮಿ

ಕಂಗಳಿವ್ಯಾತಕೋ Read More »

ಕಳೆಯಬೇಕೆ ದಿನಗಳೆಲ್ಲ

ಕಳೆಯಬೇಕೆ ದಿನಗಳೆಲ್ಲ ವಿಫಲವಾಗಿ ಹೋಗಿಯೇ| ಹಗಲು ಇರುಳು ಆಶಾಪಥವ ಕಾಯುತಿಹೆನು ಸ್ವಾಮಿಯೇ|| ತ್ರಿಭುವನಗಳ ನಾಥ ನೀನು ಭಿಕಾರಿ ಅನಾಥ ನಾನು| ಕರೆಯಲೆಂತು ಮಮ ಹೃದಯದಿ ನೆಲೆಸು ಎಂದು ಹೀಗೆಯೇ|| ಹೃದಯ ಕುಟಿಯ ದ್ವಾರಗಳನು ಅನವರತವು ತೆರೆದಿರುವೆನು| ಕೃಪೆಯ ತೋರಿ ಬಂದು ನೀಡು ಶಾಂತಿಯನ್ನು ಸ್ವಾಮಿಯೇ||

ಕಳೆಯಬೇಕೆ ದಿನಗಳೆಲ್ಲ Read More »

ಕಲಿಯುಗದಲಿ ಹರಿನಾಮವ

ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗಾ|| ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ| ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ|| ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ| ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ|| ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ| ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ ಉಪಾಯದಿಂದಲಿ ನೆನೆ ಮನವೆ||                                     —ಪುರಂದರದಾಸ

ಕಲಿಯುಗದಲಿ ಹರಿನಾಮವ Read More »

ಕರುಣಿಸೋ ರಂಗಾ

ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳೂ ನಿನ್ನ ಸ್ಮರಣೆ ಮರೆಯದಂತೆ|| ರುಕುಮಾಂಗದನಂತೆ ವ್ರತವ ನಾನರಿಯೆ ಶುಕಮುನಿಯಂತೆ ಸ್ತುತಿಸಲರಿಯೆ| ಬಕವೈರಿಯಂತೆ ಧ್ಯಾನ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೋ|| ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲರಿಯೆನೋ ಕರಿರಾಜನಂತೆ| ವರಕಪಿಯಂತೆ ದಾಸ್ಯ ಮಾಡಲರಿಯೆ ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ|| ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ- ಛಲವನರಿಯೆನೋ ಪ್ರಹ್ಲಾದನಂತೆ| ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಪುರಂದರವಿಟ್ಠಲ||                                                          —ಪುರಂದರದಾಸ

ಕರುಣಿಸೋ ರಂಗಾ Read More »