ವಿಜಯವಿಠ್ಠಲ ನಾಮ
ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ ||1|| ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು||2|| ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಏಣಿಸಿ ಪೊಗಳಿದರೆ ಕಾಲ ಕಡೆಗಾಣನು ||3|| ದೇವಾದಿ […]