ಶರಣು ಮಾರುತನ ರಾಣಿಗೆ
ಶರಣು ಮಾರುತನ ರಾಣಿಗೆ | ಶರಣು ನಿತ್ಯ ಕಲ್ಯಾಣಿಗೆ | ಶರಣು ಶರಣು ಲೋಕ ಜನನಿಗೆ | ಶರಣು ಮುಂದಣ ವಾಣಿಗೆ ಶ್ರದ್ಧೆ ಭಾರತಿ ಭಾಗ್ಯ ಸಂಪನ್ನೆ | ಪದ್ಮ ಮಂದಿರ ನಂದನೆ | ಭದ್ರ ಫಲದಾಯಕಳೆ ಕರುಣಾಬ್ಧಿಯೇ ಭಕ್ತರಪ್ರಿಯೇ ||1|| ಖಗಪನ್ನಗ ನಗಮಗಳ ಪತಿಯಿಂದ ಮಿಗಿಲೆನಿಪೆ ಶತಗುಣದಲಿ | ಮೃಗನಾಭಿ ನೊಸಲಲ್ಲಿ ಶೋಭಿಸೆ | ಮೃಗಕುರುಹ ಸಿರಿಮೊಗದವಳೆ||2|| ಇಂದ್ರಸೇನಳೆ ವಿಪ್ರ ಕನ್ನಿಕೆ | ಚಂದ್ರದಿ ಸ್ಥಾನವಾಸಳೆ | ಇಂದ್ರನುತ ಸಿರಿ ವಿಜಯವಿಠ್ಠಲನ |ವಂದಿಸುವ ದ್ರೌಪದಿದೇವಿ ||3||
ಶರಣು ಮಾರುತನ ರಾಣಿಗೆ Read More »