ತುತ್ತನ್ನವ ನಮಗಿಂದು ನೀಡಿರಮ್ಮಾ
ತುತ್ತನ್ನವ ನಮಗಿಂದು ನೀಡಿರಮ್ಮಾ ನಾನು ಹತ್ತು ಸಾರೆ ಬಾರದಲೆ ತೊಲಗೆನಮ್ಮ ನಿರಾಧಾರಾದಿ ನಿದ್ರೆ ಬಾರದಮ್ಮ ವಿ ಚಾರಿಸು ತಾಯಿ ಪಾಲುವಲ್ಲೆನಮ್ಮ ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ ಸಾರಿ ಸಾರಿಗೆ ಬಾಯಿ ತೆರೆವೆನಮ್ಮ ||1|| ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು ದ್ರೋಹಿಗಳಿಗೆ ಕರ ಚಾಚೆನಮ್ಮ ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ ದೇಹವಿಲ್ಲದೆ ನಾರೇರು ಬಡಿಸಲಮ್ಮ ||2|| ಇದೇ ಕೇಳಿದೆನು ಇನ್ನು ಮೌನವಮ್ಮ ಬಲು ಸದಮಲ e್ಞÁನಿಗಳಿಗೆ ಪ್ರೀತಿಯಮ್ಮ ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ ಹೃದಯದೊಳಗಾನಂದವಾಸನಮ್ಮ ||3||
ತುತ್ತನ್ನವ ನಮಗಿಂದು ನೀಡಿರಮ್ಮಾ Read More »