ನಂಬದಿರು ಈ ದೇಹ
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ನಂಬದಿರು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬೆಂದೂ ಗರ್ಭದ ಮಧ್ಯದಲಿ ನೊಂದು ಬಿಂದು ಕೆಳಗೆ ಹೊರಳಿದಿರು ಮರುಳೆ ||1|| ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ […]