ಪೋತರಾಜನಲ್ಲವೋ ನಮ್ಮ ರಂಗ

ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ ಭೂತಳದೊಳಜಾತನಾಗಿ ಮೆರೆವ ಏಕಾರಾರ್ಣವದೊಳು ಎಲ್ಲರ ವೊಡಲೊಳು ಸಾಕಿಕೊಳ್ಳುತ ಪೊಂದಲಿಟ್ಟುಕೊಂಡು ಲೋಕನಾಯಕ ಹರಿವಟದೆಲಿಯ ಮೇಲೆ ಮಾಕಾಂತಿಯ ಕೂಡ ಮಲಗಿದ ಗುಣನಿಧಿ ||1|| ಜಿನಮತದಲಿ ಪುಟ್ಟಿ ದಾನವರು ಸ ಜ್ಜನಕರ್ಮ ಮಾಡುತಲಿರೆ ವೇಗಾ ಅನಿಮಿಷರಾಡಿದ ಮಾತಿಗೆ ದೈತ್ಯನ ಮನವಂಚಿಸಿ ಉಪದೇಶ ಮಾಡಿದ ಹರಿ||2|| ನಂದ ವ್ರಜದಲ್ಲಿ ಪೂತಿನಿ ಶಕಟನ್ನ ಕೊಂದು ಗಜ ಮಲ್ಲರ ಸವೆದು ಅಂದವಾಗಿ ಮೆರೆದ ವಿಜಯವಿಠ್ಠಲರೇಯಅಂದು ದೇವಕಿ ಬಾಲಕನಾಗಿ ತೋರಿದಾ ||3||

ಪೋತರಾಜನಲ್ಲವೋ ನಮ್ಮ ರಂಗ Read More »

ಪೊಗಳಬಲ್ಲನೆ ನಾ ನಿನ್ನ ಪೊಗಳಬಲ್ಲನೆ

ಪೊಗಳಬಲ್ಲನೆ ನಾ ನಿನ್ನ ಪೊಗಳಬಲ್ಲನೆ ನಿನ್ನ ಬಗೆ ಬಗೆ ರೂಪಗಳ ಸುಗುಣ ಸಂಪೂರ್ಣ ಉರಗ ಶಯ್ಯ ರಂಗಯ್ಯಾ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ ||1|| ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ

ಪೊಗಳಬಲ್ಲನೆ ನಾ ನಿನ್ನ ಪೊಗಳಬಲ್ಲನೆ Read More »

ಪೇಳುವೆ ಮನವೆ ನಿನಗೊಂದು

ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು ||1|| ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವ ಮೆಟ್ಟು ||2|| ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ

ಪೇಳುವೆ ಮನವೆ ನಿನಗೊಂದು Read More »

ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ

ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ | ಆನಂದ ಜನನದಲಿ ಜನನಗಳ ನೀಗಿರೊಪ ಮಲಗಿ ಏಳುವಾಗ ಮಾತುಗಳನಾಡುವಾಗ | ಇಳಿಯ ಮೇಲಡಿಯಿಟ್ಟು ತಿರುಗುವಾಗ || ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ | ಮಲಿನ ಸಂಕರನಳಿದಮಲಬೋಧನ ನೆನೆಯಿರೊ ||1|| ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ | ಪಾವಕಾವನಿ ಸುರರ ಉಣಿಸುವಾಗ || ಕೋವಿದರ ಸಂಗಡ ಸಂತೋಷಬಡುವಾಗ | ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ||2|| ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ | ಪ್ರತಿ ದಿವಸÀ ಷಟ್ಕರ್ಮ ಮಾಡುವಾಗ || ಪತಿತ ಪಾವನ

ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ Read More »

ಪೂರ್ಣಪ್ರಜ್ಞನೆಂಬ ಪರಿಪೂರ್ಣ

ಪೂರ್ಣಪ್ರಜ್ಞನೆಂಬ ಪರಿಪೂರ್ಣ ಸುಜ್ಞಾನ ಸಮುದ್ರ ಮಧ್ವಮುನಿರಾಯ || ವಾರಣದಿಂದಲಿ ಬಂದೆ ವಾದಿಯ ನಿವಾರಿಸಿದ | ಮಧ್ವ ಮುನಿರಾಯಾ ಮಣಿವಂತನೆಂಬೊ ದೈತ್ಯ ಧಾರುಣಿಯೊಳಗೆ ಸಂಕರನಾದಾ | ಮಧ್ವರಾಯಾ || ಅವ | ಜನಿಸಿ ಬಂದು ಉತ್ತಮರ ಗುಣಗಳಲ್ಲ ಕೆಡಿಸಿದಾ | ಮಧ್ವರಾಯಾ ||1|| ಹರಿಯಿಲ್ಲ ಗುರುವಿಲ್ಲ ಹರನು ಪುಸಿ ಎಂದು || ಮಧ್ವ | ಅವ | ಪರದೈವ ತಾನೆ ಎಂದು ಧರೆಯೊಳು ತಿರುಗಿದ | ಮಧ್ವ ||2|| ವೇದಶಾಸ್ತ್ರವೆಲ್ಲ ಮಿಥ್ಯ ಅಹಂ ಬ್ರಹ್ಮ ಜಗಕೆಂದ | ಮಧ್ವ

ಪೂರ್ಣಪ್ರಜ್ಞನೆಂಬ ಪರಿಪೂರ್ಣ Read More »

ಪುರಂದರ ಗುರುರಾಯ

ಪುರಂದರ ಗುರುರಾಯ ಪುರಂದರ ಗುರುರಾಯ ಪೂರ್ಣ ಗುಣಾಂಬುಧೆ ಶರಣಜನ ಪರಿಪಾಲಾ ಸುಸ್ಸೀಲಾ ಕಲಿ ವಿಪ್ರಜಿತು ದ್ವಾಪರ ಮಧು ಕೈಠಭ ಖಳರು ಬಂದಾಗೆ ಅಪಾರ ಸುಲಭ ಮಾರ್ಗಕೆ ಎನ್ನ ಸುಳಿಯಲೀಸದೆ ತಮ್ಮ ಬಳಗಾ ಹರಿಯಬಿಟ್ಟು ಕಳವಳಿಸುವ ಚಂಚಲತನವಿತ್ತು ಕ ತ್ತಲೆಯೊಳು ಪೊಗಿಸುವ ಮಾಯಾ ಕತ್ತರಿಸುವ ಪ್ರೀಯಾ||1|| e್ಞÁನ ಭಕುತಿ ವಿರಕುತಿ ಸರ್ವದಯಿತ್ತು ಮಾಣಿಸುವುದು ದುರ್ಮತೀ ನೀನೋಲಿದು ಯಿಂದು ಅನಂತ ಜನುಮಕ್ಕೆ ದಾನವಾರಿಯ ಪಾದ ಧ್ಯಾನವೆ ಮಾಡುವ ಆನಂದವನೆ ಕೊಡು ನಾನಾ ಬಗೆಯಿಂದ ಗುರುವೆ ನಿತ್ಯಸರು ತರುವೆ ||2|| ಈ

ಪುರಂದರ ಗುರುರಾಯ Read More »

ಪುಣ್ಯ ದೊರಕುವುದು

ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ದೊಡಿಯಗರ್ಪಿತವೆಂದು ಹಿಗ್ಗುತ ಅನುದಿನ ||1|| ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ದ್ವ್ವಿಪುತ ಪ್ರಾಕಾಶವಂತಳಾಗಿ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ||2|| ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ದೇವದೇವೆಶನ್ನ ವಿಭೂತಿ ರೂಪವ ಆವಾವ ಬಗೆಯಲ್ಲಿ ನೆನೆಸಿ ನೋಡುತ ನಿತ್ಯ ||3|| ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ

ಪುಣ್ಯ ದೊರಕುವುದು Read More »

ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ

ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು ಕಾರುಣ್ಯನಿಧಿ ಹರಿ ಒಲಿವಾ ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ತೋಷದಲಿ ತೋತಾದ್ರಿ ಕುಂಭಘೋಣ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದೋಷವರ್ಜಿತ ಝಲ್ಲಿಕಾರಣ್ಯ ಸೇತು ದರ್ಭಶಯನ ಮಧ್ಯಾರ್ಜುನ ||1|| ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ

ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ Read More »

ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ

ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ ಭುವನ ತ್ರಾಣ ಸದ್ಭವ ಪ್ರವೀಣ ಶ್ಲೋಕ : ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ | e್ಞÁನಾ e್ಞÁನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ || ಏನಾಶ್ಚರ್ಯ ನಿವೇದಕೀಯ ನಿನಗೆ ಶ್ರೀನಾಥನ ಪ್ರೀತಿಗೆ ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ||1|| ಪದ: ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ e್ಞÁನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ | ನೀ

ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ Read More »

ಪಾಹಿ ಮೋಹನ ವಿಠಲ

ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ಮಹದಾದಿ ದೇವ ವಂದ್ಯ | ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು ರಹಸ್ಯಮತಿ ಕೊಡುವುದು ಸ್ವಾಮಿ ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ ಅನಂತ ಜನುಮವಾಗೆ ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು e್ಞÁನಿಗಳಿಗರಿವಾಗಿದೆ ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ ಮಾನವನ ಕ್ಲೇಶಕೆಣಿಯೆ ಆನಂದ ನಂದನನೆ ತೃಣವ ಪಿಡಿದು ರುತುನ ವನು ಮಾಡಿ ತೋರುವ ಸ್ವಾಮಿ ||1|| ನಿನ್ನಧೀನ ಕರ್ಮಸ್ವಭಾವ ಮೊದಲಾಗಿ ಅನ್ಯಥಾ ಯಲ್ಲಿ ಕಾಣೆ ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ ಬಿನ್ನಪವ ಬರಿದೆನಿಸದೆ ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ

ಪಾಹಿ ಮೋಹನ ವಿಠಲ Read More »

ಪಾಹಿ ಪಾಂಡವ ಪರಿಪಾಲ

ಪಾಹಿ ಪಾಂಡವ ಪರಿಪಾಲ ನೀನೇ ನಿತ್ಯ ಮಹದಾದಿವಂದ್ಯಾ ಸುಶೀಲಾ ದೈಹಿಕ ಮೊದಲಾದ ಕರ್ಮವ ಮಾಡಿಸಿ ಮೋಹಕ ಪಾಶವ ಓಡಿಸು ಕೇಶವಾ ಇಂದ್ರತನಯಾ ಮಾನಭಂಗ ಮಾಡಿದೆ ನೀನು ಇಂದು ಉಂಡೆನೋ ಸಿರಿರಂಗಾ ಮಂದರೋದ್ಧರ ಕೋಮಲಾಂಗಾ ಕೇಳೊ ಪೊಂದಿಸು ಸುಜನರ ಸಂಗಾ ಕಂದರ್ಪಜನಕ ಆನಂದ ವಿಗ್ರಹ ಪೂರ್ಣ ಮಾತನು ಸುಂದರ ನಿಜ ಭಕ್ತ ವೃಂದ ಮಹೋದಧೇ ||1|| ಕಾಲಕರ್ಮ ಗುಣದಿಂದಾ ವೃಥಾಯು ವೇಳೆಯ ಕಳದೆ ಮುಕುಂದಾ ಪೇಳಾ ಲೇಸೊ ಪ್ರತಿ ಬಂಧಾ ಇನ್ನು ನಾನು ತಾಳಲಾರೆ ದು:ಖದಿಂದಾ ಆಲಸ ತಾಳದೆ

ಪಾಹಿ ಪಾಂಡವ ಪರಿಪಾಲ Read More »

ಪಾವನಕಾಯ ರಾಘವೇಂದ್ರ

ಪಾವನಕಾಯ ರಾಘವೇಂದ್ರ ರಾಘವೇಂದ್ರ ದುರಿತ ಘೋರ ಪರಿಹಾರ | ರಾಘವೇಶನ ಪಾದ | ಮೇಘನುಣಿಪ ಗುರು ||1|| ಶರಣು ಹೊಕ್ಕ್ಕೆನು ಹೊಕ್ಕೆನು ಯಿಂದು | ಕರುಣ ಕರುಣ ಪೋಲುವ ಚರಣ | ಸ್ಮರಣೆ ಪಾಲಿಸುವುದು | ಕರುಣದಿಂದ ಮಹಿಮ ಗುರು||2|| ಸಿರಿ ವಿಜಯವಿಠಲ ಪರದೈವವುಯೆಂದು | ಸ್ಥಿರವಾಗಿ ಸ್ಥಾಪಿಸಿ ಪೊರೆದ ನಿರ್ಮಲ ಗುರು ||3||

ಪಾವನಕಾಯ ರಾಘವೇಂದ್ರ Read More »

ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ

ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ ಪಾಲಾಬ್ಧಿಶಯನ ಕಾಪಾಲಿಯ ಕಾಯ್ದ ಗೋ ಪಾಲ ಹರಿ ವಿಶ್ವರೂಪ ಲೋಕಾಧೀಶ ಪಾಲಯವಾಗೆನ್ನ ಪಾಲಿಲಿದ್ದ ಶಿಶುಪಾಲಕ ಎನ್ನ ಕಾಯನ್ನಾ ಮನೆ ನಿನಗಾಗಿ ದೇಹಾ ಸುಮ್ಮನೆ ಪೇಳುವುದಿಲ್ಲ ಹ ಮ್ಮನೆ ಬಿಡಿಸುವುದು ಘಮ್ಮನೆ ಬಂದು ಒಲಿದು ನಿ ಮ್ಮನೆ ಭಕ್ತರ ಕೂಡ ನೆಮ್ಮನೆ ಕೊಟ್ಟ ಬಲನ ತ ಮ್ಮನೆ ನಡಿಸುವುದು ತಿಮ್ಮನೆ ಅಜಿತಾನಂತ ನಾ ಮನೆ ನಾನೆಂಬದರ ಮನೆಯಲ್ಲಿ ಸಾರ್ವಭೌಮನೆಯಾಗಿ ಪುಟ್ಟಿ ಭೀ ಮನೆ ಗುರು ನಿತ್ಯಾ ಸಮನೆ ಎಂದು ಪೇಳಿದಾ ಮನೆಯಲ್ಲಿ ಇಡು

ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ Read More »

ಪಾಲಿಸೊ ಪತಿತಪಾವನ್ನಾ ನಿನ್ನ

ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ ||1|| ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ

ಪಾಲಿಸೊ ಪತಿತಪಾವನ್ನಾ ನಿನ್ನ Read More »

ಪಾಲಿಸೆನ್ನನು ದೇವಾ ಪರಮ ಪುರುಷಾ

ಪಾಲಿಸೆನ್ನನು ದೇವಾ ಪರಮ ಪುರುಷಾ ಭೂಲೋಲ ಶ್ರೀ ಮುಷ್ಣನಿಲಯ ಶ್ವೇತ ವರಹಾ ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ ಜಯಜಯದೇವನಾಶ್ರಯ ಕಾಮಧೇನು ನೀ ದಯಮಾಡಿ ನೋಡುವದು ದಾಸ ನೆನೆಸುವದು ||1|| ಚಿತ್ತಾವಧಾರು ಪರಾಕು ಬೊಮ್ಮಾಂಡವನು ಹೊತ್ತು ನಸುನಗು ನಾಗಾರಿಗಮನಾ ಮುತ್ತು ಮಣಿ ಮಯದಾಭರಣದಿಂದೆಸೆವ ದೇ ವೋತ್ತಮನೆ ದಾನವರ ಬಲವಳಿದಾ ಧೈರ್ಯ ||2|| ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು ಪ್ರತ್ಯಕ್ಷವಾಗಿ ವರಗಳನೀವುತ ಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹ ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ||3||

ಪಾಲಿಸೆನ್ನನು ದೇವಾ ಪರಮ ಪುರುಷಾ Read More »

ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ

ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ ಪಾಲಿಸೆ ನಾ ನಿನ್ನ ಪಾಲಿಗೆ ಬಂದಿರ್ಪೆ ಶ್ರೀಲೋಲನ ಪದಕೀಲಾಲಜ ತೋರಿ ಚಿತ್ಪ್ರಕೃತಿ ನಿತ್ಯ ಜಡಪ್ರಕೃತ್ಯಭಿಮಾನಿ ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ||1|| ಮಂತ್ರಗಳರಿಯೆನು ಮಂದಮತಿಯು ಸ್ವ ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ||2|| ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ ವಿಜಯವಿಠ್ಠಲನ ನಿಜಾಂಗನೆ ||3||

ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ Read More »

ಪಾಲಿಸೆ ಪದುಮಾಲಯೆ, ನೀನೇ ಗತಿ

ಪಾಲಿಸೆ ಪದುಮಾಲಯೆ, ನೀನೇ ಗತಿ ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ- ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ಅಪ ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ- ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣಸಂ ಪನ್ನ ರಕ್ಕಸನನ್ನು ಸೀಳಿದ ಪನ್ನಗಾದ್ರಿ ನಿವಾಸೆ ಹರಿಪ್ರಿಯೆ ||1|| ಅರಿಯದ ತರಳನೆಂದು ಶ್ರೀಪತಿ ಸತಿ ಕರುಣದಿ ಸಲಹೆ ಬಂದು ಕರುಣಾಸಿಂಧು ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖನು ಸುರರ ಬಾಧಿಸೆ ಹರಿವರರ

ಪಾಲಿಸೆ ಪದುಮಾಲಯೆ, ನೀನೇ ಗತಿ Read More »

ಪಾಲಿಸು ಅವಾಂತರೇಶಾ ಪಾವನ ಕೋಶಾ

ಪಾಲಿಸು ಅವಾಂತರೇಶಾ ಪಾವನ ಕೋಶಾ ಪಾಲಾಬ್ದಿ ಶಯನನ ದಾಸಾ ಕಾಲ ಜನಕ ವಿಶಾಲಮಹಿಮಾರೈಯಿ ಲೋಲಾ ಜೀವೋತ್ತಮ ಕಾಲಕಾಲಕೆ ಎನ್ನ ಪುಣ್ಯಗಾತುರ ಮಾರುತಾ ಪುಂಜಿತ ಜೀವಾ ಗಣ್ಯರಹಿತ ಗುಣಜಾತಾ ಮನ್ಯುದಾನವ ಕುಲಘಾತಾ ಮಹಾತತ್ವ ದಾತಾ ಸನ್ನ್ಯಾಯಮಣಿ ಶ್ರುತಿಗೀತಾ ಧನ್ಯನ ಮಾಡೊ ಅನ್ಯನೇನೊ ನಾನು ಕಾ ರುಣ್ಯದಿ ದುರಿತಾರಣ್ಯ ಮನ್ಮಥ ಲಾ ವಣ್ಯ ಸರ್ವದಾತಾ ಗುಣ್ಯ ಮನದಾ ಕಾರ್ಪಣ್ಯವ ಓಡಿಸಿ ||1|| ದ್ವಿತೀಯ ನಿರ್ಜರವರೇಣ್ಯ ದೀನನುಗಣ್ಯ ದಿತಿಜಾವಳಿಗೆ ಕಾಠಿಣ್ಯ ಸತತ ಅಪ್ರತಿರಾಜ್ಯನ್ಯಾಸ ಚರಾಚರಮಾನ್ಯಾ ತುತಿಸುವೆ ಕೇಳು ದೈನ್ಯ ಗತಿ ನೀನೆ

ಪಾಲಿಸು ಅವಾಂತರೇಶಾ ಪಾವನ ಕೋಶಾ Read More »

ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ

ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕುಡಿತೆಗಂಗಳಾ ಸವಿನುಡಿಗಳ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಡನಡುವಿಗೆ ತೊಡಿಗೆ ಕಿರ್ದೊಡೆಗೊಲಿದು ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ ||1|| ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು

ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ Read More »

ಪಾದಾ ಭಕ್ತರನ ಪೊರೆವ ಪಾದಾ

ಪಾದಾ ಭಕ್ತರನ ಪೊರೆವ ಪಾದಾ ಪಾದಾ ಸಿರಿದೇವಿ ಉರದಲ್ಲಿ ಒಪ್ಪುವ ಪಾದಾ ಧರಣಿಪತಿ ಬಲಿಯನ್ನು ನೆಲಕೆ ಒತ್ತಿದ ಪಾದಾ ಸುರನದಿಯ ಹರುಷದಲಿ ಪಡೆದ ಪಾದಾ ಧುರದೊಳಗೆ ಪಾರ್ಥನ ಶಿರವ ಕಾಯ್ದ ಪಾದಾ ಸುರರು ಸನಕಾದಿಗಳು ವಂದಿಸುವ ಪಾದಾ ||1|| ಕೋಪದಲಿ ಉರಗನ ಪೆಡೆಯ ತುಳಿದ ಪಾದಾ ತಾಪಸರ ಮನಕೆ ನಿಲಕದ ಪಾದಾ ಭೂಪ ಕೌರವನ ತಲೆಕೆಳಗೆ ಮಾಡಿದ ಪಾದಾ ಕಾಪಾಲಿ ಪೂಜಿಸುವ ಕಡು ದಿವ್ಯ ಪಾದಾ||2|| ಹಸುಳೆತನದಲಿ ಶಕಟಾಸುರನನೊದೆದ ಪಾದಾ ಋಷಿಪತ್ನಿ ಶಾಪ ವಿಶ್ಶಾಪ ಪಾದಾ ವಿಷ

ಪಾದಾ ಭಕ್ತರನ ಪೊರೆವ ಪಾದಾ Read More »

ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ

ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ ಅಪಾರ ಮಹಿಮ ಅನಂತಾನಂತ ರೂಪನಾ ಶಶಿ ನಖ ನಾಲ್ಬೆರಳು ಎರಡು ಜಾನು ಜಂಘೀ ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠಾ ಮಿಸಣಿಪ ವದನ ನಾಸ ಕದಪು ಕರ್ಣ ನಯನಾ ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ||1|| ಮಕುಟ ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ ವಿಕಸಿತ ಕಮಲ ತುಲಸಿಹಾರ ಮುತ್ತಿನಸರ ಪ ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ ||2|| ಶ್ರುತಿ ತತಿಗೆ

ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ Read More »

ಪಶುಪತಿಯ ತೋರಮ್ಮಾ

ಪಶುಪತಿಯ ತೋರಮ್ಮಾ ವಶವಾಗಿ ಉದ್ಧರಿಸಮ್ಮಾ ವಿಷವ ಸವಿದ ರುಂಡಮಾಲನ ತ್ರಿಭುವನ ಪಾಲನ ಸತಿ ಮೈನಾಕ ನಂದನೆ ಮಾಡುವೆ ನಾನೀಗ ವಂದನೆ ಮತಿಯ ಕೊಡುತಿಪ್ಪ ಎನ್ನ ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ||1|| ಬುದ್ದ್ಯಾಭಿಮಾನಿ ದೇವಿ ಇಂದ್ರಾದ್ಯ ಸುರರನ್ನ ಕಾಯ್ವಿ ಖದ್ಯೋತ ಶಶಿ ಅನಳನೇತ್ರ ಸಾ ಮಂಗಳ ಗಾತ್ರನ ಧನಪತಿ ಮಿತ್ರನಾ ||2|| ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ ವಿಜಯವಿಠ್ಠಲರೇಯನ ದಾಸದಾಸನ ಕೈಲಾಸವಾಸನ ಜಗಕೆ ವಿಶೇಷನಾ ||3||

ಪಶುಪತಿಯ ತೋರಮ್ಮಾ Read More »

ಪವಮಾನಾ ಮದ್ಗುರವೆ ಪವಮಾನಾ

ಪವಮಾನಾ ಮದ್ಗುರವೆ ಪವಮಾನಾ ಪವಮಾನಾ ಗುರುವೆ ಪರಾಕು | ನಾನು | ವಿವರಿಸುವೆನು ಕೇಳು ವಾಕು || ಆಹಾ | ತವಕದಿಂದಲಿ ಸಂಭವಿಸುವ ಮತಿಯಿತ್ತು | ಭವದಿಂದ ಕಡೆಗಿತ್ತು ಆಶ್ರಿತಜನ ಕಲ್ಪವೃಕ್ಷಾ | ನಿನ್ನ | ಆಶೆಮಾಡಿದೆ ಬಲು ದೀಕ್ಷಾ | ಗುಣರಾಶಿವಿರಾಗ ಪ್ರತ್ಯಕ್ಷ | ವಾಗಿ | ದಾಸತ್ವ ಕೊಡು ಬಲುದೀಕ್ಷಾ || ಆಹಾ || ಏಸು ಜನ್ಮಗಳಿಂದ | ದೋಷವ ಕಳೆದು ಸಂ | ತೋಷವಾಗುವ ಕರ್ಣ | ಭೂಷಣ ಕೃಪೆ ಮಾಡೊ ||1||

ಪವಮಾನಾ ಮದ್ಗುರವೆ ಪವಮಾನಾ Read More »

ಪವಮಾನ ಜಗದ ಪ್ರಾಣ ಸಂಕರುಷಣ

ಪವಮಾನ ಜಗದ ಪ್ರಾಣ ಸಂಕರುಷಣ ಭವನೇ ಭಯಾರಣ್ಯದಹನ ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರೀಯ ಹೇಮ ಕಚ್ಚುಟ ಉಪವೀತ-ಧರಿಪ ಮಾರುತ ಕಾಮಾದಿ ವರ್ಗರಹಿತ ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನರಾಧಿಪುದಕೆ ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು ||1|| ವಜ್ರ ಶರೀರ ಗಂಭೀರ-ಮಕುಟಧರ ದುರ್ಜನವನ ಕುಠಾರ ನಿರ್ಜರಮಣಿ ದಯಾ ಪಾರಾ-ವಾರ ಉದಾರ ಸಜ್ಜನರಘ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು

ಪವಮಾನ ಜಗದ ಪ್ರಾಣ ಸಂಕರುಷಣ Read More »

ಪರಮಾತ್ಮನೆ ನೀ ಸರಿ ಎಂದು

ಪರಮಾತ್ಮನೆ ನೀ ಸರಿ ಎಂದು ಕರಗದ ತಮದಲ್ಲಿ ಸೇರುವದೆ ಜೀವ ಪರಮಾತ್ಮಗೆ ಭೇದವ ಆವಾವ ಕಾಲಕ್ಕೆಯಿಲ್ಲವೆಂದು ದೇವನ ಬಳಿಗೆ ನೀ ದೂರಾಗಿ ಈ ವಸುಧೆಯೊಳು ಬದುಕುವರೆ ||1|| ಭೇದ ಜೀವಕೆ ಜೀವ ಎಂದಿ ಗಾದರು ಇಲ್ಲವೆಂದು ನುಡಿದು ಈ ದುರಾಚಾರದಲ್ಲಿ ನಡೆದು ಮಾದಿಗನಂತೀಗ ಮಾರ್ಮಲಿದು||2|| ಜಡ ಪರಮಾತ್ಮ ಜಡ ಜಡಕೆ ಜಡ ಜೀವಕೆ ಅಭೇದವೆಂದು ಕಡುಗರ್ವದಿಂದಲಿ ಉಚ್ಚರಿಸಿ ಮಡಿದು ನರಕಕ್ಕೆ ಉರುಳುವರೆ ||3|| ಅರಸಿನ ಬಳಿಗೆ ತೋಟಿಗ ಬಂದು ಅರಸೆ ನೀನೆ ನಾನೆಂದಡೆ ಉರವಣಿಸಿ ಕೊಲ್ಲಿಸಿ ಅವನ

ಪರಮಾತ್ಮನೆ ನೀ ಸರಿ ಎಂದು Read More »