ಜಯ ಜತೀಶ್ವರ್, ಜಯ ತಮೋಹಾರಿ, ಕೆದಾರ—ಕಾವಳಿ ಜಯ ಜತೀಶ್ವರ್, ಜಯ ತಮೋಹಾರಿ, ಜಯ ಶಿವ ಶಂಭು ನರ್-ರೂಪ-ಧಾರಿ।ಜಯ ವೇದ-ಬಾಣಿ ಜ್ಞಾನ-ಗಂಗಾಧರ್, ಪತಿತ-ಪಾಲಕ ಜಯ ವಿಷಧರ್,ಜಯ ಭಯ-ಬಾರಣ ವಿಜಯ-ಕೇತನ, ಜಯ ಬೀರೇಶ್ವರ, ಜಯ ದಂಡಧಾರಿ॥ ತ್ರಿಲೋಕ-ಬಾಸಿ ಶ್ರೀಚರಣ ಬಂದೇ, ಮಹಿಮಾ ತಬ ಗಾಹೆ ಗೀತ್-ಚಂದೆ,(ಜಯ) ಭೂವರ ಹರಣ, ಬಿಮೋಹನಾಶನ್, ನಮೋ ಮಹೇಶ್ವರ ನರ್-ಲೋಕ-ಚಾರೀ॥ –ಬಿನೋದೇಶ್ವರ ದಾಸ್‌ಗುಪ್ತ
ಜ
ಜಯ ವಿವೇಕಾನಂದ ಬೀರ ಸನ್ನ್ಯಾಸಿ
ಆಡಾನಾ ಮಿಶ್ರ – ತೇವೋಡಾ ಜಯ ವಿವೇಕಾನಂದ ಬೀರ ಸನ್ನ್ಯಾಸಿ ಚಿರ-ಗೈರಿಕ-ಧಾರಿ।ಜಯ ತರುಣಯೋಗಿ ಶ್ರೀರಾಮಕೃಷ್ಣ-ಬ್ರತ ಸಹಾಯಕಾರೀ॥ ಯಜ್ಞಾಹುತಿರ್ ಹೋಮ್-ಶಿಖಾಸಮ,ತುಮಿ ತೇಜಸ್ವೀ ತಾಪಸ್ ಪರಮ್ಭಾರತ ಅರಿಂದಮ್ ನಮೋ ನಮೋ ನಮೋ, ವಿಶ್ವ-ಮಠ-ಬಿಹಾರೀ॥ (ಮದ) ಗರ್ವಿತ ಬಾಲ್-ದರ್ಪೀರ್ ದೇಶೆ ಮಹಾಭಾರತದ ವಾಣಿಶುಣಾಯೆ ವಿಜಯೀ, ಘುಚಾಲೆ ಸ್ವದೇಶದ ಅಪಜಶ್-ಗ್ಲಾನಿ।(ನಬ) ಭಾರತೆ ಆನಿಲೆ ತುಮಿ ನವ ವೇದಮುಚ್ಚೆ ದಿಲ್ಲೆ ಜಾತಿ ಧರ್ಮದ ವಿದೇದಜೀವೆ ಐಶ್ವರೇ ಅಭೇದ ಆತ್ಮಾ ಜಾನೈಲೆ ಹುಂಕಾರಿ॥ –ಕಾಜಿ ನಜರೂಲ್ ಇಸ್ಲಾಮ್
ಜಯ ವಿವೇಕಾನಂದ ಬೀರ ಸನ್ನ್ಯಾಸಿ Read More »
ಜಗದೀ ಸಂತೆಯೊಳಲೆಯುವ ಮನುಜ
ಜಗದೀ ಸಂತೆಯೊಳಲೆಯುವ ಮನುಜ ನಿಲ್ಲೋ ಒಂದು ಕ್ಷಣ! ತಾಯಿಯ ನೆನೆಯಲು ಬಂದಿದೆ ಶುಭದಿನ ಹಾಡೋ ತುಂಬಿ ಮನ!! ಸ್ಥಾವರ ಜಂಗಮ ಎಲ್ಲಕ್ಕೂ ತಾಯಿ ಬಂದಿಹಳು ಈ ಧರೆಗೆ.! ಆಮೋದರ ನದಿತೀರದಿ ಕಾಣುವ ಜಯರಾಂಬಾಟಿಯೊಳಗೆ (ಅಮ್ಮ)!! ಮಕ್ಕಳು ಮರೆತರು ತಾಯಿಯು ಮರೆವಳೆ ತನ್ನಯ ಶಿಶುಗಳನು ಮಣ್ಣಿನೊಳಾಡುವ ನಮ್ಮನು ಎತ್ತಲು ಚಾಚಿಹ ಕೈ ನೋಡು (ತಾಯಿಯ)!! ಭವದೀ ಬವಣೆಗಳೆಲ್ಲವ ಮರೆತು ಜೈ ಮಾ ಎಂದೆನ್ನು! ಪಾಪದ ರಾಶಿಗೆ ಇಡು ನೀ ತಾಯಿಯ ಸ್ಮರಣೆಯ ಬೆಂಕಿಯನು!!
ಜಗದೀ ಸಂತೆಯೊಳಲೆಯುವ ಮನುಜ Read More »
ಜಯ ದೇವ ಜಯ ದೇವ ಜಯ ರಾಮಕೃಷ್ಣ
ಕೀರ್ತನ – ದಾದರಾ ಜಯ ದೇವ ಜಯ ದೇವ ಜಯ ರಾಮಕೃಷ್ಣ ಸಾರದಾ ಶ್ರೀಪತಿ ಭಕ್ತಜನರ ಗತಿ ಯುಗದ ಅವತಾರ|| ತುತ್ತಿನ ವಿದ್ಯೆಗೆ ದೂರದಿ ನಿಂದೆ ದೇವನ ವಿದ್ಯೆಯ ಗಳಿಸುವೆನೆಂದೆ| ಧನಿಯಿಂದ ಭಿಕ್ಷೆಯ ಪಡೆಯುತಲಂದೆ ಸತ್ಯದ ನೆಲೆಗೆ ನೀ ಸ್ಥಿರವಾಗಿ ಸಂದೆ|| ಶಿಲೆಯಲ್ಲವೀ ತಾಯಿ ನಿಜದ ಜಗದಂಬೆ ಕಂಬನಿ ಧಾರೆಗೆ ಕರಗುವಳೆಂದೆ| ತಾಯಿ ತಾಯಿ ಎಂದು ಕೂಗುತ ನೊಂದೆ ಲೋಕವೆಲ್ಲವ ತಾಯ ಮಡಿಲಾಗಿ ಕಂಡೆ|| ಚಲಿಸದ ಬ್ರಹ್ಮವು ಚಲಿಸಲು ಶಕ್ತಿ ಸುರುಳಿ ಸುತ್ತಿದ ಹಾವು ಹರಿವ
ಜಯ ದೇವ ಜಯ ದೇವ ಜಯ ರಾಮಕೃಷ್ಣ Read More »
ಜಯ ದೇವ ದೇವ ಕರುಣಾವತಾರ
ಪೂರ್ವಿ – ತ್ರಿತಾಲ ಜಯ ದೇವ ದೇವ ಕರುಣಾವತಾರ ಜಗದೇಕಗಮ್ಯ ಸಂಸಾರಸಾರ|| ಮಾಯಾವಿಹೀನ ಸಚ್ಚಿತ್ ಸ್ವರೂಪ ಲೀಲಾವಿಲಾಸ-ಧೃತಿವಿವಿಧರೂಪ| ರಾಜಾಧಿರಾಜ ಭುವನೈಕರೂಪ ಭೂತಾಧಿವಾಸ ಭವಕರ್ಣಧಾರ|| ಚೈತನ್ಯನಾಥ ಸ್ವಾನಂದಕಂದ ಭವರೋಗವೈದ್ಯ ಜಿತ ನಿಖಿಲಬಂಧ। ಅತುಲಪ್ರತಾಪ ರಿಪುದಲಕರಾಲ ಸಾಧಕವಿಶುದ್ಧಮಾನಸವಿಹಾರ|| ವಿಶ್ವಪ್ರಣಮ್ಯ ತ್ರಯತಾಪನಾಶ ಕಾಮಾದಿದೋಷಹರ ಚಿತ್ಪಕಾಶ! ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ ಹೇ ರಾಮಕೃಷ್ಣ ಭವಭಯನಿವಾರ – ಸ್ವಾಮಿ ವಾಗೀಶ್ವರಾನಂದ
ಜಯ ದೇವ ದೇವ ಕರುಣಾವತಾರ Read More »
ಜಯ ಭಗವದ್ಗೀತೆ, ಮಾತೆ, ಜಯ ಭಗವದ್ಗೀತೆ|
ಜಯ-ಭಗವದ್ಗೀತೆ, ಮಾತೆ, ಜಯ ಭಗವದ್ಗೀತೆ| ಹರಿ-ಹಿಯ-ಕಮಲ-ವಿಹಾರಿಣಿ ಸುಂದರ ಸುಪುನೀತೆ.|| ಕರ್ಮ-ಸುಮರ್ಮ-ಪ್ರಕಾಶಿನಿ ಕಾಮಾಸಕ್ತಿಹರಾ| ತತ್ತ್ವಜ್ಞಾನ-ವಿಕಾಸಿನಿ ವಿದ್ಯಾಬ್ರಹ್ಮಪರಾ || ಜಯ || ನಿಶ್ಚಲ-ಭಕ್ತಿ-ವಿದಾಯಿನಿ ನಿರ್ಮಲಮಲಹಾರಿ! ಶರಣ-ರಹಸ್ಯ-ಪ್ರದಾಯಿನಿ ಸಬ ವಿಧಿ ಸುಖಕಾರಿ || ಜಯ || ರಾಗ-ದ್ವೇಷ-ವಿದಾರಿಣಿ ಕಾರಿಣಿ ಮೋದ ಸದಾ | ಭವ-ಭಯ-ಹಾರಿಣಿ ತಾರಿಣಿ ಪರಮಾನಂದಪ್ರದಾ || ಜಯ | ಆಸುರ ಭಾವ-ವಿನಾಶಿನಿ ನಾಶಿನಿ ತಮ-ಸಜನೀ। ದೈವೀ ಸದ್ಗುಣದಾಯಿನಿ ಹರಿ-ರಸಿಕಾ ಜನನೀ ll ಜಯ || ಸಮತಾ ತ್ಯಾಗ ಸಿಖಾವನಿ ಹರಿ ಮುಖಕೀ ವಾಣಿ | ಸಕಲ ಶಾಸ್ತಕೀ ಸ್ವಾಮಿನಿ
ಜಯ ಭಗವದ್ಗೀತೆ, ಮಾತೆ, ಜಯ ಭಗವದ್ಗೀತೆ| Read More »
ಜೈ ಜೈ ಮಾ ಜಗದಂಬ
ಜೈ ಜೈ ಮಾ ಜಗದಂಬ ಜಯ ಜಯ ಮಾ ಶಾರದಾಂಬ || ಪ || ಆದ್ಯಾಶಕುತಿ ನೀ ಮಾತಾಜೀವಗತಿ ದಾಯಿನೀ ಹೇ ಮಾತಾ || ಪ || ಸಿದ್ಧಿ ಪ್ರದಾಯಿನಿ ನೀ ಮಾತಾ ದುರ್ಗತಿ ನಿವಾರಿಣಿ ಹೇ ಮಾತಾ || ಪ || ಮುಕ್ತಿ ವಿಧಾಯಿನಿ ನೀ ಮಾತಾ ನಮೋ ನಾರಾಯಣಿ ಹೇ ಮಾತಾ || ಪ || * * * ಸುಜ್ಞಾನದಾಯಿಕೇ ಸುವಿಮಲಚರಿತೇ | ಮಾ ಶಾರದಾಮಣಿ ಪ್ರೀತಿದಾತೇ || ಶಾಂತಿದಾತೇ, ಶಕ್ತಿದಾತೇ, ಮುಕ್ತಿದಾತೇ,
ಶ್ರೀಮದನ ಮೋಹನಾಷ್ಟಕಮ್
ಜಯ ಶಂಖಗದಾಧರ ನೀಲಕಲೇವರ ಪೀತಪಟಾಂಬರ ದೇಹಿ ಪದಮ್ | ಜಯ ಚಂದನಚರ್ಚಿತ ಕುಂಡಲಮಂಡಿತ ಕೌಸ್ತುಭಶೋಭಿತ ದೇಹಿ ಪದಮ್ || ಜಯ ಪಂಕಜಲೋಚನ ಮಾರವಿಮೋಹನ ಪಾಪವಿಖಂಡನ ದೇಹಿ ಪದಮ್ | ಜಯ ವೇಣುನಿನಾದಕ ರಾಸವಿಹಾರಕ ಬಂಕಿಮ ಸುಂದರ ದೇಹಿ ಪದಮ್ || ಜಯ ಧೀರಧುರಂಧರ ಅದ್ಭುತಸುಂದರ ದೈವತಸೇವಿತ ದೇಹಿ ಪದಮ್ | ಜಯ ವಿಶ್ವವಿಮೋಹನ ಮಾನಸಮೋಹನ ಸಂಸ್ಥಿತಿಕಾರಣ ದೇಹಿ ಪದಮ್ || ಜಯ ಭಕ್ತಜನಾಶ್ರಯ ನಿತ್ಯಸುಖಾಲಯ ಅಂತಿಮಬಾಂಧವ ದೇಹಿ ಪದಮ್ | ಜಯ ದುರ್ಜನಶಾಸನ ಕೇಲಿಪರಾಯಣ ಕಾಲಿಯಮರ್ದನ ದೇಹಿ
ಶ್ರೀಮದನ ಮೋಹನಾಷ್ಟಕಮ್ Read More »
ಗೋಪಿಕಾ ಗೀತೆಯಿಂದ
ಜಯತಿ ತೇsಧಿಕಂ ಜನ್ಮನಾ ವ್ರಜಃ ಶ್ರಯತ ಇಂದಿರಾ ಶಶ್ವದತ್ರ ಹಿ | ದಯಿತ ದೃಶ್ಯತಾಂ ದಿಕ್ಷು ತಾವಕಾಃ ತ್ವಯಿ ಧೃತಾಸವಸ್ತ್ವಾಂ ವಿಚಿನ್ವತೇ || ವಿಷಜಲಾಪ್ಯಯಾದ್ ವ್ಯಾಲರಾಕ್ಷಸಾದ್ ವರ್ಷಮಾರುತಾದ್ ವೈದ್ಯುತಾನಲಾತ್ ವೃಷಮಯಾತ್ಮಜಾದ್ ವಿಶ್ವತೋಭಯಾತ್ | ಋಷಭ ತೇ ವಯಂ ರಕ್ಷಿತಾ ಮುಹುಃ || ನ ಖಲು ಗೋಪಿಕಾನಂದನೋ ಭವಾನ್ಅ ಖಿಲದೇಹಿನಾಮಂತರಾತ್ಮದೃಕ್ | ವಿಖನಸಾರ್ಥಿತೋ ವಿಶ್ವಗುಪ್ತಯೇ ಸಖ ಉದೇಯಿವಾನ್ ಸಾತ್ವತಾಂ ಕುಲೇ || ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್ | ಶ್ರವಣಮಂಗಲಂ ಶ್ರೀಮದಾತತಂ ಭುವಿ ಗೃಣಂತಿ ತೇ ಭೂರಿದಾ
ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ
ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ ಷಟ್‍ಚಕ್ರಂಗಳಲ್ಲಿ ಹುಟ್ಟಿರ್ದ ಷಟ್ಕಮಲಂಗಳನು ಆಧಾರ ತೊಡಗಿ ಆe್ಞಚಕ್ರವೇ ಕಡೆಯಾಗುಳ್ಳ ಬ್ರಹ್ಮಾದಿಗಳ ಸ್ಥಾನಂಗಳ ಗುರೂಪದೇಶದಿಂದೆ ಭಾವಿಸುವುದು. ಆe್ಞಚಕ್ರದತ್ತಣಿಂದೆ ಊಧ್ರ್ವ ಭಾಗವಾದ ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ ಸಹಸ್ರದಳ ಕಮಲವನು ಭಾವಿಸುವುದು. ಆ ಸಹಸ್ರದಳ ಕಮಲದಲ್ಲಿ ನಿರ್ಮಲವಾದ ಚಂದ್ರಮಂಡಲವನು ಧ್ಯಾನಿಸುವುದು. ಆ ಚಂದ್ರಮಂಡಲದ ಮಧ್ಯದಲ್ಲಿ ವಾಲಾಗ್ರ ಮಾತ್ರದೋಪಾದಿಯಲ್ಲಿ ಪರಮ ಸೂಕ್ಷ್ಮರಂಧ್ರವನು ಉಪದೇಶದಿಂದರಿವುದು. ಆ ಸೂಕ್ಷ್ಮರಂಧ್ರವನೆ ಕೈಲಾಸಸ್ಥಾನವಾಗಿ ಅರಿದು ಆ ಕೈಲಾಸದಲ್ಲಿ ಇರುತಿರ್ದ ಪರಮೇಶ್ವರನನು ಸಮಸ್ತ ಕಾರಣಂಗಳಿಗೆ ಕಾರಣವಾಗಿದ್ದಾತನಾಗಿ ಧ್ಯಾನಿಸುವುದಯ್ಯಾ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ Read More »
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ? ಅದೆಂತೆಂದಡೆ ‘ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ’ ಎಂದುದಾಗಿ, ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, Read More »
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ,
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ, ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ, ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು. ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ ಅವ್ವಾ.
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ, Read More »
ಜೋಕುಮಾರನೆಂದು ಪಾಡಿದಳೊ
ಜೋಕುಮಾರನೆಂದು ಪಾಡಿದಳೊ ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ಬಾಯಲ್ಲಿ ಬೆಣ್ಣೆ ಬಗೆಬಗೆ ವಯ್ಯಾರ ಕಾಯ ನೋಡಿದರದು ಬಲು ಕಪ್ಪು ಮಾಯದ ವೇಷದವ ಮನೆ ಮನೆ ತಿರುಗುವ ಸ್ತ್ರೀಯರ ಕಾಣುತ ಭಂಡಾಟನಾಡುವ ||1|| ವಾವಿಗಳಿಲ್ಲದವಳ ತಾ ಮಾರಿ ಗಂಡು ಆವಾಗ ಬಂದರಿವ ಇದೆ ತೆರನು ದೇವದಾನವರೊಳಗಿವನೆ ಬಲು ಚಲುವ ಕೇವಲ ನಾಚಿಕೆ ತೊರೆದ ಲಂಡನ್ನ ||2|| ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ ಪಟ್ಟ ಗುಡುಪಾ ನಮ್ಮ ವಿಜಯವಿಠ್ಠಲರೇಯಾಸೊಟ್ಟವಳನ ಬಿಡದಿಪ್ಪಕುವಲ್ಲಭಾ||3||
ಜೋಕುಮಾರನೆಂದು ಪಾಡಿದಳೊ Read More »
ಜೋ ಜೋ ಹರಿ ಜಾಹ್ನವಿ ಜನಕ
ಜೋ ಜೋ ಹರಿ ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಕೇಸರಿಭೂಷಣ ಕೇಶವ ಶೌರಿ ||1|| ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ ||2|| ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ
ಜೋ ಜೋ ಹರಿ ಜಾಹ್ನವಿ ಜನಕ Read More »
ಜಾನಕಿರಾಮ ಜಾನಕಿರಾಮ
ಜಾನಕಿರಾಮ ಜಾನಕಿರಾಮ ಜಾನಕಿರಾಮ ಜಾನಕಿರಾಮ ಭಕ್ತರ ನೋಡು ಗೀತವ ಪಾಡು ನೃತ್ಯವನಾಡೊ ವರಗಳ ನೀಡೋ ||1|| ವಾರಿಧಿ ಬಂಧ ವಸುದೇವ ಕಂದ ಸ್ವಾರಸ್ಯ ತಂದ ಸತ್ಕರುಣದಿಂದ ||2|| ಶಿರಿವಾಸ ಸಿರಿದೇವಿ ತೋಷ ಶಿರಿ ವಿಜಯವಿಠ್ಠಲ ಉದ್ಧವ ಘೋಷ||3||
ಜಾಣ ನಿನಗೆ ಸರಿಗಾಣೆ
ಜಾಣ ನಿನಗೆ ಸರಿಗಾಣೆ ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ಅಸುರ ತಾರಕನು ಸುಮನಸರ ಬಳಲಿಸುತಿರಲು ಬಿಸಿಗಣ್ಣವನ ತಪಸು ಹಾನಿಮಾಡಿ ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ ||1|| ಶಂಬರ ದೈತ್ಯಜನ ವರದಿಂದ ಅನಿಮಿಷ-ಕ ದಂಬವನು ಸೋಲಿಸಿ ಮೆರೆವುತಿರಲು ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು ಅಂಬರರು ನಲಿಯೆ ವನಶಿರವ ಚಂಡಾಡಿದಾ ||2|| ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ ಘನ ಕೃಪಾನಿಧಿ ಸಿರಿ ವಿಜಯವಿಠ್ಠಲರೇಯನ ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ
ಜರಿಯಬೇಡ
ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ |ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||1|| ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ||2|| ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ
ಜಯರಾಯರ ನೋಡಿರೋ ಸಜ್ಜನರೆಲ್ಲ
ಜಯರಾಯರ ನೋಡಿರೋ ಸಜ್ಜನರೆಲ್ಲ ಜಯರಾಯರ ನೋಡಿರೋ ಜಯರಾಯರ ನೋಡಿ ಜಪಿಸಿ ಮನದಿ ಪಾಡಿ ಜಯವಾಗುವುದು ನಿಮಗೆ ಭಯನಾಶ ಸಂತತ ದುರುಳಮತವೆಂಬೊ ಕರಿಗೆ ಅಂಕುಶವಿತ್ತು ಸುರಸಾದ ಗ್ರಂಥ ಆನಂದಮುನಿ ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ ಸ್ತರ ಮಾಡಿದಾ ಕರದ ಕನ್ನಡಿಯಂತೆ ||1|| ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ ಭೇದಾರ್ಥe್ಞÁನ ಸತ್ಯವೆನಿಸಿ ಈ ಧರಿಯೊಳಗೆ ಹರಿಪರ ದೈವವೆಂದು ಸಾಧಿಸಿ ಉದ್ದಂಡವಾದ ಗುರುತಿಲಕ ||2|| ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ ನೀಕ್ಷಿಸುವದಕೆ ಉಪದೇಶ
ಜಯರಾಯರ ನೋಡಿರೋ ಸಜ್ಜನರೆಲ್ಲ Read More »
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||1|| ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ ||2|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ Read More »
ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ
ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ||1|| ಭಗೀರಥಗೆ ವೊಲಿದು ಭವದೂರ ಪಾವನಕಾರೆ ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ ||2|| ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿನಪೂರ್ವಕ
ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ Read More »
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1|| ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2|| ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ ||3||
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ Read More »
ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ ಮುರಹರನ ವರ್ಣ ಪೆಸರವನೇ ಪೊತ್ತು ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ ಪೊರಿದೆ ಶರಣಾಗತರ ದುರಿತಗಳ ತರಿದೆ ||1|| ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ ಆ ಸಲಿಲ ಬಿಂದು ಪವಮಾನ ಬಂದೂ ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ ಸೂಸಿ ಬೀಳಲು ಕ್ಲೇಶ ಶೋಕ ವಿನಾಶ ||2|| ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ ಕೃಷ್ಣವಾರ ವಿಷ್ಣು ತಾರೆಯಲ್ಲೀ ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ ಮುಟ್ಟಿ ಸ್ನಾನವ
ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ Read More »
ಜನಿಸಲಾರೆನು ಜಗದೊಳಗೆ ಹರಿಯೆ
ಜನಿಸಲಾರೆನು ಜಗದೊಳಗೆ ಹರಿಯೆ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ ||1|| ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು
ಜನಿಸಲಾರೆನು ಜಗದೊಳಗೆ ಹರಿಯೆ Read More »
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ಅಘಗಳ ಕಳೆವ ಅಮೋಘದೇವನ ಭಕುತರ ಕಾವನ ಎನ್ನಯ ಜೀವನ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ಹಗಲು ಇರುಳು ನಿನ್ನ ಸಂಯೋಗನ್ನ ಅನಂತ ಭೋಗನ್ನ ಕಿರೀಟಿಯ ಬೀಗನ್ನ||1|| ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ ದಶಾವತಾರನ್ನ ||2|| ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ ವಿಜಯವಿಠ್ಠಲ ಶ್ರೀನಿವಾಸನ ತಿರುವೆಂಗಳೇಶನ ಜಗವÀ ಪೋಷನ ||3||
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ Read More »
ಜಯಮಂಗಲಂ ನಿತ್ಯ ಶುಭಮಂಗಲಂ
ಜಯಮಂಗಲಂ ನಿತ್ಯ ಶುಭಮಂಗಲಂ ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ ||1|| ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ ||2|| ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ ||3||
ಜಯಮಂಗಲಂ ನಿತ್ಯ ಶುಭಮಂಗಲಂ Read More »