ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ?

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ? ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ? ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು?

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? Read More »

ಹರಿಯ ನುಂಗಿತ್ತು ಮಾಯೆ,

ಹರಿಯ ನುಂಗಿತ್ತು ಮಾಯೆ, ಅಜನ ನುಂಗಿತ್ತು ಮಾಯೆ ಇಂದ್ರನ ನುಂಗಿತ್ತು ಮಾಯೆ, ಚಂದ್ರನ ನುಂಗಿತ್ತು ಮಾಯೆ ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ, ಅರಿಯೆನೆಂಬ ಅe್ಞನಿಗಳ ನುಂಗಿತ್ತು ಮಾಯೆ, ಈರೇಳುಭುವನವನಾರಡಿಗೊಂಡಿತ್ತು ಮಾಯೆ, ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮಾಯವ ಮಾಣಿಸಾ ಕರುಣಿ.

ಹರಿಯ ನುಂಗಿತ್ತು ಮಾಯೆ, Read More »

ಹರನೆ ನೀನೆನಗೆ ಗಂಡನಾಗಬೇಕೆಂದು

ಹರನೆ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಸ್ಸಿದ್ದೆ ನೋಡಾ. ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ, ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು. ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದ.

ಹರನೆ ನೀನೆನಗೆ ಗಂಡನಾಗಬೇಕೆಂದು Read More »

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ;

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ; ಇರುಳಿನ ಕೂಟದಲ್ಲಿ ಇಂಬರಿದು ಹತ್ತಿದೆ. ಕನಸಿನಲ್ಲಿ ಮನಸಂಗವಾಗಿ ಮೈಮರೆದಿರ್ದೆ ; ಮನಸ್ಸಿನಲ್ಲಿ ಮೈಮರೆದು ಒರಗಿದೆ. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆ.

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ; Read More »

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ;

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ; ಹಿಂದೆನ್ನ ಮುಂದೆನ್ನ, ನೀನಲ್ಲದೆ ಪೆರತೊಂದಹುದೆನ್ನೆ. ಮನ ಘನವಾದುದಿಲ್ಲವಯ್ಯಾ. ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ. ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ; Read More »

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು.

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು. ಇರುಳು ನಾಲ್ಕುಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು. ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು. Read More »

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು. ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು. ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ, ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು. Read More »

ಹೋದ್ಯಾ ಶೇಷಗಿರಿದಾಸ ಸುಲಭ

ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ ತಿಳಿಸಿದೆನು ತತ್ವಗಳು ನಿರುತ ಬಿಡದೆ ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ- ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ ||1|| ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲ ಎನ್ನಮ್ಯಾಲೆ ಇನ್ನು ಮಾಡಲಿಲ್ಲ ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ ||2|| ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು | ಅಕಟಕಟ ಭೂಮಿಯೊಳು ಬದುಕುವದೂ | ಸಕಲಲೋಕೇಶ

ಹೋದ್ಯಾ ಶೇಷಗಿರಿದಾಸ ಸುಲಭ Read More »

ಹೇಳುವೆನು ಕೇಳಿ ಕರ್ಣಾಮೃತವ

ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು ||1|| e್ಞÁನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ e್ಞÁನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ ||2|| ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ

ಹೇಳುವೆನು ಕೇಳಿ ಕರ್ಣಾಮೃತವ Read More »

ಹಿಗ್ಗದಿರು ಹಿಗ್ಗದಿರು ಮನುಜಪಶುವೆ

ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ ||1|| ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ ||2|| ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ ||

ಹಿಗ್ಗದಿರು ಹಿಗ್ಗದಿರು ಮನುಜಪಶುವೆ Read More »

ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ

ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ಹಾವಿಗೆ ತಡೆಯಾಗಿಪ್ಪದು ನಿತ್ಯ ಹಾಡಿ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ ||1|| ದೇವ ಪಾದ ಪರಿಯಿಂತು ತಿಳಿದು ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಆವಾವತರು ಜಾತಿಗಳಳಿದು ನಮ್ಮ ಪಾವಮಾನಿ ಮತ ಪೊಕ್ಕು ಸುಳಿದು ||2|| ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ

ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ Read More »

ಹಾರುವಗೆ ಮರದ ಮೇಲಿರುವಗೆ

ಹಾರುವಗೆ | ಮರದ ಮೇಲಿರುವಗೆ | ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ | ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ | ಸಾರುವಗೆ | ರಾವಣನ ಮೀರಿದವಗೆ ಜಯಮಂಗಳಂ | ನಿತ್ಯ ಶುಭ ಮಂಗಳಂ 1|| ವೃಕೋದರ ಭೀಮಗೆ | ಅಶೋಕದೊಡೆಯಗೆ | ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ | ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ | ಜಯಮಂಗಳಂ ನಿತ್ಯ ಶುಭಮಂಗಳಂ||2|| ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ | ಒಂದೆರಡು

ಹಾರುವಗೆ ಮರದ ಮೇಲಿರುವಗೆ Read More »

ಹರೇ ವಿಠ್ಠಲಾ ಪಾಂಡುರಂಗ

ಹರೇ ವಿಠ್ಠಲಾ ಪಾಂಡುರಂಗ ಪರಿಪಾಲಯ ಕಂಸಾರೆ ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ | ಪರಮ ಪುರುಷ ಶೌರೇ ಮುರಾರೇ ಜಲಜಭವಾದಿ ಸುರಸನ್ನುತ ಪಾದ ಜಲಜನಾಭನಾದ ಕಲುಷ ದೂರ ಕರುಣಾಕರ ರಂಗ ಸುಲಲಿತ ಮಹಿಮ ಹರೇ ಮುರಾರೆ ||1|| ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ | ಅಂಡಜವಾಹನ ಅಪ್ರಾಕೃತಕಾಯ ಕುಂಡಲಧರ ಹರೇ ಮುರಾರೇ ||2|| ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ ಸೃಷ್ಟಿಗೊಡೆಯ ಶ್ರೀ ವಿಜಯವಿಠ್ಠಲ ದುಷ್ಟಕುಲಾಂತಕನೇ ಶ್ರೀ ಕೃಷ್ಣ ||3||

ಹರೇ ವಿಠ್ಠಲಾ ಪಾಂಡುರಂಗ Read More »

ಹರಿಹರರಿಬ್ಬರು ಒಂದೇ

ಹರಿಹರರಿಬ್ಬರು ಒಂದೇ ರೂಪವ ಧರಿಸಿ | ದುರುಳ ಗುಹಾಸುರನ ಕೊಂದರೆಂದೂ | ಮರಳು ಮಾನವರು ತಿಳಿಯಾದೆ ನುಡಿವರು | ಹರಿಹರರೀರ್ವರು ಏರವಾದರೆ ಅಂದು | ಹರನು ಮೈಮರೆದು ನಿಂದನ್ಯಾತಕೆ | ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ | ಸುರರ ಓಡಿಸಿ ಪ್ರಬಲನಾಗಿರೆ | ಪರಮ ಪುರುಷ ಹರಿ ನರಹರಿರೂಪವನ್ನು | ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ | ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು | ಮೆರದಾನೇನೋ ಅವತಾರ ಮಾಡಿ | ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ

ಹರಿಹರರಿಬ್ಬರು ಒಂದೇ Read More »

ಹರಿಹರ ಸಲಹಯ್ಯಾ ಪರಮ

ಹರಿಹರ ಸಲಹಯ್ಯಾ ಪರಮ ಕರುಣವ ಮಾಡಿ ಶರಣು ಹೋ | ಶರಣು ಹೋಗುವೆ ನಿಮ್ಮ ಚರಣ ಕಮಲಕೆ | ಎರವು ಮಾಡಿದೆ ನಿರುತಾ ಮೂರು ನಗರ ದಹನಾ | ತಾರಕ್ಷ ವಾಹನಾ | ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ | ಚಾರು ಚಂದ್ರಮೌಳಿ | ಶೌರಿ ಕೌಸ್ತುಭಮಾಲಾ | ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ||1|| ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ | ಕೈಲಾಸವಾಸ ವೈಕುಂಠ ಪುರಾಧೀಶ ಕಾಲಾ ಕಾಲ

ಹರಿಹರ ಸಲಹಯ್ಯಾ ಪರಮ Read More »

ಹರಿಯೆ ಸ್ವತಂತ್ರ ಚತುರದಶ ಭುವನಕೆ

ಹರಿಯೆ ಸ್ವತಂತ್ರ ಚತುರದಶ ಭುವನಕೆ | ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು | ಪರಮ ಭಕುತಿಯಿಂದ ಕ್ರೋಧಮುನಿಪ || ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು | ವಸಂತ ಕಾಲದಂತೆ ಪೊಳಿಯೇ||1|| ತಪಸಿ ತಪವನೆ ಮಾಡುತಿರಲು ಖರಾಟಖಳ | ಉಪಹತಿ ಕೊಡುತಿಪ್ಪ ವರಬಲದಿ || ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ | ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ||2|| ತಲೆದೂಗಿ ಪರಮೇಷ್ಠಿ ಹರಿಯ ಬಳಿಗೆ ಬಂದು | ಖಳನ ಕೋಲಾಹಲವ ಬಿನ್ನೈಸಲು || ಪುಲಿತೊಗಲಾಂಬರನ ಸಹಿತ

ಹರಿಯೆ ಸ್ವತಂತ್ರ ಚತುರದಶ ಭುವನಕೆ Read More »

ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ

ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ | ಕರುಣವ ಮಾಡಿ ಪರಿಯಲಿ ಸಾರಂಗ | ಧರನೆ ಧರಣಿಧರ ವರ ಪರಿಯಂತಾ ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು | ಹೇಮ ಮುನೀಶ್ವರ ಕಾಮಿಸಿ ಹರಿಪಾದ | ತಾಮರಸ ಹೃದಯಧಾಮದೊಳಗೆ ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ || ಸಾಮಜವರದನ ನಾಮವ ನೆನೆಯಲು | ಸೋಮ ಸಹೋದರೆ ಹೇಮ ತೀರಥದೊಳು | ತಾ ಮನಗೊಂಬ ನಾಮನೆ ಪಡೆದು ||1|| ಮಂಗಳಾಂಗಿಯೇ ಬರಲು ರಂಗರಾಯನು

ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ Read More »

ಹರಿಯ ಮರೆದುದಕಿಂತ ಪಾಪವಿಲ್ಲಾ

ಹರಿಯ ಮರೆದುದಕಿಂತ ಪಾಪವಿಲ್ಲಾ | ಹರಿ ಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲಾ ಗೋಹತ್ಯ ಸುರಾಪಾನ ಕನಕತಸ್ಕರ ಸುಜನ- | ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ || ಬಾಹಿರವಾಗ್ ದ್ವೇಷ ಪರದಾರಗಮನ ವಿ- | ವಾಹಗಳ ಮಾಣಿಸುವ ಪಾಪಕಿಂತಲಿ ಮೇಲು ||1|| ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ | ಹಿಂಗದಲೆ ಗಾಯತ್ರಿ ಮಂತ್ರ ಮೌನ || ಕರುಂಗ ದಾನ-ಧರ್ಮ ವೃತ್ತಿ ಕ್ಷೇತ್ರ ರತುನ | ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು ||2|| ಹಾಸ್ಯ ವಿರೋಧ ಮದ ಮತ್ಸರ ಪರಕಾರ್ಯ

ಹರಿಯ ಮರೆದುದಕಿಂತ ಪಾಪವಿಲ್ಲಾ Read More »

ಹರಿಯ ನೆನಸಿದ ದಿವಸ ಶುಭಮಂಗಳಾ

ಹರಿಯ ನೆನಸಿದ ದಿವಸ ಶುಭಮಂಗಳಾ ಹರಿಯ ನೆನಸಿದ ದಿವಸ ಅವಮಂಗಳಾ ಹರಿಯ ನೆನಸಿದ ನಿಮಿಷ ಆವಾಗಲೂ ಹರುಷ | ಹರಿಯ ನೆನಸದ ದಿವಸ ದುರ್ಮಾಸನಾ || ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ | ಹರಿಯ ನೆನಸದ ಘಳಿಗೆ ಯಮನ ಬಳಿಗೆ ||1|| ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ | ಹರಿಯ ನೆನಸದ ಪ್ರಹರ ಹೀನಾಚಾರ || ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು | ಹರಿಯ ನೆನಸದ ಹಗಲು ನರಕಕ್ಕೆ ತಗಲು ||2||

ಹರಿಯ ನೆನಸಿದ ದಿವಸ ಶುಭಮಂಗಳಾ Read More »

ಹರಿಮಣಿವರ್ಣ ವಿಠ್ಠಲಾ ನಿನ್ನವನೊ

ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಹೃದಯ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರಮಾ ಉದಿಸಲಿ ||1|| ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಹರಿ ನಿನ್ನ ಗೆಜ್ಜೆ ಧ್ವನಿಯಿಂದ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ ||2|| ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ

ಹರಿಮಣಿವರ್ಣ ವಿಠ್ಠಲಾ ನಿನ್ನವನೊ Read More »

ಹರಿದಾಸನಾದರೆ ಹ್ಯಾಂಗಿರಲಿ ಬೇಕು

ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಇಂದು ನಾಳಿಗೆಯೆಂಬ ಯೋಚನೆಯ ಬಿಡಬೇಕು ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು ||1|| ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ದಾನಕ್ಕೆ ಸಮ್ಮೊಗನಾಗಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು ||2|| ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು ||3|| ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು

ಹರಿದಾಸನಾದರೆ ಹ್ಯಾಂಗಿರಲಿ ಬೇಕು Read More »

ಹರಿಚಿತ್ತಾ ಸತ್ಯ ಹರಿಚಿತ್ತಾ

ಹರಿಚಿತ್ತಾ ಸತ್ಯ ಹರಿಚಿತ್ತಾ ನರಚಿತ್ತವಿದ್ದಂತೆ | ನಡೆಯದು ಲವಲೇಶ ಸುದತಿ ಮಕ್ಕಳು ಭಾಗ್ಯ ಬೈಸೋದು ನರಚಿತ್ತ | ಮದಿವಾಗದಿರುವೋದು ಹರಿಚಿತ್ತವು || ಕುದುರೆ ಅಂದಣ ಆನೆ ಬೈಸೋದು ನರಚಿತ್ತ | ಪದಚಾರಿ ಗೈಸೋದು ಹರಿಚಿತ್ತವಯ್ಯಾ ||1|| ವಿಧ ವಿಧ ಯಾತ್ರೆಯ ಬೈಸೋದು ನರಚಿತ್ತ | ವದಗಿ ಬರುವ ರೋಗ ಹರಿಚಿತ್ತವೊ || ಸದ ಅನ್ನದಾನವ ಬೈಸೋದು ನರಚಿತ್ತ | ಉದತಕ್ಕೆ ಅಲಸೋದು ಹರಿಚಿತ್ತವಯ್ಯ ||2|| ಭೂಮಿಯನಾಳಬೇಕೆಂಬೋದು ನರಚಿತ್ತ | ಆ ಮಾತಿಗೆ ಅಡ್ಡ ಹರಿಚಿತ್ತವು || ವಿಜಯ

ಹರಿಚಿತ್ತಾ ಸತ್ಯ ಹರಿಚಿತ್ತಾ Read More »

ಹರಿ ಮಾಡ್ದ ಮರ್ಯಾದೆ

ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು ಸರಸಿಜಭವಾದ್ಯರಿಗೆ ಬಿಡದು ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ ದಿರದಾವ ಜನುಮವಾಗೆ ಪ್ರಾಣಿ ವಾರಿಜಭವನ ನೋಡು ಮುನಿಶಾಪದಿಂ ಧಾರುಣಿಯೊಳು ಪೂಜೆ ತೊರೆದ ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ- ತಾರವಿಲ್ಲದವನಾದನೋ ಪ್ರಾಣಿ||1|| ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು ಯುಗದೊಳಗೆ ಕೋತ್ಯಾದನಲ್ಲೋ ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ ||2|| ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ ಅವನಿಪತಿ ಮೊರೆ ಹೊಕ್ಕನಲ್ಲೊ ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ ಸ್ರವಿಸುವುದು ಶಿರಸಿನಲ್ಲೀ

ಹರಿ ಮಾಡ್ದ ಮರ್ಯಾದೆ Read More »

ಹರಿ ಪರದೈವ ಚತುರ್ದಶ ಲೋಕಕೆ

ಹರಿ ಪರದೈವ ಚತುರ್ದಶ ಲೋಕಕೆ | ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ | ಮನ ಬಂದ ಹಾಗೆ ಅರ್ಪಿಸುತಿರಲು | ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ | ವನಜನಾಭನೆ ದೈವವೆಂದು ನಿರ್ಣೈಸಿದರು||1|| ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು | ಉರ್ವಿಯನು ತಿರುಗಿದನು ಅಜ ಗಿರೀಶಾ || ಗೀರ್ವಾಣರಾದ್ಯರು ಪರಿಹರಿಲಾರದಿರೆ | ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು ||2|| ಜೀವನದೊಳಗೆ ಕರಿ ಬಾಧೆಯನು ಬಡುತಲಿ | ಕಾವವಾತನೆ ದೈವ

ಹರಿ ಪರದೈವ ಚತುರ್ದಶ ಲೋಕಕೆ Read More »

ಹರಿ ಎಂಬ ನಾಮ ಎರಡಕ್ಷರವ

ಹರಿ ಎಂಬ ನಾಮ ಎರಡಕ್ಷರವ ಸ್ಮರಿಸುವಾಲೋಚನಿಗೆ ದುರಿತ ಕಾನನ ಛೇದ ವೇದರಾಶೀ ಎಂಬ ಭೂಸುರನು ಯಮಪುರದ ಹಾದಿಯಲಿ ಪೋಗುತಿರೆ ಎಡಬಲದಲಿ ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ ||1|| ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ ಮೃತ್ಯು ನಡುಗೀ ನಿಂದು ಪೂಜೆ ಮಾಡೀ ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ ||2|| ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ ವಾರ್ತಿಯನು

ಹರಿ ಎಂಬ ನಾಮ ಎರಡಕ್ಷರವ Read More »