ಶಂಭೋ ಸ್ವಯಂಭು ಸಂಭವ
ಶಂಭೋ ಸ್ವಯಂಭು ಸಂಭವ-ನಂಬಿದೆ ಕಾಯೊ ಜಂಭಾರಿಸುತ ಅಭವ ಅಂಬರ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ ||1|| ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ […]