ರಾಮಕೃಷ್ಣ ಭಗವಾನ್

ರಾಮಕೃಷ್ಣ-ಭಗವಾನ್ ವಿಜಯತೇ ರಾಮಕೃಷ್ಣ-ಭಗವಾನ್|| ಯೋ ಲೋಕಾನುಗ್ರಹಕರಣಾರ್ಥಂ ಜನ್ಮ ಸ್ವೀಕೃತವಾನ್| ವಿಜಯತೇ|| ಯಸ್ಸರ್ವೇಷಾಂ ಯೋಗಪಥಾನಾಮ್ ಐಕ್ಯಂ ದರ್ಶಿತವಾನ್| ವಿಜಯತೇ|| ಯಃ ಸ್ವಕಲತ್ರೇ ಮಾತರಿ ಚ ಶ್ರೀ- ಕಾಲೀಮೀಕ್ಷಿತವಾನ್| ವಿಜಯತೇ|| ಯೋ ವೇದಾರ್ಥಂ ಸರಲೈರ್ವಚನೈಃ ಪಾಮರಸುಗಮಿತವಾನ್| ವಿಜಯತೇ|| ಯಶ್ಚ ವಿವೇಕಾನಂದಮುಖೇನ ಜ್ಞಾನಂ ಕಾರಿತವಾನ್| ವಿಜಯತೇ|| ಯೋಂತರ್ಯಾಮೀ ಸಕಲಜನಾನಾಂ ಹೃದಯೇ ಸಂಸ್ಥಿತವಾನ್| ವಿಜಯತೇ|| —-ಸ್ವಾಮಿ ಹರ್ಷಾನಂದ

ರಾಮಕೃಷ್ಣ ಭಗವಾನ್ Read More »

ರಾಮಕೃಷ್ಣ ಪದಾಂಬುಜದಿ

ರಾಮಕೃಷ್ಣ ಪದಾಂಬುಜದಿ ನಲಿಯೋ ಎನ್ನ ಮನದ ಭ್ರಮರ| ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ ನಿಲ್ಲದಿರಲ್ಲಿ ನೀ ಮೈಯನು ಮರೆತು|| ಜನುಮ ಮರಣ ವಿಷಮ ವ್ಯಾಧಿಯ ಎನಿತು ಕಾಲ ಸಹಿಪೆ ಇನ್ನು| ಪ್ರೇಮಸುಧೆಯ ಸವಿ ಶ್ರೀಪದದಿ ಭವದ ಯಾತನೆ ಉಳಿಯದಿನ್ನು|| ಧರ್ಮಾಧರ್ಮ-ಸುಖ-ದುಃಖ-ಶಾಂತಿ-ತಾಪ ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ| ಜ್ಞಾನಖಡ್ಗದಿ ಪರಮ ಯತ್ನದಿ ಕತ್ತರಿಸು ನೀ ಕರ್ಮದ ಪಾಶವ|| ರಾಮಕೃಷ್ಣನಾಮ ನಾಲಿಗೆ ನುಡಿಯಲಿ ಮೋಹದ ಕತ್ತಲು ಕಳೆವುದಾಗ| ದುಃಸ್ವಪ್ನ ಜ್ವಾಲೆ ಆರುವುದಾಗ ಮತ್ತಿನ ನಿದ್ರೆಯು ಉಳಿಯದಿನ್ನು||

ರಾಮಕೃಷ್ಣ ಪದಾಂಬುಜದಿ Read More »

ರಾಮಕೃಷ್ಣಾನಂದ ಸ್ವಾಮಿಯೆ

ರಾಮಕೃಷ್ಣಾನಂದ ಸ್ವಾಮಿಯೆ ನಮ್ಮ ನಮನವು ನಿನಗೆ ಯತಿಯೆ|| ವೇದಶಾಸ್ತ್ರದ ಜ್ಞಾನನಿಧಿಯೆ ಭೇದದರ್ಶನ ರಹಿತ ಸಂತನೆ ವಾದದೂರನೆ ಶಾಂತಿಪ್ರಿಯನೆ ನಮ್ಮ ನಮನವು ನಿನಗೆ ಯತಿಯೆ|| ಹರಿಯ ಪಾದದಿ ಪರಮಭಕುತಿಯು ಗುರುವಿನಡಿಯಲಿ ಅದುಕು ಮಿಗಿಲು ಹರಸುತೆಮ್ಮನು ಶಮನಗೊಳಿಸು ನಮ್ಮ ನಮನವು ನಿನಗೆ ಯತಿಯೆ|| ತ್ಯಾಗಯೋಗದ ಯುಗಳಮೂರ್ತಿಯೆ ಭಾಗ್ಯವೆಮ್ಮದು ನಿನ್ನ ಕರುಣೆಯೆ ಹೋಗಲಾಡಿಸು ಭವದ ಬವಣೆ ನಮ್ಮ ನಮನವು ನಿನಗೆ ಯತಿಯೆ|| —-ಸ್ವಾಮಿ ಹರ್ಷಾನಂದ

ರಾಮಕೃಷ್ಣಾನಂದ ಸ್ವಾಮಿಯೆ Read More »

ರಾಮಕೃಷ್ಣ ತಪೋಸೂರ್ಯ

ರಾಮಕೃಷ್ಣ ತಪೋಸೂರ್ಯ ಕಿರಣಬಿಂಬ ಚಂದ್ರಿಕೆ ಓ ತಾಯಿ ಅಂಬಿಕೆ|| ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯೆ ವಾತ್ಸಲ್ಯವರಣೆಯೆ|| ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ| ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವೆ ಮೌನಪ್ರಭಾವಲಯವೆ|| ಸಂಕಟಗಳ ವನವಸನವ- ನುಟ್ಟು ನಿಂತ ಶಿಖರವೆ| ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೆ ದಿವ್ಯ ಕೃಪಾರೂಪವೆ|| —-ಜಿ.ಎಸ್. ಶಿವರುದ್ರಪ್ಪ

ರಾಮಕೃಷ್ಣ ತಪೋಸೂರ್ಯ Read More »

ರಾಮಕೃಷ್ಣ ಗುರುವೇ

ರಾಮಕೃಷ್ಣಗುರುವೇ ಪರಮಹಂಸ ಗುರುವೇ| ಕಾಮಿತದಾಯಕ ಪ್ರೇಮದಿ ನಮಿಪೆವು || ಸಕಲ ಮತವ ನೀನೇಕವೆಂದೆಣಿಸಿದೆ ಅಕಲಂಕಮಹಿಮ ಮಮ ದೇವ| ಲೋಕಸೇವೆಯಿಂ ಖ್ಯಾತಿಯ ಹೊಂದಿದೆ ಮುಕ್ಕಣ್ಣನ ಪ್ರಿಯ ನಮಿಪೆವು ದೇವ|| ಸ್ವಾಮಿ ವಿವೇಕಾನಂದನ ಗುರುವೇ ಪ್ರೇಮದಿ ಸಲಹೈ ಸಕಲ ಲೋಕವ| ತಾಮಸ ಮಾಡದೆ ಕಾವುದು ಎಮ್ಮನು ಚಾಮುಂಡಾಂಬೆಯ ವರಭಕ್ತನೆ|| —-ಮೈಸೂರು ದೇವೇಂದ್ರಪ್ಪ

ರಾಮಕೃಷ್ಣ ಗುರುವೇ Read More »

ರಾಮ ಎಂಬುವ ಎರಡು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ|| ‘ರಾ’ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿ ಪಾಪವನ್ನು| ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ|| ಮತ್ತೆ ‘ಮ’ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳಪೊಗದಂತೆ ಕವಾಟವಾಗಿ| ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತನೊಬ್ಬ ತಾ ಬಲ್ಲ|| ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು| ಸಿರಿಯರಸ ಪುರಂದರ ವಿಟ್ಠಲನ ನಾಮವನು ಸಿರಿಕಾಶಿಯೊಳಗಿಪ್ಪ ಶಿವನು

ರಾಮ ಎಂಬುವ ಎರಡು Read More »

ರಾಘವಂ ಕರುಣಾಕರಂ

ರಾಘವಂ ಕರುಣಾಕರಂ ಭವನಾಶನಂ ದುರಿತಾಪಹಂ| ಮಾಧವಂ ಖಗಗಾಮಿನಂ ಜಲರೂಪಿಣಂ ಪರಮೇಶ್ವರಂ|| ಪಾಲಕಂ ಜನತಾರಕಂ ಭವಹಾರಕಂ ರಿಪುಮಾರಕಂ| ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| ಚಿದ್ಘನಂ ಚಿರಜೀವಿನಂ ಮಣಿಮಾಲಿನಂ ವರದೋನ್ಮುಖಂ| ಶ್ರೀಧರಂ ಧೃತಿದಾಯಕಂ ಬಲವರ್ಧನಂ ಗತಿದಾಯಕಂ| ಶಾಂತಿದಂ ಜನತಾರಕಂ ಶರಧಾರಿಣಂ ಗಜಗಾಮಿನಂ ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| —-ಆನಂದರಾಮಾಯಣಮ್

ರಾಘವಂ ಕರುಣಾಕರಂ Read More »

ರಾಘವ ನೀ ಬಾ

ರಾಘವ ನೀ ಬಾ ರಘುಕುಲನಂದನ ಅಘಮರ್ಷಣನೇ ನೀ ಬಾರೋ| ದಶಮುಖರಾವಣನ ಲಂಕೆಲಿ ಮಡುಹಿದ ಕೌಸಲ್ಯಾತನಯನೇ ನೀ ಬಾರೋ|| ಧನುರ್ಬಾಣವ ಕರದಲಿ ಧರಿಸಿದ ದನುಜಕುಲಾಂತಕ ನೀ ಬಾರೋ| ಇನವಂಶವನು ಪಾವನಗೈದ ಮನುಜಶ್ರೇಷ್ಠನೇ ನೀ ಬಾರೋ|| ಅಹಲ್ಯೋದ್ಧಾರಕ ತಾಟಕಿಘಾತಕ ಅಹರಹ ಭಜಿಸುವೆ ನೀ ಬಾರೋ| ಇಹದಲಿ ಪರದಲಿ ಗತಿ ನೀನೆನ್ನುತ ತಹತಹ ಪಡುತಿಹೆ ನೀ ಬಾರೋ|| ಪಿತೃಭಕ್ತನೇ ಸತ್ಯಶೀಲನೇ ಸತತವು ನಿನ್ನನೇ ಸ್ತುತಿಸುವೆ ಬಾರೋ| ನತಜನರನು ಪರಿಪಾಲಿಸುವವನೇ ಸೀತಾರಮಣಾ ನೀ ಬಾರೋ|| —-ಸ್ವಾಮಿ ಹರ್ಷಾನಂದ

ರಾಘವ ನೀ ಬಾ Read More »

ರಾಗಿ ತಂದೀರ್ಯಾ

ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ| ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ|| ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ| ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ|| ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ| ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ|| ಕಾಮಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ| ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ|| ಹರಿಯನು ಅನುದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ| ಕರೆಕರೆ ಭವವನು ನೀಗುವರಾಗಿ ಪುರಂದರವಿಟ್ಠಲನ ಸೇವಿಪರಾಗಿ|| —-ಪುರಂದರದಾಸ

ರಾಗಿ ತಂದೀರ್ಯಾ Read More »