ರತಿಪತಿ ನಾಶಂ ಪ್ರಮಥ ಗಣೇಶಂ

ರತಿಪತಿನಾಶಂ ಪ್ರಮಥ ಗಣೇಶಂಭಸ್ಮವಿಭೂಷಿತ ಚರುಮ ನಿವಾಸಂ |ಡುಲುಡುಲು ನೇತ್ರಂ ಫಣಿಮಯ ಗಾತ್ರಂಶೋಭನ ಶೋಭಿತ ಪಂಚ ಸುವಕ್ತ್ರಂ || ಕರಧೃತಶೂಲಂ ಶಿತಿಮಯ ಕಂಠಮ್ಅರ್ಧಸುಧಾಕರ ಶೋಭಿ ಲಾಲಠಮ್ |ಮೃದುಮೃದುಹಾಸಂ ಸ್ಮಶಾನವಿರಾಜಂಮೌಲಿಸುರಾಜಿತ ಪನ್ನಗರಾಜಂ || ಗಿರಿಜನಿ ಗೌರಿ ಹೃದಯವಿಲಾಸಂವಿಶ್ವಕೃಪಾಮಯ ಸಾವದವೇಶಂ |ಡಿಮಿಡಿಮಿ ವಾಣಿ ಡಮರು ಹಸ್ತಂಬಂ ಬಂ ಬಾಜಿತ ಪಂಚಸುವಕ್ತ್ರಂ || ಗುಹಜನ ನೀಭಿ ತಿಹರಣ ಕರ್ತ್ರಿಂಶಂಕರವಾಮ ಕರಾಶ್ರಿತ ಧಾತ್ರಿಮ್ |ಮಧುಕರಕಂತ್ಯಾ ನಿರ್ಜಿತ ಹಾಸಂಪದುಮ ಪ್ರಕಾಶಿತ ಪದಯುಗ ಭಾಸಂ || ಜೈ ಜಗದಂಬೆ ಕರುಣಾಪಾಂಗೆಶೋಭಿತ ಶಂಕರಿ ಶಂಕರ ವಂದ್ಯೆಡಿಮಿಡಿಮಿ ವಾಣಿ ಡಮರು […]

ರತಿಪತಿ ನಾಶಂ ಪ್ರಮಥ ಗಣೇಶಂ Read More »

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು

ಪಹಾಡಿ – ತ್ರಿತಾಲ ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು ನೀನು| ಮಧುರ ಮಧುರ ನಿನ್ನ ನಾಮ ಜಪಿಸಿ ಜಪಿಸಿ ಧನ್ಯ ನಾನು|| ಮಾತೆ ಶಾರದಾಂಬೆ ನಿನ್ನ ವಕ್ಷಸ್ಥಲದಿ ನೆಲಸಿಹಳಯ್ಯ! ಶ್ರೀ ವಿವೇಕ ಶ್ರೀ ರಾಖಾಲ ನಿನ್ನ ಭವ್ಯ ಬಾಹುಗಳಯ್ಯ|| ನಿನ್ನ ದಿವ್ಯ ದೇಹದಲ್ಲಿ ಶಿಷ್ಯವೃಂದ, ಮಹದಾನಂದ| ಭಕ್ತ ಜನರು ಬಂದು ಬಂದು ಬಾಗಿ ಬಾಗಿ ವಂದಿಪರಯ್ಯ|| – ಸ್ವಾಮಿ ಪುರುಷೋತ್ತಮಾನಂದ

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು Read More »

ರಾಮಕೃಷ್ಣ ಪದಶರಣಜೀವನ

ರಾಮಕೃಷ್ಣ ಪದಶರಣಜೀವನ ಜಯ ವಿವೇಕಾನಂದ ನಾಮಧಾರೀ | ರುದ್ರ ಅವತಾರ ಭೈರವ-ಹುಂಕಾರಏಶೇ ಚರಾಚರವಾರೀ ಪ್ರಭು || ತೇಜದೃಪ್ತ ತವ ಸ್ಥಿರಕಂಠರವ ಅಭೀರಭೀಃ ಮಂತ್ರಪ್ರಚಾರೀ | ನಾಶಿ ಭವಾಮಯ ದಿಲೇ ವರಾಭಯ ನಿರ್ಭಯ ಕೊರಿ ನರನಾರೀ || ಗಾಹೇ ಅಕಿಂಚನ ತವ ಗುಣಕೀರ್ತನ ಚಾಹೋ ಕೃಪಾ ನಯನೇ ನೇಹಾರೀ | ದೇಹೊ ಪದಾಶ್ರಯ ದೀನದಯಾಮಯ ಅಪಾರ್ ಕರುಣಾ ಭಯಹಾರೀ || -ಹೃಷೀಕೇಶ ಚಕ್ರವರ್ತಿ

ರಾಮಕೃಷ್ಣ ಪದಶರಣಜೀವನ Read More »

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು,

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ, ಅಲ್ಲಅಹುದು, ಉಂಟುಇಲ್ಲ, ಬೇಕುಬೇಡೆಂಬ ಆರರಿತಾತನೆ ಗುರು ತಾನೆ ಬೇರಿಲ್ಲ. ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, Read More »

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ?

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ? ಮುತ್ತಿನ ಬಲೆಯಾದಡೆ ಬಂಧನವಲ್ಲವೆ ? ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ? Read More »

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ವ್ಯೋಮಕೇಶ ಒಪ್ಪಿಕೊಳ್ಳಬೇಕು ಒಲಿದು ಈ ವಾಕು ||1|| ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ||2|| ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು

ರುದ್ರಾ ವೀರಭದ್ರ ಅದ್ರಿನಂದನೆ ರಮಣಾ Read More »

ರಾಮ ರಾಮ ಎಂಬೆರಡಕ್ಷರ

ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||1|| ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು ||2|| ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು||3||

ರಾಮ ರಾಮ ಎಂಬೆರಡಕ್ಷರ Read More »

ರಾಮ ರಘುಕುಲಾಬ್ಧಿ ಸೋಮಾ

ರಾಮ ರಘುಕುಲಾಬ್ಧಿ ಸೋಮಾ ಸಂತತ ಭಕ್ತ ಪ್ರೇಮಾ ಮಂಗಲಧಾಮಾ | ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ಏಸಪರಾಧಗಳೆಣಿಸದೆ ದಯವಿಟ್ಟು | ದೋಷದೂರನ ಮಾಡೊ ಕೇಶವ ಕಮಲಾಕ್ಷಾ ||1|| ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ | ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ||2|| ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-| ಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ||3||

ರಾಮ ರಘುಕುಲಾಬ್ಧಿ ಸೋಮಾ Read More »

ರಾಮ ಜಾನಕೀರಮಣ ರಾಜೀವದಳನಯನ

ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. ||1|| ವಾಣಿ ಭಾರತಿ ಖಗಪರಾಣಿ ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ ||2|| ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ

ರಾಮ ಜಾನಕೀರಮಣ ರಾಜೀವದಳನಯನ Read More »

ರಾಜವದನೆ ನೀ ಗುರು ರಾಜರಿರುವ

ರಾಜವದನೆ ನೀ ಗುರು- ರಾಜರಿರುವ ಸಂಭ್ರಮ ನೋಡೆ ರಾಜಿಸುವ ಮುಖನ ಪೂಜಿಸುವ ಯತಿವರನೆ ದೂಷಿತ ದುರ್ಜನರ ತಾಸು ಬಾಳದಂತೆ ವಿ- ಶೇಷದಿಂದ ಭಜಿಸುವರ ಪೋಷಿಸುವ ಯತಿವರನೆ ||1|| ಪಾದ ನಂಬಿದವರಿಗೆ ಮೋದವೀವ ದೇವನೆ ಬೀದಿಬಿಡುವ ನಂಬಿದವರ ವಾದಿರಾಜ ದೊರೆವರನೆ ||2|| ಅಜಪದಕೆ ಅರ್ಹನೆಂದು ಗಜವರದನ ದಾಸನೆಂದು ಭಜನೆ ಮಾಡುವ ನಿಜವ ಪೇಳುವ ವಿಜಯವಿಠಲನ ಸೇವಕರಿವರೇ ||3||

ರಾಜವದನೆ ನೀ ಗುರು ರಾಜರಿರುವ Read More »

ರಾಜಕುಲ ವನರಾಶಿ ರಾಜರಾಜೇಶ್ವರಾ

ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ ||1|| ಸುರಪ ಗರ್ವಿಸೆ ಸಪ್ತದಿನ ಮಳೆಗರಿಯೆ ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ ||2|| ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ

ರಾಜಕುಲ ವನರಾಶಿ ರಾಜರಾಜೇಶ್ವರಾ Read More »

ರಾಘವೇಂದ್ರಂ ಭಜೇಹಂ

ರಾಘವೇಂದ್ರಂ ಭಜೇಹಂ ||ಶ್ರೀ|| ಆಗಮಚಯ ವಿe್ಞÁನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ ||1|| ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ ||2|| ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ವೃಜಿನ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ||3||

ರಾಘವೇಂದ್ರಂ ಭಜೇಹಂ Read More »

ರಾಘವೇಂದ್ರ ಗುರುರಾಯ

ರಾಘವೇಂದ್ರ ಗುರುರಾಯ ರಮಣೀಯ ಕಾಯ ರಾಘವೇಂದ್ರ ಪಾದಾಂಬುಜ ಭೃಂಗ ಭವ ಭಯ ಭಂಗ ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ ಆಡಿ ಕೊಂಡಾಡಲು ಬಲು ಗೂಢವಾಗಿದೆ ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ ||1|| ನಾಮಾಭಿವಿಡಿದು ಉಮಾಪತಿ ಪರಿಯಂತ ಈ ಮನ ಎರಗಲಿ ಯಾಮ ಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು ||2|| ಚಿಂತಾಮಣಿ ಕಂಡ ಮೇಲೆ

ರಾಘವೇಂದ್ರ ಗುರುರಾಯ Read More »

ರಥವನೇರಿದ ರಥಗಾತ್ರ ಪಾಣಿ

ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಸುರಪಥ ಪಿತಾ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ತರ ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ ||1|| ಮಣಿಪ್ರಚುರ ಮುತ್ತಿನ

ರಥವನೇರಿದ ರಥಗಾತ್ರ ಪಾಣಿ Read More »

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ | ಪ್ರಜರಿಗೆ ದೊರಕುವದೆ | ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ | ಭಜನೆ ಮಾಡುವಂಥ ಸುಜನರಿಗಲ್ಲದೆ ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ | ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು | ಚಂದದಿ ಓದಿಕೊಂಡು | ಕುಂದದೆ ವ್ರತ ಯಾಗ ಯೋಗ ಮಾಡಲೇನು | ಬಿಂದು ಮಾತ್ರ ಫಲವಿಲ್ಲ | ವೃಂದಾರಕ ಸುರರು ಒಂದಾಗಿ ಒಂದಿನ | ಅಂದು ಪೀಯೂಷವ ಕರೆಯೆ ಉಂಡವರಾರು ||1||

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ Read More »

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ | ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು | ಸತತ ಚಂಚಲ ದೂರ ಸ್ಥಿತಿಗೆ ಎರಗಿದೆ ಸು | ಕೃತವೆಲ್ಲ ಪೋಗಾಡಿದೆ ಇದಕೆ ಪ್ರಾಯಶ್ಚಿತ್ತ ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ | ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ | ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ||1|| ನಾನಾ ಮಹಿಮ ಮಾನ ಪಾವನ ವಿದ್ಯಾ ಪ್ರ | ವೀಣಾರೋಚನಾ ವಿe್ಞÁನಾಭಿಮಾನಿ ನಿ | ದಾನ

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ Read More »

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ | ರಂಗನಾಡಿದ ಪೊಂಗೊಳವಿಯಲಿ ಶೃಂಗಾರದಿಂದ ಗೋಪಾಂಗನೆಯ ಕೂಡ | ತುಂಗ ವಿಲಾಸ ತಾ ರಂಗ ಕೇಳಿಯಲಿ | ಸಂಗೀತ ಪಾಡುತ ಸಾಂಗೋಪಾಂಗದಿಂದಾ ಹೊಳಿಯ ಜನಕೋಕುಳಿಯ ಕಲಿಸಿ | ಗೆಳೆಯರೊಂದಾಗೆ ಕಳೆಯೆವೇರುತ್ತ | ಅಳಿಯ ಗರುಳಬಲಿಯರರಸಿ | ಇಳಿಯಾಳಗೋಕುಳಿ ವಸಂತವಾ | ಉಳಿಯದಂತೆ ವೆಗ್ಗಳಿಯ ತರಿಸಿ ಹಳೆಯ ಬೊಮ್ಮನ ಬಳಿಯವಿಡಿದು | ಸುಳಿಯಲೊವಸನೆ ರುಳಿಯ ಕೈಸರ | ಪಳಿಯ ಚಲುವ ತಿಳಿಯಗೊಡದೆ ||1|| ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು | ನಕ್ಕು ಕೈಯ ಹೊಯಿದ |

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ Read More »

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ | ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ತನುಜನ ಜನಕನು ಕೊಲ್ಲಲು ಮೊರೆಯಿಡಾ ಬಂದ | ಕಂಭದೊಳಿಂದ | ಮನುಜಕೇಸರಿ ರೂಪಧರಿಸಿದ ನಿಜ ಲೋಕಸ್ವಾಮಿ | ಅಂತರ್ಯಾಮಿ || ದನುಜನ ಉದರ ಬಗೆದು ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ | ವನಜ ಭವಾದ್ಯರು ಜಯ ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ ||1|| ಮನದಲಿ ಬೇಡಿದ ಭಾಗ್ಯವ ಕೊಡುವನು ಚಲುವಾ | ಭಕುತರಿಗೊಲಿವ | ಅನುದಿನದಲಿ ಅನುಕಂಪನು ಹರಿ ನಮಗೆಲ್ಲಾ |

ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ Read More »

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಮಂಗಳ ಮೂರುತಿ ಮನುಕುಲೋತ್ತುಂಗ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಆತುಮ ಮೂರುತಿ ದಶರಥನಿಗೆ ಮಗನಾದ- ಲೀಲಾ ವಿನೋದ ಜ್ಯೋತಿ ಪ್ರಕಾಶನು ಸಾಕೇತಪುರದಲಿ ನಲಿದ- ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ ||1|| ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಜಲಜಾಯತದಳ ಪೊಕ್ಕಳಿಂದಲಿ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಪೊಳೆದ ಪ್ರಣವ ವಿಮಾನದೊಳಗಿಂದ ಬಂದ ಪರಮಾ-ನಂದ

ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ Read More »

ರಂಗ ಮಾನವ ಸಿಂಗನಾದನು

ರಂಗ ಮಾನವ ಸಿಂಗನಾದನು ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ ||1|| ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಚಕ್ರವರ್ತಿಯಾಗಿ

ರಂಗ ಮಾನವ ಸಿಂಗನಾದನು Read More »

ರಾಮಾನುಜರೇ ನಮೋ ನಮೋ

ರಾಮಾನುಜರೇ ನಮೋ ನಮೋಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ ||1|| ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ ||2|| ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ ||3||

ರಾಮಾನುಜರೇ ನಮೋ ನಮೋ Read More »

ರಾಮಾನುಜ ಮತೋದ್ಧಾರಕ

ರಾಮಾನುಜ ಮತೋದ್ಧಾರಕತಾಮಸಗುಣಪಾಶಗಿರಿವಜ್ರದಂಡ ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿಹೇಸದೆ ಕಟ್ಟಿ ಪೂಜಿಪರು ನೋಡವ್ಯಾಸರದೊಂದು ತೋಳಿಗೆ ಶಿವಶರಣನಸಾಸಿರ ತೋಳ್ಗಳ ತರಿದ ನಮ್ಮಯ್ಯ ||1|| ಹರಿ ಎಂಬ ಶಬ್ದವ ಕೇಳಿ ಪಿಟ್ಟಕ್ಕನುಹರನ ಹೊಟ್ಟೆಯಲ್ಲಿ ಪುಟ್ಟುವೆನೆಂಬಳುಹರಹರ ಎಂಬ ಶೈವರ ಏಳ್ನೂರುಶಿರಗಳನರಿದನು ನಮ್ಮ ತಾತಯ್ಯ||2|| | ಮಸ್ತಕದೊಳು ರುದ್ರ ಪಾದದೊಳಗೆ ವಿಷ್ಣುಮಸ್ತಕ ಮಹಾದೇವ ಮೇಲೆಂಬರುಮಸ್ತಕ ಬಂದು ಪಾದಕೆ ಬಿದ್ದು ಶರಣೆಂಬಮುಕ್ತಿಯ ಪಾದ ಮೇಲು ತಿಳಿದು ನೋಡಣ್ಣ ||3|| ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವಸಂಗನ ಶರಣರೆಲ್ಲರು ಕೇಳಿರಿಲಿಂಗಪ್ರಸಾದವು ಮುಟ್ಟದಂತಾಯಿತು ನಮ್ಮರಂಗನ ಪ್ರಸಾದವು ಲೋಕಪಾವನವು ||4|| ಧರೆಯೊಳು

ರಾಮಾನುಜ ಮತೋದ್ಧಾರಕ Read More »

ರಾಮನಾಮವ ನೆನೆ ಮನವೆ

ರಾಮನಾಮವ ನೆನೆ ಮನವೆ ರಾಮ ಎಂದವನೆ ಧನ್ಯನೆಂದು ಶ್ರುತಿತತಿಗಳು ಪೊಗಳುತಿರೆ ತರುಣತನದಿ ದಿನ ದಾಟಿತು ಸುಮ್ಮನೆಶರೀರದೊಳು ಸ್ವರವಾಡುತಲೆತರುಣಿ ಸುತರು ಸಂಸಾರವೆಂಬಶರಧಿಯೊಳಗೆ ಮುಳುಗಿರದೆ ಮನವೆ ||1|| ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆಸಿಗುವುದೆ ನಿಜದಿಂ ಈ ಸಮಯಮುಗುಧನಾಗಿ ಮತ್ತೆ ಜನಿಸಿ ಬರುವುದುಸೊಗಸು ಕಾಣುವುದೆ ಛಿ ಮನವೆ ||2|| ಚಿಂತೆಯನೆಲ್ಲ ಒತ್ತಟ್ಟಿಗಿಟ್ಟುಅಂತರಂಗದಲಿ ಧ್ಯಾನಿಸುತಕಂತುಪಿತ ಕನಕಾದಿಕೇಶವನಎಂತಾದರೂ ನೀ ಬಿಡಬೇಡ ಮನವೆ||3||

ರಾಮನಾಮವ ನೆನೆ ಮನವೆ Read More »

ರಾಜವದನೆ ಸುರರಾಜನ ಪುರದೊಳು

ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ ||1|| ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ ||2|| ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ

ರಾಜವದನೆ ಸುರರಾಜನ ಪುರದೊಳು Read More »

ರಮಣಿ ಕೇಳೆಲೆ ಮೋಹನ ಶುಭಕಾಯನ

ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ ||1|| ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ

ರಮಣಿ ಕೇಳೆಲೆ ಮೋಹನ ಶುಭಕಾಯನ Read More »