ಯಾರನು ಬಯಸಿ
ಯಾರನು ಬಯಸಿ ಶ್ರೀಭುವನೇಶ್ವರಿ ಹರಕೆಯ ಹೊತ್ತಳೊ ವೀರೇಶ್ವರನಲಿ ವೀರೇಶ್ವರ ಶಿವ ಯಾವನ ರೂಪದಿ ಧರೆಯನು ಪಾವನಗೈದನೊ ಅಂತಹ ವೀರ ವಿವೇಕಾನಂದ ನಮೋ|| ಯಾವನ ಲೀಲೆಯ ಸಹಿಸದೆ ಮಾತೆಯು ‘ಶಿವನೇ ನೀ ಬಾರೆನ್ನುತ ಮೊರೆಯಿಡೆ ಇವನನು ಏತಕೆ ಕಳುಹಿದೆ?’ ಎನ್ನುತ ಯಾವನ ಹಂಗಿಸುತಿದ್ದಳೊ ಅಂತಹ ವೀರ ವಿವೇಕಾನಂದ ನಮೋ|| ‘ಇರುವನೊ ದೇವರು? ಇಲ್ಲವೊ?’ ಎನ್ನುತ ಗುರುವನು ಭರದಿಂ ಪ್ರಶ್ನಿಸಿ ಕೂಡಲೆ ‘ಇರುವನು ತೋರುವೆ ನಿನಗೂ!’ ಎನ್ನುವ ಮರುದನಿಯಿಂದ ಚಕಿತನಾದಂತಹ ವೀರ ವಿವೇಕಾನಂದ ನಮೋ|| ರಾಮಕೃಷ್ಣರಲಿ ಸೇವಾವೃತ್ತಿಯ ಪ್ರೇಮದಿ ಮಾಡುತ […]