ಯೇನೆಲವೊ ದೈವಾ ವೈಕುಂಠನಾಥ

ಯೇನೆಲವೊ ದೈವಾ ವೈಕುಂಠನಾಥ ನೀ ನಾರಿವೇಷವನು ಧರಿಸಿದ ಬಗೆಯೇನೊ ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ | ಮಿತ್ರಭಾವದಲಿವರು ಕೂಡಲಿಟ್ಟು | ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು | ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ ||1|| ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ | ಕರವ ನೀಡುವೆನೆಂದು ಬರಲಾಗಲು || ಅವನೀಶ ಭವಹರ ಕೇಶವ ನೀನೆ ಗತಿಯೆನಲು | ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ ||2|| ಅಂದು ಮಾಡಿದ ಚರಿತೆ ಭಕ್ತಜನರು ಬಂದು | ಒಂದೊಂದನ […]

ಯೇನೆಲವೊ ದೈವಾ ವೈಕುಂಠನಾಥ Read More »

ಯೇನು ಕರುಣಾಳೋ ದೇವವರೇಣ್ಯ

ಯೇನು ಕರುಣಾಳೋ ದೇವವರೇಣ್ಯ ಯೇನು ಭಕುತರಧೀನನೋ ನಾನು ಎಂಬೋದು ಬಿಡಿಸಿ ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ ಸಂಪನ್ನವಾಗಿದ್ದ ಮತಿಯನಿತ್ತು ಪ್ರಸನ್ನನಾಗಿ ಒಡನೆ ತಿರುಗೂವ ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ ||1|| ಪಾವಮಾನಿಯ ಮಖವೆ ಪೊಂದಿಸಿ ಪಾವನವ ಮಾಡಿದನು ಬಲು ಕೃ ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ ಆವ ಪರಿಯಲಿ ನುಡಿದ ಕವನವ ಕವಿ ಮನ್ನಿಸಿ ತಪ್ಪನೆಣೆಸದೆ ದೇವ ಜಗತ್ರಯ

ಯೇನು ಕರುಣಾಳೋ ದೇವವರೇಣ್ಯ Read More »

ಯೆಲ್ಲಿ ಭಯಗಳು ಹರಿಯ ಭಕುತರಿಗೆ

ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1|| ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ ||2|| ಘಣಿ ಸರವೆ

ಯೆಲ್ಲಿ ಭಯಗಳು ಹರಿಯ ಭಕುತರಿಗೆ Read More »

ಯಾವದು ಸುಖವೇ ಮತ್ಯಾನಂದವೇ

ಯಾವದು ಸುಖವೇ ಮತ್ಯಾನಂದವೇ ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು ಮನುಗಳು ಭೂಮಿಯನಾಳೋತನಕ ಕನಕನ ಚಿತ್ತನಾಗಿ ಗೋಕುಲದಿಂದ ಸ ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ ||1|| ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ ಅಂದೆ ಸುರರೊಳು ಗಣನೆ ಎನ್ನೆ ಒಂದಕ್ಕೆ ನೂರಾರು ಯಾಗ ಮಾಡಿದ ಫಲ ತಂದು ಕೊಡುವ ಅಜನಾದಿಕಲ್ಪ ಪರಿಯಂತ||2|| ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ ಸಾಗರದಿ ಕೋಟಿ ಸ್ನಾನ ಮಾಡಲು ಊಧ್ವರೇತಸ್ಥನಾಗಿರ್ದ ಫಲವಕ್ಕೆ ಊಧ್ರ್ವಭೂಷಿತನಾದ ಬ್ರಹ್ಮಯುಗ ಪರಿಯಂತ ||3|| ಸನ್ನಿಧಿಗೆ

ಯಾವದು ಸುಖವೇ ಮತ್ಯಾನಂದವೇ Read More »

ಯಾಯಾ ವಾರವ ನೀಡಿ

ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಬಾಯಲ್ಲಿ ಹರಿಯ ಕೊಂಡಾಡುತ ಪತಿವ್ರತ ಸ್ತ್ರೀಯರು ಮುದದಿಂದ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ ||1|| ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ ||2|| ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ನಿರುತ ಮಾಡಿದ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ ||3|| ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ ||4||

ಯಾಯಾ ವಾರವ ನೀಡಿ Read More »

ಯಾಚಕರು ಪರರ ಸಂಕಟ ಬಲ್ಲರೆಣ

ಯಾಚಕರು ಪರರ ಸಂಕಟ ಬಲ್ಲರೆಣ ಭೂ ಚಕ್ರದಲಿ ಗಾಳಿಯಂತೆ ತಿರುಗಲು ಬಿಡರು ಕಾಪೀನವನು ಧರಿಸಿ ಮುಖವ ಡೊಂಕನೆ ಮಾಡಿ ಕೋಪದಿಂದಲಿ ಕರವನೆತ್ತಲ್ಯಾಕೆ ಪಾಪಿ ಕೂಪವ ಮೀರಿ ಸಮುದ್ರವನು ನೆರೆ ದಾಟಿ ರೂಪಾಂತರದಿ ಮನೆ ಮನೆಯ ಪೊಕ್ಕರು ಬಿಡರು ||1|| ವಿಷವ ಸವಿದುಂಡು ಮಹ ಮಡುವ ಪ್ರವೇಶಿಸಿ ವಸುಧೆಯೊಳು ಬೇಡಿ ಕಿರಿತಂದುಂಡರು ಬೆಸಬೆಸನೆ ವನವನವ ತಿರುಗಿ ಅe್ಞÁತದಲಿ ವಸಿಸಿ ಮಾನಸದಿ ಗೃಹಕರ್ಮ ಮಾಡಲಿ ಬಿಡರು ||2|| ಜುಟ್ಟು ಜನಿವಾರವನು ಕಿತ್ತುಕೊಂಡು ಯತಿಯಾಗಿ ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು

ಯಾಚಕರು ಪರರ ಸಂಕಟ ಬಲ್ಲರೆಣ Read More »

ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ

ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ | ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಒಡಲಿಗಾಗಿ ಒಬ್ಬನ ಸಂಗಡ ಹೋಗಲು | ಕೊಡುವವನು ಇಲ್ಲೆಂದು ಪರಿಹರಿಸುವ || ಸುಡು ಈ ಶರೀರವ ಬಳಲಲಾರೆನೊ ವಿಷದ, ಮಡುವನಾದರು ಧುಮುಕಿ ಮರಣವಾಗುವೆ ರಂಗಾ ||1|| ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ | ಹುತವಾಗುವನು ಎನ್ನ ನೋಡುತಲಿ || ಕ್ಷಿತಿಯೊಳಗೆ ಈ ಪರಿ ಬದುಕಿ ಇಹೋದಕಿಂತ | ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ ||2|| ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ | ಒಲ್ಲೆನೋ

ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ Read More »

ಯಾಕೆ ಜೀವನವೆ ನೀ ಶ್ರೀಕಾಂತನನು

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ ||1|| ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ

ಯಾಕೆ ಜೀವನವೆ ನೀ ಶ್ರೀಕಾಂತನನು Read More »

ಯಲ್ಲರಮ್ಮನಲ್ಲವೆ ಸಿರಿದೇವಿ

ಯಲ್ಲರಮ್ಮನಲ್ಲವೆ ಸಿರಿದೇವಿ ಎಲ್ಲರಮ್ಮನಲ್ಲವೆ ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಿರಲು || ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳು ತೀರುವಂತೆ ಮಾಡಿದ ||1|| ಆಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಾಮಾತಾ || ಸುಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||2|| ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು || ಪರಮ ಪುರುಷ ನಮ್ಮ ವಿಜಯವಿಠ್ಠಲನ್ನ

ಯಲ್ಲರಮ್ಮನಲ್ಲವೆ ಸಿರಿದೇವಿ Read More »

ಯಮುನೆ ದುರಿತ ಉಪಶಮನೆ

ಯಮುನೆ ದುರಿತ ಉಪಶಮನೆ | ಅಮಮ ಮಂದಗಮನೆ || ಅಗಣಿತ ಸುಮನೆ ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ | ಕಾಮಿತ ಸುಫಲದಾಯೆ ಕಾಲನಿಭ ಕಾಯೆ | ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ | ಸೋಮಕುಲಪಾವನೇ ಶರಣ ಸಂಜೀವನೆ ||1|| ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ | ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ | ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ | ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ ||2|| ವಾರಿನಿಧಿ ಪ್ರಥುಕುಗಾಮಿನಿ |

ಯಮುನೆ ದುರಿತ ಉಪಶಮನೆ Read More »

ಯಚ್ಚತ್ತು ನಡಿ ಕಂಡ್ಯ ಮನವೇ

ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ||1|| ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ, ಶ್ರೀ ಹರಿ ದಯಮಾಡಾ ||2|| ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ

ಯಚ್ಚತ್ತು ನಡಿ ಕಂಡ್ಯ ಮನವೇ Read More »

ಯಾರಿಗಾರು ಬಹರು ಸಂಗಡ

ಯಾರಿಗಾರು ಬಹರು ಸಂಗಡ – ಮುಂದೆಮೀರಿ ನಡೆದ ಸಂಚಿತ ಕರ್ಮವಂತೆ ಕಂತೆ ಮುಂಗಡ ಬರೆದ ಬರೆಹ ತೊಡೆದ ಮೇಲೆ ಕರೆದರಾಗ ಹೋಗಬೇಕುನೆರೆದು ಸುತ್ತಮುತ್ತ ಕುಳಿತ ಪರಮ ಬಂಧುವರ್ಗವೆಲ್ಲಇರಿಸಬೇಡಿ ಸುಡುಸುಡೆಂಬರು ಸುಟ್ಟಬಳಿಕಭರದಿ ಬಂದು ಮನೆಯೊಳೆಂಬರು ಪಾಪಿ ಸತ್ತತರುಣಿ ಕೆಟ್ಟಳೆಂದುಕೊಂಬರು ಆತ್ಮ||1|| ಸತಿಯು ಸುತರು ಪುತ್ರಿ ಮಿತ್ರರತಿಶಯದೊಳು ತಂದೆ ತಾಯಿಅತಿ ವಿನೋದಗೈಯುವ ಭಾವ ಜತನವೆಂಬೊ ಅತ್ತೆ ಮಾವಜೊತೆಗೆ ಹುಟ್ಟಿದಣ್ಣ ತಮ್ಮ ಈ ದೇಹ ತಾನುಸತ್ತ ಗಳಿಗೆ ಮುಟ್ಟಲಮ್ಮರು ಬರಿದೆ ನಾವುವ್ಯಥೆಗೆ ಸಿಕ್ಕಿದೆವೆಂಬರು ಆತ್ಮ ||2|| ಕಟ್ಟಿದರ್ಧ ಕರೆವ ಎಮ್ಮೆ ಕೊಂಡುಕೊಂಡ

ಯಾರಿಗಾರು ಬಹರು ಸಂಗಡ Read More »

ಯಾದವಗಿರಿವಾಸನಹುದೋ

ಯಾದವಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ಖಳ ಸೋಮಕನ ಕೊಂದು ನೀರ ಮುಳುಗಿ ಬಂದೆಇಳೆಯೊಳು ಸುರಾಸುರರೈತಂದು ಬೆರೆಯಲುಘಳಿಲನೆ ದೇವಜನರು ಬಂದು ನಿಲ್ಲಲುವ್ಯಾಳೇಶನ ಸುತ್ತಿ ಸೆಳೆವ ವೇಳೆಯಲ್ಲಿಇಳಿದು ಪಾತಾಳಕೆ ಪರುವತ ಪೋಪುದ ಕಂಡುನಳಿನನಾಭನೆ ನಿಮ್ಮ ನೆನೆಯಲಾ ಧ್ವನಿ ಕೇಳಿತಿಳಿದು ಕೂರ್ಮರೂಪಾಗಿ ಮಂದರವನು ಪೊತ್ತುಉಳಿಸಿದೆ ಲೋಕವನುನ್ನತ ಪರಾಕ್ರಮಿಖಳ ಹಿರಣ್ಯಕ ಬಂದು ಎದುರಾರು ತನಗೆಂದು ಇಳೆಯ ಕದ್ದೊಯ್ದು ಪೋಗುತಿರೆ ಸುರರದ ಕಂಡುಘಳಲನೆ ನಿಮ್ಮನು ಕೂಗಲಾ ಮೊರೆ ಕೇಳಿತಿಳಿದು ಶಾಂತ ಮೂರುತಿ ಆಗಿ ಪಾವಕ ಮೂರ್ತಿಕಳ್ಳ ದೈತ್ಯರ ಸಂಹಾರವ ಮಾಡಿದೆನಳಿನೋದ್ಭವನಯ್ಯ ಅಮರ ಚೆನ್ನಿಗರಾಯ ||1||

ಯಾದವಗಿರಿವಾಸನಹುದೋ Read More »

ಯಾತರವನೆಂದುಸುರಲಿ

ಯಾತರವನೆಂದುಸುರಲಿ – ಜಗನ್ನಾಥ ಮಾಡಿದ ಒಂದು ನರರೂಪವಯ್ಯ ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆತೊಟ್ಟಿದ್ದೆನಾಗ ತೊಗಲಬಕ್ಕಣಇಷ್ಟರೊಳಗೆ ಒಂದು ವಿವರವರಿಯದಂಥಭ್ರಷ್ಟಗೆ ನನಗಿನ್ಯಾತರ ಕುಲವಯ್ಯ ||1|| ಇಂದ್ರಿಯ ಸೂತಕ ದುರ್ಗಂಧದ ಮಲಮೂತ್ರನಿಂದ ಠಾವಲಿ ತನ್ನ ನಿಜವರಿಯದೆಬಂದದ್ದು ಬಚ್ಚಲ ಗುಣಿ ತಿಂದದ್ದು ಮೊಲೆ ಮಾಂಸ – ಇಂಥಅಂಧಕಗೆ ನನಗಿನ್ಯಾತರ ಕುಲವಯ್ಯ ||2|| ಒಂಬತ್ತು ಎಜ್ಜದೊಳೊಸರುವ ಹೊಲಸದುತುಂಬಿ ತುಳುಕುವ ಕೊಡವಾಗಿರಲುಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥಡಂಬಕ ನನಗಿನ್ಯಾತರ ಕುಲವಯ್ಯ||3|| ಕರುಳು ಖಂಡ ನಾರುವ ಚರ್ಮರೋಹಿತನರಪಂಜರದೀ ಹುರುಳಿಲ್ಲದನರದೇಹ ಹೊತ್ತು ತಿರುಗುವಂಥತಿರುಕ ನನಗಿನ್ಯಾತರ ಕುಲವಯ್ಯ ||4 ||

ಯಾತರವನೆಂದುಸುರಲಿ Read More »

ಯಾತಕೆ ದಯಮಾಡಲೊಲ್ಲೆ ರಂಗಯ್ಯ

ಯಾತಕೆ ದಯಮಾಡಲೊಲ್ಲೆ ರಂಗಯ್ಯ – ಜಗ ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಚಿಕ್ಕಂದು ಮೊದಲೆ ನಾನು ರಂಗಯ್ಯ – ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ||1|| ನೆಂಟರಿಷ್ಟರು ನೀನೆ ರಂಗಯ್ಯ – ನೀನೆಬಂಟರಿಗೆ ಬಂಟನಯ್ಯ ರಂಗಯ್ಯ||2|| ದಾಸರ ದಾಸನಯ್ಯ ರಂಗಯ್ಯ – ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ||3|| ಶೇಷಗಿರಿ ವಾಸ ರಂಗಯ್ಯ – ಆದಿಕೇಶವನೆ ರಕ್ಷಿಸೊ ರಂಗಯ್ಯ||4||

ಯಾತಕೆ ದಯಮಾಡಲೊಲ್ಲೆ ರಂಗಯ್ಯ Read More »

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಮಾಕಾಂತ ಕರೆಸಿದರೆ ಬಾರದಿಹ ಪೊಗರು ಗೊಲ್ಲತನವಂ ಬಿಡಿಸಿ ಗೋಗಾವ ಡಿಂಬ್ಹರಿಸಿಉಳ್ಳ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ ||1|| ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ ||2|| ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು ||3||

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು Read More »

ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ

ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ – ಜಗ ದೇಕ ವಿಖ್ಯಾತ ಪಶ್ಚಿಮ ರಂಗಧಾಮ ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ ||1|| ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ ||2|| ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ ||3|| ನಾಲ್ಕು ಯುಗದಾಧಾರಿ

ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ Read More »

ಯಾ ದೇವೀ ಸರ್ವಭೂತೇಷು

ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ  ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು

ಯಾ ದೇವೀ ಸರ್ವಭೂತೇಷು Read More »

ಸರಸ್ವತೀ ಸ್ತೋತ್ರಮ್

ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ | ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ || 1 || ದೋರ್ಭಿರ್ಯುಕ್ತಾ ಚತುರ್ಭಿಃ ಸ್ಫಟಿಕಮಣಿನಿಭೈ ರಕ್ಷಮಾಲಾಂದಧಾನಾ ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ | ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾಜ಼್ಸಮಾನಾ ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ || 2 || ಸುರಾಸುರೈಸ್ಸೇವಿತಪಾದಪಂಕಜಾ ಕರೇ ವಿರಾಜತ್ಕಮನೀಯಪುಸ್ತಕಾ | ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು

ಸರಸ್ವತೀ ಸ್ತೋತ್ರಮ್ Read More »

ಮಂತ್ರ ಪುಷ್ಪಮ್

ಯೋ’‌உಪಾಂ ಪುಷ್ಪಂ ವೇದ’ ಪುಷ್ಪ’ವಾನ್ ಪ್ರಜಾವಾ”ನ್ ಪಶುಮಾನ್ ಭ’ವತಿ | ಚನ್ದ್ರಮಾ ವಾ ಅಪಾಂ ಪುಷ್ಪಮ್” | ಪುಷ್ಪ’ವಾನ್ ಪ್ರಜಾವಾ”ನ್ ಪಶುಮಾನ್ ಭ’ವತಿ | ಯ ಏವಂ ವೇದ’ | ಯೋ‌உಪಾಮಾಯತ’ನಂ ವೇದ’ | ಆಯತನ’ವಾನ್ ಭವತಿ | ಅಗ್ನಿರ್ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯೋ”ಗ್ನೇರಾಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋವಾ ಅಗ್ನೇರಾಯತ’ನಮ್ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ

ಮಂತ್ರ ಪುಷ್ಪಮ್ Read More »

ಯೋಗಾಸನೇ ಮಹಾಧ್ಯಾನೇ

ಯೋಗಾಸನೇ ಮಹಾಧ್ಯಾನೇ ಮಗ್ನ ಯೋಗಿವರ ಅನಂತ ತುಷಾರೇ ಜೇನೊ ಅನಂತ ಶೇಖರ|| ಪ್ರಲಯನೀರವಮಾಝೇ ಏಕಾಕೀ ಪುರುಷ ರಾಜೇ| ಭಯೇ ಅಗ್ನಿ ಭಸ್ಮ ಮಾಝೇ ಢಾಕೇ ಕಲೇವರ|| ಶಿಶು ಶಶೀ ನಾಹಿ ಆರ್ ಅಂಧಕಾರ ನಿರಾಕಾರ| ಏಕ ನಾಇ ದುಇ ಆರ್ ಪ್ರಕೃತಿ ನಿಥರ|| ಕಾಲ ಬದ್ಧ ವರ್ತಮಾನೇ ವ್ಯೋಮಕೇಶ ವ್ಯೋಮ ಪಾನೇ| ನಿತ್ಯ ಸತ್ಯ ಪೂರ್ಣ ಜ್ಞಾನೇ ಪೂರ್ಣ ಮಹೇಶ್ವರ|| —-ಗಿರೀಶಚಂದ್ರ ಘೋಷ್

ಯೋಗಾಸನೇ ಮಹಾಧ್ಯಾನೇ Read More »

ಯತನೇ ಹೃದಯೇ ರೇಖೋ

ಯತನೇ ಹೃದಯೇ ರೇಖೋ ಆದರಣೀ ಶ್ಯಾಮಾ ಮಾಕೇ(ಮನ್)|| ಮನ್ ತೂಇ ದ್ಯಾಖ್ ಆರ್ ಆಮಿ ದೇಖಿ ಆರ್ ಜೇನೊ ಕೇವು ನಾಹಿ ದೇಖೇ|| ಕಾಮಾದಿರೇ ದಿಯೇ ಫಾಕಿ ಆಯ್ ಮನ್ ವಿರಲೇ ದೇಖಿ ರಸನಾರೇ ಸಂಗೇ ರಾಖಿ ಶೇ ಜೇನೊ ಮಾ ಬೋಲೇ ಡಾಕೇ|| ಕುರುಚಿ ಕುಮಂತ್ರೀ ಜೊತೊ ನಿಕಟ್ ಹೊತೇ ದಿಓ ನಾಕೋ| ಜ್ಞಾನನಯನಕೇ ಪ್ರಹರೀ ರೇಖೋ ಶೇ ಜೇನೊ ಸಾವಧಾನೇ ಥಾಕೇ|| ಕಮಲಾಕಾಂತೇರ ಮನ್ ಭಾಯಿ ಆಮಾರ್ ಏಇ ನಿವೇದನ್ ದರಿದ್ರೇ ಪಾಯಿಲೇ ರತನ

ಯತನೇ ಹೃದಯೇ ರೇಖೋ Read More »

ಯಾವ ಫಲ ಬೇಕು ಎನಗೆ

ಯಾವ ಫಲ ಬೇಕು ಎನಗೆ ಜನ್ಮ ಸಫಲವ ಗೈವ ಫಲವಿರಲು ಸುಮ್ಮಗೆ|| ಮೋಕ್ಷಫಲಗಳ ಬಿಡುವ ಶ್ರೀರಾಮತರುವಿಹುದು ನನ್ನ ಎದೆಯೊಳಗೆ|| ಶ್ರೀರಾಮಕಲ್ಪತರು- ಮೂಲದಲಿ ನಾ ಕುಳಿತು ಬೇಕಾದ ಪಲಗಳನು ಪಡೆಯುತಿರುವೆ|| ಪ್ರತಿಫಲವ ನಾ ಬಯಸೆ ಜಗದ ಕಹಿ ಫಲಗಳನು ನಿಮ್ಮೊಂದಿಗೇ ಬಿಟ್ಟು ಮುನ್ನಡೆಯುವೆ|| —-ವಚನವೇದ

ಯಾವ ಫಲ ಬೇಕು ಎನಗೆ Read More »

ಯಾರ ಮಹಿಮಾ ಜ್ಯೋತಿ

ಯಾರ ಮಹಿಮಾ ಜ್ಯೋತಿ ಜಗವನು ಅಮೃತದಂದದಿ ಎಲ್ಲರೆದೆಯನು ತುಂಬಿ ರೋಮಾಂಚನವ ಗೈವುದೋ ಅಂಥ ಪ್ರೇಮದ ಜಲಧಿಯ ಜೀವ ನಿನ್ನೊಳಗಿರುವವರೆಗೂ ಸಾರು ಆತನ ಮಹಿಮೆಯ|| ಯಾರ ಶ್ರೀಶುಭನಾಮ ಹೃದಯದ ಕೊರಗನೆಲ್ಲ ಕಳೆವುದೋ ಯಾರು ನೆಲ ಜಲ ಗಗನ ದೇಶವ- ನೆಲ್ಲ ವ್ಯಾಪಿಸಿ ನಿಲುವರೋ|| ಯಾರ ಅನ್ವೇಷಣೆಯಲೀ ಜಗ ಬರಿದೆ ತೊಳಲುತಲಿರುವುದೋ ಅಂಥ ದೇವನ ತಿಳಿದು ಬಣ್ಣಿಪ ಶಕ್ತಿ ಯಾರಿಗೆ ಲಭಿಸಿದೆ ಅವನ ಮಹಿಮೆಗೆ ಪಾರವೆಲ್ಲಿದೆ ಆದಿ ಅಂತ್ಯಗಳೆಲ್ಲಿವೆ|| ನಿಜದ ತಿಳಿವಿನ ತವರು ಅವನು ನಿತ್ಯ ಜೀವನ ಚೇತನ ನಿತ್ಯ

ಯಾರ ಮಹಿಮಾ ಜ್ಯೋತಿ Read More »

ಯಾರ ಪ್ರೇಮದ ಪರಮಪೂರವು

ಯಾರ ಪ್ರೇಮದ ಪರಮಪೂರವು ನೀಚರೆದೆಗೂ ಹರಿಯಿತೋ, ಯಾವ ಲೋಕಾತೀತಮಹಿಮನ ಕರಣೆ ಲೋಕಕೆ ದುಡಿಯಿತೋ, ಯಾವನಪ್ರತಿ-ಮಹಿಮನೋ ಮೇಣ್ ಮಾತೆ ಸೀತೆಯ ನಾಥನೋ, ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೋ ಯಾರು ಮಧುತರ ಶಾಂತಗೀತೆಯ ಯುದ್ಧರಂಗದಿ ಮೊಳಗುತ ಪ್ರಳಯಶಬ್ದವ ಸ್ತಬ್ಧಗೊಳಿಸುತ ಸಿಂಹನಾದವ ಸಿಡಿಸುತ ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳೆಸೆಯುತಲಿರುವನು! —-ಮುರಳೀಧರ

ಯಾರ ಪ್ರೇಮದ ಪರಮಪೂರವು Read More »