ಬಡವರೊಳಗೆ ಎನಗಿಂತ
ಬಡವರೊಳಗೆ ಎನಗಿಂತ ಅನ್ಯರಿಲ್ಲ| ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ|| ದೃಢಭಕ್ತಿ ಎನಗೆ ನಿನ್ನಲಿ ನಿಲಿಸಿ| ಬಿಡದೆ ಸಲಹಯ್ಯ ಪುರಂದರವಿಟ್ಠಲ|| —-ಪುರಂದರದಾಸ
ಬಡವರೊಳಗೆ ಎನಗಿಂತ ಅನ್ಯರಿಲ್ಲ| ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ|| ದೃಢಭಕ್ತಿ ಎನಗೆ ನಿನ್ನಲಿ ನಿಲಿಸಿ| ಬಿಡದೆ ಸಲಹಯ್ಯ ಪುರಂದರವಿಟ್ಠಲ|| —-ಪುರಂದರದಾಸ
ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ ನಿನ್ನ ನಾಮದ ಬಲವೊಂದಿದ್ದರೆ ಸಾಕೋ|| ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೋ ನಾಮವೆ ಕಾಯ್ತೋ|| ಯಮನ ದೂತರು ಬಂದು ಅಜಮಿಳನೆಳೆವಾಗ ನಾರಾಯಣ ಎಂಬೋ ನಾಮವೆ ಕಾಯ್ತೋ|| ಕರಿ ಮಕರಗೆ ಸಿಲುಕಿ ಮೊರೆಯಿಡುತಿರುವಾಗ ಆದಿಮೂಲ ಎಂಬೋ ನಾಮವೆ ಕಾಯ್ತೋ|| ಪ್ರಹ್ಲಾದನ ಪಿತ ಬಾಧಿಸುತಿರುವಾಗ ನಾರಸಿಂಹ ಎಂಬೋ ನಾಮವೆ ಕಾಯ್ತೋ|| ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೋ|| ನಿನ್ನ ನಾಮಕೆ ಸರಿ ಕಾಣೆನೋ ಜಗದಲಿ
ನಾನಿನ್ನೊಳನ್ಯ ಬೇಡುವುದಿಲ್ಲ| ಹೃದಯಕಮಲದೊಳು ನಿಂದಿರು ಹರಿಯೆ|| ಶಿರ ನಿನ್ನ ಚರಣಕೆ ಎರಗಲಿ| ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ| ಕರ್ಣ ಗೀತಂಗಳ ಕೇಳಲಿ| ನಿನ್ನ ನಿರ್ಮಾಲ್ಯವ ನಾಸಘ್ರಾಣಿಸಲಿ|| ನಾಲಿಗೆ ನಿನ್ನನು ಕೊಂಡಾಡಲಿ| ಕರಗಳೆರಡು ನಿನ್ನನರ್ಚಿಸಲಿ| ಚರಣ ತೀರ್ಥಯಾತ್ರೆ ಮಾಡಲಿ| ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ|| ಬುದ್ಧಿಯು ನಿನ್ನೊಳು ಬೆರೆಯಲಿ ಹರಿಯೆ| ಚಿತ್ತ ನಿನ್ನೊಳು ಸ್ಥಿರವಾಗಲಿ| ಭಕ್ತಜನರಸಂಗವಾಗಲಿ|ಪುರಂದರ- ವಿಟ್ಠಲನೆ ಇಷ್ಟೇ ದಯಮಾಡೊ —ಪುರಂದರದಾಸ
ನಾನಿನ್ನೊಳನ್ಯ ಬೇಡುವುದಿಲ್ಲ Read More »
ನಾ ನಿನ್ನ ಧ್ಯಾನದೊಳಿರಲು| ಮಿಕ್ಕ ಹೀನ ಮಾನವರೇನು ಮಾಡಬಲ್ಲರೋ ರಂಗ|| ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು| ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಪೇಳೆಲೊ ರಂಗ|| ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೆ| ನಿನ್ನ ನಂಬಲು ಮುದ್ದು ಪುರಂದರವಿಟ್ಠಲ ಚಿನ್ನಕ್ಕೇ ಪುಟವನಿಟ್ಟಂತೆ ಅಹುದು ರಂಗ|| —-ಪುರಂದರದಾಸ
ನಾ ನಿನ್ನ ಧ್ಯಾನದೊಳಿರಲು Read More »
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ || ಜಗದೊಳಿರುವ ಜಾಣರೆಲ್ಲ ಹಗರಣವ ಮಾಡುವುದು ಕಂಡು|| ಹೀನಗುಣವ ಮನದೊಳಿಟ್ಟು ತಾನು ವಿಷಯಪುಂಜನಾಗಿ ಮೌನಿ ಪುರಂದರವಿಟ್ಠಲನ್ನ ಧ್ಯಾನ ಮಾಡುವವನ ಕಂಡು|| —-ಪುರಂದರದಾಸ
ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿರೋಮಣಿ ಬಂದನೋ|| ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ|| ಮಂದರೊದ್ಧರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ| ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ|| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಟ್ಠಲ ಬಂದನೋ|| —-ಪುರಂದರದಾಸ
ದೇವಕಿನಂದನ ಹರಿ ವಾಸುದೇವ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸವಾಹನಮುಖವಂದಿತಚರಣ|| ಶಂಖಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ| ಮಕರಕುಂಡಲಧರ ಶತರವಿಭಾಸ ರುಕ್ಮಿಣಿವಲ್ಲಭ ಸಕಲಲೋಕೇಶ| ನಿಗಮೋದ್ಧಾರ ನವನೀತಚೋರ ಖಗಪತಿವಾಹನ ಜಗದಾಧಾರ| ವರವೇಲಾಪುರ ಚನ್ನಪ್ರಸನ್ನ ಪುರಂದರವಿಟ್ಠಲ ಸದ್ಗುಣಪೂರ್ಣ|| —ಪುರಂದರದಾಸ
ದಾಸನ ಮಾಡಿಕೊ ಎನ್ನ—ಸ್ವಾಮಿ ಸಾಸಿರನಾಮದ ವೆಂಕಟರಮಣ|| ದುರುಬುದ್ಧಿಗಳನೆಲ್ಲ ಬಿಡಿಸೋ—ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ| ಚರಣಸೇವೆ ಎನಗೆ ಕೊಡಿಸೋ—ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ|| ದೃಢಭಕ್ತಿ ನಿನ್ನಲ್ಲಿ ಬೇಡಿ —ನಾ – ನಡಿಗೆರಗುವೆನಯ್ಯ ಅನುದಿನ ಪಾಡಿ| ಕಡೆಗಣ್ಣಲೇಕೆನ್ನ ನೋಡಿ —ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ|| ಮರೆಹೊಕ್ಕವರ ಕಾವ ಬಿರುದು—ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು|| ದುರಿತಗಳೆಲ್ಲವ ತರಿದು— ಸಿರಿ ಪುರಂದರವಿಟ್ಠಲ ಎನ್ನನು ಪೊರೆದು|| —ಪುರಂದರದಾಸ
ದಯಮಾಡೋ ರಂಗಾ ದಯಮಾಡೋ ಕೃಷ್ಣ ದಯಮಾಡೋ ನಿನ್ನ ದಾಸ ನಾನೆಂದು|| ಹಲವು ಕಾಲದಿ ನಿನ್ನ ಹಂಬಲು ಎನಗೆ| ಒಲಿದು ಪಾಲಿಸಬೇಕೊ ವಾರಿಜನಾಭ|| ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸದಾ ತೋರು ಕರುಣಾ|| ಕರಿರಾಜವರದನೆ ಕಂದರ್ಪನಯನ| ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ|| –ಪುರಂದರದಾಸ
ತನುವ ನೀರೊಳಗದ್ದಿ ಫಲವೇನು ಮನದಲಿ ದೃಢಭಕ್ತಿಯಿಲ್ಲದ ಮನುಜನು|| ದಾನ ಧರ್ಮಂಗಳ ಮಾಡುವುದೆ ಸ್ನಾನ ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ|| ಗುರುಗಳ ಪಾದದರ್ಶನವೆ ಸ್ನಾನ ಹಿರಿಯರ ದರ್ಶನ ಮಾಡುವುದೆ ಸ್ನಾನ ಕರೆದು ಅನ್ನವನಿಕ್ಕುವುದೊಂದು ಸ್ನಾನ ನರಹರಿ ಚರಣವ ನಂಬುವುದೆ ಸ್ನಾನ|| ದುಷ್ಚರ ಸಂಗವ ಬಿಡುವುದೆ ಸ್ನಾನ ಶಿಷ್ಚರ ಸಹವಾಸ ಮಾಡುವುದೆ ಸ್ನಾನ ಸೃಷ್ಚಿಯೊಳಗೆ ಸಿರಿ ಪುರಂದರ ವಿಟ್ಠಲನ ಮುಟ್ಟಿ ಭಜಿಸಿದರೆ ವಿರಜಾ ಸ್ನಾನ|| —ಪುರಂದರದಾಸ
ಜಾಲಿಯ ಮರದಂತೆ ಧರೆಯೊಳು| ದುರ್ಜನರು ಜಾಲಿಯ ಮರದಂತೆ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ| ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ|| ತನ್ನಿಂದ ಉಪಕಾರ ತೊಟಕಾದರೂ ಇಲ್ಲ ಬಿನ್ನಾಣ ಮಾತಿಗೆ ಕೊನೆಯಿಲ್ಲವು | ಅನ್ನಕ್ಕೆ ಸೇರಿದ ಹೀನ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಟ್ಠಲ|| —ಪುರಂದರದಾಸ
ಜಯ ಜಾನಕೀಕಾಂತ ಜಯ ಸಾಧುಜನವಿನುತ| ಜಯತು ಮಹಿಮಾವಂತ ಜಯ ಭಾಗ್ಯವಂತ|| ದಶರಥಾತ್ಮಜ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ| ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮಸಾಹಸಶಿಕ್ಷ ಅಂಬುಜದಳಾಕ್ಷ|| ಸಾಮಗಾನವಿಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ| ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ ಶ್ರೀಮಹಾರಘುವೀರ ಸಿಂಧುಗಂಭೀರ|| ಸಕಲಶಾಸ್ತ್ರವಿಚಾರ ಶರಣಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ| ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲರಾಮ ಪುರಂದರವಿಟ್ಠಲ|| —ಪುರಂದರದಾಸ
ಚಂದ್ರಚೂಡ ಶಿವಶಂಕರ ಪಾರ್ವತಿ| ರಮಣ ನಿನಗೆ ನಮೋ ನಮೋ ನಮೋ|| ಸುಂದರ ಮೃಗಧರ ಪಿನಾಕ ಧನುಕರ| ಗಂಗಾಶಿರ ಗಜಚರ್ಮಾಂಬರಧರ|| ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ| ಧರಿಸಿದ ಪರಮ ವೈಷ್ಣವ ನೀನೇ|| ಗರುಡಗಮನ ಶ್ರೀ ಪುರಂದರ ವಿಟ್ಠಲನ| ಪ್ರಾಣಪ್ರಿಯನೇ ನಮೋ ನಮೋ|| —ಪುರಂದರದಾಸ
ಗೋವಿಂದ ಗೋವಿಂದ ಅತಿ ಆನಂದ ಸಕಲ ಸಾಧನ ನಿನ್ನಾನಂದ|| ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ| ನಿರ್ಮಲಾತ್ಮಕನಾಗಿ ಇರುವುದೇ ಆನಂದ|| ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ| ಈ ಪರಿ ಮಹಿಮೆಯ ತಿಳಿಯೋದೆ ಆನಂದ|| ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ| ಹಿಂಗದೆ ದಾಸರ ಸಲಹೋದೆ ಆನಂದ|| —ಪುರಂದರದಾಸ
ಗಜವದನ ಬೇಡುವೆ ಗೌರೀತನಯ| ತ್ರಿಜಗವಂದಿತನೆ ಸುಜನರ ಪೊರೆವನೆ|| ಪಾಶಾಂಕುಶ ಮುಸಲಾದ್ಯಾಯುಧಧರ| ಮೂಷಕವಾಹನ ಮುನಿಜನ ಪ್ರೇಮ| ಮೋದದಿಂದಲಿ ನಿನ್ನ ಪಾದವ ನಂಬಿದೆ| ಸಾಧುವಂದಿತನೆ ಅನಾದರ ಮಾಡದೆ|| ಸರಸಿಜನಾಭ ಶ್ರೀ ಪುರಂದರವಿಟ್ಠಲನ| ನಿರುತ ನೆನೆಯುವಂತೆ ವರ ದಯಮಾಡೋ|| —ಪುರಂದರದಾಸ
ಕೊಟ್ಟವರು ಸರಿಯೆ| ಕೊಡದೆ ಬಿಟ್ಟವರು ಸರಿಯೆ|| ಇಕ್ಕಿದವರಿಗುಂಟು| ಮದದಲಿ ಸೊಕ್ಕಿದರೇನುಂಟು| ರಕ್ಕಸಾಂತಕ ಲಕುಮಿಪತಿಯ ಮರೆ- ಪೊಕ್ಕವರಾದ ಶಿಷ್ಟಭಕುತರಿಗೆ|| ದೊರೆಯಾದರು ಸರಿಯೆ| ನಮಗೆ ತಿರುಕನಾದರು ಸರಿಯೆ| ಸರಸವಿರಸದಿಂ ನುಡಿದರೇನು ನರ- ಹರಿಪದಕಮಲವ ನಿರುತ ಭಜಿಪರಿಗೆ|| ಪುಟ್ಟಿಸಿದ ಪ್ರಭುವು| ನಮಗೆ ಹೊಟ್ಟೆಗೆ ಕೊಡದಿಹನೆ| ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ ಗಟ್ಟಿಯಾಗಿ ನಂಬಿದ ಭಕುತರಿಗೆ|| —-ಪುರಂದರದಾಸ
ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೊ|| ಕಂದಾ ಬೇಡವೊ ಮಣ್ಣು ತಿನ್ನಲಿಬೇಡ| ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ|| ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು| ಜೋಗಿ ಬರುತಾನಲ್ಲಿ ಅಂಜಿಸುವುದಕೀಗ|| ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ| ಬಾಯಲಿ ಇಟ್ಟನು ಬಾಲಕೃಷ್ಣಯ್ಯನು|| ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ| ಮುಟ್ಟಬೇಡೊ ಮಣ್ಣು ಬೆಣ್ಣೆ ತರುವೆನಯ್ಯ|| ಅಮ್ಮಯ್ಯ ಕೇಳೆಲೆ ಬಾಯಲಿ ಮಣ್ಣೆಲ್ಲ| ಗುಮ್ಮನು ಬರಬೇಡ ಸುಮ್ಮನೆ ಇರುತೇನೆ|| ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು| ಮಗುವಿನ ಬಾಯ
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ|| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ| ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ|| ಕ್ಷಣವೊಂದು ಯುಗವಾಗಿ ತೃಣಕಿತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು| ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ|| ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ| ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ|| —ಪುರಂದರದಾಸ
ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗಾ|| ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ| ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ|| ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ| ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ|| ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ| ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ ಉಪಾಯದಿಂದಲಿ ನೆನೆ ಮನವೆ|| —ಪುರಂದರದಾಸ
ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳೂ ನಿನ್ನ ಸ್ಮರಣೆ ಮರೆಯದಂತೆ|| ರುಕುಮಾಂಗದನಂತೆ ವ್ರತವ ನಾನರಿಯೆ ಶುಕಮುನಿಯಂತೆ ಸ್ತುತಿಸಲರಿಯೆ| ಬಕವೈರಿಯಂತೆ ಧ್ಯಾನ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೋ|| ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲರಿಯೆನೋ ಕರಿರಾಜನಂತೆ| ವರಕಪಿಯಂತೆ ದಾಸ್ಯ ಮಾಡಲರಿಯೆ ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ|| ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ- ಛಲವನರಿಯೆನೋ ಪ್ರಹ್ಲಾದನಂತೆ| ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಪುರಂದರವಿಟ್ಠಲ|| —ಪುರಂದರದಾಸ
ಕರುಣಾಕರ ನೀನೆಂಬುವುದೇತಕೋ ಭರವಸೆಯಿಲ್ಲೆನಗೆ|| ಪರಿಪರಿಯಲಿ ಈ ನರಜನ್ಮವನಿತ್ತು ತಿರುಗಿ ತಿರುಗಿ ಮನಕರಗಿಸುವುದ ಕಂಡು|| ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ನೀನಂತೆ| ಅರಿತು ವಿಚಾರಿಸಿ ನೋಡಲದೆಲ್ಲವು ಪರಿಪರಿ ಕಂತೆಗಳಂತಿವೆ ಕೃಷ್ಣಾ|| ಕರುಣಾಕರ ನೀನಾದರೆ ಈಗಲೆ ಕರಪಿಡಿದೆನ್ನನು ಹರಿ ಕಾಯೋ| ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಬಾಧಿಪುದುಂಟೆ|| ಮರಣಕಾಲದಲಿ ಅಜಮಿಳಗೊಲಿದೆ ಗರುಡಧ್ವಜನೆಂಬ ಬಿರುದಿನಿಂದ| ವರಬಿರುದುಗಳು ಉಳಿಯಬೇಕಾದರೆ ತ್ವರಿತದಿ ಕಾಯೋ ಪುರಂದರವಿಟ್ಠಲ|| —-ಪುರಂದರದಾಸ
ಕರುಣಾಕರ ನೀನೆಂಬುವುದೇತಕೋ Read More »
ಏನು ಮಾಡಿದರೇನು ಭವ ಹಿಂಗದು ಸ್ವಾಮಿ ದಾನವಾಂತಕ ನಿನ್ನ ದಯವಾಗದನಕ|| ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸಿದೆ ಅದರ ನಿಜವರಿಯದೆ| ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ ಹರಿ ನಿನ್ನ ಕರುಣಾಕಟಾಕ್ಷವಾಗದನಕ|| ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ ಅತಿ ಶೀಲಗಳನೆಲ್ಲ ಮಾಡಿ ದಣಿದೆ| ಗತಿಯ ಪಡೆಯುವೆನೆಂದು ಕಾಯ ದಂಡಿಸಿದೆನೋ ರತಿಪತಿಪಿತ ನಿನ್ನ ದಯವಾಗದನಕ|| ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ- ಹಾನು ಪುರುಷಾರ್ಥಕ್ಕೆ ಮನವನಿಕ್ಕಿ| ಅನಾಥಬಂಧು ಶ್ರೀ ಪುರಂದರವಿಟ್ಠಲನ ಧ್ಯಾನಿಸುವರೊಡಗೂಡಿ ನೆಲೆಗಾಣದನಕ|| —-ಪುರಂದರದಾಸ
ಏನು ಧನ್ಯಳೊ| ಲಕುಮಿ| ಎಂಥಾ ಮಾನ್ಯಳೋ|| ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು|| ಕೋಟಿಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ| ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು|| ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು|| ಸರ್ವತ್ರದಿ ವ್ಯಾಪ್ತನಾದ ಸರ್ವದೋಷರಹಿತನಾದ ಶರ್ವವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳು|| —-ಪುರಂದರದಾಸ
ಎಂತಾದರೂ ಚಿಂತೆ ಬಿಡದು| ನಿಶ್ಚಿಂತರಾದವರ ನಾನೊಬ್ಬರನು ಕಾಣೆ|| ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ| ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ|| ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ| ತಮ್ಮ ಅರ್ಜುನಗೆ ವೈರಿಯ ಕೊಲ್ಲುವ ಚಿಂತೆ ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ|| ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ| ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ ಶಕ್ತ ಪುರಂದರವಿಟ್ಠಲಗೆಮ್ಮ
ಎಂತಾದರೂ ಚಿಂತೆ ಬಿಡದು Read More »
ಎನಗೂ ಆಣೆ ರಂಗ ನಿನಗೂ ಆಣೆ| ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಿಗೂ ನಿನ್ನ ಭಕ್ತರಾಣೆ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ| ರಂಗ ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ|| ತನುಮನಧನದಲಿ ವಂಚಕನಾದರೆ ಎನಗೆ ಆಣೆ |ರಂಗ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ || ಕಾಕು ಮನುಜರ ಸಂಗ ಮಾಡಿದರೆನಗೆ ಆಣೆ| ರಂಗ ಲೌಕಿಕವ ಬಿದಿಸದಿದ್ದರೆ ನಿನಗೆ ಆಣೆ|| ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ| ರಂಗ ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ