admin

ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ—ಸ್ವಾಮಿ ಸಾಸಿರನಾಮದ ವೆಂಕಟರಮಣ|| ದುರುಬುದ್ಧಿಗಳನೆಲ್ಲ ಬಿಡಿಸೋ—ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ| ಚರಣಸೇವೆ ಎನಗೆ ಕೊಡಿಸೋ—ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ|| ದೃಢಭಕ್ತಿ ನಿನ್ನಲ್ಲಿ ಬೇಡಿ —ನಾ – ನಡಿಗೆರಗುವೆನಯ್ಯ ಅನುದಿನ ಪಾಡಿ| ಕಡೆಗಣ್ಣಲೇಕೆನ್ನ ನೋಡಿ —ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ|| ಮರೆಹೊಕ್ಕವರ ಕಾವ ಬಿರುದು—ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು|| ದುರಿತಗಳೆಲ್ಲವ ತರಿದು— ಸಿರಿ ಪುರಂದರವಿಟ್ಠಲ ಎನ್ನನು ಪೊರೆದು||                                          —ಪುರಂದರದಾಸ

ದಾಸನ ಮಾಡಿಕೊ ಎನ್ನ Read More »

ದರುಶನ ನೀಡೆನಗೆ ತಾಯಿ

ದರುಶನ ನೀಡೆನಗೆ ತಾಯಿ| ಶಾರದೇಶ್ವರಿ ವರದೇ ಶುಭದೇ|| ದೀನೋದ್ಧರಣಕೆ ನಿನ್ನವತರಣ| ನನಗೇ ಏಕೀ ದೂರೀಕರಣ|| ದಿನಗಳು ಉರುಳಲು ಆಯುರ್ನಾಶ| ನನ್ನಿಯ ತ್ಯಜಿಸಲು ತಾಪದ ಪಾಶ|| ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ| ನಿನ್ನಯ ಪಾದದಿ ಶರಣವೆ ಸಾಲದೆ|| ಎಂದಾಗುವುದು ಜನನಿ ಕೃಪೆಯು| ಅಂದೇ ನನಗೆ ವಿಮೋಚನೆಯು||                             —ಸ್ವಾಮಿ ಹರ್ಷಾನಂದ

ದರುಶನ ನೀಡೆನಗೆ ತಾಯಿ Read More »

ದಯಮಾಡೋ ರಂಗಾ

ದಯಮಾಡೋ ರಂಗಾ ದಯಮಾಡೋ ಕೃಷ್ಣ ದಯಮಾಡೋ ನಿನ್ನ ದಾಸ ನಾನೆಂದು|| ಹಲವು ಕಾಲದಿ ನಿನ್ನ ಹಂಬಲು ಎನಗೆ| ಒಲಿದು ಪಾಲಿಸಬೇಕೊ ವಾರಿಜನಾಭ|| ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸದಾ ತೋರು ಕರುಣಾ|| ಕರಿರಾಜವರದನೆ ಕಂದರ್ಪನಯನ| ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ||                                                    –ಪುರಂದರದಾಸ

ದಯಮಾಡೋ ರಂಗಾ Read More »

ದಯಮಾಡಿಸು

ದಯಮಾಡಿಸು ದಯಮಾಡಿಸು ಹೃದಯಕಮಲಪೀಠದಿ| ಬಂದು ಮೊಗವ ತೋರು ತಾಯೆ ಹೃದಯ ಪ್ರಾಣ ಪುತ್ಥಲೀ|| ಹುಟ್ಟಿದಂದಿನಿಂದ ನಾನು ಎನಿತೊ ನೋವ ನುಂಗಿದೆ| ನೀನು ಬಲ್ಲೆ ನಿನ್ನ ಬರವಿ- ಗಾಗಿ ನಾನು ಕಾದಿಹೆ| ಹೃದಯಕಮಲವರಳಿಸಿ ನೀ ದಯಮಾಡಿಸು ಬೇಗನೆ||                         —-ವಚನವೇದ

ದಯಮಾಡಿಸು Read More »

ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು ರಕ್ಷಿಪರಾರು ತ್ರಿಭುವನದೊಳು ಹೇ|| ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ ನೀಯೆನ್ನ ತ್ಯಜಿಸಲು ಗತಿ ಯಾರಿನ್ನು|| ಮಾನುಷ ಜನ್ಮವ ಮುಕ್ತಿಯ ಆಸೆಯ ಶ್ರೀಗುರುಪಾದವ ಕರುಣಿಸಿದೆ ತಾಯಿ| ಎನ್ನಯ ದೋಣಿಯ ನಿನ್ನಯ ದಡದಲಿ ಮುಳುಗಿಸಿದರೇ ನೀನೇ ಕಾಯುವರಾರು ಕಾಯುವರಾರು ಜಗಜ್ಜನನಿ||                            —ಸ್ವಾಮಿ ಹರ್ಷಾನಂದ

ತಾಯಿ ನೀನೆನ್ನ ಶಿಕ್ಷಿಸಲು Read More »

ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ ದೀರರಾರೋ ಜಗದೊಳು| ಆರು ದರುಶನ ವೇದಶಾಸ್ತ್ರ ಪುರಾಣವರಿಯದು ಅವಳನು|| ಯೋಗಿಹೃದಯದ ದಿವ್ಯನಿತ್ಯಾ- ನಂದರೂಪಿಣಿ ಆಕೆಯು| ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು|| ಸಕಲಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು| ಮೂಲಾಧಾರ ಸಹಸ್ರಾರದಿ ಮುನಿಗಳವಳನು ನೆನೆವರು|| ಶಿವನ ಹೊರತಿನ್ನಾರು ಅರಿಯರು ಅವಳ ದಿವ್ಯಸ್ವರೂಪವ| ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ|| ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ| ಇಂಥ ತಾಯಿಯ ತಿಳಿದೆನೆಂದರೆ ಶ್ರೀಪ್ರಸಾದನು ನಗುವನು|| ಕುಬ್ಜನಾದವ ಮುಗಿಲಚಂದ್ರನ ಹಿಡಿವ ಯತ್ನದ ತೆರದಲಿ| ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ

ತಾಯಿ ದುರ್ಗೆಯ ನಿಜವನರಿಯುವ Read More »

ತಂದೆ ನೀನು ತಾಯಿ ನೀನು

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರಯ್ಯಾ|| ಕೂಡಲಸಂಗಮದೇವಾ ಹಾಲಲದ್ದು ನೀರಲದ್ದು||                            —-ಬಸವಣ್ಣ

ತಂದೆ ನೀನು ತಾಯಿ ನೀನು Read More »

ತವ ಕೃಪೆ ಬೆಳಗಲಿ

ತವ ಕೃಪೆ ಬೆಳಗಲಿ  ಭವಭ್ರಮೆ ಕಳೆಯಲಿ ಶಿವೆ ಶ್ರೀಶಾರದೆ ತವಕದಿ ಮೊರೆಯುವೆ|| ಇಂದು ಸುವಿಮಲೆ ವಂದಿತ ಪದತಲೆ | ಕುಂದದ ಪ್ರೇಮದ ಮಂದಾಕಿನಿಯೆ|| ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ| ಯೋಗೀಂದ್ರಾರ್ಚಿತೆ ಯೋಗಪ್ರದಾತೆ|| ನಿನ್ನಡಿದಾವರೆ ಎನ್ನಯ ಆಸರೆ| ಮನ್ನಿಸು ದಾಸನ ಬಿನ್ನಹ ಮಾತೆ|| —-ಸ್ವಾಮಿ ಶಾಸ್ತ್ರಾನಂದ

ತವ ಕೃಪೆ ಬೆಳಗಲಿ Read More »

ತಲ್ಲಣಿಸದಿರು ಕಂಡ್ಯ

ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ|| ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ| ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಘಟ್ಯಾಗಿ ಸಲಹುವನು ಇದಕೆ ಸಂಶಯಬೇಡ|| ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೋ| ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ|| ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ ಅಲ್ಲಲ್ಲಿ ಆಹಾರವಿತ್ತವರು ಯಾರೋ| ಫುಲ್ಲಲೋಚನ ಕಾಗಿನೆಲೆಯಾದಿಕೇಶವನು ಎಲ್ಲರನು ಸಲಹುವನು ಇದಕೆ ಸಂಶಯಬೇಡ||                                                                  —ಕನಕದಾಸ

ತಲ್ಲಣಿಸದಿರು ಕಂಡ್ಯ Read More »

ತನುವ ನೀರೊಳಗದ್ದಿ

ತನುವ ನೀರೊಳಗದ್ದಿ ಫಲವೇನು ಮನದಲಿ ದೃಢಭಕ್ತಿಯಿಲ್ಲದ ಮನುಜನು|| ದಾನ ಧರ್ಮಂಗಳ ಮಾಡುವುದೆ ಸ್ನಾನ ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ|| ಗುರುಗಳ ಪಾದದರ್ಶನವೆ ಸ್ನಾನ ಹಿರಿಯರ ದರ್ಶನ ಮಾಡುವುದೆ ಸ್ನಾನ ಕರೆದು ಅನ್ನವನಿಕ್ಕುವುದೊಂದು ಸ್ನಾನ ನರಹರಿ ಚರಣವ ನಂಬುವುದೆ ಸ್ನಾನ|| ದುಷ್ಚರ ಸಂಗವ ಬಿಡುವುದೆ ಸ್ನಾನ ಶಿಷ್ಚರ ಸಹವಾಸ ಮಾಡುವುದೆ ಸ್ನಾನ ಸೃಷ್ಚಿಯೊಳಗೆ ಸಿರಿ ಪುರಂದರ ವಿಟ್ಠಲನ ಮುಟ್ಟಿ ಭಜಿಸಿದರೆ ವಿರಜಾ ಸ್ನಾನ||                                            —ಪುರಂದರದಾಸ

ತನುವ ನೀರೊಳಗದ್ದಿ Read More »

ತತ್ಕೈಶೋರಂ

ತತ್ಕೈಶೋರಂ ತಚ್ಚ ವಕ್ತ್ರಾರವಿಂದಂ ತತ್ಕಾರುಣ್ಯಂ ತೇ ಚ ಲೀಲಾಕಟಾಕ್ಷಾಃ ತತ್ಸೌಂದರ್ಯಂ ಸಾ ಚ ಮಂದಸ್ಮಿತಶ್ರೀಃ ಸತ್ಯಂ ಸತ್ಯಂ ದುರ್ಲಭಂ ದೈವತೇಷು|| ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ||                                               —ಶ್ರೀಕೃಷ್ಣಕರ್ಣಾಮೃತ

ತತ್ಕೈಶೋರಂ Read More »

ಜೈ ಜೈ ರಾಮಕೃಷ್ಣ ಹರಿ

ಜೈ ಜೈ ರಾಮಕೃಷ್ಣ ಹರಿ|| ದಶರಥನಂದನ ರಾಮ ನಮೋ| ವಸುದೇವನಂದನ ಕೃಷ್ಣ ನಮೋ|| ಕೌಸಲ್ಯಾತನಯ ರಾಮ ನಮೋ ದೇವಕಿನಂದನ ಕೃಷ್ಣ ನಮೋ|| ಸೀತಾರಮಣ ಶ್ರೀರಾಮ ನಮೋ| ರಾಧಾರಮಣ ಶ್ರೀರಾಮ ನಮೋ|| ರಾವಣಮರ್ದನ ರಾಮ ನಮೋ| ಕಂಸವಿಮರ್ದನ ಕೃಷ್ಣ ನಮೋ||

ಜೈ ಜೈ ರಾಮಕೃಷ್ಣ ಹರಿ Read More »

ಜೇನಿನ ಗೂಡೊಳು

ಜೇನಿನ ಗೂಡೊಳು ಹುದುಗಿಹ ಮಧುವೋಲ್ ದೇವನ ಹೃದಯದಿ ಹುದುಗಿಹ ಕರುಣೆಯು| ದೀನರ ಆರ್ತರ ಕೂಗಿನ ಹೊಡೆತಕೆ ಶಾರದೆ-ರೂಪದಿ ಸೂಸಿತು ಹರಿಯಿತು|| ಮಾನಸ-ಸರಸಿಜ-ಮಂದಾಕಿನಿ-ಜಲ ಭಾರತ-ಭೂಮಿಯ ಪಾವನಗೈದರೆ| ಶಾರದರೂಪೀ ಕರುಣಾಗಂಗೆಯು ವಿಶ್ವಕೆ ತಂಪಿನ ಸುಧೆಯನು ನೀಡಿತು|| ತನ್ನನು ಕಡಿವಗು ತಣ್ಣನೆ ನೆರಳನು ನೀಡುವ ವೃಕ್ಷದ ತೆರದಲಿ ಶಾರದೆ| ತನ್ನನು ಹಿಂಸಿಸಿ ಬಾಳಲು ಬಯಸಿದ ಮೂರ್ಖರ ಮನ್ನಿಸಿ ಹರಸಿದಳಲ್ಲವೆ|| ಸರ್ವವಿದ್ಯೆಗಳ ಮೂರುತಿ ನೀನು ಭೋಗದ ಮೋಕ್ಷದ ದಾತೆಯು ನೀನೇ| ಎನ್ನಯ ಹೃದಯದಿ ನಿನ್ನಯ ಭಕ್ತಿಯ ತುಂಬಿಸು ಕೂಡಲೆ ಕೃಪೆಯನು ತೋರುತ|| ನಾನೂ

ಜೇನಿನ ಗೂಡೊಳು Read More »

ಜಾಲಿಯ ಮರದಂತೆ

ಜಾಲಿಯ ಮರದಂತೆ ಧರೆಯೊಳು| ದುರ್ಜನರು ಜಾಲಿಯ ಮರದಂತೆ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ| ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ|| ತನ್ನಿಂದ ಉಪಕಾರ ತೊಟಕಾದರೂ ಇಲ್ಲ ಬಿನ್ನಾಣ ಮಾತಿಗೆ ಕೊನೆಯಿಲ್ಲವು | ಅನ್ನಕ್ಕೆ ಸೇರಿದ ಹೀನ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಟ್ಠಲ||                                              —ಪುರಂದರದಾಸ

ಜಾಲಿಯ ಮರದಂತೆ Read More »

ಜಯತು ಜಯತು ರಾಮಕೃಷ್ಣ

ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ| ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ|| ಜಯತು ಜಯತು ಪ್ರೇಮಾನಂದ- ಪ್ರೇಮಾಮೃತ ಸಿಂಚನ ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ| ಕಾಮನೆಗಳ ಗೆದ್ದ ಯೋಗಿ ಜಯತು ಯೋಗಾನಂದನೆ ಧೀರ-ವೀರ ನಿರಂಜನನೆ ನಿನ್ನ ಪದಕೆ ವಂದನೆ|| ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ| ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ||

ಜಯತು ಜಯತು ರಾಮಕೃಷ್ಣ Read More »

ಜಯತು ಗುರು ವಿವೇಕಾನಂದ

ಜಯತು ಗುರು ವಿವೇಕಾನಂದ ಜಯತು ಸ್ವಾಮೀಜೀ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ಬಂಧ ಮುಕ್ತಿ ಪಡೆದ ಬಾಳು ಉಲ್ಲಾಸದಿ ನಲಿದಿದೆ ದೀನದಲಿತರೆದೆಯ ನೆಲದಿ ಹೊಸ ಭರವಸೆ ಚಿಮ್ಮಿದೆ|| ಮೂಕ ಮೂಢ ಜನರ ಮುಖದಿ ನುಡಿಯ ಬೆಳಕು ಅರಳಿದೆ ಮೃತಸಮಷ್ಟಿ ಲೋಕಹೃದಯ ಜೀವದುಂಬಿ ಮಿಡಿದಿದೆ|| ತಮ ಸಮುದ್ರ ಮಥಿಸಿತಂದ ಮಹಾಮಂತ್ರ ನೀಡಿದೆ ಅಭೀ ಎಂಬ ಆಭಯ ನುಡಿಯ ಆತ್ಮನಿಧಿಯ ಮಾಡಿದೆ|| ಮಹಾಮಾಯೆಯೆಸೆದ ಜಾಲ ಆಯಿತೀಗ ನಿಷ್ಫಲ ಎಲ್ಲ ಬಗೆಯ ದ್ವಂದ್ವಭಾವ-

ಜಯತು ಗುರು ವಿವೇಕಾನಂದ Read More »

ಜಯ ಶಂಕರ ಪಾರ್ವತೀಪತೇ

ಜಯ ಶಂಕರ ಪಾರ್ವತೀಪತೇ ಮೃಡ ಶಂಭೋ ಶಶಿಖಂಡಮಂಡನ| ಮದನಾಂತಕ ಭಕ್ತವತ್ಸಲ ಪ್ರಿಯ ಕೈಲಾಸ ದಯಾಸುಧಾಂಬುಧೇ|| ಸದುಪಾಯ ಕಥಾಸ್ವಪಂಡಿತೋ ಹೃದಯೇ ದುಃಖಶರೇಣ ಖಂಡಿತಃ| ಶಶಿಖಂಡ ಶಿಖಂಡ ಮಂಡನಂ ಶರಣಂ ಯಾಮಿ ಶರಣ್ಯಮೀಶ್ವರಮ್|| ತ್ವದ್ದೃಶಂ ವಿದಧಾಮಿ ಕಿಂಕರೋ ಕ್ವನು ತಿಷ್ಠಾಮಿ ಕಥಂ ಭಯಾಕುಲಃ| ಕ್ವನು ತಿಷ್ಠಸಿ ರಕ್ಷ ರಕ್ಷ ಮಾಂ ಅಯಿ ಶಂಭೋ ಶರಣಾಗತೋಸ್ಮಿ ತೇ|| ಶಿವ ಸರ್ವಗ ಶರ್ವ ಶರ್ಮದ ಪ್ರಣತೋ ದೇವ ದಯಾಂ ಕುರುಷ್ವ ಮೇ| ನಮ ಈಶ್ವರ ನಾಥ ದಿಕ್ಪತೇ ಪುನರೇವೇಶ ನಮೋ ನಮೋಸ್ತು ತೇ||

ಜಯ ಶಂಕರ ಪಾರ್ವತೀಪತೇ Read More »

ಜಯ ವೀರೇಶ್ವರ

ಜಯ ವೀರೇಶ್ವರ ವಿವೇಕ ಭಾಸ್ಕರ ಜಯ ಜಯ ಶ್ರೀ ವಿವೇಕಾನಂದ| ಇಂದುನಿಭಾನನ ಸುಂದರಲೋಚನ ವಿಶ್ವಮಾನವ ಚಿರವಂದ್ಯ|| ಪ್ರೇಮ ಟಲಟಲ ಕಾಂತಿ ಸುವಿಮಲ ಅಧಿಗತ ವೇದವೇದಾಂತ| ತ್ಯಾಗ ತಿತಿಕ್ಷಾ ತಪಸ್ಯಾ ಉಜ್ವಲ ಚಿತ್ತ ನಿರಮಲ ಶಾಂತ|| ಕರ್ಮ ಭಕ್ತಿ ಜ್ಞಾನ ತ್ರಿಶೂಲ ಧಾರಣ ಛೇದನ ಜೇವ ಮೋಹಬಂಧ| ಬ್ರಹ್ಮಪರಾಯಣ ನಮೋ ನಾರಾಯಣ ದೇಹಿ ದೇಹಿ ಚರಣಾರವಿಂದ||                             —-ಸ್ವಾಮಿ ಚಂಡಿಕಾನಂದ

ಜಯ ವೀರೇಶ್ವರ Read More »

ಜಯ ವಿವೇಕಾನಂದ

ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ| ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ|| ಸುಪ್ತದೈವರೆ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ| ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ|| ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ| ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು||                                —ಸ್ವಾಮಿ ಶಾಸ್ತ್ರಾನಂದ

ಜಯ ವಿವೇಕಾನಂದ Read More »

ಜಯ ಪರಮೇಶ್ವರ

ಜಯ ಪರಮೇಶ್ವರ ಪರಮ ಭಿಖಾರೀ ಕಲ್ಪಮೇರು ಗುರು ಯೋಗ ಆಚಾರೀ|| ತರುತಲ ಆಲಯ ವಸನ ದಿಶಾಚಯ ಭೀತ ನಿರಾಶ್ರಯ ಭವಭಯಹಾರೀ|| ಹರ ಕರುಣಾಕರ ವರದಾಭಯಕರ ಮದನಮಾನಹರ ಶಿವ ಶುಭಕಾರೀ||                                     —-ಗಿರೀಶಚಂದ್ರ ಘೋಷ್

ಜಯ ಪರಮೇಶ್ವರ Read More »

ಜಯ ಜಾನಕೀಕಾಂತ

ಜಯ ಜಾನಕೀಕಾಂತ ಜಯ ಸಾಧುಜನವಿನುತ| ಜಯತು ಮಹಿಮಾವಂತ ಜಯ ಭಾಗ್ಯವಂತ|| ದಶರಥಾತ್ಮಜ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ| ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮಸಾಹಸಶಿಕ್ಷ ಅಂಬುಜದಳಾಕ್ಷ|| ಸಾಮಗಾನವಿಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ| ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ ಶ್ರೀಮಹಾರಘುವೀರ ಸಿಂಧುಗಂಭೀರ|| ಸಕಲಶಾಸ್ತ್ರವಿಚಾರ ಶರಣಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ| ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲರಾಮ ಪುರಂದರವಿಟ್ಠಲ||                                            —ಪುರಂದರದಾಸ

ಜಯ ಜಾನಕೀಕಾಂತ Read More »

ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ ರಘುವರ, ಶುಭಕರ ಶ್ರೀರಾಮ|| ತ್ರಿಭುವನ-ಜನ-ನಯನಾಭಿರಾಮ|| ತಾರಕನಾಮ ದಶರಥರಾಮ ದನುಜವಿರಾಮ ಪಟ್ಟಾಭಿರಾಮ|| ರಾಮ ರಘುಕುಲ-ಜಲನಿಧಿ-ಸೋಮ ಭೂಮಿಸುತಾಕಾಮ| ಕಾಮಿತದಾಯಕ ಕರುಣಾಧಾಮ ಕೋಮಲ-ನೀಲಸರೋಜ-ಶ್ಯಾಮ||

ಜಯ ಜಯ ಶ್ರೀರಾಮ Read More »