ಸಕಲ ಭುವನವಿದು ಶ್ಯಾಮಮಯ
ಸಕಲ ಭುವನವಿದು ಶ್ಯಾಮಮಯ ಗಿರಿಧರನೆನ್ನಯ ಪ್ರಾಣಪ್ರಿಯ||
ಸಕಲ ಭುವನವಿದು ಶ್ಯಾಮಮಯ Read More »
ಸಕಲ ಭುವನವಿದು ಶ್ಯಾಮಮಯ ಗಿರಿಧರನೆನ್ನಯ ಪ್ರಾಣಪ್ರಿಯ||
ಸಕಲ ಭುವನವಿದು ಶ್ಯಾಮಮಯ Read More »
ಸಕಲಭಯ ತಲ್ಲಣವ ಪರಿಹರಿಪ ಮಹಿಮನನು ಒಮ್ಮೆಯಾದರು ಏಕೆ ಕರೆಯದಿರುವೆ| ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ ಏನೀ ವಿಡಂಬನೆಯು ನಿನಗೆ ತರವೇ|| ಜನಧನದ ಸಂಗದಲಿ ಅವನ ಮರೆಯದ ತೆರದಿ ಎಚ್ಚರಿರು ಭ್ರಮೆಯನ್ನು ಅತ್ತ ದೂಡು| ನಿಜವನಾರಾಧಿಸಲು ಸರ್ವಪಾಪವಿಮುಕ್ತ ನನ್ನ ಮಾತಿನ ನಿಜವನಳೆದು ನೋಡು|| ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ ಅಳಿಯಾಸೆಗಳ ತೊರೆದು ಹರಿಯ ನುತಿಸು ದೇಹ ಮನ ಪ್ರಾಣಗಳ ಅವನಿಗರ್ಪಿತ ಮಾಡಿ ಪ್ರೇಮದಾರಾಧನೆಗೆ ಮನವ ಸಲಿಸು|| —-ವಚನವೇದ
ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು ನಿಖಿಲ ಶಾಸ್ತ್ರವು ಪೇಳುತಿರಲರಿದೆನು|| ಅವರವರ ದರುಶನಕೆ ಅವರವರ ದೇಶದಲಿ ಅವರವರಿಗೆಲ್ಲ ಗುರು ನೀನೊಬ್ಬನೇ| ಅವರವರ ಭಾವಕ್ಕೆ, ಅವರವರ ಅರ್ಚನೆಗೆ ಅವರವರಗೆ ದೇವ ನೀನೊಬ್ಬನೇ|| ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ| ಆರೂ ಅರಿಯರು ನೀನು ಬೇರಾದ ಪರಿಗಳನು ಮಾರಾರಿ ಶಿವ ಷಡಕ್ಷರಿಲಿಂಗವೆ|| —-ಮುಪ್ಪಿನ ಷಡಕ್ಷರಿ
ಶ್ರುತೀನಾಮಗಮ್ಯೇ ಸುವೇದಾಗಮಜ್ಞಾ ಮಹಿಮ್ನೋ ನ ಜಾನಂತಿ ಪಾರಂ ತವಾಂಬ| ಸ್ತುತಿಂ ಕರ್ತುಮಿಚ್ಛಾಮಿ ತೇ ತ್ವಂ ಭವಾನೀ ಕ್ಷಮಸ್ವೇದಮತ್ರ ಪ್ರಮುಗ್ಧಃ ಕಿಲಾಹಮ್|| ಗುರುಸ್ತ್ವಂ ಶಿವಸ್ತ್ವಂ ಚ ಶಕ್ತಿಸ್ತ್ವಮೇವ ತ್ವಮೇವಾಸಿ ಮಾತಾ ಪಿತಾ ಚ ತ್ವಮೇವ| ತ್ವಮೇವಾಸಿ ವಿದ್ಯಾ ತ್ವಮೇವಾಸಿ ಬಂಧುಃ ಗತಿರ್ಮೇ ಮತಿರ್ದೇವಿ ಸರ್ವಂ ತ್ವಮೇವ|| ಶರಣ್ಯೇ ವರೇಣ್ಯೇ ಸುಕಾರುಣ್ಯಮೂರ್ತೇ ಹಿರಣ್ಯೋದರಾದ್ಯೈರಗಣ್ಯೇ ಸುಪುಣ್ಯೇ| ಭವಾರಣ್ಯಭೀತೇಶ್ಚ ಮಾಂ ಪಾಹಿ ಭದ್ರೇ ನಮಸ್ತೇ ನಮಸ್ತೇ ನಮಸ್ತೇ ಭವಾನಿ|| —-ಶಂಕರಾಚಾರ್ಯ
ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ|| —-ಮಹೀಪತಿದಾಸ
ಶ್ರೀಹರಿ ಕಾಯೋ ಕರುಣಾನಿಧೇ Read More »
ಶ್ರೀಶಾರದದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ| ಪರಮಪಾವನಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ|| ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜದ ಭಾಗವೀ ನಮ್ಮ ಸೂರ್ಯ| ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ|| ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ ಗುರುವರ್ಯನಂ ತಿಳಿದ ನೀ ಮಹಿಮಳಮ್ಮ| ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ|| ನಿನ್ನ ನಾಮವೆ ಜನನಿ ಸುರನದಿಯ ತೀರ್ಥ ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ| ನಿನ್ನ ಪೂಜೆಯೆ ಭಕ್ತಿ,
ಶ್ರೀಶಾರದದೇವಿ ಹೇ ಮಹಾಮಾತೆ Read More »
ಶ್ರೀರಾಮಚಂದ್ರ ಕೃಪಾಲು ಭಜ ಮನ ಹರಣಭವಭಯದಾರುಣಂ| ನವಕಂಜಲೋಚನ ಕಂಜಮುಖ ಕರ- ಕಂಜ ಪದಕಂಜಾರುಣಂ|| ಕಂದರ್ಪ ಅಗಣಿತ ಅಮಿತ ಛವಿ ನವನೀಲನೀರದ ಸುಂದರಂ| ಪಟ ಪೀತ ಮಾನಹು ತಡಿತ ರುಚಿ ಶುಚಿ ನೌಮಿ ಜನಕಸುತಾವರಂ|| ಭಜ ದೀನಬಂಧು ದಿನೇಶ ದಾನವ- ದೈತ್ಯವಂಶನಿಕಂದನಂ| ರಘುನಂದ ಆನಂದಕಂದ ಕೌಶಲ ಚಂದ ದಶರಥನಂದನಂ|| ಶಿರಮುಕುಟ ಕುಂಡಲ ತಿಲಕ ಚಾರು ಉದಾರು ಅಂಗವಿಭೂಷಣಂ| ಆಜಾನುಭುಜ ಶರಚಾಪಧರ ಸಂಗ್ರಾಮಜಿತಖರದೂಷಣಂ|| ಇತಿ ವದತ ತುಲಸೀದಾಸ ಶಂಕರ- ಶೇಷಮುನಿಮನರಂಜನಂ| ಮಮ ಹೃದಯಕಂಜ ನಿವಾಸ ಕುರು ಕಾಮಾದಿ ಖಲದಲಗಂಜನಂ|| —-ತುಲಸೀದಾಸ
ಶ್ರೀರಾಮಚಂದರ ಕೃಪಾಲು Read More »
ಶ್ರೀ ರಾಮಕೃಷ್ಣಪ್ರಭೋ ದೇವ||ಪ|| ಆರತಿಯೆತ್ತುವೆ ಹರಿಹರಬ್ರಹ್ಮನೆ||ಅ. ಪ|| ಭವಬಂಧನವನು ಖಂಡಿಸುವವನೆ ನವನವ ರೂಪಧರ|| ಭಕುತರ ಪ್ರೇಮಕೆ ಮಣಿದರು ನಲಿದರು ನಿಷ್ಕಲ ನಿರುಪಮನೆ|| ಸಂಪದ ರಾಜಪದ ಇಂದ್ರಪದ ಈಯದೆ ಶ್ರೀಪದ ಕೊಡು ಹರಿಯೇ|| ಹೃದಯಕಮಲದಲಿ ಸತತವು ನೆಲಸುತ ಮೋದವ ಸುರಿಸು ಗುರೋ|| —-ಸ್ವಾಮಿ ಹರ್ಷಾನಂದ
ಶ್ರೀ ರಾಮಕೃಷ್ಣಪ್ರಭೋ ದೇವ Read More »
ಶ್ರೀ ಮಹಾಗಣಪತಿರವತುಮಾಂ ಸಿದ್ಧಿವಿನಾಯಕೋ ಮಾತಂಗಮುಖ|| ಕಾಮಜನಕ ವಿಧೀಂದ್ರಸನ್ನುತ ಕಮಲಾಲಯತಟನಿವಾಸೋ ಕೋಮಲತರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ|| ಸುವರ್ಣಾಲಂಕೃತವಿಘ್ನರಾಜೋ ಪದಾಂಬುಜೋ ಗೌರವರ್ಣವಸನಧರೋ ಫಾಲಚಂದ್ರೋ ನರಾಧಿವಿನುತ ಲಂಬೋದರೋ|| ಕುವಲಯಾಸ್ತ್ರವಿಷಾಣ-ಪಾಶಾಂಕುಶ-ಮೋದಕ ಪ್ರಮೋದಕರೋ, ಭವಜಲಧಿನಾವೋ ಮೂಲಪ್ರಕೃತಿಸ್ವಭಾವಸುಖಚಾರೋ|| ರವಿಸಹಸ್ರಸನ್ನಿಭದೇಹೋ ಕವಿಜನನುತಮೂಷಿಕವಾಹೋ ಅವನತದೇವತಾಸಮೂಹೋ ಅವಿನಾಶಕೈವಲ್ಯಗೇಹೋ|| —-ಮುತ್ತುಸ್ವಾಮಿ ದೀಕ್ಷಿತ
ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ರಕ್ಷಣೆ ನೀಡಲಿ| ನರರೊಳುನ್ನತವಾದ ನಿತ್ಯ ಭೋಗಂಗಳನು ಪುರಹೂತ ದಯದಿಂದ ಪೂರ್ಣಮಾಡಿಸಲಿ|| ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ| ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು ಮನಹರುಷವಿತ್ತು ಮನ್ನಿಸಲಿ ಬಿಡದೆ|| ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ ಗುರುಗಳಾಶೀರ್ವಾದ ನಮಗಾಗಲಿ| ಪುರಂದರವಿಟ್ಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ|| —-ಪುರಂದರದಾಸ
ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ| ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ದಿನಿ|| ವಾಚಾಮಗೋಚರ-ಮಹಿಮವಿರಾಜಿತೇ ವರಗುಣಭರಿತೇ| ವಾಕ್ಪತಿಮುಖಸುರವಂದಿತೇ ವಾಸುದೇವ-ಸಹಜಾತೇ|| ರಾಕಾ-ನಿಶಾಕರ-ಸನ್ನಿಭವದನೇ ರಾಜೀವಲೋಚನೇ| ರಮಣೀಯ- ಕುಂದರದನೇ | ರಕ್ಷಿತಭುವನೇ ಮಣಿರಸನೇ|| ಮೂಕವಾಕ್ಪ್ರದಾನವಿಖ್ಯಾತೇ ಮುನಿಜನನುತ-ಸುಪ್ರೀತೇ| ಶ್ರೀಕರ-ತಾರಕ-ಮಂತ್ರಪೋಷಿತ -ಚಿತ್ತೇ ಸದಾ ನಮಸ್ತೇ|| —-ಮೈ.ವಾಸುದೇವಾಚಾರ್ಯ
ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ Read More »
ಶ್ರದ್ಧೆಯ ಸರೋವರದಿ ತಾಯ ನಾಮದ ನೌಕೆ ತೇಲುತಿದೆ ನೋಡು| ಗುರುಕರುಣೆಯಲಿ ಕಲಿತ ಸಾಧನಾದಿಗಳಿಂದ ಭವಜಲಧಿ ಪಾರವನು ಸೇರಬಹುದು ನಾವು|| ಮೃತ್ಯುಂಜಯನೆ ತಾನು ಹುಟ್ಟುಹಾಕುತಲಿರಲು ಬಿರುಗಾಳಿಯಲಿ ನೌಕೆ ಮುಳುಗಿ ಹೋಗುವುದೆಂಬ ಭಯವೇಕೆ ನಿನಗೆ| ತಾಯ ಶ್ರೀಪಾದವನೆ ನಂಬಿದವಗೆ|| —-ವಚನವೇದ
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ ಆಯೇ ಧಾಮಾನಿ ದಿವ್ಯಾನಿ ತಸ್ಥುಃ ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್ ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇಯನಾಯ||
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ Read More »
ಶುಭಕರ ಸುಂದರ ನಿನ್ನ ದರುಶನ ಶೋಭಿಸುತಿದೆ ಕರುಣಾರುಣ ವದನ|| ನಾನಾ ಭಾವ ಸುಧಾರ್ಣವ ನೀನು ನಾನಾ ಯೋಗ ಸಮಾಗಮ ನೀನು|| ಕಮಲಾನನ ಕಮಲದಳನಯನ ಕಲಿಮಲಹರಣ ಸಿರಿ ರಾಮಕೃಷ್ಣ ರಸಮಯ ನಿನ್ನ ಸುಮಧುರ ವಚನ ಮನ ತಣಿಸುವ ಮಲಯಾಚಲ ಪವನ ರಾಮಕೃಷ್ಣ ಜಯ ಜಯ ಧ್ವನಿ ತಾನ ಪ್ರೇಮಾನಂದ ಮನೋಹರ ಗಾನ||
ಶುಭಕರ ಸುಂದರ ನಿನ್ನ ದರುಶನ Read More »
ಶಿವ ಶಿವ ಭವ ಭವ ಶರಣಂ- ಮಮ ಭವತು ಸದಾ ತವ ಸ್ಮರಣಂ|| ಗಂಗಾಧರ ಚಂದ್ರಚೂಡ—ಜಗ- ನ್ಮಂಗಲ ವಿಶ್ವನೀಡ|| ಕೈಲಾಸಾಚಲವಾಸ—ಶಿವ- ಕರ ಪುರಹರ ದರಹಾಸ|| ಭಸ್ಮೋದ್ಧೂಲಿತ ದೇಹ — ಶಂಭೋ ಪರಮಪುರುಷ ವೃಷವಾಹ|| ಪಂಚಾನನ ಫಣಿಭೂಷ – ಶಿವ ಪರಮಪುರುಷ ಮುನಿವೇಷ|| ಆನಂದನಟನವಿಲೋಲ—ಸಚ್ಚಿ- ದಾನಂದ ವಿಗಲಿತ ಖೇಲ|| ನವವ್ಯಾಕರಣ ಸ್ವಭಾವ — ಶಿವ ನಾರಾಯಣತೀರ್ಥ ದೇವ|| —-ನಾರಾಯಣತೀರ್ಥ
ಶಿವ ಶಿವ ಭವ ಭವ ಶರಣಂ Read More »
ಶಿವ ನಿನ್ನ ಪಾದವ ನಂಬಿದೆ| ಎನ್ನ ಕಾಯುವ ಭಾರವು ನಿನ್ನದು ಎಂದೆ|| ನಾನೆಂಬ ಮಮಕಾರದಿಂದೆ| ನಾನಾ ಜನ್ಮವ ತಿರುಗಿ ನಾ ಬಂದೆ| ಗತಿ ಯಾವುದೆನಗಿನ್ನು ತೋರದು ಮುಂದೆ ದೀನರಕ್ಷಕನಯ್ಯೋ ಬಾರಯ್ಯ ತಂದೆ|| ಭಕುತರ ಬಂಟ ನೀನಂತೆ| ಮುನ್ನ ಬಾಣನ ಬಾಗಿಲ ಕಾಯ್ದವನಂತೆ| ಫಾಲಲೋಚನ ನಿನ್ನ ಭಜಿಸಿದ ಉಪಮನ್ಯು ಕ್ಷೀರವಾರಿಧಿಯಿತ್ತು ಸಲಹಿದೆ ತಂದೆ||
ಶಿವ ನಿನ್ನ ಪಾದವ ನಂಬಿದೆ Read More »
ಶಿವನ ಭಜಿಸಿರೋ (ಪರ) ಶಿವನ… (ಉಮಾ) ಧವನ ಭಜಿಸಿರೋ|| ಶಿವನ ಭವನ ಉಮಾಧವನ ಧವಳಾಂಗನ ದಯಾಘನನ| ಭವದೂರನ ಭಕ್ತಪ್ರಿಯನ ಕವಿಗೇಯನ ಕಾಮಹರನ|| ಶಿವನ… ವ್ಯೋಮಕೇಶ ಕಾಮೇಶ್ವರ ಭೂಮಭದ್ರಗಿರಿನಿವಾಸ| ರಾಮನಾಮ ನೇಮದಿಂದ ಭಾಮೆಗೊರೆದ ವಾಮದೇವನ|| ಕಾಲರೂಪ ನೀಲಕಂಠ ಮೂಲನಾರಾಯಣನ ಭಕುತ| ವ್ಯಾಲಭೂಷ ಆಶುತೋಷ ಫಾಲನೇತ್ರನ ಭಕುತಿಯಿಂದ|| —-ಅಚ್ಯುತದಾಸರು
ಶಿವದರುಶನ ನಮಗಾಯ್ತು ಕೇಳೆ ಶಿವರಾತ್ರಿಯ ಜಾಗರಣೆ|| ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು| ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು|| ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು| ಆಡುತ ಪಾಡುತ ಏರುತ ಬಸವನ ಆನಂದದಿಂದಲಿ ನಲಿದಾಡುವನು|| ಶಿಖರವ ಕಂಡೆನು ಪುರಂದರ ವಿಟ್ಠಲನ ಹರಿನಾರಾಯಣ ಧ್ಯಾನದಲಿ|| —-ಪುರಂದರದಾಸ
ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ತ್ವ ಬೆಳೆಯನೆ ಬೆಳೆದುಣ್ಣಿರೋ|| ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೆ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ|| ಗುರುವರನುಪದೇಶವೆಂಬ ಬೀಜದ ಬಿತ್ತಿ ಮೆರೆವ ಸಂಸ್ಕಾರವೃಷ್ಟಿಯ ಬಲದಿ ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ ದುರಿತದುರ್ಗುಣವೆಂಬ ಕಳೆಯನು ಕಿತ್ತು|| ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ಧನಡಿಗಳಿಗೆರಗುತ್ತ ಭವವೆಂಬ ಬರವನು ತಮ್ಮ ಸೀಮೆಗೆ ಕಳುಹಿ|| —-ಸರ್ಪಭೂಷಣ ಶಿವಯೋಗಿ
ಶರೀರವೆಂತೆಂಬುವ ಹೊಲವ Read More »
ಶರಣು ಶರಣು ಸಂಬುದ್ಧ ಗುರು ಜ್ಞಾನ- ದಯಾಸಮುದ್ರನೆ ಬುದ್ಧ ಗುರು| ಲೋಕನಾಥಸಂಬುದ್ಧ ಗುರು ಆರ್ತ್ತ- ತ್ರಾಣಪರಾಯಣ ಬುದ್ಧ ಗುರು ಶರಣು ಶರಣು ಸಂಬುದ್ಧ ಗುರು|| ದೇಶ ಕೋಶಮನೆ ತಂದೆ ಮಡದಿ ಮಗು ಸಕಲ ಸುಖದ ಸವಿ ಪರಿವಾರ ಕಹಿಯೊ ಎಂಬವೊಲು ಕೊಡವಿಕೊಂಡು ನಡು- ರಾತ್ರಿಯೊಳಡವಿಗೆ ನಡೆದೆ ಗುರು|| ಆರುವರುಷದಲೆದಾಟವು ಘೋರ ಕಡೆಗು ಗೆದ್ದೆ ನೀ ಜಿತಮಾರ ಬೋಧಿವೃಕ್ಷದಡಿ ಪ್ರಜ್ಞಾಯುಧದಲಿ ಮಾರಸೇನೆಯನು ಮುರಿದೆ ಗುರು|| ಗೆದ್ದು ಬಂದು ನೀ ವಾರಾಣಸಿಯಲಿ ಅಮೃತ ದುಂದುಭಿಯ ಬಾರಿಸಿದೆ ಧರ್ಮಚಕ್ರವನು ಸ್ಥಾಪಿಸತೊಡಗಿದೆ ಜಗಗಳ
ಶರಣು ಶರಣು ಸಂಬುದ್ಧ ಗುರು Read More »
ಶರಣಾಗು ಶರಣಾಗು ಶರಣಾಗು ಮನವೇ ಶ್ರೀಗುರುಚರಣ ಸರೋಜಕೆ ಮಣಿದು|| ರಾಮಕೃಷ್ಣ ಗುರುಕೃಪೆ ನಿನಗಾದರೆ ಹರಿವುದು ಭವಭಯ ಚಿಂತಾರುಜಿನ| ಶ್ರೀಗುರುನಾಮದ ನೌಕೆಯು ದೊರೆತರೆ ಭವಸಾಗರ ಯಾನವೆ ಮೋದಕರ|| ಎಲ್ಲ ಧರ್ಮಗಳ ತಿರುಳನು ಸಾರುವ ನೊಂದ ಜೀವರಿಗೆ ಭರವಸೆಯೀಯುವ| ರಾಮಕೃಷ್ಣ ಸಂದೇಶ ಗೀತೆಯ ಸಾಗರದಲೆಗಳು ಹಾಡುತಿವೆ|| ಭವ್ಯ ಹಿಮಾಲಯ ಪರ್ವತರಾಜಿಯು ಮುಳುಗಿರೆ ಧ್ಯಾನ ಸಮಾಧಿಯಲಿ| ರಾಮಕೃಷ್ಣ ಜಯ ರಾಮಕೃಷ್ಣ ಜಯ ಎಂಬೀ ನಿನದವು ಕೇಳುತಿದೆ|| —-ಪ್ರಭುಪ್ರಸಾದ
ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರು ಶರಣಂ ಭವವೈದ್ಯಂ|| ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ಜ್ವಲಭಕ್ತಿಪಟಾವೃತವೃತ್ತಂ| ಕರ್ಮಕಲೇವರಮದ್ಭುತಚೇಷ್ಟಂ ಯಾಮಿ ಗುರುಂ ಶರಣಂ ಭವವೈದ್ಯಂ|| —-ಸ್ವಾಮಿ ವಿವೇಕಾನಂದ
ಶಕ್ತಿಸಮುದ್ರಸಮುತ್ಥತರಂಗಂ Read More »
ಶಕ್ತನಾದರೆ ನೆಂಟರೆಲ್ಲ ಹಿತರು| ಅ- ಶಕ್ತನಾದರೆ ಅವರೆ ವೈರಿಗಳು ಲೋಕದಲಿ|| ಕಮಲ ಅರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಅದು ಆಡುತಿಹುದು| ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿಹೋಗುವುದು|| ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು ಘನ ಪ್ರಜ್ವಲಿಸುತಿಹುದು ಗಗನಕಡರಿ| ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು ಘನಶಕ್ತಿಯುಡುಗಿ ತಾ ನಂದಿಹೋಗುವುದು|| ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ ಮರೆಯ ಹೊಕ್ಕರು ಕಾವ ಮಹಿತರಾರಯ್ಯ| ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು ಸರುವ ಜನರೆಲ್ಲ ಮೂಜಗದಿ
ವೆಂಕಟಾಚಲನಿಲಯಂ ಸ್ವಾಮಿ ವೈಕುಂಠಪುರವಾಸಮ್ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರ-ಚಿನ್ಮಯರೂಪಮ್|| ಅಂಬುಜೋದ್ಭವವಿನುತಂ ಸ್ವಾಮಿ ಅಗಣಿತಗುಣನಾಮಮ್ ತುಂಬುರುನಾರದ ಗಾನವಿಲೋಲಮ್ ಅಂಬುಧಿಶಯನಂ ಆತ್ಮಾಭಿರಾಮಮ್|| ಪಾಹಿ ಪಾಂಡವಪಕ್ಷಂ ಸ್ವಾಮಿ ಕೌರವಮದಹರಣಮ್ ಬಹು-ಪರಾಕ್ರಮಿ-ಫಣಿಮದಭಂಗಮ್ ಅಹಲ್ಯಾಶಾಪ ಭಯನಾಶಮ್|| ಸಕಲವೇದ ವಿಚಾರಂ ವರ- ಸಾಧುಜನ ಪರಿಪಾಲಮ್ ಮಕರಕುಂಡಲಧರ-ಮದನಗೋಪಾಲಮ್ ಭಕ್ತವತ್ಸಲಂ ಪುರಂದರವಿಟ್ಠಲಮ್|| —-ಪುರಂದರದಾಸ
ವೆಂಕಟಾಚಲನಿಲಯಂ ಸ್ವಾಮಿ Read More »
ವೀಣಾಧರೇ ಶಾರದೇ ಅಜರಾಣಿ| ಗಾನವಿನೋದಿನಿ ವಾಣಿ|| ನೌಮಿ ಸುಮುನೀಂದ್ರ ಸುಪೂಜಿತೇ ಸಾಮ-ಮೋಹಿತೇ ಸುಮಧುರಗೀತೇ ಪ್ರೇಮದಿಂದ ಪೊರೆ ಕಲ್ಯಾಣಿ||