ಹೇ ರಾಮ ಮತ್ತೆನಗೆ ದಿಕ್ಕಾರು ಅಯ್ಯಾ
ಬೇರಾರು ದಿಕ್ಕಿಲ್ಲ ನೀನಲ್ಲದಯ್ಯಾ||
ಅಡಿಗಡಿಗೆ ನಿನ್ನನ್ನೆ ನೆನೆಯುತಿಹೆನಯ್ಯಾ
ತಡಮಾಡದೆನ್ನನ್ನು ಕಾಯಬೇಕಯ್ಯಾ||
ನಾನೆಷ್ಟು ಜಾರಿದರು ಈ ಧರಣಿಯೊಳಗೆ
ನೀನಲ್ಲದಿನ್ನಾರು ಅವಲಂಬವೆನಗೆ||
ನಿನ್ನನ್ನೆ ನಂಬಿದೆನು ಮನದಾಳದಲ್ಲಿ
ನಿನ್ನ ಷಡ್ಗುಣವನ್ನೆ ಪೊಗಳುತ್ತ ಇಲ್ಲಿ||
ದಯೆಯ ಸಾಗರ ನೀನು ದಯನೀಯ ನಾನು
ನ್ಯಾಯವೇ ನನ್ನನ್ನು ಕಾಪಾಡದಿಹುದು||
—-ಸ್ವಾಮಿ ಹರ್ಷಾನಂದ