ಹಾರುವಗೆ | ಮರದ ಮೇಲಿರುವಗೆ |
ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ |
ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ |
ಸಾರುವಗೆ | ರಾವಣನ ಮೀರಿದವಗೆ ಜಯಮಂಗಳಂ |
ನಿತ್ಯ ಶುಭ ಮಂಗಳಂ 1||
ವೃಕೋದರ ಭೀಮಗೆ | ಅಶೋಕದೊಡೆಯಗೆ |
ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ |
ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ |
ಜಯಮಂಗಳಂ ನಿತ್ಯ ಶುಭಮಂಗಳಂ||2||
ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ |
ಒಂದೆರಡು ಈರೈದು ಮುರಿದವನಿಗೆ |
ಒಂದೇ ದೇವ ನಮ್ಮ ವಿಜಯವಿಠ್ಠಲನಂಘ್ರಿ
ವಂದಿಸುವ ಶ್ರೀಮದಾನಂದ ಮುನಿಗೆ |
ಜಯವiಂಗಳಂ ನಿತ್ಯ ಶುಭಮಂಗಳಂ||3||