ಹರಿಯ ನೆನೆಸಿದ ದಿವಸ

ಹರಿಯ ನೆನೆಸಿದ ದಿವಸ ಶುಭಮಂಗಳ
ಹರಿಯ ನೆನೆಸಿದ ದಿವಸ ಅವಮಂಗಳ||

ಹರಿಯ ನೆನೆಸಿದ ನಿಮಿಷ ಆವಾಗಲೂ ಹರುಷ
ಹರಿಯ ನೆನೆಸದ ನಿಮಿಷ ದುರ್ಮಾನಸ|
ಹರಿಯ ನೆನೆಸಿದ ಘಳಿಗೆ ಮುಕ್ತಿಗೆ ಬೆಳವಳಿಗೆ
ಹರಿಯ ನೆನೆಸದ ಘಳಿಗೆ ಯಮನ ಬಳಿಗೆ||

ಹರಿಯ ನೆನೆಸಿದ ನರನು ಅವನೇನೆ ಕೃತಕೃತ್ಯ
ಹರಿಯ ನೆನೆಸದ ನರನ ಜನುಮ ವ್ಯರ್ಥ|
ಪುರಂದರನ ಪ್ರೀತಿಯ ಶ್ರೀ ವಿಜಯವಿಟ್ಠಲನಂಘ್ರಿ
ಮರೆಯದೆ ಅನುದಿನವು ನೆನೆದವನೆ ಮುಕ್ತ||

—-ವಿಜಯದಾಸ

Leave a Comment

Your email address will not be published. Required fields are marked *