ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ
ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ

ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ ||1||

ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ ||2||

ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತುಪತಿವ್ರತೆಯರ ಭಂಗಿಸಿಕ್ಷಿತಿಯೊಳು ರಾಹುತನಾದ ಬಾಡದಾದಿಕೇಶವನ ತಂದು ತೋರೆ||3||

Leave a Comment

Your email address will not be published. Required fields are marked *