ಹರಿದಾಸರ ಸಂಗ

ಹರಿದಾಸರ ಸಂಗ ದೊರಕಿತು ಎನಗೀಗ |
ವರಗುರು ಉಪದೇಶ ನೆರವಾಯ್ತು||

ಮಾಯದ ಸಂಸಾರ ಮಮಕಾರ ತಗ್ಗಿತು|
ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು||

ಏನೆಂದು ಹೇಳಲಿ ಆನಂದ ಸಂಭ್ರಮ
ಆ ನಂದಗೋಪನ ಕಂದನ ಮಹಿಮೆಯ|
ಎನ್ನ ವಂಶಗಳೆಲ್ಲ ಪಾವನವಾದವು
ಶ್ರೀಪುರಂದರವಿಟ್ಠಲಯ್ಯ ದೊರಕಿದ||

—-ಪುರಂದರದಾಸ

Leave a Comment

Your email address will not be published. Required fields are marked *