ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿಮಾನವರೆಲ್ಲ ಮೌನದೊಳಗೆ ನಿಂದು
ತನ್ನ ತಾನರಿತುಕೊಂಬುದೆ ಒಂದು ಸ್ನಾನಅನ್ಯಾಯ ಮಾಡದಿರುವುದೊಂದು
ಸ್ನಾನಅನ್ನದಾನವ ಮಾಡುವುದೊಂದು ಸ್ನಾನ – ಹರಿನಿನ್ನ ಧ್ಯಾನವೆ ನಿತ್ಯ ಗಂಗಾ ಸ್ನಾನ 1
ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನಪರನಿಂದೆಯ ಮಾಡದಿದ್ದರೊಂದು
ಸ್ನಾನಪರೋಪಕಾರ ಮಾಡುವುದೊಂದು ಸ್ನಾನಪರತತ್ತ್ವವನರಿತುಕೊಂಬುದೆ ಒಂದು ಸ್ನಾನ2
ಸಾಧು ಸಜ್ಜನರ ಸಂಗವೆ ಒಂದು ಸ್ನಾನಭೇದಾಭೇದವಳಿದಡೆ ಒಂದು ಸ್ನಾನಆದಿಮೂರುತಿ
ಕಾಗಿನೆಲೆಯಾದಿಕೇಶವನಪಾದ ಧ್ಯಾನವೆ ನಿತ್ಯ ಗಂಗಾ ಸ್ನಾನ 3