ಸಾಲದೆ ನಿನ್ನದೊಂದು ದಿವ್ಯನಾಮ – ಅ-ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ
ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿರಣವನುತ್ತರಿಸಿ ಮರಣವ ತಾಳಿರೆಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ||1||
ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವಸಂತತ ನೆತ್ತರನೊರಸಿ ಬಿಸುಟೆತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲುಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ ||2||
ಕ್ಷೀಣ ದೇಹವ ಬಿಡುವೆನೆಂದು ಪಾಡಂಬಟ್ಟುತ್ರಾಣದಲಿ ಗರಳ ತೈಲವ ಸೇವಿಸೆವೇಣುನಾದದಲಿ ಹಣೆಯನೇವರಿಸಿ ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ ||3||
ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳುಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟುಹೆಮ್ಮಕ್ಕಳ ಬಾಧಿಸುವುದನು ಕಂಡುಬೊಮ್ಮಜಟ್ಟಿಗರ ಶಿರವರಿದೆ ನರಹರಿಯೆ ||4||
ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂಬೋಧಿಶಯನನೆ ವೇದಶಾಸ್ತ್ರ ಮುಖದಿಬಾಧಿಸುವ ದುರಿತಾಗ್ನಿಗಂಬು ಶ್ರೀ ಕಾಗಿನೆಲೆಯಾದಿಕೇಶವನ ನಾಮ ಸಂಕೀರ್ತನ ||5||