ಸಾರದಾ ರೂಪತಾಳಿ ಬಂದಿಹಳು ತಾಯಿ ಕಾಳಿ
ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ ||
ಆದ್ಯಾಶಕ್ತಿ ನೀ ಮಾತೆ ಸರ್ವಜೀವ ಮುಕ್ತಿದಾತೆ |
ಮಹಾಲಕ್ಷ್ಮಿ ಸರಸ್ವತಿ ಗುಪ್ತರೂಪ ಜ್ಞಾನದಾತೆ ||
ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ |
ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ ||
ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ |
ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ ||
-ಸ್ವಾಮಿ ಶಾಸ್ತ್ರನಂದ