ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ
ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1||
ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ ||2||
ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ ||3||
ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ||4||
ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ ||5||