ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು
ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ
ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ – ರಿಕ್ತಹಸ್ತದಿಂದ ಮನೆಯ ಸೇರುವೆ – ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ – ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ ||1||
ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ – ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ||2||
ಒಡಲಿನಾಸೆಗಾಗಿ ನೊಣನು ತುಡುಕಿಬಿದ್ದು ಜೇನಕೊಡದಿಮಿಡುಕುವಂತೆ ಬಾಯಿಬಿಡುವೆ ಬಿಸರುಹಾಕ್ಷನೆಬಿಡಿಸು ಎನ್ನ ಬಂಧಪಾಶವ ಕಾಗಿನೆಲೆಯಾದಿಕೇಶವಕೊಡಿಸು ನಿನ್ನ ಭಕ್ತರ ಸಂಗವ – ಕನಕದಾಸನೊಡೆಯ ವೆಂಕಟಾದ್ರಿ ಮಾಧವ – ರಂಗಯ್ಯ ರಂಗ||3||